“ಅದು ಅವರು ಅಲ್ವೇ ಅಲ್ವಂತೆ‌.. ಮಾರ್ಪ್(ನಕಲಿ) ಮಾಡಲಾಗಿದೆಯಂತೆ.. ಕೇಸ್ ಹಾಕ್ತಾರಂತೆ…

ಸದಾನಂದ ಗೌಡ್ರ ಬೆನ್ನಿಗೆ ನಿಂತವರಲ್ಲೂ "ಹಾಗಾದ್ರೆ ಸ್ಟೇ ಅನ್ನು ತಂದಿದ್ದೇಕೆ " ಎನ್ನುವ ಪ್ರಶ್ನೆಗಳಿವೆಯಂತೆ..?!

0

ಬೆಂಗಳೂರು.ಸಂಸದ ಸದಾನಂದ ಗೌಡ ಅಲಿಯಾಸ್ ಸ್ಮೈಲ್ ಗೌಡ ತನ್ನದೆಂದು ಬಿಂಬಿಸಲಾಗುತ್ತಿರುವ ವೀಡಿಯೋದಲ್ಲಿ ಇರೋದು ನಾನಲ್ವೇ ಅಲ್ಲ ಎಂದು ಸ್ಪಷ್ಪಡಿಸಿದ್ದಾರೆ.

ನನ್ನ ಹೆಸರಿಗೆ ಮಸಿ ಬಳಿಯೋ ಯತ್ನದ ಭಾಗವಾಗಿ ಇದೆಲ್ಲಾ ನಡೆದಿದೆ.ನಾನಂತ ಕೆಲ್ಸ ಮಾಡೋನ್ ಅಲ್ವೇ ಅಲ್ಲ..ಇದನ್ನು‌ ಯಾರೇ ಕಿಡಿಗೇಡಿಗಳು ಮಾಡಿದ್ರು ಅವರ ವಿರುದ್ಧ ಶಿಕ್ಷೆಗೆ ಆಗ್ರಹಿಸುತ್ತೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.

ನನ್ನ ಮಾರ್ಪ್(ನಕಲಿ) ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಈ ವೀಡಿಯೋದಲ್ಲಿ ಇರುವುದು ನಾನಲ್ಲ‌.ನನ್ನ ಹೆಸರನ್ನು ಹಾಳು ಮಾಡಲು ಇಂತದ್ದೊಂದು ಹೇಯಕೃತ್ಯ ನಡೆಸಲಾಗಿದೆ ಎಂದು ವಿವರಿಸಿದ್ದಾರೆ‌.

ಈಗಾಗಲೇ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾನೆ.ಕಿಡಿಗೇಡಿಗಳು ಆದಷ್ಟು ಬೇಗ ಅರೆಸ್ಟ್ ಆಗ್ತಾರೆನ್ನುವ ನಂಬಿಕೆ ಇದೆ.ನ್ಯಾಯಾಲಯದಲ್ಲಿ ಸ್ಟೇ ಇರುವ ವಿಷಯದಲ್ಲಿ ಮೇಲ್ಕಂಡ ವೀಡಿಯೋವನ್ನು ಯಾರೇ ಫಾರ್ವರ್ಡ್ ಮಾಡಿದ್ರೂ ಶಿಕ್ಷೆಗೆ ಗುರಿಯಾಗುತ್ತಾರೆ ಬಿಡಿ ಎಂದಿದ್ದಾರೆ.

ಈ ರೀತಿ ಮಾಡುವ ಯಾರೇ ಇದ್ದರೂ ನನಗೆ ಇನ್ ಬಾಕ್ಸ್ ಮಾಡಿ ಎಂದು “ಸಂಭಾವಿತ” ಸದಾನಂದಗೌಡ ಟ್ವೀಟ್ ಮಾಡಿದ್ದಾರೆ.ಈ ಬಗ್ಗೆ ಸ್ಮೈಲ್ ಗೌಡರ ಪರವಾಗಿ ಸಾಕಷ್ಟು ಬೆಂಬಲಿಗರು ಧ್ವನಿ ಎತ್ತಿದ್ದು,ಅವರ ತೇಜೋವಧೆಗೆ ಯತ್ನಿಸುತ್ತಿರುವವರ ಬಂಧನವಾಗಬೇಕೆಂದು ದೂರು ಕೂಡ ಸಲ್ಲಿಕೆಯಾಗಿದೆ.

ಇದೆಲ್ಲಾ ಒತ್ತಟ್ಟಿಗಿರಲಿ‌..ಆದ್ರೆ ಸತ್ಯ ಏನು..? ಹಾಗಾದ್ರೆ ಈ ವೀಡಿಯೋದಲ್ಲಿ ಇರೋರು ಯಾರು.. ?ಸದಾನಂದಗೌಡರಂತೆ ಕಾಣುವ ಆ ವ್ಯಕ್ತಿ ಯಾರು..? ಅವರ ಧ್ವನಿಯನ್ನೇ ಹೋಲುವಂತೆ ಮಾತಾಡಿರುವ ಆ “ಮಿಮಿಕ್ರಿ”ವಾಯ್ಸ್ ಯಾರದು..? ಎನ್ನುವ ಪ್ರಶ್ನೆ ಸೃಷ್ಟಿಯಾಗ್ತಿದೆ..ಪಾಪ ಸದಾನಂದ ಗೌಡ್ರು ಹೀಗೆಲ್ಲಾ ಮಾಡೋ ಕ್ಯಾರೆಕ್ಟರ್ ಅಲ್ಲವೇ ಅಲ್ಲ ಎಂದು ಹೇಳ್ತಿರೋರಲ್ಲೂ “ಹಾಗಿದ್ರೆ ಗೌಡ್ರು ಹಿಂದೆ ಸ್ಟೇ ಅನ್ನು ಯಾಕೆ ತಂದ್ರು..? ” ಎನ್ನುವ ಪ್ರಶ್ನೆ ಮಾತ್ರ ಕಾಡ್ತಲೇ ಇದೆ..ಉಳಿದಿದ್ದನ್ನು ನಮ್ಮ ಪೊಲೀಸ್ರು ನೋಡ್ಕೋತಾರೆ ಬಿಡಿ..ಅಲ್ವಾ..

Spread the love
Leave A Reply

Your email address will not be published.

Flash News