Breakinglock downScrollTop Newsಕ್ರೈಮ್ /ಕೋರ್ಟ್ರಾಜ್ಯ-ರಾಜಧಾನಿ

ಕುಖ್ಯಾತ ದರೋಡೆಕೋರ ಕುಣಿಗಲ್ ಗಿರಿ ಅಣ್ಣನಿಂದ ಸಿನೆಮಾ ಸಹ ಕಲಾವಿದೆಗೆ ಮಹಾ ವಂಚನೆ..

ತಾಳಿ ಕಟ್ಟಿ ನಂಬಿಸಿ ಪರಾರಿಯಾದ ವಂಚಕ ಕುಣಿಗಲ್ ಹರೀಶ್.
ತಾಳಿ ಕಟ್ಟಿ ನಂಬಿಸಿ ಪರಾರಿಯಾದ ವಂಚಕ ಕುಣಿಗಲ್ ಹರೀಶ್.

ಬೆಂಗಳೂರು:  ತಮ್ಮ ಕುಖ್ಯಾತ ದರೋಡೆಕೋರ.. .ಈತ ಮಹಾನ್ ವಂಚಕ..ಯಾರು ಈ ಖತರ್ನಾಕ್  ಬ್ರದರ್ಸ್ ಅಂತೀರಾ‌‌..ಇಲ್ಲಿದೆ ನೋಡಿ ಆ ಇಂಟರೆಸ್ಟಿಂಗ್ ಸ್ಟೋರಿ..

ತಮ್ಮನ  ಹೆಸರು ಕುಣಿಗಲ್ ಗಿರಿ..ಪಾತಕ ಲೋಕದಲ್ಲಿ ತನ್ನದೇ ನಟೋರಿಟಿ ಬೆಳೆಸಿಕೊಂಡಾತ..ರಾಬರಿಯಲ್ಲಿ  ಎತ್ತಿದ ಕೈ..ಹೋಗ್ಲಿ, ತಮ್ಮನಾದ್ರು ಸರಿ ಹೋಗ್ತಾನೆ ಎಂದುಕೊಂಡ್ರೆ ಆ ಲೆಕ್ಕಾಚಾರವೂ ತಪ್ಪಾಗಿದೆ.ಅಣ್ಣ ರಾಬರಿಯಲ್ಲಿ ಕೆಟ್ಟ ಹೆಸ್ರು‌ ಮಾಡಿದ್ರೆ ತಮ್ಮ ಹುಡುಗಿ ಯರನ್ನು ಯಾಮಾರಿಸಿ ಪೊಲೀಸ್ ಅತಿಥಿಯಾಗಿದ್ದಾನೆ.

ಯುವತಿ ವಂಚಿಸಿ ಪರಾರಿಯಾದ ಕುಣಿಗಲ್ ಗಿರಿ ಸಹೋದರ ಹರೀಶ್.
ಯುವತಿ ವಂಚಿಸಿ ಪರಾರಿಯಾದ ಕುಣಿಗಲ್ ಗಿರಿ ಸಹೋದರ ಹರೀಶ್.

ಈತನ ಹೆಸರು ಕುಣಿಗಲ್ ಹರೀಶ್..ಮಾಡೋಕ್ಕೆ ಕ್ಯಾಮೆ ಇಲ್ಲದೆ ತಮ್ಮನ ಹಡಬೆ ಹೆಸರಿನಿಂದಲೇ ಹಣ ಮಾಡೊಕ್ಕೆ ಶುರುವಿಟ್ಟುಕೊಂಡಿದ್ದ.ಅಷ್ಟೇ ಅಲ್ಲ,ಒಂದೆಜ್ಜೆ ಮುಂದ್ಹೋಗಿ ಈತ ಮಾಡ್ಕೊಂಡಿರೋ ಯಡವಟ್ಟೇ ಈತ ಪೊಲೀಸರ ಅತಿಥಿಯಾಗಿದ್ದಾನೆ.

