BreakingMoreScrollTop NewsUncategorizedಕ್ರೈಮ್ /ಕೋರ್ಟ್ಫೋಟೋ ಗ್ಯಾಲರಿಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC-KSRTC)ರಾಜಕೀಯರಾಜ್ಯ-ರಾಜಧಾನಿ

BIG…BIG..SHOCK FOR BMTC SUSPEND/DISMISSED EMPLYOEES:ಸಾರಿಗೆ ಕಾರ್ಮಿಕರಿಗೆ ಬಿಗ್..ಬಿಗ್ ಶಾಕ್..ವಜಾ-ಅಮಾನತು ಆದೇಶ ವಾಪಸ್ ಭರವಸೆ ಬೆನ್ನಲ್ಲೇ 72 ಕಾರ್ಮಿಕರಿಗೆ ವಜಾ ಶಿಕ್ಷೆ.?!

ಬೆಂಗಳೂರು:ಸಚಿವ ಶ್ರೀರಾಮುಲು ಅವ್ರೆ ನೀವು ಹೇಳಿದ್ದೇನು.. ? ನಿಮ್ಮ ಇಲಾಖೆ ಅಧಿಕಾರಿಗಳು ಮಾಡ್ತಿರುವುದೇನು..? ಮುಷ್ಕರದ  ವೇಳೆ ಗೊತ್ತಿದ್ದೋ..ಪ್ರಚೋದನೆಗೀಡಾಗೋ  ಪಾಲ್ಗೊಂಡು  ಅಮಾನತು ಶಿಕ್ಷೆ ಅನುಭವಿಸುತ್ತಿರುವ ಕಾರ್ಮಿಕರನ್ನು ಅಮಾನತು ಆದೇಶ ರದ್ದುಪಡಿಸಿ ಮರುನಿಯೋಜಿಸಿಕೊಳ್ಳೋದಾಗಿ ಘೋಷಿಸಿದ್ರಿ..ಕಾರ್ಮಿಕರ ಮನಸಲ್ಲಿ ಕೆಲಸದ ಆಶಾವಾದ ಸೃಷ್ಟಿಸಿದ್ರಿ..ಆದ್ರೆ ನಿಮ್ ಅಧಿಕಾರಿಗಳು ಮಾಡುತ್ತಿರುವುದೇನು…? ನೀವು ಆದೇಶ ವಾಪಸ್ ಪಡೀತಿನಿ ಅಂತಿರಿ..ಆದ್ರೆ ನಿಮ್ ಅಧಿಕಾರಿಗಳು ಅವರನ್ನೇ ವಜಾಗೊಳಿಸುವಂಥ ಕೆಲಸ ಮಾಡುತ್ತಿದ್ದಾರೆ ಎಂದ್ರೆ ನಿಮ್ ಮಾತಿಗೆ ಬಂದ ಬೆಲೆಯಾದ್ರೂ ಏನು..? ಕಾರ್ಮಿಕರ ಪರ ಸರ್ಕಾರ ತೆಗೆದುಕೊಂಡ ನಿರ್ದಾರವನ್ನು ಅಧಿಕಾರಿಗಳು  ಹೀಗಾ ಧಿಕ್ಕರಿಸೋದು..?

ಹೌದು..ಇದು ನಿಜಕ್ಕೂ ಅಘಾತಕಾರಿ ಸುದ್ದಿ..ಸಾರಿಗೆ ಕಾರ್ಮಿಕರ ಪಾಲಿಗಂತೂ ಈ ಸುದ್ದಿ ಬರಸಿಡಿಲಂತೆ ಎರಗಿದೆ.ಇನ್ನು ಸಾರಿಗೆ ಸಚಿವ ಶ್ರೀರಾಮಲು ಸರ್ಕಾರದ ಮಾನ-ಘನತೆ ಉಳಿಸೊಕ್ಕೆ ಮಾಡುತ್ತಿರುವ ಪ್ರಯತ್ನಕ್ಕೆ ಅಧಿಕಾರಿಗಳೇ ತಣ್ಣೀರೆರಚುವಂತೆ ಮಾಡುತ್ತಿದ್ದಾರೆ.ಕಾರ್ಮಿಕರ ವಲಯದಲ್ಲಿ ಆಪದ್ಭಾಂಧವರಂತೆ ಬೆಳೆಯುತ್ತಿದ್ದ ಪರಿಶ್ರಮವನ್ನೆಲ್ಲಾ ಅಧಿಕಾರಿಗಳು ಮಣ್ಣುಪಾಲು ಮಾಡಿದ್ದಾರೆ.ಮುಷ್ಕರದಲ್ಲಿ ಪಾಲ್ಗೊಂಡು ಅಮಾನತ್ತಾಗಿ ಮನೆಯಲ್ಲಿದ್ದ ಕಾರ್ಮಿಕರನ್ನು ವಿಚಾರಣೆ ನೆವದಲ್ಲಿ ಕರೆಯಿಸಿ ಅವರ ಕೈಗೆ..ನಿರಾಕರಿಸಿದ್ರೆ ಮನೆಗೇನೆ ವಜಾ ಆದೇಶದ ಪ್ರತಿಗಳನ್ನು ರವಾನಿಸುತ್ತಿದ್ದಾರೆನ್ನುವ ಅಘಾತಕಾರಿ ಸುದ್ದಿ ಹೊರಬಿದ್ದಿದೆ.

