ಬಿಬಿಎಂಪಿ ಮುಖ್ಯ ಆಯುಕ್ತರ ವಿರುದ್ಧ “ಕಿಕ್ ಬ್ಯಾಕ್ “ಆರೋಪ: ಅಕ್ರಮ ನಿಯೋಜನೆಗೆ ಕಣ್ಮುಚ್ಚಿಕೊಂಡು ಸಹಿ ಹಾಕಿದ್ದು ಸತ್ಯನಾ..?

ಅಶೋಕ್ ಬಾಗಿ ಅಕ್ರಮ ನಿಯೋಜನೆಗೆ ಕಾರಣವಾದ್ರಾ ಗೌರವ್ ಗುಪ್ತಾ-ತಮ್ಮ ಶಿಷ್ಯನ ನಿಯೋಜನೆಗೆ ಕಡತ ಸಿದ್ಧಪಡಿಸಿ ಪ್ರಹ್ಲಾದ್ ಸಹಿ ಹಾಕಿಸಿದ್ದು ನಿಜನಾ..??

0
ಅಕ್ರಮವಾಗಿ ನಿಯೋಜನೆಗೊಂಡಿರುವ ಆಪಾದನೆಗೆ ಗುರಿಯಾಗಿರುವ ಅಶೋಕ್ ಬಾಗಿ
ಅಕ್ರಮವಾಗಿ ನಿಯೋಜನೆ ಗೊಂಡಿ ರುವ ಆಪಾದನೆಗೆ ಗುರಿಯಾಗಿರುವ ಅಶೋಕ್ ಬಾಗಿ

 ಬೆಂಗಳೂರು:ಬಿಬಿಎಂಪಿ ಎನ್ನುವ ಭ್ರಷ್ಟಾಚಾರದ ಕೊಂಪೆಯನ್ನು ಯಾರೊಬ್ಬರೂ ಸರಿ ಮಾಡಲಿಕ್ಕೆ ಆಗೊಲ್ಲ ಅನ್ಸುತ್ತೆ.ಒಂದು ತೂತು ಮುಚ್ಚಿದ್ರೆ ಇನ್ನೊಂದು ತೆರೆದುಕೊಳ್ಳುತ್ತೆ.ವ್ಯವಸ್ಥೆ ಸರಿ ಮಾಡ್ತೀನಿ ಅಂಥಾ ಬಂದೋರು ಒಂದಾ ಇಲ್ಲಿನ ಭ್ರಷ್ಟ ವ್ಯವಸ್ಥೆ ಜತೆ ಹೊಂದಾಣಿಕೆ ಮಾಡಿಕೊಂಡು ಹೋಗ್ಬೇಕು.. ಇಲ್ವಾ,ಇಲ್ಲಿಂದಲೇ ಜಾಗ ಖಾಲಿ ಮಾಡ್ಬೇಕು ಎನಿಸುತ್ತೆ..ಪರಿಸ್ಥಿತಿ ಹೀಗಿರುವಲ್ಲೇ ಅಕ್ರಮ,ಅನ್ಯಾಯಗಳ ಭಾಗವಾಗಿ ಸಾಕಷ್ಟು ಮುಖಗಳು ಅನಾವರಣಗೊಳ್ಳುತ್ತಲೇ ಇರುತ್ವೆ.ಅಂತದ್ದೇ ಒಂದು ಮುಖವನ್ನು ಬಿಜೆಪಿ ಮುಖಂಡ ಎನ್.ಆರ್ ರಮೇಶ್ ಬಟಾಬಯಲು ಮಾಡಿದ್ದಾರೆ.ಭ್ರಷ್ಟಾಚಾರ ನಿಗ್ರಹದಳಕ್ಕೂ ಈ ಬಗ್ಗೆ ದೂರು ಕೊಟ್ಟಿದ್ದಾರೆ.

