BIG…BIG…EXCLUSIVE REPORT:BBMP MEGA TAXDEFAULTERS:ಇವರಿಗೆ BBMP ಸೌಲಭ್ಯ ಮಾತ್ರ ಬೇಕು..ಆದರೆ ತೆರಿಗೆ ಕಟ್ಟೊಕ್ಕೆ ಮಾತ್ರ “ಕಳ್ಳಾಟ”

HAL, BMRCL,KSRTC,BMTC,HMT,ITI,VTU..ನಳಪಾಡ್,ಮಂತ್ರಿ-ಯುಬಿ ಗ್ರೂಪ್,ಟರ್ಪ್ ಕ್ಲಬ್..ಬಾಲ್ಡ್ ವಿನ್-ಗುಡ್ ಶೆಫರ್ಡ್ ಶಾಲೆಗಳಿಂದ 42 ಕೋಟಿ ತೆರಿಗೆ ವಂಚನೆ.

0

ಬೆಂಗಳೂರು:ಇದು ಕನ್ನಡ ಪ್ಲ್ಯಾಶ್ ನ ಮತ್ತೊಂದು ಮೆಗಾ ಎಕ್ಸ್ ಕ್ಲ್ಯೂಸಿವ್..ಇಂದು ನಾವು ಹೇಳೊಕ್ಕೆ ಹೊರಟಿರೋದು ಬಿಬಿಎಂಪಿ ಮೂಲಕ ಎಲ್ಲಾ ರೀತಿಯ ಸವಲತ್ತು-ಸೌಲಭ್ಯ ಪಡೆದ ಹೊರತಾಗ್ಯೂ ತಮ್ಮ ಪಾಲಿನ ಜವಾಬ್ದಾರಿ ನಿಭಾಯಿಸಲಿಕ್ಕಾಗದೆ ಕಳ್ಳಾಟ ನಡೆಸುತ್ತಿರುವ ಸಂಸ್ಥೆ ಹಾಗೂ ವ್ಯಕ್ತಿಗಳ ವಂಚನೆ ಪುರಾಣದ ಬಗ್ಗೆ..ಯೆಸ್..ಇವರೆಲ್ಲಾ ಬೃಹತ್ ತೆರಿಗೆಗಳ್ಳರು..ಅದು ಒಂದೆರೆಡು ಲಕ್ಷಗಳಲ್ಲ..ಹತ್ತಾರು ಲಕ್ಷಗಳಿಂದ ಹಿಡಿದು ಕೋಟ್ಯಾಂತರ ರೂ ವರೆಗೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡು ಬಿಬಿಎಂಪಿಗೆ ತೆರಿಗೆ ವಂಚನೆ ಮಾಡಿದ್ದಾರೆ.

ಬಿಬಿಎಂಪಿ 8 ವಲಯಗಳಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಬಾಕಿ ಉಳಿಸಿಕೊಂಡಿರುವ  ಟಾಪ್ ಮೋಸ್ಟ್ ತೆರಿಗೆಗಳ್ಳರನ್ನು ಬಿಬಿಎಂಪಿ ಹೆಕ್ಕಿ ತೆಗೆದು ಲೀಸ್ಟ್ ಔಟ್ ಮಾಡಿದೆ.ಆ ಪ್ರತಿ ಕನ್ನಡ ಪ್ಲ್ಯಾಶ್ ಗೆ ಲಭಿಸಿದೆ.ತೆರಿಗೆಗಳ್ಳರ ಬಗ್ಗೆ ವಿಧಾನಪರಿಷತ್  ಸದಸ್ಯರಾದ ಎಂ.ಎ ಗೋಪಾಲಸ್ವಾಮಿ ಅವರು ಕೇಳಿರುವ ಪ್ರಶ್ನೆಗೆ ಬಿಬಿಎಂಪಿ ನೀಡಿರುವ ಉತ್ತರದ ಪ್ರತಿ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭ್ಯವಾಗಿದೆ.

