ಬೆಂಗಳೂರಲ್ಲಿ “ಅಟ್ಯಾಕ್”…ಕಾಂಗೋದಲ್ಲಿ “ಎಫೆಕ್ಟ್”.. ಅದ್ಹೇಗೆ…ಯಾಕೆ..?!

0

ಬೆಂಗಳೂರು:ಇತ್ತೀಚೆಗೆ ಬೆಂಗಳೂರಲ್ಲಿ ಆಫ್ರಿಕಾ ಪ್ರಜೆಗಳ ಪುಂಡಾಟ ಪ್ರಕರಣ ಎಲ್ರಿಗೂ ಗೊತ್ತೇ ಇದೆ..ಘಟನೆ ನಡೆದು ಸಾಕಷ್ಟು ದಿ‌ನಗಳೇ ಆಗಿವೆ.ಆದ್ರೆ ಅದರ ಎಫೆಕ್ಟ್ ಇದೀಗ ಕಾಣಿಸಿಕೊಳ್ಳಲಾರಂಭಿಸಿದೆ.

ಬೆಂಗಳೂರಲ್ಲಿ ಕಾಂಗೊ ಪ್ರಜೆಗಳ ಮೇಲೆ ಲಾಠಿ ಚಾರ್ಜ್ ಮಾಡಿದ್ದಕ್ಕೆ ಕಾಂಗೋದಲ್ಲಿ ಇರುವ ಭಾರತೀಯರ ಮನೆಗಳು‌..ಅಂಗಡಿಗಳ ಮೇಲೆ ಕಲ್ಲು ತೂರಾಟವೇ ನಡೆದೋಗಿದೆಯಂತೆ.

ಇಂಡಿಯನ್ಸ್ ಮನೆಗಳು, ಅಂಗಡಿ ಮುಂಗಟ್ಟುಗಳ ಮೇಲೆ ಕಾಂಗೋ ಪ್ರಜೆಗಳು ಕಲ್ಲು ತೂರಾಟ ನಡೆಸಿದ್ದಾರೆನ್ನಲಾಗಿದೆ.

ಆಫ್ರಿಕನ್ ಪ್ರಜೆಗಳು ಕೋಪಾವೇಶದಲ್ಲಿ,‌ಕಾಂಗೋದಲ್ಲಿ ಬಲವಂತವಾಗಿ ಇಂಡಿಯನ್ಸ್ ಅಂಗಡಿ ಮುಚ್ಚಿಸಿ ಭಯ ಹುಟ್ಟಿಸಲಾರಂಭಿಸಿದ್ದಾರೆ.

ಕೆಲ ದಿನಗಳ ಹಿಂದೆ,ಜೆ.ಸಿ ನಗರ ಸ್ಟೇಷನ್ ಮುಂದೆ ಅಸಭ್ಯವಾಗಿ ವರ್ತಿಸಿದ್ದ ಕಾಂಗೊ ಪ್ರಜೆಗಳಿಗೆ ಪೊಲೀಸ್ರು,ಲಾಠಿ ರುಚಿ ತೋರಿಸಿದ್ದರು.

ಇದಕ್ಕೆ ಪ್ರತಿಯಾಗಿ ಕಾಂಗೋದಲ್ಲಿ ಇಂಡಿಯನ್ಸ್ ಮೇಲೆ ಹಲ್ಲೆ ನಡೆಸಿ ತಮ್ಮ‌ ಪ್ರತೀಕಾರ ತೀರಿಸಿಕೊಂಡಿದ್ದಾರೆ.

ಎಚ್ಚೆತ್ತುಕೊಂಡ ಪೊಲೀಸರು.: ಭಾರತದಲ್ಲಿ ನಮ್ಮವರನ್ನ ಹೊಡೆಯುತ್ತಿದ್ದಾರೆ ಅಂತಾ ಇಂಡಿಯನ್ಸ್ ಮೇಲೆ ಅಟ್ಯಾಕ್ ಮಾಡುತ್ತಿರುವುದು ಬೆಂಗಳೂರು ಪೊಲೀಸರನ್ನು ವಿಚಲಿತಗೊಳಿಸಿದೆ.

ಕಾಂಗೋದಲ್ಲಿ ಇನ್ನು ಪ್ರಕ್ಷ್ಯುಭ್ದ ವಾತಾವರಣ ವಿರೋದ್ರಿಂದ ಆಫ್ರಿಕನ್ ಪ್ರಜೆಗಳನ್ನು ಸಮಾಧಾನಗೊಳಿಸಲು ಪೊಲೀಸ್ರು ಮುಂದಾಗಿದ್ದಾರೆ.

ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ಆಫ್ರಿಕಾ ಪ್ರಜೆಗಳ ಮೀಟಿಂಗ್ ಮಾಡಿದ್ದಾರೆ.

ಆಫ್ರಿಕನ್ ಪ್ರಜೆಗಳ ಮನವೊಲಿಕೆಯಲ್ಲಿ ತೊಡಗಿರುವ ಡಿಸಿಪಿ ಡಾ.ಶರಣಪ್ಪ
ಆಫ್ರಿಕನ್ ಪ್ರಜೆಗಳ ಮನವೊಲಿಕೆಯಲ್ಲಿ ತೊಡಗಿರುವ ಡಿಸಿಪಿ ಡಾ.ಶರಣಪ್ಪ.

ಕಲ್ಲು ತೂರಾಟದಲ್ಲಿ ಕೆಲವರ ಬುರುಡೆ ಓಪನ್:ಇನ್ನೂ ಕೂಡ ಅಂಗಡಿ ಮುಂಗಟ್ಟುಗಳನ್ನ ತೆರೆಯಲು ಇಂಡಿಯನ್ಸ್ ಹಿಂದೆ ಮುಂದೆ ನೋಡ್ತಿದ್ದಾರಂತೆ. ಈ ಹಿನ್ನಲೆಯಲ್ಲಿ ಬೆಂಗಳೂರಿನ ಆಫ್ರಿಕಾ ನಿವಾಸಿಗಳ ಸಭೆ ನಡೆಸಲಾಗಿದೆ‌.

ನಾವಿಲ್ಲಿ ಸೇಫಾಗಿದ್ದೇವೆ , ನಮಗೆ ಯಾವುದೇ ಅಟ್ಯಾಕ್ ಆಗಿಲ್ಲ ಅಂತಾ ತಾಯ್ನಾಡಿಗೆ ಕಾಂಗೊ ಪ್ರಜೆಗಳಿಂದ ಕರೆ ಮಾಡಿಸುವ ಯತ್ನ ಮಾಡುತ್ತಿದ್ದಾರೆ.

ಇಲ್ಲಿ ಯಾವುದೇ ಗಲಭೆಯಾಗಿಲ್ಲ , ಇಂಡಿಯನ್ಸ್ ಮೇಲೆ ಹಲ್ಲೆ ಮಾಡದಂತೆ ಕಾಂಗೊಗೆ ಮೆಸೇಜ್ ಮುಟ್ಟಿಸುವ ಯತ್ನ ನಡೆಸುತ್ತಿದ್ದಾರೆ.ಈ ಮನವೊಲಿಕೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ ಎನ್ನಲಾಗ್ತಿದೆ.

Spread the love
Leave A Reply

Your email address will not be published.

Flash News