ಬಿಬಿಎಂಪಿಯಲ್ಲಿ ಕೆಲಸ ಮಾಡಬೇಕೆಂದ್ರೆ ಅದರಲ್ಲೂ ಆಯಕಟ್ಟಿನ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಬೇ ಕೆಂದರೆ ಯೋಗ್ಯತೆ-ಅರ್ಹತೆ-ಸಾಮರ್ಥ್ಯಗಳ್ಯಾವು ಮಾನದಂಡಗಳೇ ಅಲ್ಲ,ಅಧಿಕಾರಿ ನೌಕರರಿಗೆ ಇರಬೇ ಕಾದ ಒಂದೇ ಅರ್ಹತೆ ಎಂದ್ರೆ ಅದು ದುಡ್ಡು ಹಾಗೂ ಶಿಫಾರಸ್ಸು.ಡೆಪ್ಯುಟೇಷನ್ ವಿಚಾರದಲ್ಲಂತೂ ಇದು ಕಣ್ಣಿಗೆ ರಾಚಿದಂತೆ ಕಾಣುತ್ತದೆ.ಪಾಲಿಕೆಯಲ್ಲಿ ನಿಯೋಜನೆ ಮೇಲೆ ಬಂದು ಗೂಟಾ ಹೊಡೆದುಕೊಂಡು ಕೂತಿರೋರ ಸಂಖ್ಯೆನೇ ಅದೆಷ್ಟೋ ಸಾವಿರದಷ್ಟಿದೆ ಎಂದ್ರೆ ಬಿಬಿಎಂಪಿಯಲ್ಲಿ ಭ್ರಷ್ಟಾಚಾರದ ಕಮಟು ಯಾವ್ ಪ್ರಮಾಣದಲ್ಲಿ ಮೂಗಿಗೆ ಹೊಡೆಯುತ್ತೆ ಎನ್ನುವುದನ್ನು ಊಹಿಸಿಕೊಳ್ಳಬಹುದು.

ಎನ್.ಆರ್ ರಮೇಶ್
ಎನ್.ಆರ್ ರಮೇಶ್
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ
ಮುಖ್ಯ ಆಯುಕ್ತ ಗೌರವ್ ಗುಪ್ತಾ

ಅಶೋಕ್ ಭಾಗಿ ಎನ್ನುವ ಅಧಿಕಾರಿ ವಿರುದ್ಧವೂ ಇಂತದ್ದೇ ಆರೋಪ ಕೇಳಿಬಂದಿದೆ.ಡೆಪ್ಯುಟೇಷನ್ ವ್ಯಾಪ್ತಿಯಲ್ಲಿ ಬಾರೊಕ್ಕೆ ಸಾಧ್ಯವೇ ಇರದ ಇಲಾಖೆ ಅಧಿಕಾರಿಯಾಗಿರುವ ಬಾಗಿ ಬಿಬಿಎಂಪಿಯ ಆಯಕಟ್ಟಿನ ಹುದ್ದೆಯನ್ನು ಅಲಂಕರಿಸಿ ಕೆಲಸ ಮಾಡುತ್ತಿದ್ದಾರೆಂದ್ರೆ ಅದರ ಹಿಂದೆ ಏನೆಲ್ಲಾ ನಡೆದಿರಬಹುದೆನ್ನುವುದನ್ನು ಊಹಿಸಿಕೊಳ್ಳಬಹುದೆನ್ನುತ್ತಾರೆ ದೂರುದಾರ  ಎನ್,ಆರ್ ರಮೇಶ್.