ಅಂದ್ಹಾಗೆ 8 ವಲಯಗಳಲ್ಲಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ಪಟ್ಟಿಯಲ್ಲಿ ಸರ್ಕಾರಿ ಸ್ವಾಮ್ಯದ HAL, BMRCL,KSRTC,BMTC,HMT,ITI,PWD,VTU ಸಂಸ್ಥೆಗಳಿದ್ದರೆ ಬೆಂಗಳೂರು ಟರ್ಪ್ ಕ್ಲಬ್,ಯುಬಿ ಬ್ರಿವರಿಸ್,ಮಂತ್ರಿ(ಅಭಿಷೇಕ್ ಡೆವಲಪರ್ಸ್) ಗ್ರೂಪ್,ಕೆಎಲ್ ಇ ಎಜುಕೇಷನ್ ಟ್ರಸ್ಟ್, ಆರ್ ಎನ್ ಎಸ್ ಇಂಡಸ್ಟ್ರೀಸ್,ಬಾಲ್ಡ್ ವಿನ್ ಸ್ಕೂಲ್,ಗುಡ್ ಶೆಫರ್ಡ್ ಸ್ಕೂಲ್ ಗಳು ತೆರಿಗೆ ಪಾವತಿಸದೆ ಡಿಫಾಲ್ಟರ್ ಆಗಿವೆ. ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ ಹ್ಯಾರೀಸ್ ಮಾಲೀಕತ್ವದ ನಳಪಾಡ್ ಕನ್ಸ್ ಟ್ರಕ್ಷನ್ ಕಂಪೆನಿ ಕೂಡ  ತೆರಿಗೆ ವಂಚನೆಯ ಪಟ್ಟಿಯಲ್ಲಿದೆ.

ಮಹಾದೇವಪುರ ವಲಯ: ಅಂದ್ಹಾಗೆ ಮಹಾದೇವಪುರ ವಲಯದಲ್ಲಿ ತೆರಿಗೆ ಪಾವತಿಸದೆ ಕಳ್ಳಾಟ ನಡೆಸುತ್ತಿರುವವರ ಪಟ್ಟಿಯನ್ನು ಬಿಬಿಎಂಪಿ ಸಿದ್ಧಮಾಡಿದೆ.ಈ ಪೈಕಿ ಅತೀ ದೊಡ್ಡ ಮೊತ್ತದ ತೆರಿಗೆ ಬಾಕಿ ಉಳಿಸಿಕೊಂಡಿರೋದು ಸರ್ಕಾರಿ ಸ್ವಾಮ್ಯದ HAL ಅಂದ್ಹಾಗೆ ಎಚ್ ಎಎಲ್ ಉಳಿಸಿಕೊಂಡಿರೋದು 5 ಕೋಟಿ 13 ಲಕ್ಷದ 68 ಸಾವಿರದ 695. ಸರ್ಕಾರಿ ಸ್ವಾಮ್ಯದ ಮತ್ತೊಂದು ಸಂಸ್ಥೆ ಐಟಿಐ ಲಿಮಿಟೆಡ್ 2 ಕೋಟೊ 35 ಲಕ್ಷದ 38 ಸಾವಿರದ 685.ಸೂರಜ್ ಇನ್ ಪ್ರೈವೇಟ್ ಲಿಮಿಟೆಡರ್ 1 ಕೋಟಿ 34 ಲಕ್ಷದ 89 ಸಾವಿರದ 223. ಇನ್ನು ಸೌಲ್ ಸ್ಪೇಸ್ ಪ್ರಾಜೆಕ್ಟ್ ಲಿಮಿಟೆಡ್ 46 ಲಕ್ಷದ 91 ಸಾವಿರದ 484 ರೂ ಉಳಿಸಿಕೊಂಡಿದ್ದರೆ ಬಿಎಂಟಿಸಿ 20 ಲಕ್ಷದ 47 ಸಾವಿರದ 547 ರೂ ತೆರಿಗೆ ಬಾಕಿ ಉಳಿಸಿಕೊಂಡಿದೆ.ಇನ್ನುಳಿದಂತೆ ಮಹಾದೇವಪುರ ವಲಯದಲ್ಲಿ ಒಟ್ಟು ತೆರಿಗೆ ಬಾಕಿ ಇರೋ ಮೊತ್ತವೇ 9 ಕೋಟಿ 59 ಲಕ್ಷದ 77 ಸಾವಿರದ 594 ರೂ ಎನ್ನುವುದು ಬಿಬಿಎಂಪಿ ವರದಿಯಲ್ಲೇ ಉಲ್ಲೇಖವಾಗಿದೆ.

