ಬೆಂಗಳೂರು: ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಕಾರಿಗೆ ಬೆಂಕಿ ಇಟ್ಟ ಪ್ರಕರಣ ಒಂದ್ ಆಯಾಮದಲ್ಲಿ ಸುಖಾಂತ್ಯ ಕಂಡಿದೆ.ವೈಯುಕ್ತಿಕ ಜಿದ್ದು,ದ್ವೇಷ,ಪ್ರತೀಕಾರ,ವೈಯುಕ್ತಿಕ ತೇಜೋವಧೆ ಗಳೇ ಪ್ರಕರಣದ ಹಿಂದೆ ಕೆಲಸ ಮಾಡಿರುವಂತಿವೆ.ಪ್ರಕರಣದ ಹಿನ್ನಲೆಯಲ್ಲಿ ರಚಿಸಲಾಗಿದ್ದ 5 ತಂಡಗಳ ನಿರಂತರ ಕಾರ್ಯಾಚರಣೆ ಪರಿಣಾಮವಾಗಿ, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಕೇರಳಾ ಮೂಲದ ಸಾಗರ್ ಥಾಪ,ಶ್ರೀಧರ್ ಗೌಡ ಮತ್ತು ನವೀನ್ ಕಾಳಪ್ಪ ಬಂಧಿತರೆನ್ನಲಾಗಿದೆ.ಈ ಪೈಕಿ ಶ್ರೀಧರ್ ಗೌಡ ಮತ್ತು ನವೀನ್ ಕಾಳಪ್ಪ ಬೆಂಗಳೂರಿನವರು.ಶ್ರೀಧರ್ ಗೌಡ ಹಾಗೂ ನವೀನ್ ಗೆ ಕುಡಿಸಿ ಥಾಪಾ ಈ ಕೃತ್ಯವೆಸಗಿಸಿದ್ದನೆನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
*ದ್ವೇಷಕ್ಕೆ ಬೆಂಕಿ ಇಡಿಸಿದ*:-ಶ್ರೀಮಂತರು ಶ್ರೀಮಂತರಾಗೇ ಇರ್ತಾರೆ ಬಡವರು, ಬಡವರಾಗೇ ಇರ್ತಾರೆ ಎಂಬ ಕೋಪಕ್ಕೆ ಬೆಂಕಿ ಇಟ್ಟಿದ್ದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ.ಆದರೆ ಮೇಲ್ನೋಟಕ್ಕೆ ಸತೀಶ್ ರೆಡ್ಡಿ ಹಾಗೂ ಮೂವರು ಆರೋಪಿಗಳಿಗೂ ಯಾವುದೇ ಸಂಬಂಧವಿಲ್ಲ.
ಕೃತ್ಯಕ್ಕೆ ಬಳಸಿದ ವಾಹನ ಸಮೇತ ಆರೋಪಿಗಳ ಬಂಧಿಸಲಾಗಿದೆ.ಬೆಂಗಳೂರಿನ ಗಾರೆಬಾವಿ ಪಾಳ್ಯದ ಸಿಗ್ನಲ್ ಬಳಿ ಇಬ್ಬರನ್ನು ಬಂಧಿಸಲಾಗಿತ್ತು.ಅವರಿಬ್ಬರು ಕೊಟ್ಟ ಸುಳಿವಿನ ಮೇರೆಗೆ ಬಂಡೇಪಾಳ್ಯದ ಸ್ಮಶಾನದ ಬಳಿ ಮತ್ತೊಬ್ಬ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.ಶಾಸಕರ ಕಾರಿಗೆ ಬೆಂಕಿ ಹಚ್ಚುವಾಗ ಒಬ್ಬ ಆರೋಪಿ ಕಾಲಿಗೆ ಗಾಯವಾಗಿದೆ.ಕ್ಷುಲ್ಲಕ ಕಾರಣಕ್ಕೆ ಬೆಂಕಿ ಹಚ್ಚಿದ್ದಾಗಿ ಒಪ್ಪಿಕೊಂಡಿದ್ದಾರೆ.
