ಎಗ್ಗಿಲ್ಲದೆ ನಡೀತಿರೋ POP ಗಣೇಶನ ಮಾರಾಟ ನಿಮ್ ಕಣ್ಣಿಗೆ ಕಾಣ್ತಿಲ್ವಾ ಸಚಿವ್ರೇ..ಏನ್ ಮಾಡ್ತಿದ್ದಾರೆ ನಿಮ್ ಮಂಡಳಿಯ “ಪರಮಭ್ರಷ್ಟ”ಅಧಿಕಾರಿಗಳು..?!

ಪಿಓಪಿ ದಂಧೆಗೆ ಮುಂದಿನ ವರ್ಷವೇ ಬ್ರೇಕ್ ಹಾಕಿದ್ರೂ ಸಚಿವರನ್ನೇ ಯಾಮಾರಿಸಿ, ಪರ್ಸಂಟೇಜ್ ಫಿಕ್ಸ್ ಮಾಡ್ಕೊಂಡು ಆಗಲೂ ದಂಧೆ ವ್ಯವಸ್ಥಿತವಾಗಿ ನಡೆಯುವಂತೆ ಮಾಡುವಷ್ಟು ಖತರ್ನಾಕ್ ಗಳು ಈ ಪರಿಸರಾಧಿಕಾರಿಗಳೆನ್ನುವುದರಲ್ಲಿ ಅನುಮಾನವೇ ಇಲ್ಲ.

0
ಬೆಂಗಳೂರಿನ ಒಳ-ಹೊರವಲಯದಲ್ಲಿ ಎಗ್ಗಿಲ್ಲದೆ ಈ ಬಾರಿಯು ಮಾರಾಟಕ್ಕೆ ಸಿದ್ಧವಾಗಿರುವ ಪಿಓಪಿ ಗಣೇಶ ಮೂರ್ತಿಗಳು
ಬೆಂಗಳೂರಿನ ಒಳ-ಹೊರವಲಯದಲ್ಲಿ ಎಗ್ಗಿಲ್ಲದೆ ಈ ಬಾರಿಯು ಮಾರಾಟಕ್ಕೆ ಸಿದ್ಧವಾಗಿರುವ ಪಿಓಪಿ ಗಣೇಶ ಮೂರ್ತಿಗಳು

ಬೆಂಗಳೂರು:ಇದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಷ್ಟೆ ಅಲ್ಲ,ಅದರ ಹೊಣೆಗಾರಿಕೆ ಹೊತ್ತಿರುವ ಸಚಿವ ಆನಂದ್ ಸಿಂಗ್ ಕೂಡ ನಾಚಿಕೆಯಿಂದ ತಲೆ ತಗ್ಗಿಸಬೇಕಾಗುತ್ತದೆ.ಪೋಪಿ ಗಣೇಶ ಮೂರ್ತಿಗಳ ಮಾರಾಟ-ಬಳಕೆಯನ್ನು ನಮ್ಮ ಕೋರ್ಟ್ ಗಳೇ ಬ್ಯಾನ್ ಮಾಡಿರುವಾಗ ಮುಂದಿನ ವರ್ಷದಿಂದ ಲಾಗೂ ಮಾಡ್ತೇವೆ ಎಂದು ಉಡಾಫೆತನದ ಉತ್ತರ ಕೊಟ್ಟಿದ್ದಾಗ್ಲೇ ಅವರ ವಿರುದ್ದ ನಮ್ಮ ಪರಿಸರವಾದಿಗಳು ಹೋರಾಟ ನಡೆಸಬೇಕಾಗಿತ್ತು.ಆದ್ರೆ ಪರಿಸರವಾದಿಗಳೆಲ್ಲಾ  ಅದೆಲ್ಲಿ ಹೋಗಿ ಮಲಗಿದ್ದಾರೋ ಗೊತ್ತಿಲ್ಲ,ಇದನ್ನೆ ಬಂಡವಾಳ ಮಾಡಿಕೊಂಡ ಪಿಓಪಿ ಮಾಫಿಯಾ ಎಗ್ಗಿಲ್ಲದೆ ಗಣೇಶನ ಮೂರ್ತಿಗಳನ್ನು ಮಾರುತ್ತಿದೆ.ಲಂಚಬಾಕ ಅಧಿಕಾರಿಗಳು ಮಾಫಿಯಾ ಬಿಸಾಕುವ ಎಂಜಿಲ ಕಾಸನ್ನು ನಾಲಿಗೆಯಿಂದ ಎತ್ತಿಕೊಂಡು ಅಕ್ರಮ ನಡೆಯೋದಕ್ಕೆ ರಾಜಮಾರ್ಗ ರೂಪಿಸಿಕೊಟ್ಟಿದೆ.