ಎಚ್ ಎ ಎಲ್: 5,13,68,695 ರೂ
-ಐಟಿಐ ಲಿಮಿಟೆಡ್: 2,35,38,685 ರೂ
-ಸೂರಜ್ ಇನ್ ಪ್ರೈವೆಟ್ ಲಿಮಿಟೆಡ್ 1,34,89,223 ರೂ
-ಸೌಲ್ ಸ್ಪೇಸ್ ಪ್ರಾಜೆಕ್ಟ್ ಲಿಮಿಟೆಡ್,46,91,484 ರೂ
-ಬಿಎಂಟಿಸಿ: 20,47,547 ರೂ
ಒಟ್ಟು 9,59,77,594 ರೂ

ಪಶ್ಚಿಮ ವಲಯ: ಪಶ್ಚಿಮ ವಲಯದಲ್ಲಿ ಅತೀ ಹೆಚ್ಚಿನ ತೆರಿಗೆ ಬಾಕಿ ಉಳಿಸಿಕೊಂಡಿರುವ ತೆರಿಗೆಗಳ್ಳರ ಪಟ್ಟಿಯಲ್ಲಿ ಇರುವ ಮೊದಲ ಹೆಸರು ಅಭಿಷೇಕ್ ಡೆವಲಪರ್ಸ್(ಮಂತ್ರಿ ಮಾಲ್ ಸಮುಚ್ಛಯ).ಈ ಸಂಸ್ಥೆ 11 ಕೋಟಿ 29 ಲಕ್ಷದ 63 ಸಾವಿರದ 786 ರೂ ಭಾರೀ ಮೊತ್ತದ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದೆ.ಶಾಸಕ ಎನ್ ಎ ಹ್ಯಾರೀಸ್ ಮಾಲೀಕತ್ವದ ನಲಪಾಡ್ ಪ್ರಾಪರ್ಟಿ 34 ಲಕ್ಷದ 18 ಸಾವಿರದ 854 ರೂ ಬಾಕಿ ಉಳಿಸಿಕೊಂಡಿದೆ.ನಮ್ಮ ಮೆಟ್ರೋ(ಬಿಎಂಆರ್ ಸಿಎಲ್) 1 ಕೋಟಿ 46 ಲಕ್ಷದ 13 ಸಾವಿರದ 719 ರೂ ತೆರಿಗೆ ಬಾಕಿ ಉಳಿಸಿಕೊಂಡಿದ್ದರೆ,ಕೆಎಸ್ ಆರ್ ಟಿಸಿ 43 ಲಕ್ಷದ 56 ಸಾವಿರದ 509 ರೂ ತೆರಿಗೆ ಬಾಕಿ ಉಳಿಕೊಂಡಿದೆ.ಅಂದ್ಹಾಗೆ ಪಶ್ಚಿಮ ವಲಯದಲ್ಲಿ ತೆರಿಗೆ ಕಳ್ಳರು ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಒಟ್ಟು ಮೊತ್ತ 13 ಕೋಟಿ 53 ಲಕ್ಷದ 52 ಸಾವಿರದ 868 ರೂ.