*ಬೆಂಗಳೂರಲ್ಲೇ, ಅಡಗಿಕೊಂಡಿದ್ದ ಆರೋಪಿಗಳು*-ಪೆಟ್ರೋಲ್ ಗಾಗಿ ಬೈಕ್ ಕದ್ದು, ಕದ್ದ ಬೈಕ್ ನ ಪೆಟ್ರೋಲ್ ನಿಂದಲೇ ಕೃತ್ಯ ಎಸಗಿರುವುದು ಗೊತ್ತಾಗಿದೆ.ಬಹುಶಃ ಕೃತ್ಯ ಎಸಗಿದ ಓರ್ವ ಮಾದಕ ವಸ್ತು ವ್ಯಸನಿ ಆಗಿರುವ ಸಾಧ್ಯತೆ ಇದ್ದು ಈ ನಿಟ್ಟಿನಲ್ಲಿ ತನಿಖೆ ಮುಂದುವರೆದಿದೆ.
*ಪೊಲೀಸ್ ಕಮಿಷನರ್ ಕಮಲ್ ಪಂತ್ ಹೇಳಿದ್ದೇನು*..- ಆಗಸ್ಟ್ 12 ರ ಬೆಳಗಿನ ಜಾವ ಬೊಮ್ಮನಹಳ್ಳಿ ಶಾಸಕರ ಮನೆ ಆವರಣ ಒಳಗಿನ ಎರಡು ಕಾರುಗಳಿಗೆ ಬೆಂಕಿ ಹಾಕಿದ್ದರು.ವಿಷಯ ತಿಳಿದ ಕೂಡಲೇ ನೈಟ್ ರೌಂಡ್ಸ್ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ರು.
ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ್ ಜೋಷಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ರು. ಎಲ್ಲಾ ಟೆಕ್ನಿಕಲ್ ಎವಿಡೆನ್ಸ್ ಮೇಲೆ ತನಿಖೆ ಪ್ರಾರಂಭ ಆಯ್ತು.ಸಿಸಿಟಿವಿಯಲ್ಲಿ ಸಿಕ್ಕಿದ್ದ ಬೈಕ್ ಮೇಲೆ ಕಣ್ಣಿಡಲಾಗಿತ್ತು.ಕೃತ್ಯಕ್ಕೆ ಬಳಸಿದ ಬೈಕ್ ಬಳಿ ವ್ಯಕ್ತಿ ಬಂದಾಗ ಅರೆಸ್ಟ್ ಮಾಡಲಾಯ್ತು.
ಇದಕ್ಕಾಗಿ ಮೈಕೋ ಲೇಔಟ್ ಎಸಿಪಿ ಕರಿಬಸವನಗೌಡ ನೇತೃತ್ವದಲ್ಲಿ ತಂಡಗಳನ್ನಾಗಿ ರಚಿಸಲಾಗಿತ್ತು.
ಆರೋಪಿಗಳ ಪತ್ತೆಗೆ ಕಾರ್ಯಚರಣೆ ನಡೆಸಲಾಗಿತ್ತುಪ್ರಕರಣ ಸಂಬಂಧ ಮೂವರು ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆೆ.

*ಡಿಸಿಪಿ ಶ್ರೀನಾಥ್ ಜೋಷಿ ಕೆಲಸಕ್ಕೆ ಶಹಬ್ಬಾಸ್ ಗಿರಿ*-:ಒಟ್ಟಾರೆ ಆಪರೇಷನ್ ನ ನೇತೃತ್ವ ವಹಿಸಿದ್ದ ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಮಹದೇವ್ ಜೋಷಿ ಮತ್ತು ತಂಡದ ಕೆಲಸಕ್ಕೆ ಆಯುಕ್ತ ಕಮಲ್ ಪಂತ್ ಶಹಬ್ಬಾಸ್ ಗಿರಿ ನೀಡಿದ್ದಾರೆ.ಮೊದಲಿಗೆ ಯಾವುದೇ ಕ್ಲ್ಯೂ ಇಲ್ಲದೇ ಹಂತ ಹಂತವಾಗಿ ಸಿಸಿ ಕ್ಯಾಮಾರ ಪರಿಶೀಲಿಸಿದ್ರು.ಕಾರಿಗೆ ಬೆಂಕಿ ಹಚ್ಚಿದ ದಿನವೇ ಕೆಲವು ಗಂಟೆಗಳ ಬಳಿಕ ದ್ವಿಚಕ್ರವಾಹನ ಕದ್ದಿದ್ದು ಪತ್ತೆಯಾಗಿತ್ತು.ಇದೇ ದ್ವಿಚಕ್ರವಾಹನ ಓಡಾಟ ಪ್ರಕರಣಕ್ಕೆ ಲೀಡ್ ನೀಡಿತ್ತು.ಇದನ್ನೇ ಅನುಸರಿಸಿ ಆರೋಪಿಗಳನ್ನು ಪತ್ತೆ ಮಾಡಿ ಹಿಡಿದಿದ್ದಾರೆ ಎಂದು ತಿಳಿಸಿದ್ದಾರೆ.
