“ಪಂಜಾಬಿ ದಂಪತಿ”ಯ “ಮಾರ್ಕ್ಸ್ ಕಾರ್ಡ್ ದಂಧೆ” ಸ್ಟೋರಿ ಕೇಳಿ ಬೆಚ್ಚಿಬಿದ್ದ ಸಿಸಿಬಿ ಪೊಲೀಸ್

ಮಾರ್ಕ್ಸ್ ಕಾರ್ಡ್ ಅವಶ್ಯಕತೆ ಇರೋರನ್ನು ಬಕ್ರಾ ಮಾಡೊಕ್ಕೆ..ಪರೀಕ್ಷೆ ಬರೆಸೊಕ್ಕೂ ಗ್ಯಾಂಗ್ ಇಟ್ಕೊಂಡಿದ್ದ ಖತರ್ನಾಕ್ ಕಪಲ್ಸ್

0

ಬೆಂಗಳೂರು:ಈ ಪಂಜಾಬಿ ದಂಪತಿಯ ಮಾರ್ಕ್ಸ್ ಕಾರ್ಡ್ ದಂಧೆಗೆ ಪೊಲೀಸ್ರೇ ಬೆಚ್ಚಿಬಿದ್ದಿದ್ದಾರೆ. ಏಕೆಂದ್ರೆ ಸಾಚಾಗಳಂಗೆ ಫೋಸ್ ಕೊಟ್ಕಂಡಿದ್ದ ಈ ಖತರ್ನಾಕ್ ದಂಪತಿ ಮಾಡ್ತಿದ್ದ ಕರಾಮತ್ತೇ ಹಾಗಿತ್ತು.ಅಸಲಿ ತಲೆ ಮೇಲೆ ಹೊಡೆದಂಗೆ ನಕಲಿ ಅಂಕಪಟ್ಟಿ ರೆಡಿ ಮಾಡಿ ಲಕ್ಷಾಂತರ ಹಣಕ್ಕೆ ಮಾರಿಕೊಳ್ತಿದ್ದ ರೀತಿಯ ನ್ನು ಅವರ ಬಾಯಿಂದ್ಲೇ ಕೇಳಿ ಹೌಹಾರಿ ಹೋಗಿದ್ದಾರೆ ಪೊಲೀಸ್ರು.

ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳ ಅಂಕಪಟ್ಟಿಯನ್ನು ವಿವಿಗಳಲ್ಲಿರುವ ಕೆಲವು ಖದೀಮರನ್ನು ಒಳಗಾ ಕೊಂಡು ಮಾರುತ್ತಿದ್ದ ಪಂಜಾಬಿ ದಂಪತಿಯ ವಂಚನೆಯ ಜಾಲವನ್ನು ಸಿಸಿಬಿ ಪೊಲೀಸ್ರು ಬಂಧಿಸಿದ್ದು ಎಲ್ಲರಿಗೂ ತಿಳಿದೇ ಇದೆ..ಈ ದಂಪತಿಯನ್ನು ತಮ್ಮದೇ ಆದ ಭಾಷೆಯಲ್ಲ ವರ್ಕೌಟ್ ಮಾಡಿದಾಗ ದಂಪತಿ ಕೆಲವು ಸ್ಪೋಟಕ ಮಾಹಿತಿಯನ್ನು ಹೊರಗಾಕಿದ್ದಾರೆ.

ಯಾವುದೇ ಕೋರ್ಸ್ ಇರಲಿ ಅಂತಿಮ ಸೆಮಿಸ್ಟರ್ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ನೊಂದಾಯಿಸುತ್ತಿದ್ದ ದಂಪತಿ ಎಲ್ಲಾ ಸೆಮಿಸ್ಟರ್ ನ ಅಂಕಪಟ್ಟಿಗಳನ್ನ ತರಿಸಿ ಮಾರಾಟ ಮಾಡುತ್ತಿದ್ದರಂತೆ.ಹೀಗೆ ಮಾಡಿ ಅವರು ಅಂಕಪಟ್ಟಿ ಮಾರಿರುವುದು ಬರೋಬ್ಬರಿ 500 ಕ್ಕೂ ಅಧಿಕ ಜನರಿಗೆ ಎನ್ನುವುದನ್ನು ದಂಪತಿಯೇ ಬಾಯ್ಬಿಟ್ಟಿದ್ದಾರೆ.

