ಬೆಂಗಳೂರು:ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮನೆಯ ವಾಹನಗಳಿಗೆ ಬೆಂಕಿ ಇಟ್ಟ ಪ್ರಕರಣದಲ್ಲಿ ಮೂವರು ಸಿಕ್ಕಿಬಿದ್ರೂ ಘಟನೆಗೆ ನೈಜ ಕಾರಣ ಮಾತ್ರ ತಿಳೀತಿಲ್ಲ.ಖತರ್ನಾಕ್ ಆಸಾಮಿಗಳು ಪೊಲೀಸರಿಗೇನೆ ಚಳ್ಳೆ ಹಣ್ಣು ತಿನ್ನಿಸ್ತಿದಾರಾ ಅನ್ಸುತ್ತೆ.
ವಿಚಾರಣೆ ವೇಳೆ ಕಣ್ಣೀರು: ಕಿಡಿಗೇಡಿಗಳು ವಿಚಾರಣೆ ವೇಳೆ ಸೆಂಟಿಮೆಂಟ್ ಸಿನಿಮಾ ಕಥೆ ಹೆಣೆಯುತ್ತಿದ್ದಾರೆ. ಏನೇ ಕೇಳಿದ್ರೂ ಕಣ್ಣೀರಾಕಿ ಅಯ್ಯೋ ಪಾಪ ಎನ್ನುವಂತೆ ಹೈಡ್ರಾಮ ಸೃಷ್ಟಿಸ್ತಿದ್ದಾರಂತೆ.
ಬಂಧಿತ ಮೂವರು ಆರೋಪಿಗಳನ್ನು ಬೊಮ್ಮನಹಳ್ಳಿ ಪೊಲೀಸರು ವರ್ಕೌಟ್ ಮಾಡ್ತಿದ್ರೂ ಯಾವುದೂ ಪ್ರಯೋಜನವಾಗ್ತಿಲ್ಲ.
ಆರೋಪಿಗಳಾದ ಸಾಗರ್, ನವೀನ್ ಮತ್ತು ಶ್ರೀಧರ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದ್ದರೂ ಕಣ್ಣೀರು ಬಿಟ್ಟರೆ ಬೇರೇನೂ ಹೇಳುತ್ತಿಲ್ಲ.
ಬಡತನ ನೆನೆದು ಕಣ್ಣೀರಿಡುತ್ತಿದ್ದಾರಂತೆ. ಬಡವರನ್ನ ನೋಡಿದ್ರೆ ಕರುಳು ಕಿತ್ತು ಬರುತ್ತೆ ಸರ್.. ದೇವಸ್ಥಾನದ ಬಳಿ ಕುಳಿತಿರೋರನ್ನ ನೋಡಿದ್ರೆ ಅಯ್ಯೋ ಅನ್ನಿಸುತ್ತೆ ಎಂದು ಆರೋಪಿ ಸಾಗರ್ ಕಥೆ ಕಟ್ಟುತ್ತಿದ್ದಾನಂತೆ.ಇವರ
ಸೆಂಟಿಮೆಂಟ್ ಹಾಗೂ ಹೃದಯಸ್ಪರ್ಶಿ ಮಾತುಗಳಿಂದ ಪೊಲೀಸರೆ ಗಪ್ ಚುಪ್ ಆಗಿದ್ದಾರೆ. ಮಿಡಿಯುವ ಮಾತುಗಳಿಂದ ಪೊಲೀಸರ ಬಾಯಿ ಮುಚ್ಚಿಸೋ ಪ್ರಯತ್ನ ಮಾಡುತ್ತಿದ್ದಾರೆ. ಶಾಸಕರ ಕಾರುಗಳಿಗೆ ಬೆಂಕಿ ಹಚ್ಚಿದ ಬಗ್ಗೆಯೀ ಸೆಂಟಿಮೆಂಟ್ ಉತ್ತರ ಕೊಡ್ತಿದಾರಂತೆ.ಮೂವರು ಆರೋಪಿಗಳ ಬಾಯ್ಬಿಡಿಸಲು ಪೊಲೀಸರು ಸರ್ಕಸ್ಸನ್ನೇ ಮಾಡ್ತಿದ್ದಾರೆ.
ಮೂವರು 10 ಡ್ರಾಪ್ ಔಟ್.. ಆರೋಪಿಗಳ ಪೂರ್ವಪರ ವಿಚಾರಿಸಿದಾಗ,ಮೂವರು 10 ನೇ ತರಗತಿ ಡ್ರಾಪ್ ಔಟ್ ಆಗಿರೋದು ಗೊತ್ತಾಗಿದೆ.
ದಿನ ಬೆಳಗಾದರೆ ಬೇಗೂರು ರಸ್ತೆ ಸರ್ಕಾರಿ ಶಾಲೆ ಬಳಿ ಮೊಕ್ಕಾಂ ಹೂಡುತ್ತಿದ್ದ ಈ ಮೂವರು ಒಬ್ಬರಿಗೊಬ್ಬರು ಪರಿಚಯವಾಗಿದ್ದಾರಂತೆ.ದುಶ್ಚಟಗಳಿಗೆ ಬಲಿಯಾಗಿ ಓಡಾಡ್ಕೊಂಡಿದ್ದರಂತೆ.
ನೇಪಾಳ ಮೂಲದ ಸಾಗರ್ ತಾಪ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದರೆ, ನವೀನ್ ಮತ್ತು ಶ್ರೀಧರ್ ಕೆಲಸವಿಲ್ಲದೆ ಸುತ್ತಾಡುತ್ತಿದ್ದರು.ಇದೇ ಕುಡಿದ ಅಮಲಿನಲ್ಲಿ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಇಟ್ಟಿರುವುದನ್ನು ಒಪ್ಪಿಕೊಂಡಿದ್ದಾರೆ.ಏನೇ ಆದ್ರೂ,ಘಟನೆಗೆ ನಿಖರ ಕಾರಣ ಪತ್ತೆ ಹಚ್ಚಲು ಪೊಲೀಸರು ಹರಸಾಹಸ ಪಡ್ತಿರೋದಂತೂ ಸತ್ಯ..
ನ್ಯಾಯಾಂಗ ಬಂಧನ:ಈ ನಡುವೆ ಬಂಧಿತ ಆರೋಪಿಗ ಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮೆಡಿಕಲ್ ಬಳಿಕ ಆರೋಪಿಗಳನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗಿದೆ. ವಿಚಾರಣೆ ನಡೆಸಿದ ನ್ಯಾಯಾಧೀಶರು, ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಸಾಗರ್ ತಾಪ, ನವೀನ್ ಮತ್ತು ಶ್ರೀಧರ್ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಗಿದೆ. ನಾಳೆ ಮತ್ತೆ ಆರೋಪಿಗಳನ್ನ ವಶಕ್ಕೆ ಪಡೆಯಲು ಪೊಲೀಸರು ಸಿದ್ದತೆ ಮಾಡಿಕೊಂಡಿದ್ದಾರೆ.