ಸಿನೆಮಾಗಳಲ್ಲಿ ಸಹ ಕಲಾವಿದೆಯಾಗಿ ಬದುಕು ಕಂಡುಕೊಂಡಿದ್ದ ಯುವತಿಗೆ  ಮದುವೆಯಾಗ್ತೀನಂಥ ನಂಬಿಸಿ ಆಕೆಗೆ ತಾಳಿಯನ್ನೂ ಕಟ್ಟಿ ವಂಚಿಸಿದ್ದಾನೆ.ಆತನನ್ನು ನಂಬಿ ಆತನ ಕೈಗೆ ಕುತ್ತಿಗೆ ಕೊಟ್ಟ ಅಮಾಯಕೆ ಇವತ್ತು ಆತ ಮಾಡಿದ ವಂಚನೆಗೆ ಕೈ ಕೈ ಹಿಸುಕಿಕೊಳ್ತಿದಾಳೆ.

ತಾಳಿ ಕಟ್ಟಿದಾತ ಫಸ್ಟ್ ನೈಟ್ ಮಾಡ್ಕೊಂಡ ಮೇಲೆ ಎಸ್ಕೇಪ್ ಆಗಿದ್ದಾನೆ.ಹಾಗೆ ಹೋಗುವಾಗ ಆಕೆಯ ಒಡವೆಯನ್ನೆಲ್ಲಾ ಹೊತ್ತೊಯ್ದಿದ್ದಾನೆ.

ರಾಜಗೋಪಾಲನಗರ ನಿವಾಸಿಯಾಗಿರುವ ಯುವತಿಗೆ ಪ್ರೀತಿ ಹೆಸರಲ್ಲಿ ಹಿಂದೆ ಬಿದ್ದಿದ್ದ ಹರೀಶ್,ನಿನ್ನನ್ನೇ ಮದುವೆಯಾಗ್ತೀನಿ ಅಂತ ನಂಬಿಸಿ, ಮನೆಯಲ್ಲೆ ತಾಳಿ ಕಟ್ಟಿ ಗಂಡನಂತೆ ನಟಿಸಿದ್ದ.

ಆತನನ್ನು ನಂಬಿ ತನ್ನ ಬಳಿಯಿದ್ದ 180 ಗ್ರಾಂ ಚಿನ್ನಾಭರಣ, 2.5 ಲಕ್ಷ ನಗದನ್ನು ಕೊಟ್ಟಿದ್ದಾಳೆ. ಹಣ ದೋಚಿ ಎಸ್ಕೇಪ್ ಆದ ಆತನನ್ನು  ಸಂಪರ್ಕಿಸಿದ್ರೆ ನನ್ನ ತಮ್ಮ ಕುಣಿಗಲ್ ಗಿರಿ.ನೀನ್ ಕೊಟ್ಟಿರುವ ಕೇಸ್ ವಾಪಸ್ ತಗೊಳ್ಳದಿದ್ರೆ ಕೊಲೆ ಮಾಡುವುದಾಗಿ ಧಮ್ಕಿ ಹಾಕಿದ್ದಾನೆ.

ಸಾಲದ್ದಕ್ಕೆ ಜೈಲಿನಿಂದ ತಮ್ಮ  ಕುಣಿಗಲ್ ಗಿರಿಯಿಂದ  ಕರೆಮಾಡಿ ದೂರು ವಾಪಸ್ ತೆಗೆದುಕೊಳ್ಳುವಂತೆ ಧಮ್ಕಿ ಹಾಕಿಸಿದ್ದಾನೆ.

ಮೋಸಹೋದ ಯುವತಿ ಕುಣಿಗಲ್ ಗಿರಿ ಹಾಗೂ  ಹರೀಶ್ ವಿರುದ್ಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

Spread the love

Related Articles

Leave a Reply

Your email address will not be published.

Back to top button
Flash News