ಈ ಹಿನ್ನಲೆಯಲ್ಲಿ ದಂಪತಿಯ ಅಕ್ರಮದಲ್ಲಿ ಕೆಲವು ವಿವಿಗಳೂ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.ಹಾಗಾಗಿನೇ ಹೆಚ್ಚಿನ ಮಾಹಿತಿ ಕಲೆ ಹಾಕೊಕ್ಕೆ ಅಸೆಟ್, ರವೀಂದ್ರನಾಥ ಟ್ಯಾಗೂರ್ ಹಾಗೂ ಸಿವಿ ರಾಮನ್ ಯೂನಿವರ್ಸಿಟಿಗಳಿಗೆ  ನೊಟೀಸ್ ಜಾರಿ ಮಾಡಿ ನಿಗಧಿತ ದಿನಾಂಕದಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಅಷ್ಟೇ ಅಲ್ಲ,ದಂಪತಿ ತಮ್ಮಿಂದ ಅಂಕಪಟ್ಟಿ ಪಡೆದುಕೊಂಡವರ ಮಾಹಿತಿಯನ್ನೂ ಪೊಲೀಸರಿಗೆ ನೀಡಿದ್ದಾರಂತೆ ಅಂಥವರ ವಿಚಾರಣೆ ನಡೆಸಲು ನಿರ್ಧರಿಸಲಾಗಿದ್ದು ಅವರಿಗೂ ತಕ್ಕ ಶಾಸ್ತಿ ಕಾದಿದೆ. ಅಂಕಪಟ್ಟಿ ದಂಧೆಗೆ ತನ್ನದೇ ಆದ ಗ್ಯಾಂಗ್ ಹೊಂದಿದ್ದ ಪಂಜಾಬಿ ದಂಪತಿಗಳು,ವಿವಿಗಳ ಬಳಿ ಗ್ಯಾಂಗ್ ಕಳುಹಿಸಿ ಅಂಕಪಟ್ಟಿಯ ಅವಶ್ಯಕತೆ ಇರುವವರನ್ನು ಹಿಡಿದು ತರಿಸುತ್ತಿದ್ದರಂತೆ.

ಯಾರೇ ಪರೀಕ್ಷೆ ಕಟ್ಟಿದ್ರು ತಮ್ಮ ಗ್ಯಾಂಗ್ ಮೆಂಬರ್ ಗಳಿಂದ ಪರೀಕ್ಷೆ ಬರೆಸುತ್ತಿದ್ದರಂತೆ. ಅದಕ್ಕಾಗಿ ಕೆಲ ಯುವತಿಯರು ಹಾಗೂ ಯುವಕರನ್ನ ಹಣಕೊಟ್ಟು ನೇಮಿಸಿಕೊಂಡಿದ್ದರೆನ್ನುವ ಮಾಹಿತಿ ಕೇಳಿ ಕಕ್ಕಾಬಿಕ್ಕಿಯಾಗಿರುವ ಪೊಲೀಸರು ಇದರ ಹಿಂದೆ ದೊಡ್ಡ ಜಾಲವೇ ಇರುವ ಶಂಕೆ ವ್ಯಕ್ತಪಡಿಸಿದ್ದಾರೆ.ಅಷ್ಟೇ ಅಲ್ಲ,ಜಾಲವನ್ನು ಬೇಧಿಸುವಲ್ಲಿ ನಿರತರಾಗಿದ್ದಾರೆ.

Spread the love
Leave A Reply

Your email address will not be published.

Flash News