ಪರಿಸರ ಸಚಿವ ಆನಂದ್ ಸಿಂಗ್ ಅವರಿಗೆ ಬದ್ಧತೆ ಇದ್ದಿದ್ದೇ ಆದಲ್ಲಿ,ತಮಗೆ ಸರ್ಕಾರ ವಹಿಸಿರುವ ಹೊಣೆಗಾರಿಕೆ ಅರಿವು ಇದ್ದಿದ್ದೇ ಆದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಪರಿಸರದ ಮೇಲೆ ಕಾಳಜಿ ಇದ್ದಿದ್ದೇ ಆದಲ್ಲಿ ಅಧಿಕಾರ ಸ್ವೀಕರಿಸಿದಾಕ್ಷಣ ಸಿಟಿ ರೌಂಡ್ಸ್ ಮಾಡಿ ಪಿಓಪಿ ಗಣೇಶನ ತಯಾರಿ ಹಾಗೂ ಮಾರಾಟದ ಮೇಲೆ ಸಮರ ಸಾರಬೇಕಿತ್ತು.ಸಭೆ ಮೇಲೆ ಸಭೆ ನಡೆಸಿ ಸಂಬಂಧಿಸಿದ ಮಾಫಿಯಾಕ್ಕೆ ಬ್ರೇಕ್ ಹಾಕುವ ಕೆಲಸ ಮಾಡಬೇಕಿತ್ತು.ಹೀಗೆ ಮಾಡಿದ್ರೆ ಅದು ಮುಂದಿನ ವರ್ಷದಲ್ಲಾದ್ರೂ ಸರಿ ಹೋಗುತ್ತಿತ್ತೇನೋ..

ಬೆಂಗಳೂರಿನ ಒಳ-ಹೊರವಲಯದಲ್ಲಿ ಎಗ್ಗಿಲ್ಲದೆ ಈ ಬಾರಿಯು ಮಾರಾಟಕ್ಕೆ ಸಿದ್ಧವಾಗಿರುವ ಪಿಓಪಿ ಗಣೇಶ ಮೂರ್ತಿಗಳು
ಬೆಂಗಳೂರಿನ ಒಳ-ಹೊರವಲಯದಲ್ಲಿ ಎಗ್ಗಿಲ್ಲದೆ ಈ ಬಾರಿಯು ಮಾರಾಟಕ್ಕೆ ಸಿದ್ಧವಾಗಿರುವ ಪಿಓಪಿ ಗಣೇಶ ಮೂರ್ತಿಗಳು

ಆದ್ರೆ ಪಾಪ..ಆನಂದ್ ಸಿಂಗ್ ಅವರಿಗೆ ಅದಕ್ಕೆಲ್ಲಾ ಪುರುಸೊತ್ತು ಎಲ್ಲಿದೆ ಹೇಳಿ..ಮಂಡಳಿಯಲ್ಲಿರುವ ಕೆಲ ಪರಮಭ್ರಷ್ಟ ಅಧಿಕಾರಿಗಳು ಕೊಡುವ ಮಾಹಿತಿಯನ್ನೇ ನಂಬುವ ಅವರನ್ನು ಈ ಬಾರಿ ಅಧಿಕಾರಿಗಳು ಸರಿಯಾಗೇ ಯಾಮಾರಿಸಿದ್ದಾರೆ.ಪಿಓಪಿ ಗಣೇಶನ ಮೂರ್ತಿಗಳ ಮಾರಾಟಕ್ಕೆ ಬ್ರೇಕ್ ಹಾಕಿರುವುದಾಗಿ ತಪ್ಪು ಮಾಹಿತಿ ಕೊಟ್ಟು ಅವರ ಗಮನವನ್ನು ಬೇರೆಡೆ ಡೈವರ್ಟ್ ಮಾಡುತ್ತಿದ್ದಾರೆನ್ನುವುದು ಸಚಿವರ ದಿವ್ಯ ನಿರ್ಲಕ್ಷ್ಯ ಗಮನಿಸಿದಾಗ ಗೊತ್ತಾಗುತ್ತದೆ.

