Senior IPS Passedaway Due to Cancer:ಕ್ಯಾನ್ಸರ್ ಗೆ IPS ಅಧಿಕಾರಿ ಜಗದೀಶ್ ಬಲಿ…HCG ಆಸ್ಪತ್ರೆಯಲ್ಲಿ ನಿಧನ

ಪೊಲೀಸ್ ವಲಯದಲ್ಲಿ ಜನಾನುರಾಗಿ ಅಧಿಕಾರಿ ಎಂದು ಕರೆಯಿಸಿಕೊಂಡಿದ್ದ ಜಗದೀಶ್..

0

ಬೆಂಗಳೂರು:ಹಿರಿಯ ಐಪಿಎಸ್ ಅಧಿಕಾರಿ ಜಗದೀಶ್ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ‌.

ಅನೇಕ ದಿನಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಂಗಳೂರಿನ HCG ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇಲಾಖೆ ವಲಯದಲ್ಲಿ ತಮ್ಮ ಅತ್ಯುತ್ತಮ‌ ಗುಣ…ದಕ್ಷತೆ..ಪ್ರಾಮಾಣಿಕತೆಯಿಂದಲೇ ಹೆಸರಾಗಿದ್ದ ಜಗದೀಶ್ ಅವರು ಅನೇಕ ದಿನಗಳಿಂದ ಕ್ಯಾನ್ಸರ್ ಗೆ ತುತ್ತಾಗಿದ್ದರು.

ಎಚ್ ಸಿ ಜಿ ಆಸ್ಪತ್ರೆಯಲ್ಲಿ ಅನೇಕ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಜಗದೀಶ್ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗಲಿಲ್ಲ.

ಕೆಎಸ್ ಪಿಎಸ್ ತೇರ್ಗಡೆಯಾಗಿ ಅನೇಕ ಕಡೆ ಕೆಲಸ ಮಾಡಿದ್ದ ಜಗದೀಶ್ ಬಿಡಿಎ ನಲ್ಲಿ ಎಸ್ಪಿಯಾಗಿ ಕೆಲಸ ಮಾಡಿದ್ದರು.ಅಲ್ಲಿಯೇ ಐಪಿಎಸ್ ಭಡ್ತಿ ಪಡೆದಿದ್ದರು.

ನಂತರ ಟ್ರಾಫಿಕ್ ಡಿಸಿಪಿಯಾಗಿಯೂ ಕೆಲಸ ಮಾಡಿದ್ದರು.ಕ್ಯಾನ್ಸರ್ ಕಾರಣಕ್ಕೆ ಅನಿರ್ಧಿಷ್ಟಾವಧಿಗೆ ರಜೆ ಮೇಲೆ ತೆರಳಿದ್ದರು‌.

ಜಗದೀಶ್ ಅವರ ಸಾವಿಗೆ ಪೊಲೀಸ್ ಕಮಿಷನರ್ ಕಮಲ್ ಪಂತ್,ಪೊಲೀಸ್ ಮಹಾ ನಿರ್ದೇಶಕರಾದ ಪ್ರವೀಣ್ ಸೂದ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ನಾಳೆ ಧಾರ್ಮಿಕ ಸಂಪ್ರದಾಯ ಹಾಗೂ ಸರ್ಕಾರಿ ಗೌರವದ ಮೂಲಕ ಅಂತಿಮ‌ ಸಂಸ್ಕಾರ ನಡೆಯಲಿದೆ.

Spread the love
Leave A Reply

Your email address will not be published.

Flash News