ಸಾಲು‌ ಸಾಲು ಹಬ್ಬಗಳ ಹಿನ್ನಲೆ: ಗಣೇಶ ಚತುರ್ಥಿ, ಮೊಹರಂಗೆ ಮಾರ್ಗಸೂಚಿ ಪ್ರಕಟ.

ಸಂಭ್ರಮಕ್ಕೆ ಬ್ರೇಕ್-ಜನದಟ್ಟಣೆಗಿಲ್ಲ ಅವಕಾಶ-ಸುರಕ್ಷತಾ ನಿಯಮ ಪಾಲನೆ ಕಡ್ಡಾಯ-ಮೀರಿದರೆ ದಂಡ.

0

ಬೆಂಗಳೂರು:ಗಣೇಶ ಚತುರ್ಥಿ, ಮೊಹರಂ..ಹೀಗೆ  ಸಾಲು ಸಾಲು ಹಬ್ಬಗಳ ಹಿನ್ನಲೆಯಲ್ಲಿ  ಸರ್ಕಾರದಿಂದ ಮಾರ್ಗಸೂಚಿ ಪ್ರಕಟವಾಗಿದೆ.

ಆಗಸ್ಟ್, ಸೆಪ್ಟೆಂಬರ್​ ತಿಂಗಳಿನಲ್ಲಿ ಸಾಕಷ್ಟು ಹಬ್ಬ ಹರಿದಿನಗಳು ಇರುವುದರಿಂದ ಸರ್ಕಾರ ಕೊವಿಡ್ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಮೊಹರಂ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದುರ್ಗಾ ಪೂಜೆಯಲ್ಲಿ ಜನಸಂದಣಿ ತಡೆಟ್ಟಲು ನಿರ್ಬಂಧಗಳ ಹೇರಿಕೆ ಮಾಡಲಾಗಿದೆ.ಇದಕ್ಕಾಗಿ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಲಾಗಿದ್ದು ಅದರ ವಿವರ ಕೆಳಕಂಡಂತಿದೆ.

1-ದೇವಸ್ಥಾನ , ಮಸೀದಿ, ಚರ್ಚ್​​, ಗುರುದ್ವಾರ ಇತರೆ ಧಾರ್ಮಿಕ ಕೇಂದ್ರ ತೆರೆಯಲು ಅನುಮತಿ.

2-ಧಾರ್ಮಿಕ ಕೇಂದ್ರಗಳಲ್ಲಿ ಕೋವಿಡ್​ ನಿಮಯಗಳನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶ

3-ಜಾತ್ರೆ, ದೇವಾಲಯದ ಹಬ್ಬಗಳು, ಮೆರವಣಿಗೆ, ಸಭೆ ಸಮಾರಂಭ ನಿಷೇಧ.

4-ಸಾರ್ವಜನಿಕ ಗಣೇಶ ಹಬ್ಬಕ್ಕೆ ಇಲ್ಲ ಅನುಮತಿ

5-ಮನೆಯಲ್ಲಿ ಹಾಗೂ ದೇವಾಲಯಕ್ಕೆ ತೆರಳಿ ಹಬ್ಬ ಆಚರಣೆಗೆ ಅನುಮತಿ.

6-ಪೆಂಡಾಲ್, ವೇದಿಕೆ ಹಾಕಿ ಗಣಪತಿ ಮೂರ್ತಿಯನ್ನು ಇಡುವಂತಿಲ್ಲ.

7-ಗಣೇಶ ವಿಸರ್ಜನೆಗೆ ಮೆರವಣಿಗೆ ಮಾಡುವಂತಿಲ್ಲ.

8-ಮೂರ್ತಿ ವಿಸರ್ಜನೆಯನ್ನು ಜಿಲ್ಲಾಡಳಿತ ಅಥವಾ ಪಾಲಿಕೆಯಿಂದ ನಿರ್ಮಿಸಿದ ಹೊಂಡ ಮೊಬೈಲ್ ಟ್ಯಾಂಕ್, ಕಲ್ಯಾಣಿಯಲ್ಲಿ ಮಾತ್ರ ವಿಸರ್ಜನೆ ಮಾಡಬೇಕು.

9-ದೇವಾಲಯದಲ್ಲಿ ದಿನನಿತ್ಯ ಸ್ಯಾನಿಟೈಸ್ ಮಾಡಬೇಕು.

10-ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

*ಮೊಹರಂ ಹಬ್ಬದಾಚರಣೆಗೆ ಮಾರ್ಗಸೂಚಿ*

1-ಸಾರ್ವಜನಿಕ ಸ್ಥಳಗಳಲ್ಲಿ ಅಲಂಗಳನ್ನು ಪಂಜಾವನ್ನು ಸ್ಥಾಪಿಸುವುದು ಹಾಗೂ ತಾಜಿಯ ನಿರ್ಬಂಧ.

2-ದಿನಾಂಕ:12.08.2021 ರಿಂದ 20.08.2021 ರವರೆಗೆ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮೊಹರಂ ಪ್ರಾರ್ಥನಾ ಸಭೆ ಮತ್ತು ಮೆರವಣಿಗೆ ನಿಷೇಧ.

3-ಮೊಹರಂ ಸಂಬಂಧಿತ ಆಚರಣೆಗಳಲ್ಲಿ ಭಾಗವಹಿಸುವ ಭಕ್ತಾದಿಗಳು ಸೂಕ್ತ ಸಾಮಾಜಿಕ ಅಂತರದೊಂದಿಗೆ ಕನಿಷ್ಠ ಸಂಖ್ಯೆಯಲ್ಲಿ ಭಾಗವಹಿಸಬೇಕು.