ಬಿಬಿಎಂಪಿ ವಲಯ ಮಟ್ಟದಲ್ಲಿರುವ ಬಹುತೇಕ ಪರಿಸರಾಧಿಕಾರಿಗಳೇ ಪಿಒಪಿ ಗಣೇಶನ ಮೂರ್ತಿಗಳ ಮಾಫಿಯಾ ಜೀವಂತವಾ ಗಿರೊಕ್ಕೆ ಕಾರಣ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ.ಪಿಓಪಿ ಮಾಫಿಯಾದೊಂದಿಗೆ ಮಂತ್ಲಿ ಫಿಕ್ಸ್ ಮಾಡಿಕೊಂಡು ಅಕ್ರಮ ವ್ಯವಸ್ಥಿತವಾಗಿ ನಡೆಯುವಂತೆ ಎಲ್ಲಾ ರೀತಿಯ ಸಹಕಾರ-ಮಾರ್ಗದರ್ಶನ ಕೊಡ್ತಿದ್ದಾರೆನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ..ಯಾವಾಗ ದಂಧೆ ಶುರುಮಾಡಬೇಕು..ಹೇಗೆ ಕಾನೂನು ಕುಣಿಕೆಯಿಂದ ನುಸುಳಿಕೊಳ್ಳಬೇಕು..ಯಾವ್ ಹಂತದಲ್ಲಿ ಸಮಸ್ಯೆ ಎದುರಾಗಬಹುದು..ಆ ಸಂದರ್ಭದಲ್ಲಿ ಯಾವ್ ರೀತಿ ತಮ್ಮನ್ನು ಸೇಫ್ ಗಾರ್ಡ್ ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ಮಾಹಿತಿ ಕೊಡುವುದರಿಂದ ಹಿಡಿದು ಅವರು ದಂಧೆಯನ್ನು ವ್ಯವಸ್ಥಿತವಾಗಿ ಹೇಗೆ ನಡೆಸಿ ದುಡ್ಡು ಮಾಡಿಕೊಳ್ಳಬೇಕೆನ್ನುವುದರ ಐಡ್ಯಾ ಕೂಡ ಕೊಡ್ತಾ ಬಂದಿದ್ದಾರೆ.

ಇಂತಿಷ್ಟು ಪರ್ಸಂಟೇಜ್ ಫಿಕ್ಸ್ ಮಾಡಿಕೊಂಡ ಬಳಿಕವೇ ಆ ವರ್ಷ ಪಿಓಪಿ  ದಂಧೆಗೆ ಪರ್ಮಿಷನ್ ಕೊಡ್ತಾರೆಂದ್ರೆ ಅಧಿಕಾರಿಗಳು ಎಷ್ಟು ಭ್ರಷ್ಟರಾಗಿದ್ದಾರೆನ್ನುವುದು ಗೊತ್ತಾಗುತ್ತೆ.ಪಿಓಪಿ ಬ್ಯಾನ್ ಎನ್ನುವುದು ಗೊತ್ತಿದ್ರೂ ಕೆ.ಗೊಲ್ಲಹಳ್ಳಿ, ಕುಂಬಳಗೋಡು,ಮೈಸೂರು ರಸ್ತೆ,ಪಾಟರಿ ಟೌನ್,ಕೆ.ಆರ್ ಪುರಂ,ಮಾವಳ್ಳಿಯಂಥ ಏರಿಯಾಗಳಲ್ಲಿ ಆಕ್ಟೀವ್ ಆಗಿರುವ ಪಿಓಪಿ ಮಾಫಿಯಾಕ್ಕೆ ತಮ್ಮ ದಂಧೆ ನಡೆಸೊಕ್ಕೆ ಇವರೇ ಬೆನ್ನ ಹಿಂದೆ ನಿಲ್ಲುತ್ತಾರೆನ್ನುವುದನ್ನು ಅಧಿಕಾರಿಗಳ ಕೈ ಬೆಚ್ಚಗೆ ಮಾಡುತ್ತಾ ಬಂದಿರುವ  ಈ ಭಾಗದ ಮಾಫಿಯಾದ ಮಂದಿಯೇ ಬಹಿರಂಗಗೊಳಿಸಿದ್ದಾರೆ.ಮೊದಲು ಪರಿಸರಾಧಿಕಾರಿಗಳ ಕೈ ಬೆಚ್ಚಗೆ ಮಾಡಿದ್ರೇನೆ ನಮಗೆ ದಂಧೆ ಮಾಡೊಕ್ಕೆ ಅವಕಾಶ ಕೊಡೋದು ಸರ್ ಎನ್ನುತ್ತಾರ ಕೆ.ಗೊಲ್ಲಹಳ್ಳಿ ಬಳಿ ಪಿಓಪಿ ಗಣೇಶ ಮೂರ್ತಿ ಮಾಡುವ ಸಂಸ್ಥೆಯೊಂದರ ಮಾಲೀಕ.