-ಅಭಿಷೇಕ್ ಡೆವಲಪರ್ಸ್-11,29,63,786 ರೂ
-ಬಿಎಂಆರ್ ಸಿಎಲ್-1,46,13,719 ರೂ
-ಕೆಎಸ್ ಆರ್ ಟಿಸಿ-4356509 ರೂ
-ನಳಪಡ್ ಪ್ರಾಪರ್ಟಿಸ್-34,18,854 ರೂ
ಒಟ್ಟು-13,53,52,868

ಬೊಮ್ಮನಹಳ್ಳಿ ವಲಯ: ಬೊಮ್ಮನಹಳ್ಳಿ ವಲಯದಲ್ಲಿ ಎ.ಎಂ.ರಾಮರಾಜು ಎನ್ನುವವರು 2 ಕೋಟಿ 50 ಲಕ್ಷದ 45 ಸಾವಿರದ 341 ರೂ ಬಾಕಿ ಉಳಿಸಿಕೊಂಡಿದ್ದಾರೆ. ಮಾರ್ಗಾನ್ ಎಜುಕೇಷನ್ ಫೌಂಡೇಷನ್ ಕ್ರಮವಾಗಿ 17 ಲಕ್ಷದ 81 ಸಾವಿರದ 128 ರೂ, 3 ಲಕ್ಷದ 47 ಸಾವಿರದ 378 ರೂ ಬಾಕಿ ಉಳಿಸಿಕೊಂಡಿದೆ.PWD ಇಲಾಖೆ 44 ಲಕ್ಷದ 74 ಸಾವಿರದ 43 ರೂ ಬಾಕಿ ಉಳಿಸಿಕೊಂಡಿದೆ.ಅಂದ್ಹಾಗೆ ಈ ವಲಯದಲ್ಲಿ ವಸೂಲಾಗಬೇಕಿರುವ ತೆರಿಗೆ ಮೊತ್ತವೇ 3 ಕೋಟಿ 95 ಲಕ್ಷದ 10 ಸಾವಿರದ 104
ಎ.ಎಂ ರಾಮರಾಜು: 2,50,45,341 ರೂ
ಪಿಡಬ್ಲ್ಯೂಡಿ ಕ್ವಾರ್ಟರ್ಸ್- 44,74,043 ರೂ
ಮಾರ್ಗನ್ ಎಜುಕೇಷನ್ ಟ್ರಸ್ಟ್-17,81,128+ 03,47,378 ರೂ
ಒಟ್ಟು: 3,95,10,104 ರೂ

ದಾಸರಹಳ್ಳಿ ವಲಯ: ದಾಸರಹಳ್ಳಿ ವಲಯದಲ್ಲಿ ರಾಕ್ ಲೈನ್ ಮಾಲ್ 56 ಲಕ್ಷದ 98 ಸಾವಿರದ 686 ,ನಾಗ್ಸನ್ ಅಂಡ್ ಕಂಪೆನಿ 17 ಲಕ್ಷದ 97 ಸಾವಿರದ 520 ರೂ, ಆರ್ ಎನ್ ಎಸ್ ಇಂಡಸ್ಟ್ರೀಸ್ 22 ಲಕ್ಷದ 47 ಸಾವಿರದ 108 ರೂ ತೆರಿಗೆ ಬಾಕಿ ಉಳಿಸಿಕೊಂಡಿದೆ.ಒಟ್ಟಾರೆ ವಸೂಲಾಗಬೇಕಿರುವ ಬಾಕಿ ಮೊತ್ತವೇ 1 ಕೋಟಿ 10 ಲಕ್ಷದ 2 ಸಾವಿರದ 607 ರೂ
ರಾಕ್ ಲೈನ್ ಮಾಲ್:56,98,686 ರೂ
ಆರ್ ಎನ್ ಎಸ್ ಇಂಡಸ್ಟ್ರೀಸ್: 22,47,108 ರೂ
ನಾಗ್ಸನ್ ಅಂಡ್ ಕೋ: 17, 97,520
ಒಟ್ಟು 1,10,02,607 ರೂ