4-ಪಂಜ, ಆಲಂ ಮತ್ತು ತಾಜಿಯಗಳನ್ನು ಸಾರ್ವಜನಿಕರು ಮುಟ್ಟದೆ ದೂರದಿಂದ ನೋಡಬೇಕು.

5-ಖಬರಸ್ಕಾನ್ ಒಳಗೊಂಡಂತೆ ಯಾವುದೇ ಖಾಲಿ ಜಾಗಗಳಲ್ಲಿ ಯಾವುದೇ ತರಹದ ಸಭೆ ಏರ್ಪಡಿಸುವುದಕ್ಕೆ ನಿರ್ಬಂಧ.

6-ಖಬರಸ್ಥಾನಗಳಿಗೆ ಕೇವಲ ದವನ ಮಾಡಲು ಮಾತ್ರ ಅನುಮತಿ ನೀಡಿದ್ದು, ಮೊಹರಂಗೆ ಸಂಬಂಧಿಸಿದ ಆಚರಣೆಗಳಿಗೆ ಅನುಮತಿ ಇಲ್ಲ.

7-ಪ್ರಾರ್ಥನಾ ಸ್ಥಳಗಳಲ್ಲಿ ಮಾಸ್ಕ್​​​ ಕಡ್ಡಾಯವಾಗಿ ಧರಿಸತಕ್ಕದ್ದು

8- 60 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಮಾಡತಕ್ಕದ್ದು

9-ಕೋವಿಡ್-19 ಸಮುಚಿತ ವರ್ತನಗಳೊಂದಿಗೆ, ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ

10-ಹೆಚ್ಚು ಜನರು ಆಗಮಿಸಿದ್ದಲ್ಲಿ ಎರಡು ಅಥವಾ ಹೆಚ್ಚಿನ ಪಾಳಿಯಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಡೆಸತಕ್ಕದ್ದು

11-ಕೋವಿಡ್ 19 ಸಮುಚಿತ ವರ್ತನೆಯಂತೆ ಮಸೀದಿಗಳಲ್ಲಿ ನಮಾಜ್ ನಿರ್ವಹಿಸುವವರ ಮಧ್ಯ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಬೇಕು

12-ಆಗಾಗ ಕೈಗಳನ್ನು ಸೋಪು ಮತ್ತು ಸಾನಿಟೈಸರ್‌ಗಳಿಂದ ಶುಚಿಗೊಳಿಸಿಕೊಳ್ಳಬೇಕು

13-ಮಸೀದಿಗಳಲ್ಲಿ ಪ್ರವೇಶಿಸುವ ಮೊದಲು, ದೇಹದ ತಾಪಮಾನವನ್ನು ತಪಾಸಣೆ ಮಾಡತಕ್ಕದ್ದು

14-ಭಕ್ತಾದಿಗಳು ಪ್ರವೇಶಿಸುವ ದ್ವಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗುಂಪುಗೂಡುವುದನ್ನು ತಡೆಗಟ್ಟಬೇಕು

15-ಆಡಳಿತ ಮಂಡಳಿ, ಆಡಳಿತಾಧಿಕಾರಿ, ಭಕ್ತಾಧಿಗಳು ಕುಳಿತುಕೊಳ್ಳುವ ಗರಿಷ್ಟ ಸಂಖ್ಯೆಯನ್ನು ಮುಖ್ಯದ್ವಾರದ ಬಳಿ ಪ್ರದರ್ಶಿಸಬೇಕು

16-ಮಸೀದಿಗಳಲ್ಲಿ ಪ್ರಾರ್ಥನೆಯಲ್ಲಿ ಭಾಗವಹಿಸುವವರು ತಮ್ಮ ತಮ್ಮ ಮನೆಗಳಿಂದ ಮುಸಲ್ಮಾನನ್ನು (ಜಾಯನಮಾಜ್) ಕಾಯವಾಗಿ ತರಬೇಕು

17-ಪರಸ್ಪರ ಹಸ್ತಲಾಘವ ಮತ್ತು ಆಲಿಂಗನಗಳನ್ನು ಮಾಡಬಾರದು

18-ಮಸೀದಿಗಳನ್ನು ಹೊರತುಪಡಿಸಿ ಇತರೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಸಭಾಂಗಣ, ಸಮುದಾಯ ಭವನ, ಶಾದಿ ಮಹಲ್ ಮತ್ತಿತರ ತೆರೆದ ಜಾಗಗಳಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆಗೆ ನಿಷೇಧ.

19.ಮೊಹರಂ ಪ್ರಯುಕ್ತ ಯಾವುದೇ ರೀತಿಯ ಮೆರವಣಿಗೆ / ಸಾರ್ವಜನಿಕ ಸ್ಥಳಗಳಲ್ಲಿ ಭಾಷಣ
ಕಾರ್ಯಕ್ರಮಗಳಿಗಿಲ್ಲ ಅನುಮತಿ.

20-ಭಕ್ತಾದಿಗಳು ಯಾವ ಯಾವ ಕೆಲಸವನ್ನು ನಿರ್ವಹಿಸುವುದು/ಯಾವ ಯಾವ ಕೆಲಸವನ್ನು
ನಿರ್ವಹಿಸಬಾರದು ಎಂಬ ಬಗ್ಗೆ ಧ್ವನಿ ವರ್ಧಕದ ಮೂಲಕ ಸೂಚಿಸಬೇಕು.

Spread the love
Leave A Reply

Your email address will not be published.

Flash News