ಇಂಥಾ ಕಾಟಾಚಾರದ ರೇಡ್ ಗಳಾದ್ರೂ ಪರಿಸರಾಧಿಕಾರಿಗಳ ಶಾಮೀಲಿನಿಂದ ದಂಧೆ ನಿಲ್ಲಿಸಲಿಕ್ಕೆ ಆಗಿಯೇ ಇಲ್ಲ..ಆಗೋದು ಇಲ್ವೇನೋ..(ಸಾಂದರ್ಭಿಕ ಚಿತ್ರ)
ಇಂಥಾ ಕಾಟಾಚಾರದ ರೇಡ್ ಗಳಾದ್ರೂ ಪರಿಸರಾಧಿಕಾರಿಗಳ ಶಾಮೀಲಿನಿಂದ ದಂಧೆ ನಿಲ್ಲಿಸಲಿಕ್ಕೆ ಆಗಿಯೇ ಇಲ್ಲ..ಆಗೋದು ಇಲ್ವೇನೋ..(ಸಾಂದರ್ಭಿಕ ಚಿತ್ರ)
ಸಾಚಾಗಳಂತೆ ಪಿಓಪಿ ಕೇಂದ್ರಗಳಿಗೆ ಭೇಟಿ ಕೊಟ್ಟು ತಪಾಸಣೆ ನಡೆಸುವ ಅಧಿಕಾರಿಗಳ ಹಣೇಬರಹ ಕೆಲ ನಿಮಷಗಳನ್ನೇ ಬಯಲಾಗುತ್ತಿದೆ. .(ಸಾಂದರ್ಭಿಕ ಚಿತ್ರ)
ಸಾಚಾಗಳಂತೆ ಪಿಓಪಿ ಕೇಂದ್ರಗಳಿಗೆ ಭೇಟಿ ಕೊಟ್ಟು ತಪಾಸಣೆ ನಡೆಸುವ ಅಧಿಕಾರಿಗಳ ಹಣೇಬರಹ ಕೆಲ ನಿಮಷಗಳನ್ನೇ ಬಯಲಾಗುತ್ತಿದೆ. .(ಸಾಂದರ್ಭಿಕ ಚಿತ್ರ)

