Breakinglock downMoreScrollTop NewsUncategorizedಫೋಟೋ ಗ್ಯಾಲರಿರಾಜ್ಯ-ರಾಜಧಾನಿ

ತೆರೆದ ಬೋರ್ ವೆಲ್ ನಲ್ಲಿ ಸಿಲುಕಿದ್ದ ನಾಯಿ ಮರಿಗೆ ಪವಾಡಸದೃಶ ಮರುಜನ್ಮ

ಬೆಂಗಳೂರು:ಕೊಳವೆ ಬಾವಿಗಳಲ್ಲಿ ಬಿದ್ದ ಮಕ್ಕಳು ಬದುಕುಳಿಯುವುದೇ ತೀರಾ ಕಡಿಮೆ.ಆದರೆ ರಾಜಧಾನಿ ಬೆಂಗಳೂರಿನಲ್ಲಿ ಪವಾಡಸದೃಶ ರೀತಿಯಲ್ಲಿ ಬದುಕುಳಿದ ಘಟನೆ ನಡೆದಿದೆ.ಅಂದ್ಹಾಗೆ ಇಂತದ್ದೊಂದು ಅಪರೂಪದ ಘಟನೆ ನಡೆದಿರುವುದು ಹನುಮಂತನಗರದಲ್ಲಿ.

ಇಲ್ಲಿನ ಎಸ್ ವಿಎಂಎಸ್ ಶಾಲೆಯ ಹತ್ತಿರವಿರುವ ಸ್ಥಳವೊಂದರಲ್ಲಿ ತೆರೆದ ಕೊಳವೆ ಬಾವಿಯ ಕೇಸ್ ನೊಳಗೆ ಅಲ್ಲೇ ಆಟವಾಡುತ್ತಿದ್ದ ನಾಯಿ ಮರಿಯೊಂದು ಆಯತಪ್ಪಿ ಬಿದ್ದಿದೆ.ಹತ್ತಾರು ಅಡಿಗಳಷ್ಟು ಆಳದಲ್ಲಿರುವ ಕೊಳವೆ ಬಾವಿಯಲ್ಲಿ ಸಿಲುಕಿದ ನಾಯಿ ಮರಿ ಜೀವ ಉಳಿಸುವಂತೆ ದೀನದ್ವನಿಯಲ್ಲಿ ನೆರವಿಗೆ ಅಂಗಲಾಚುತ್ತಿತ್ತು.

ಮಾಹಿತಿ ತಿಳಿದ ಸ್ಥಳೀಯರು ತತ್ ಕ್ಷಣಕ್ಕೆ ವನ್ಯಜೀವಿ ಸ್ವಯಂ ಸೇವಕರ ಗಮನಕ್ಕೆ ತಂದಿದ್ದಾರೆ.ಸ್ಥಳೀಯರ ಮನವಿಗೆ ಸ್ಪಂದಿಸಿದ ವನ್ಯಜೀವಿ ಸ್ವಯಂಸೇವಕ ಅರುಣ್ ಪ್ರಸಾದ್ ಅವರು ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಯಿಸಿದ್ದಾರೆ.

ಸುಮಾರು ಮುಕ್ಕಾಲು ಗಂಟೆವರೆಗೆ ನಡೆದ ಕಾರ್ಯಾಚರಣೆಯಲ್ಲಿ ನಾಯಿ ಮರಿ ಬದುಕುಳಿದಿದೆ.ನಾಯಿ ಮರಿ ಅಪಾಯದಿಂದ ಪಾರಾಗಿದ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ವನ್ಯಜೀವಿ ಸ್ವಯಂಸೇವಕರ ಸಮಯಪ್ರಜ್ಞೆ ಹಾಗೂ ಸ್ಥಳೀಯರ ಸಹಕಾರ ಮತ್ತು ಅಗ್ನಿಶಾಮಕ ಸಿಬ್ಬಂದಿಯ ಸಮನ್ವಯದಿಂದಾಗಿ ಸಾವಿನಂಚಿಗೆ ಸಿಲುಕಿದ್ದ ನಾಯಿ ಮರಿ ಬದುಕುಳಿದಂತಾಗಿದೆ.

 

 

Spread the love

Related Articles

Leave a Reply

Your email address will not be published.

Back to top button
Flash News