ಬಿಬಿಎಂಪಿಯ 17 ಇಲಾಖೆಗಳ ಪೈಕಿ ನಾಲ್ಕೈದು ಇಲಾಖೆಗಳು ಅತೀ ಹೆಚ್ಚು ಲಾಭದ,ಅದೇ ಕಾರಣಕ್ಕೆ ಭ್ರಷ್ಟಾಚಾರದ ಕೂಪಗಳೆನಿಸಿಕೊಂಡಿವೆ.ಆ ಪೈಕಿ ರಸ್ತೆಗಳ ಮೂಲಭೂತ ಸೌಕರ್ಯ ಇಲಾಖೆಯೂ ಒಂದು.ಅದರ ಅಧೀನದಲ್ಲಿರುವ ಟ್ರಾಫಿಕ್ ಎಂಜಿನಿಯರಿಂಗ್ ಸೆಲ್ ಕೂಡ ಅಕ್ರಮಗಳ ಕೊಂಪೆಯಾಗಿದೆ.ಎನ್.ಆರ್ ರಮೇಶ್ ಆಪಾದಿಸಿರುವ ಅಶೋಕ್ ಬಾಗಿ ಕೂಡ ಇದೇ ಇಲಾಖೆಯಲ್ಲಿ ಡೆಪ್ಯುಟೇಷನ್ ಮೇಲೆ ಬಂದು ಕೆಲಸ ಮಾಡುತ್ತಿದ್ದಾರೆ.ಡೆಪ್ಯುಟೇಷನ್ ಕೊಡ್ಲಿಕ್ಕೆ ಬಾರದ ಜಲಸಂಪನ್ಮೂಲ ಇಲಾಖೆಯಿಂದ ನಿಯೋಜನೆ ಮೇಲೆ ಬಿಬಿಎಂಪಿಗೆ ಬಂದಿದ್ದೇ ಆಶ್ಚರ್ಯ.ಸೇವಾ ನಿಯಾಮವಳಿಗಳನ್ನೇ ಉಲ್ಲಂಘಿಸಿ ಬಿಬಿಎಂಪಿಗೆ ಬಂದಿರುವ ಬಾಗಿ ಅವರ ನಿಯೋಜನೆ ಆದೇಶ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರಿಂದ 31-08-2021 ರಂದು ಹೊರಬಿದ್ದಿದೆ.ಇದು ಸಂಪೂರ್ಣ ಅಕ್ರಮ ಎನ್ನುವುದು ರಮೇಶ್ ಆರೋಪ.

ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಬಿ.ಎಸ್ ಪ್ರಹ್ಲಾದ್
ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಬಿ.ಎಸ್ ಪ್ರಹ್ಲಾದ್

ನಿಯಮಗಳು ಏನನ್ನುತ್ತವೆ..ವೃಂದ ಮತ್ತು ನೇಮಕಾತಿ ನಿಯಮ(ಸಿ ಅಂಡ್ ಆರ್) ಅನ್ವಯ ಪಿಡಬ್ಲ್ಯೂಡಿ ಹೊರತುಪಡಿಸಿದ್ರೆ ಬೇರೆ ಯಾವುದೇ ಇಲಾಖೆಗಳಿಂದಲೂ ಬಿಬಿಎಂಪಿಗೆ ನಿಯೋಜನೆ ಅಥವಾ ಡೆಪ್ಯುಟೇಷನ್ ಮೇಲೆ ಬರೊಕ್ಕೆ ಸಾಧ್ಯವಿಲ್ಲ.ಅಂತದ್ದರಲ್ಲಿ ನೀರಾವರಿ ಇಲಾಖೆಯಲ್ಲಿ ಎಇ ಆಗಿರುವ ಅಶೋಕ್ ಬಾಗಿ ಅವರನ್ನು ಟ್ರಾಫಿಕ್ ಎಂಜಿನಿಯರಿಂಗ್ ಸೆಲ್ ಗೆ ರೂಲ್ಸ್ 32ರ ಅಡಿಯಲ್ಲಿ ಹೇಗೆ ಪ್ರಭಾರಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ನೇಮಕಮಾಡಲಾಯಿತು ಎನ್ನುವುದೇ ದೊಡ್ಡ ಪ್ರಶ್ನೆ.