ಆರ್ ಆರ್ ನಗರ ವಲಯ: ರಾಜರಾಜೇಶ್ವರಿ ನಗರ ವಲಯದಲ್ಲಿ ಕೆಎಲ್ಇ ಸೊಸೈಟಿ 12 ಲಕ್ಷದ 17 ಸಾವಿರದ 835 ರೂ ತೆರಿಗೆ ಬಾಕಿ ಉಳಿಸಿಕೊಂಡಿದೆ. ವಿಶಾಳಾಕ್ಷಿ ಡಿಎನ್ ಅವರಿಂದ ಬರಬೇಕಿರೋ ಮೊತ್ತ 14 ಲಕ್ಷದ 58 ಸಾವಿರದ 222 ರೂ. ಲೀಲಾ ಸ್ಕಾಟಿಷ್ ಲೇಸ್ ನಿಂದ 15 ಲಕ್ಷದ 88 ಸಾವಿರದ 82 ರೂ, ವಿಟಿಯು ಯೂನಿವರ್ಸಿಟಿಯಿಂದ 7 ಲಕ್ಷದ 22 ಸಾವಿರದ 48 ರೂ ಬಾಕಿ ಬರಬೇಕಿದೆ.ಒಟ್ಟಿನಲ್ಲಿ ವಲಯದಲ್ಲಿ ಕಲೆಕ್ಟ್ ಆಗಬೇಕಿರುವ ತೆರಿಗೆ ಮೊತ್ತ 65 ಲಕ್ಷದ 56 ಸಾವಿರದ 304 ರೂ.

ವಿಶಾಲಾಕ್ಷಿ: 14,58,222 ರೂ
ಕೆಎಲ್ ಇ ಸೊಸೈಟಿ: 12,17,835 ರೂ
ಲೀಲಾ ಸ್ಕಾಟೆಷ್ ಲೇಸ್: 15,88,082
ವಿಶ್ವೇಶ್ವರಾಯ ತಾಂತ್ರಿಕ ಮಹಾವಿದ್ಯಾಲಯ: 07,22,048 ರೂ
ಒಟ್ಟು: 65,56,304 ರೂ

ದಕ್ಷಿಣ ವಲಯ: ಇನ್ನು ದಕ್ಷಿಣ ವಲಯದಲ್ಲಿ ಸುಬ್ರಮಣ್ಯ ಕನ್ ಸ್ಟ್ರಕ್ಷನ್ 2 ಕೋಟಿ 25 ಲಕ್ಷದ 80 ಸಾವಿರದ 236 ರೂ ಬಾಕಿ ಇದೆ.ಬಿಎಂಟಿಸಿ 2 ಕೋಟಿ 29 ಲಕ್ಷದ 84 ಸಾವಿರದ 886 ರೂ, ಸಾಲರ್ ಪುರಿಯ ಕನ್ಸಲ್ಟೆಂಟ್ 62 ಲಕ್ಷದ 72 ಸಾವಿರದ 385 ರೂ, ಬಾಕಿ ಉಳಿಸಿಕೊಂಡಿದೆ.ಒಟ್ಟಿನಲ್ಲಿ ದಕ್ಷಿಣ ವಲಯದಲ್ಲಿ ಪಾವತಿಸದೆ ತೆರಿಗೆ ಕಳ್ಳರು ಬಾಕಿ ಉಳಿಸಿಕೊಂಡಿರುವ ಮೊತ್ತ 6 ಕೋಟಿ 56ಲಕ್ಷದ 33 ಸಾವಿರದ 655 ರೂ.
ಸುಬ್ರಮಣ್ಯ ಕನ್ ಸ್ಟ್ರಕ್ಷನ್ 2,25,80,236 ರೂ
ಬಿಎಂಟಿಸಿ 1,29,84,886 ರೂ
ಸಾಲರ್ ಪುರಿಯಾ ಕನ್ಸಲ್ಟೆಂಟ್: 62,72,385 ರೂ
ಒಟ್ಟು;06,56, 33,655 ರೂ