*ಪೊಲೀಸರಿಗೆ 1 ಲಕ್ಷ ಬಹುಮಾನ*:-ಘಟನೆ ನಡೆದ ಕೆಲವೇ ಘಂಟೆಗಳಲ್ಲಿ ಮೂವರು ಆರೋಪಿ ಗಳನ್ನು ಪತ್ತೆ ಮಾಡಿದ ತಂಡಕ್ಕೆ ಶಹಬ್ಬಾಸ್ ಗಿರಿಯಷ್ಟೇ ಅಲ್ಲ,ಬಹುಮಾನವೂ ಸಿಕ್ಕಿದೆ.ಮಡಿವಾಳ ಎಸಿಪಿ ಸುದೀರ್ ಹೆಗಡೆ ಮತ್ತು ಬೊಮ್ಮನಹಳ್ಳಿ, ತಿಲಕ ನಗರ, ಮೈಕೋಲೇಔಟ್ ಮತ್ತು ಟೆಕ್ನಿಕಲ್ ಮತ್ತು ಕ್ರೈಂ ಸಿಬ್ಬಂದಿ ಉತ್ತಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಈ ಪ್ರಕರಣದಲ್ಲಿ ಟೆಕ್ನಿಕಲ್ ಎವಿಡೆನ್ಸ್ ಅನಲೈಜ್ ಮಾಡಿ ಕೇಸ್ ಭೇದಿಸಿ ಮಹತ್ವದ ಕಾರ್ಯಚರಣೆ ನಡೆಸಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಆಗ್ನೇಯ ವಿಭಾಗದ ಪೊಲೀಸರಿಗೆ ಒಂದು ಲಕ್ಷ ಬಹುಮಾನ ಘೋಷಣೆ ಮಾಡಲಾಗಿದೆ.
*ಶಾಸಕ ಸತೀಶ್ ರೆಡ್ಡಿ ಹೇಳಿದ್ದೇನು…*- ಘಟನೆ ನಡೆದ 48 ಗಂಟೆಯಲ್ಲಿ ಪೊಲೀಸರು ಸಿಸಿಟಿವಿ ಪೂಟೇಜ್ ಪರಿಶೀಲನೆ ನಡೆಸಿ ತನಿಖೆ ಮಾಡಿದ್ದಾರೆ.ನಾನು ಯಾರಿಗು ವೈಯಕ್ತಿಕ ತೊಂದರೆ ಮಾಡಿಲ್ಲ. ಸಿಕ್ಕಿರುವ ಮೂವರ ವಿರುದ್ಧ ಯಾವತ್ತು ಪೊಲೀಸ್ ಠಾಣೆಗೆ ದೂರು ಕೊಟ್ಟಿಲ್ಲ.ಅವರು ನನ್ನ ಬೇಟಿಯಾಗಲು ರಾತ್ರಿ 9-10 ಗಂಟೆಗೆ ಪ್ರಯತ್ನಿಸಿದ್ದಾರೆ.ಜನರು ಇರೋವಾಗ ಅವರು ಬೇಟಿಗೆ ಪ್ರಯತ್ನಿಸಿಲ್ಲ.ಇದು ತುಂಬ ಕ್ಲಿಯರ್ ಇದೆ.ಕೆಲಸ ಬೇಕು ಅಂದರೆ ಬೆಳಗ್ಗೆ ಬರ್ತಾರೆ.ಮೂವರಲ್ಲಿ ಒಬ್ಬ ಕುಡುಕ, ಒಬ್ಬ ಡ್ರಗ್ ವ್ಯಸನಿ.
