

ಬೆಂಗಳೂರು:ನಾವ್ ಹೇಳಿದ್ದು ಸತ್ಯವಾಗಿದೆ.ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಪೊಲೀಸ್ ಸೇವೆಗೆ ಗುಡ್ ಬೈ ಹೇಳಲಿದ್ದಾರೆ ಎನ್ನುವ ಸುದ್ದಿ ಸತ್ಯವಾಗಿದೆ.ತಮ್ಮ ನಿವೃತ್ತಿಯನ್ನು ಅಧೀಕೃತಗೊಳಿಸಿರುವ ಭಾಸ್ಕರ್ ರಾವ್ ಅವ್ರು ಈಗಾಗ್ಲೇ ಐಜಿ ಪ್ರವೀಣ್ ಸೂದ್ ಮತ್ತು ಗೃಹ ಇಲಾಖೆ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ತಮ್ಮ ಸ್ವಯಂನಿವೃತ್ತಿಯ ಪತ್ರವನ್ನು ಸಲ್ಲಿಸಿದ್ದಾರೆ.ಈ ಮೂಲಕ ವಿಶ್ವಾಸಾರ್ಹ ಸುದ್ದಿಗೆ ಇನ್ನೊಂದು ಹೆಸರೇ ಕನ್ನಡ ಫ್ಲ್ಯಾಶ್ ನ್ಯೂಸ್ ಎನ್ನೋದು ಮತ್ತೆ ಪ್ರೂವ್ ಆಗಿದೆ.
ಭಾಸ್ಕರ್ ರಾವ್ ರಾಜಕೀಯದಲ್ಲಿ ಮೊದಲಿಂದ್ಲೂ ಆಸಕ್ತಿ ಹೊಂದಿದ್ದರು.ರಾಜಕೀಯ ಮುಖಂಡರ ಸಖ್ಯವೂ ಅವರಿಗಿತ್ತು.ತಮ್ಮ ಬದುಕಿನ ಹೆಚ್ಚು ಸಮಯವನ್ನು ಕಳೆದ ಬಸವನಗುಡಿಯಿಂದಲೇ ಸ್ಪರ್ಧೆಗಿಳಿಯುವ ಇಂಗಿತವನ್ನು ಅವರು ಆತ್ಮೀಯರ ಬಳಿ ವ್ಯಕ್ತಪಡಿಸಿದ್ದರು.ಅದಕ್ಕಾಗಿ ನಿವೃತ್ತಿಗೆ ಇನ್ನು ಮೂರು ವರ್ಷ ಇರುವಾಗಲೇ ಪೊಲೀಸ್ ಸೇವೆಗೆ ಗುಡ್ ಬೈ ಹೇಳಿದ್ದಾರೆ.
ಭಾಸ್ಕರ್ ರಾವ್ ಅವರ ರಾಜಿನಾಮೆ ಪತ್ರವನ್ನು ಸರ್ಕಾರ ಅಂಗಿಕರಿಸಲಿದೆಯೋ ಅಥವಾ ಅವರನ್ನು ಮನವೊಲಿಸುವ ಕೆಲಸ ಮಾಡಲಿದೆಯೋ ಎನ್ನುವುದು ದೃಢಪಟ್ಟಿಲ್ಲ.ಆದ್ರೆ ಭಾಸ್ಕರ್ ರಾವ್ ಮಾತ್ರ ತಮ್ಮ ಸ್ವಯಂನಿವೃತ್ತಿ ನಿರ್ದಾರದಿಂದ ಹಿಂದಕ್ಕೆ ಸರಿಯುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ.


ನಿವೃತ್ತಿ ನಂತರದಲ್ಲಿ ಭಾಸ್ಕರ್ ರಾವ್ ಕಾಂಗ್ರೆಸ್ ಸೇರಲಿದ್ದಾರೋ ಅಥವಾ ಆಮ್ ಆದ್ಮಿ ಪಕ್ಷದ ಜತೆಗೆ ಹೋಗಲಿದ್ದಾರೋ ಎನ್ನುವುದು ಸ್ಪಷ್ಟವಾಗಿಲ್ಲ.ಆದ್ರೆ ಅವರ ರಾಜಿನಾಮೆಯಿಂದ ಬಸವನಗುಡಿಯಲ್ಲಿ ಮಾತ್ರ ರಾಜಕೀಯ ಸಂಚಲನ ಸೃಷ್ಟಿಯಾಗಿದೆ.ಬಿಜೆಪಿ ಶಾಸಕ ರವಿಸುಬ್ರಮಣ್ಯ ಅವರನ್ನು ಸೋಲಿಸುವುದೇ ಕೈ ಪಕ್ಷದ ಮುಖ್ಯ ಆದ್ಯತೆಯಾಗಿರುವುದರಿಂದ ಅವರನ್ನು ಕಾಂಗ್ರೆಸ್ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸೊಕ್ಕೆ ತುದಿಗಾಲಲ್ಲಿ ನಿಂತಿದೆ ಎನ್ನಲಾಗ್ತಿದೆ.
ಸೆಪ್ಟೆಂಬರ್ 14 ರಂದೇ ಭಾಸ್ಕರ್ ರಾವ್ ಸ್ವಯಂನಿವೃತ್ತಿ ಬಗ್ಗೆ ಕನ್ನಡ ಫ್ಲ್ಯಾಶ್ ಪ್ರಕಟಿಸಿದ್ದ ಸುದ್ದಿ..