ಅಷ್ಟೇ ಅಲ್ಲ,ಇದೇ ರೂಲ್ಸ್ 32,ಪ್ರಭಾರಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿರುವ ಯಾವುದೇ ಅಧಿಕಾರಿಯನ್ನೂ ಅಧೀಕ್ಷಕ ಅಭಿಯಂತರ(ಇಇ) ಹುದ್ದೆಗೆ ನಿಯೋಜನೆ ಮಾಡಲು ಸಾಧ್ಯವಿಲ್ಲ ಎನ್ನುತ್ತೆ.ಆದ್ರೆ ಅಶೋಕ್ ಬಾಗಿ ಅವರನ್ನು ಅನಧೀಕೃತವಾಗಿ ಮೇಲ್ಕಂಡ ಹುದ್ದೆಯಲ್ಲಿ ಕುಳ್ಳರಿಸಲಾಗಿದೆ ಎಂದು ಎನ್.ಆರ್ ರಮೇಶ್ ಈ ಹಿಂದೆಯೇ ಪತ್ರ ಬರೆದಿದ್ದರಂತೆ..ಆದ್ರೆ ಯಾವುದನ್ನೂ   ತೆಗೆದುಕೊಂಡಿಲ್ಲ.

ನಿಯಾಮವಳಿ ಗಾಳಿಗೆ ತೂರಿರುವುದು ಎಲ್ಲಿ..ಹೇಗೆ..?:ಬಿಬಿಎಂಪಿಯಲ್ಲಿ ಯಾವುದೇ ಇಲಾಖೆಯ ಯಾವುದೇ ಹುದ್ದೆಯಲ್ಲಿ ನಿಯೋಜನೆ ಮಾಡಬೇಕೆಂದರೆ ಅನುಮೋದನೆ ಮೊದಲು ಗುಮಾಸ್ತ,ಸಹಾಯಕ ಆಯುಕ್ತ,ಉಪ ಆಯುಕ್ತ-ವಿಶೇಷ ಆಯುಕ್ತರ ಅವಗಾಹನೆಗೆ ಬರಬೇಕಾಗುತ್ತದೆ.ಎಲ್ಲವೂ ಸರಿಯಾಗಿದ್ದು,ಸಮರ್ಪಕವಾಗಿದ್ದಲ್ಲಿ ಮಾತ್ರ ಆ ಕಡತ ಮುಖ್ಯ ಆಯುಕ್ತರ ಟೇಬಲ್ ಮೇಲೆ ಬರುತ್ತೆ.ಅದಕ್ಕೆ ಅವರೇ ಅಂತಿಮ ಮುದ್ರೆ ಒತ್ತಬೇಕಾಗುತ್ತದೆ.

ಆದರೆ ಎನ್,ಆರ್ ರಮೇಶ್ ಆಪಾದಿಸುವಂತೆ ಈ ಯಾವುದೇ ಆಡಳಿತಾತ್ಮಕ ಹಂತಗಳನ್ನು ಬಾಗಿ ಅವರ ನಿಯೋಜನೆಯ ಕಡತ ದಾಟಿಯೇ ಇಲ್ಲವಂತೆ.ನೇರವಾಗಿ ಮುಖ್ಯ ಆಯುಕ್ತರಿಂದಲೇ ಫೈಲ್ ಗೆ ಸಹಿ ಹಾಕಿಸಲಾಗಿದೆ.ಇದೆಲ್ಲದರ ಹಿಂದಿನ ಕುಮ್ಮಕ್ಕು ನೀಡಿರುವುದೇ ಆ ವಿಭಾಗದ ಮುಖ್ಯ ಎಂಜಿನಿಯರ್  ಬಿ.ಎಸ್.ಪ್ರಹ್ಲಾದ್ ಎನ್ನುವುದು ರಮೇಶ್ ಅವರ ಮುಂದುವರೆದ ಆರೋಪ.ತಮ್ಮ ಕಚೇರಿಯಲ್ಲೇ ಪ್ರಹ್ಲಾದ್ ನಿಯೋಜನೆಗೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ರೆಡಿ ಮಾಡಿಸಿ ಮುಖ್ಯ ಆಯುಕ್ತರ ತಲೆ ಮೇಲೆ ಸವರಿ ನಿಯೋಜನೆಗೆ ಸಹಿ ಹಾಕಿಸಿಕೊಂಡಿದ್ದಾರೆನ್ನುವುದು ರಮೇಶ್ ಗಂಭೀರ ಆರೋಪ.ಮೇಲ್ಕಂಡ ಅಕ್ರಮದಲ್ಲಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರನ್ನು ಆಪಾದಿತ ಸ್ಥಾನದಲ್ಲಿರಿಸಿದ್ದಾರೆ ರಮೇಶ್.

