“ಸುಬ್ರಮಣ್ಯೇಶ್ವರ”ನ ಸನ್ನಿಧಿಯಲ್ಲಿ ಮಾಜಿ ಸಿಎಂ ಘೋರಾಪರಾಧ.?ಬಿಎಸ್ ವೈ ವಿರುದ್ಧ ಭುಗಿಲೆದ್ದ ಜನಾಕ್ರೋಶ.
ಊರಿಗೆ ನ್ಯಾಯ ಹೇಳೋ,ಮಾಜಿ ಸಿಎಂ ಬಿಎಸ್ ವೈ ಮಾಡಿದ್ದು ಮಾತ್ರ ಸರೀನಾ..
ಚಿಕ್ಕಬಳ್ಳಾಪುರ /ದೇವನಹಳ್ಳಿ:ಹೇಳೋದು ವೇದಾಂತ, ತಿನ್ನೋದು ಮಾತ್ರ ಬದನೆ,ಮಾಜಿ ಸಿಎಂ ಯಡಿಯೂರಪ್ಪ ಗೆ ಅನ್ವಯವಾಗುತ್ತೆ ಈ ಮಾತು.
ನಾಗರ ಪಂಚಮಿ ಹಿನ್ನಲೆಯಲ್ಲಿ ಎಲ್ಲಾ ಕೊರೋನಾ ನಿಯಮ ಉಲ್ಲಂಘಿಸಿ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ಕೊಟ್ಟು ವಿವಾದ ಮೈಮೇಲೆ ಎಳ್ಕೊಂಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ದ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮಾಜಿ ಸಿ.ಎಂ ತಮ್ಮ ಪುತ್ರರತ್ನ ವಿಜಯೇಂದ್ರ ಹಾಗೂ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಜತೆ ತೆರಳಿ ಪೂಜೆ ಸಲ್ಲಿಸಿರುವುದು ವಿವಾದಕ್ಕೆ ಗ್ರಾಸವಾಗಿದೆ.

ಇಂದು ಭಕ್ತರಿಗೆ ದೇವಾಲಯ ಬಂದ್ ಮಾಡಿದ್ದರೂ ಯಡಿಯೂರಪ್ಪ ಬಂದಾಕ್ಷಣ ದೇವಾಲಯ ಒಪನ್ ಮಾಡಿದ ಆಡಳಿತ ಮಂಡಳಿ ಧೋರಣೆಗೆ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಇಂದು ಭಕ್ತಾಧಿಗಳಿಗೆ ನಿಷೇಧ ಹೇರಿತ್ತು.ಬಿ.ಎಸ್.ವೈ ಬಂದ ಹಿನ್ನಲೆ ದೇವಾಲಯ ಓಪನ್ ಮಾಡಿದ್ದು ಎಷ್ಟು ಸರಿ.
ಜನರಿಗೊಂದು ನ್ಯಾಯ.. ಜನಪ್ರತಿನಿಧಿಗಳಿಗೆ ಮೊತ್ತೊಂದು ನ್ಯಾಯನಾ ಅಂತ ಜನ ಪ್ರಶ್ನೆ ಮಾಡಿದ್ದಾರಲ್ಲದೇ,ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿಯಾದ್ರೂ ಯಡಿಯೂರಪ್ಪ ನಿಯಮ ಮೀರುವ ಕೆಟ್ಟ ಚಾಳಿ ದೂರವಾದಂತಿಲ್ಲ.ತನಗೆ ಕೊಟ್ಟಿರೋ ಪವರ್ ನ್ನು ಮಾಜಿಯಾದ್ರೂ ಚೆನ್ನಾಗೇ ಬಳಸಿಕೊಳ್ತಿದಾರೆ.ಸಿಎಂ ಬೊಮ್ಮಾಯಿ ಮೂಕಪ್ರೇಕ್ಷಕರಾಗಿದ್ದಾರೆ. ಪಾಪ.ಯಡಿಯೂರಪ್ಪ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು
-ಭಕ್ತಾಧಿ,ಚಿಕ್ಕಬಳ್ಳಾಪುರ