ಪೂರ್ವ ವಲಯ: ಗೋವಿಂದ ರೆಡ್ಡಿ ಅಂಡ್ ರಂಗಾರೆಡ್ಡಿ ಗ್ರೂಪ್ 1 ಕೋಟಿ 89 ಲಕ್ಷದ 18 ಸಾವಿರದ 992 ರೂ ತೆರಿಗೆ ಬಾಕಿ ಉಳಿಸಿಕೊಂಡಿದೆ. ಆದರ್ಶ್ ರಿಯಾಲಿಟಿ ಅಂಡ್ ಹೋಮ್ಸ್ 3ಕೋಟಿ 50 ಲಕ್ಷದ 24 ಸಾವಿರದ 558 ರೂ,ಗಾಲ್ಫ್ ವ್ಯೂ ಹೋಮ್ಸ್ ಸಂಸ್ಥೆ 1 ಕೋಟಿ 22 ಲಕ್ಷದ 82 ಸಾವಿರದ 407 ರೂ,ಎಲಿಕ್ಸಿಸರ್ ಎಂಟರ್ ಪ್ರೈಸಸ್ 1 ಕೋಟಿ 18 ಲಕ್ಷದ 29 ಸಾವಿರದ 380 ರೂ. ಬೆಂಗಳೂರು ಟರ್ಫ್ ಕ್ಲಬ್ 53 ಲಕ್ಷದ 87 ಸಾವಿರದ 700 ರೂ, ಬಾಲ್ಡ್ ವಿನ್ ಸ್ಕೂಲ್ 22 ಲಕ್ಷದ 86 ಸಾವಿರದ 222 ರೂ,ಯುನೈಟೆಡ್ ಬೆವರಿಸ್ ಲಿಮಿಟೆಡ್ 31 ಲಕ್ಷದ 18 ಸಾವಿರದ 909 ರೂ,ತೆರಿಗೆ ಬಾಕಿ ಉಳಿಸಿಕೊಂಡಿದೆ.ಒಟ್ಟಿನಲ್ಲಿ ಪೂರ್ವ ವಲಯದಲ್ಲಿ 10 ಕೋಟಿ 93 ಲಕ್ಷದ 83 ಸಾವಿರದ 416 ರೂ ತೆರಿಗೆ ಬಾಕಿ ಉಳಿದುಕೊಂಡಿದೆ.

-ಆದರ್ಶ್ ರಿಯಾಲಿಟಿ ಅಂಡ್ ಹೋಮ್ಸ್:03,50,24,558 ರೂ
-ಗೋವಿಂದ ರೆಡ್ಡಿ ಅಂಡ್ ರಂಗಾರೆಡ್ಡಿ ಗ್ರೂಪ್-1,89,18,992 ರೂ
-ಗಾಲ್ಫ್ ವ್ಯೂ ಹೋಮ್ಸ್-1,22,82,407 ರೂ
-ಎಲಿಕ್ಸಿಸರ್ ಎಂಟರ್ ಪ್ರೈಸಸ್: 01,18,29,380 ರೂ
-ಬೆಂಗಳೂರು ಟರ್ಫ್ ಕ್ಲಬ್:53,87,700 ರೂ
-ಬಾಲ್ಡ್ ವಿನ್ ಸ್ಕೂಲ್:22,86,222 ರೂ
-ಯುನೈಟೆಡ್ ಬೆವರಿಸ್ ಲಿಮಿಟೆಡ್: 31,18,909 ರೂ
ಒಟ್ಟು 10,93,83,416 ರೂ

