Rowdy sheeter Aravind Murders arrest:ರೌಡಿ ಶೀಟರ್ ಲೀ ಪಾತಕಿಗಳು ಅಂದರ್: ತಮ್ಮನನ್ನು ಉಳಿಸಿಕೊಳ್ಳೊಕ್ಕೆ ಅಣ್ಣನಿಂದಲೇ ಕೊಲೆಗೆ ಸ್ಕೆಚ್

ಫುಟ್ಬಾಲ್ ಸ್ಟೇಡಿಯಂ ನಲ್ಲಿ ಅಟ್ಟಾಡಿಸಿ ಕೊಂದಿದ್ದ ಪಾತಕಿಗಳನ್ನು 48 ಗಂಟೆಯೊಳಗೆ ಅಂದರ್ ಮಾಡಿದ ಪೊಲೀಸ್

0

ಬೆಂಗಳೂರು:ಇಡೀ ಬೆಂಗಳೂರನ್ನು ಬೆಚ್ಚಿಬೀಳಿಸಿದ್ದ ಕೊಲೆ ಅದು..ಪೊಲೀಸ್ ರ ಕಾರ್ಯದಕ್ಷತೆ ಬಗ್ಗೆ ಇಡೀ ಬೆಂಗಳೂರು ಅನುಮಾನದಿಂದ ಮಾತನಾಡಿಕೊಳ್ಳುವಂತೆ ಮಾಡಿದ್ದ ಪಾತಕ ಅದು.ಕೊನೆಗೂ ಪೊಲೀಸರು ಪಾತಕಿಗಳ ಹೆಡೆಮುರಿ ಕಟ್ಟಿ ಅಂದರ್ ಮಾಡಿದ್ದಾರೆ.

ಕಳೆದ ಭಾನುವಾರ ರಾಜಧಾನಿ ಬೆಂಗಳೂರಿನ ಅಶೋಕನಗರ ಫುಟ್ಬಾಲ್ ಸ್ಟೇಡಿಯಂ ಬಳಿ ರೌಡಿ ಶೀಟರ್ ಅರವಿಂದ್ ಅಲಿಯಾಸ್ ಲೀ ಕೊಲೆ ಆಗಿತ್ತು.ಸ್ಟೇಡಿಯಂನೊಳಗೇ ನುಗ್ಗಿ ಪಾತಕಿಗಳು ನೆತ್ತರು ಹರಿಸಿದ್ದರು.ಶೀಘ್ರವೇ ಪಾತಕಿಗಳನ್ನು ಬಂಧಿಸುವುದಾಗಿ ಅನುಚೇತ್ ಭರವಸೆ ಕೂಡ ನೀಡಿದ್ರು.ಕೊಟ್ಟ ಮಾತಿನಂತೆಯೇ  ಆರೋಪಿಗಳನ್ನು ಬಂಧಿಸುವಲ್ಲಿ  ಯಶಸ್ವಿಯಾಗಿದ್ದಾರೆ.ಸ್ಟಾಲಿನ್ ,ಜೋಸೆಫ್ ,ವಿಜಯ್,ಅರುಣ್ ಎನ್ನುವ ಪಾತಕಿಗಳನ್ನು ಬಂಧಿಸಲಾಗಿದೆ.

 

ಕೊಲೆಗೆ ಹಳೆಯ ದ್ವೇಷವೇ ಕಾರಣ ಎನ್ನಲಾಗಿದ್ದು ಆರೋಪಿ ಸ್ಟಾಲಿನ್  ನ ಸಹೋದರ ಜೋಸೆಫ್ ನನ್ನು ಕೊಲೆ ಮಾಡಲು ಅರವಿಂದ್ ಅಲಿಯಾಸ್ ಲೀ ಸ್ಕೆಚ್ ಹಾಕಿದ್ದನು ಎನ್ನಲಾಗಿದೆ. 2ಬಾರಿಯ  ಸ್ಕೆಚ್ಚು ನಲ್ಲೂ ಕೂಡ ಜೋಸೆಫ್ ಸ್ವಲ್ಪದರಲ್ಲೇ ಮಿಸ್ ಆಗಿದ್ದ ಎನ್ನಲಾಗಿದೆ.ಈ ದ್ವೇಷದ ಪ್ರತೀಕಾರವನ್ನು ತೀರಿಸಿಕೊಳ್ಳಲು ಅರವಿಂದನನ್ನು ಮರ್ಡರ್ ಮಾಡಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.

ಗೂಂಡಾ ಕಾಯ್ದೆ ಅಡಿ ಬಂದಿತನಾಗಿದ್ದರೂ ಹೊರ ಬಂದಿದ್ದ:ಗೂಂಡಾ ಕಾಯ್ದೆಯಡಿ ಅರವಿಂದನನ್ನು ಭಾರತಿನಗರ ಪೊಲೀಸರು ಬಂಧಿಸಿದ್ದರೂ ಹಲವರ ಶಿಫಾರಸು ಬಳಸಿ ಜಾಮೀನಿನ ಮೇಲೆ ಹೊರಬಂದಿದ್ದ.

ಹೊರಬಂದ ನಂತರವೂ ಕೂಡ ಜೋಸೆಫ್ ನನ್ನು ಕೊಲೆ ಮಾಡುವುದಕ್ಕೆ ಸಾಕಷ್ಟು ಬಾರಿ ಪ್ರಯತ್ನಿಸಿದ್ದ ಎನ್ನಲಾಗಿದೆ.ಈತನನ್ನು ಹೀಗೇ ಬಿಟ್ಟರೆ ತಮ್ಮ ಸಹೋದರನನ್ನು ಕೊಲೆ ಮಾಡಿಯೇ ತೀರುತ್ತಾನೆ ಎನ್ನುವ ಕಾರಣಕ್ಕೆ ಆತನನ್ನೇ ಮುಗಿಸುವ ಸ್ಕೆಚ್ಚನ್ನು ಸ್ಟಾಲಿನ್ ಹಾಕಿದ್ದನು ಎನ್ನಲಾಗಿದೆ.

ತನ್ನ ಸಹೋದರ ಅರವಿಂದ್ ನನ್ನ ಉಳಿಸಿಕೊಳ್ಳಲು ಸ್ಟಾಲಿನ್ ತನ್ನ ಬಳಗದಲ್ಲಿದ್ದ ಜೋಶ್ ,ವಿಜಯಕುಮಾರ್ ಹಾಗೂ ಅರುಣ್ ಎಂಬುವರನ್ನು ಜತೆಗಿಟ್ಟುಕೊಂಡು ಭಾನುವಾರ,ಅರವಿಂದ್ ಸ್ಟೇಡಿಯಂ ಬಳಿ ಇದ್ದಂತಹ ಸಮಾಚಾರವನ್ನು ಖಾತ್ರಿಪಡಿಸಿಕೊಂಡು ಆತನನ್ನು ಸ್ಟೇಡಿಯಂನ ಹೊರ ಒಳಗೆ ಅಟ್ಟಾಡಿಸಿ ಕುಂದಿತ್ತು.

Spread the love
Leave A Reply

Your email address will not be published.

Flash News