ಗೌರವ್ ಗುಪ್ತಾಗೆ ಕಿಕ್ ಬ್ಯಾಕ್: ಇಂತದ್ದೊಂದು ಅಕ್ರಮ ನಡೆಯುವುದರ ಹಿಂದೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರಿದ್ದಾರೆ. ಪ್ರಹ್ಲಾದ್, ಗೌರವ್ ಗುಪ್ತಾರಿಗೆ ಸಖತ್ತಾಗೇ ಫೀಡ್ ಮಾಡಿದ್ದಾರೆ.ಇದಕ್ಕೆ ಉಪ ಆಯುಕ್ತ ಲಿಂಗಮೂ ರ್ತಿ ಕೂಡ ಶಾಮೀಲಾಗಿದ್ದಾರೆ ಎಂದು ಆಪಾದಿಸಲಾಗಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಎಸಿಬಿಗೆ ಸಲ್ಲಿಕೆಯಾಗಿರುವ ದೂರಿನಲ್ಲಿ ಮುಖ್ಯ ಆಯುಕ್ತರ ವಿರುದ್ಧವೂ ಕ್ರಮಜರುಗಿಸಬೇಕೆಂದು ರಮೇಶ್ ಮನವಿ ಮಾಡಿದ್ದಾರೆ.

ಈ ಬಗ್ಗೆ ಪ್ರಹ್ಲಾದ್ ಅವರನ್ನು ಸಂಪರ್ಕಿಸಿದ ಕನ್ನಡ ಫ್ಲಾಶ್ ನ್ಯೂಸ್,ಇದು ವ್ಯಕ್ತಿಗತ ದ್ವೇಷದ ಹಿನ್ನಲೆಯ ಆರೋಪ,ಯಾವುದೇ ಸತ್ಯಾಂಶವಿಲ್ಲ.ಅಕ್ರಮ ನಡೆದಿರುವುದು ಸಾಬೀತಾಗಿದ್ದೇ ಆದಲ್ಲಿ ಎಂಥಾ ಶಿಕ್ಷೆ ಎದುರಿಸಲು ಸಿದ್ಧ ಎಂದಿದ್ದಾರೆ. ಇನ್ನು ಈ ಬಗ್ಗೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರನ್ನು ಮಾತನಾಡಿಸುವ ಯತ್ನ ಮಾಡಲಾಯಿತಾದ್ರೂ ಸಾಧ್ಯವಾಗಲಿಲ್ಲ

ಡೆಪ್ಯುಟೇಷನ್ ವಿಚಾರದಲ್ಲಿ ಬಿಬಿಎಂಪಿಯಲ್ಲಿ ದೊಡ್ಡ ದಂಧೆಯೇ ನಡೆಯುತ್ತಿದೆ.ನಗರಾಭಿವೃದ್ಧಿ ಇಲಾಖೆಯಲ್ಲಿರುವ ಕೆಲವು ಭ್ರಷ್ಟರನ್ನು ಒಳಗಾಕಿಕೊಂಡು ನಿಯೋಜನೆ ಪತ್ರ ನೀಡಿ ಲಕ್ಷ ಲಕ್ಷಗಳಲ್ಲಿ ಕಮಾಯಿ ಮಾಡುವಂಥವರೇ ತುಂಬಿ ಹೋಗಿರುವ ಸನ್ನಿವೇಶದಲ್ಲಿ ಪಾರದರ್ಶಕತೆ ಹುಡುಕೋದು ಮೂರ್ಖತನವಾಗಬಹುದೇನೋ ಅನ್ಸುತ್ತೆ.

Spread the love
Leave A Reply

Your email address will not be published.

Flash News