ಪಶ್ಚಿಮ ವಲಯ: ಪಶ್ಚಿಮ ವಲಯದಲ್ಲಿ 13,53,52,868, ಪೂರ್ವ ವಲಯದಲ್ಲಿ 10,93,83,416 ರೂ, ಮಹಾದೇವಪುರ ವಲಯದಲ್ಲಿ 9,59,77,594 ರೂ,ದಕ್ಷಿಣ ವಲಯದಲ್ಲಿ 06,56, 33,655 ರೂ.ಬೊಮ್ಮನಹಳ್ಳಿ ವಲಯದಲ್ಲಿ 3,95,10,104 ರೂ, ದಾಸರಹಳ್ಳಿ ವಲಯದಲ್ಲಿ 1,10,02,607 ರೂ,ಆರ್ ಆರ್ ನಗರ ವಲಯದಲ್ಲಿ 65,56,304 ರೂ ಹಾಗೂ ಯಲಹಂಕ ವಲಯದಲ್ಲಿ 03,06,393 ರೂ,ತೆರಿಗೆ ಬಾಕಿ ಇದೆ.ಅಂದ್ಹಾಗೆ ಪಾಲಿಕೆಗೆ ಈ ಎಲ್ಲಾ 8 ವಲಯಗಳಿಂದ ಸಂಗ್ರಹವಾಗಬೇಕಿರುವ ಒಟ್ಟು ಆಸ್ತಿ ತೆರಿಗೆ ಮೊತ್ತ 42,42,12,837 ರೂ (42 ಕೋಟಿ 42 ಲಕ್ಷದ 12 ಸಾವಿರದ 837 ರೂ)

ಯಲಹಂಕ: ಯಲಹಂಕ ವ್ಯಾಪ್ತಿಯಲ್ಲಿ ಆನಂದ್ ಮೂರ್ತಿ ಎನ್ನುವವರು ಮಾತ್ರ 3 ಲಕ್ಷದ 6 ಸಾವಿರದ 393 ರೂ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ.
ಆನಂದ್ ಮೂರ್ತಿ:03,06,393 ರೂ

ಇಷ್ಟೊಂದು ಪ್ರಮಾಣದ ತೆರಿಗೆ ಬಾಕಿ ಉಳಿಸಿಕೊಂಡಿರುವ ಬಗ್ಗೆ ಎಮ್ಮೆಲ್ಸಿ ಎಂ.ಎ ಗೋಪಾಲಸ್ವಾಮಿ ಅವರಿಗೆ ಬಿಬಿಎಂಪಿ ಮಾಹಿತಿಯೇನೋ ಕೊಟ್ಟಿದೆ.ಆದ್ರೆ ಅದರ ವಸೂಲಾತಿಗೆ ಏನ್ ಕ್ರಮ ಕೈಗೊಳ್ಳಲಿದೆ ಎನ್ನುವುದು ಎಲ್ಲರ ಕುತೂಹಲ ಮೂಡಿಸಿದೆ.

ವಲಯವಾರು ಆಸ್ತಿ ತೆರಿಗೆ ವಂಚಕರ ಪಟ್ಟಿ

-ಪಶ್ಚಿಮ ವಲಯ-13,53,52,868 ರೂ
-ಪೂರ್ವ ವಲಯ-10,93,83,416 ರೂ
-ಮಹಾದೇವಪುರ- 9,59,77,594 ರೂ
-ದಕ್ಷಿಣ ವಲಯ 06,56, 33,655 ರೂ.
-ಬೊಮ್ಮನಹಳ್ಳಿ ವಲಯ:3,95,10,104 ರೂ,
-ದಾಸರಹಳ್ಳಿ ವಲಯ 1,10,02,607 ರೂ,
-ಆರ್ ಆರ್ ನಗರ ವಲಯ 65,56,304 ರೂ
-ಯಲಹಂಕ ವಲಯ 03,06,393 ರೂ,
ಒಟ್ಟು: 42,42,12,837 (42 ಕೋಟಿ 42 ಲಕ್ಷದ 12 ಸಾವಿರದ 837 ರೂ)

Spread the love
Leave A Reply

Your email address will not be published.

Flash News