ಇವರೆಲ್ಲ ಕೇಬಲ್ ಕೆಲಸಗಾರರು.ಇದರ ಹಿಂದೆ ಒಬ್ಬ ಸೂತ್ರಧಾರ ಇದ್ದಾನೆ.ಇವರು ಕೇವಲ ಪಾತ್ರಧಾರಿಗಳು ಅಷ್ಟೇ.ನನಗೆ ಒಂದಷ್ಟು ಮಾಹಿತಿ ಇದೆ.ಅದನ್ನೆಲ್ಲಾ ಗೃಹ ಸಚಿವರಿಗೆ ತಿಳಿಸ್ತೇನೆ.
ಅವನು ರಾತ್ರಿಯಲ್ಲೆ ಬೇಟಿಗೆ ಬರ್ತಾನೆ.ಹನ್ನೆರಡು ಗಂಟೆ ರಾತ್ರಿ ಮನೆಯ ಹತ್ರ ಸುತ್ತಾಡಿದ್ದಾನೆ. ಅವನಿಗೆ ಟ್ರೈನಿಂಗ್ ಅಗಿದೆ.ಈ ಮೂವರು ಪಾತ್ರಧಾರಿಗಳು ಅಷ್ಟೇ.ಒಬ್ಬ ಸೂತ್ರಧಾರ ಸ್ಪಷ್ಟವಾಗಿ ಇದ್ದಾನೆ.ಬಂಧಿತರಲ್ಲಿ ಇಬ್ಬರು ಕೇಬಲ್ ನೆಟ್ವರ್ಕ್ ನಲ್ಲಿ ಕೆಲಸ ಮಾಡೋರು.ನಾನು ಯಾರ ಹೆಸರನ್ನು ಹೇಳೋಕೆ ಇಷ್ಟ ಪಡಲ್ಲ. ಇನ್ನೂ ಪೊಲೀಸ್ ತನಿಖೆ ಅಗಲಿ.ನಿನ್ನೆ ಅವರು ಕೊಟ್ಟ ಕಾರಣ ಹಾಸ್ಯಾಸ್ಪದ.ಇವರಿಗೆ ಟ್ರೈನಿಂಗ್ ಕೊಟ್ಟು ಕಳಿಸಿದ್ದಾರೆ.
ಒಟ್ಟಿನಲ್ಲಿ ಪ್ರಕರಣ ಸುಖಾಂತ್ಯ ಕಂಡಂತೆ ಭಾಸವಾದರೂ ಶಾಸಕ ಸತೀಶ್ ರೆಡ್ಡಿ ಪಾಲಿಗೆ ಇದೆಲ್ಲವೂ ಸಂಪೂರ್ಣ ಸಂತೃಪ್ತಿ ತಂದಂತೆ ಅನಿಸುತ್ತಿಲ್ಲ..
ಈ ಮೂವರು ಪಾತ್ರಧಾರಿಗಳು ಅಷ್ಟೇ.ಒಬ್ಬ ಸೂತ್ರಧಾರ ಸ್ಪಷ್ಟವಾಗಿ ಇದ್ದಾನೆ.ಬಂಧಿತರಲ್ಲಿ ಇಬ್ಬರು ಕೇಬಲ್ ನೆಟ್ವರ್ಕ್ ನಲ್ಲಿ ಕೆಲಸ ಮಾಡೋರು.ನಾನು ಯಾರ ಹೆಸರನ್ನು ಹೇಳೋಕೆ ಇಷ್ಟ ಪಡಲ್ಲ. ಇನ್ನೂ ಪೊಲೀಸ್ ತನಿಖೆ ಅಗಲಿ.ನಿನ್ನೆ ಅವರು ಕೊಟ್ಟ ಕಾರಣ ಹಾಸ್ಯಾಸ್ಪದ.ಇವರಿಗೆ ಟ್ರೈನಿಂಗ್ ಕೊಟ್ಟು ಕಳಿಸಿದ್ದಾರೆ.
-ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