ಗಣೇಶ ಹಬ್ಬದ ಸಂದರ್ಭದಲ್ಲಿ ಕೋಟಿಗಟ್ಟಲೇ ವ್ಯವಹಾರ ಪಿಓಪಿಯಿಂದ ನಡೆಯುತ್ತದೆ.ಇದರಲ್ಲಿ ಲಕ್ಷಾಂತರ ಹಣವನ್ನು ಪರಿಸರಾಧಿಕಾರಿಗಳೇ ಮಾಡಿಕೊಳ್ಳುತ್ತಾರೆ.ಮಂಡಳಿಯಲ್ಲಿರುವ ಮೇಲಾಧಿಕಾರಿಗಳ ಬಾಯಿ ಮುಚ್ಚಿಸುವ ಕೆಲಸವನ್ನೂ ಪರಿಸರಾಧಿಕಾರಿಗಳು ಮಾಡ್ತಾ ಬಂದಿರುವುದು ಕೂಡ ಅಷ್ಟೇ ಸತ್ಯ. ಕಾಟಾಚಾರಕ್ಕೆ ಗಣೇಶ ಹಬ್ಬದ ಹಿಂದೆ ಮುಂದೆ ದಾಳಿಯ ನೆವದಲ್ಲಿ ಒಂದಷ್ಟು ಗಣೇಶ ಮೂರ್ತಿಗಳನ್ನು ವಶಕ್ಕೆ ಪಡೆದು ಅಂಗಡಿಯನ್ನು ಬಂದ್ ಮಾಡಿಸ್ತಾರೆ.ಮಾರನೇ ದಿನ ಹಣ ಪಡೆದು ಓಪನ್ ಮಾಡಿಸಿ ದಂಧೆಗೆ ಅವಕಾಶ ಮಾಡಿಕೊಡೋರು ಕೂಡ ಇದೇ ಮಂಡಳಿಯ ಅಧಿಕಾರಿಗಳು.

ಮಂಡಳಿಯಲ್ಲಿರುವ ಅಧಿಕಾರಿಗಳು  ಪಿಓಪಿ ಬಗ್ಗೆ ಈ ಬಾರಿಯೂ ಸಚಿವ ಆನಂದ್ ಸಿಂಗ್ ಅವರಿಗೆ ತಪ್ಪು ಮಾಹಿತಿ ನೀಡಿದ್ದಾರೆನ್ನುವ ಮಾತುಗಳಿವೆ.ಹಾಗಾಗಿನೇ ಮಂಡಳಿ ಕಚೇರಿಯನ್ನು ಬಿಟ್ಟು ಎಲ್ಲೂ ತನಿಖೆ-ತಪಾಸಣೆಗೆ ಮುಂದಾಗುವ ಕೆಲಸ ಮಾಡಿಲ್ಲ.ಇದು ಅವರ ನಿರ್ಲಕ್ಷ್ಯಕ್ಕೆ ಹಿಡಿದ ಕೈ ಗನ್ನಡಿ ಎನ್ನುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ.

ಪಿಓಪಿ ದಂಧೆಗೆ ಮುಂದಿನ ವರ್ಷವೇ ಬ್ರೇಕ್ ಹಾಕಿದ್ರೂ ಸಚಿವರನ್ನೇ ಯಾಮಾರಿಸಿ, ಪರ್ಸಂಟೇಜ್ ಫಿಕ್ಸ್ ಮಾಡ್ಕೊಂಡು ಆಗಲೂ ದಂಧೆ ವ್ಯವಸ್ಥಿತವಾಗಿ ನಡೆಯುವಂತೆ ಮಾಡುವಷ್ಟು ಖತರ್ನಾಕ್ ಗಳು ಈ ಪರಿಸರಾಧಿಕಾರಿಗಳೆನ್ನುವುದರಲ್ಲಿ ಅನುಮಾನವೇ ಇಲ್ಲ.ಅಧಿಕಾರಿಗಳು ಕೊಡೋ ಸುಳ್ಳು ಸುಳ್ಳು..ಅಪರಾತಪರ ಮಾಹಿತಿ ನಂಬಿಕೊಂಡು ಪದೇ ಪದೇ ಕಿವಿಗೆ ಲಾಲ್ ಭಾಗ್ ಮುಡಿಸಿಕೊಳ್ಳುವುದನ್ನು ಸಚಿವ ಆನಂದ್ ಸಿಂಗ್ ಇನ್ನಾದ್ರೂ ಬಿಡಲಿ ಎನ್ನುವುದೇ ಕನ್ನಡ ಫ್ಲ್ಯಾಶ್ ನ್ಯೂಸ್ ನ ಕಾಳಜಿ.

Spread the love
Leave A Reply

Your email address will not be published.

Flash News