ಅಂದ್ಹಾಗೆ ಏಪ್ರಿಲ್ 7 ರಿಂದ ನಡೆದ ಸಾರಿಗೆ ಕಾರ್ಮಿಕರ ಮುಷ್ಕರದಲ್ಲಿ ಪಾಲ್ಗೊಂಡ ಕಾರ್ಮಿಕರಿಗೆ ಅಮಾನತು,ವಜಾ ಗೊಳಿಸಿತ್ತು.ಪೊಲೀಸ್ ವಿಚಾರಣೆ ನಡೆಸಿ ಎಫ್ ಐ ಆರ್ ಕೂಡ ದಾಖಲಿಸಿತ್ತು.ಹಲವಾರು ರೀತಿಯ ಶಿಕ್ಷೆಗೊಳಪಟ್ಟ ಕಾರ್ಮಿಕರೆಲ್ಲಾ ಕೆಲಸವಿಲ್ಲದೆ ಮನೆಯಲ್ಲೇ ಕುಳಿತಿದ್ರು.ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಸರ್ಕಾರದ ಬಾಗಿಲು ತಟ್ಟಿದ್ರು ಪ್ರಯೋಜನವಾಗಿರಲಿಲ್ಲ.ಹಿಂದಿನ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಂದಲೂ ಏನೂ ಆಗಿರಲಿಲ್ಲ..ಸಾರಿಗೆ ಕಾರ್ಮಿಕರು ಭರವಸೆಯನ್ನೇ ಕಳೆದುಕೊಂಡಿದ್ರು..

ಆದ್ರೆ ಶ್ರೀರಾಮುಲು ಸಾರಿಗೆ ಸಚಿವರಾಗುತ್ತಿದ್ದಂತೆ ಸಾರಿಗೆ ಕಾರ್ಮಿಕರ ಸಂಘಟನೆಗಳ ಮುಖಂಡರಾದ ಅನಂತ ಸುಬ್ಬರಾವ್, ರಾಜಗೋಪಾಲ್,ರೇವಪ್ಪ,ಮಂಜುನಾಥ್,ಆನಂದ್ ಸೇರಿದಂತೆ ಅನೇಕರು ಸರ್ಕಾರಕ್ಕೆ ಪತ್ರ ಬರೆದು ಕಾರ್ಮಿಕರ ಮರುನಿಯೋಜನೆಗೆ ಒತ್ತಡ-ಮನವಿ ಮಾಡಿದ್ರು.

ಇದನ್ನು ಸವಾಲಾಗಿ ಸ್ವೀಕರಿಸಿದ್ದ ಸಾರಿಗೆ ಸಚಿವ ಶ್ರಿರಾಮುಲು ಮುಖ್ಯಮಂತ್ರಿಗಳನ್ನು ಮನವೊಲಿಸಿ ಅಮಾನತು-ವಜಾಗೊಂಡ ಕಾರ್ಮಿಕರ ಮರುನಿಯೋಜನೆಗೆ ಹಂತ ಹಂತವಾಗಿ ನಿರ್ಧರಿಸಿರುವುದಾಗಿ ಘೋಷಿಸಿದ್ರು.ಕಾರ್ಮಿಕರ ವಲಯದಲ್ಲಿ ಶ್ರಿರಾಮಲು ಪರ ಗೌರವ-ನಂಬಿಕೆ ಹೆಚ್ಚಾಗಿಸಿದ  ಈ ಬೆಳವಣಿಗೆ ಸರ್ಕಾರದ ಬಗ್ಗೆಯೂ ವಿಶ್ವಾಸ ಮೂಡಿಸಿತ್ತು.

ಘಟನೆ ಹಿನ್ನಲೆ:ಮುಷ್ಕರದ ವೇಳೆ ಬಸ್ ಗಳಿಗೆ ಹಾನಿ,ಬಸ್ –ಕಂಡಕ್ಟರ್ಸ್ ಗಳ ಮೇಲೆ ಹಲ್ಲೆ..ಸಾರಿಗೆ ಸಂಸ್ಥೆಯ ಆರ್ಥಿಕನಷ್ಟಕ್ಕೆ ಕಾರಣವಾಗಿದ್ದ ವಿವಿಧ ಆರೋಪಗಳ ಹಿನ್ನಲೆಯಲ್ಲಿ ಬಿಎಂಟಿಸಿಯ 72 ಕಾರ್ಮಿಕರ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್ ಐ ಆರ್ ದಾಖಲಿಸಲಾಗಿತ್ತು.ಸಂಸ್ಥೆಯ ಗೃಹ ವಿಚಾರಣೆಯಲ್ಲಿ ಇವರ ಮೇಲಿನ ಆರೋಪಗಳು ಸಾಬೀತಾಗಿದೆ ಎಂದು ತೀರ್ಮಾನಿಸಿ ಸಂಸ್ಥೆಯಿಂದ ವಜಾಗೊಳಿಸುವ ಆದೇಶ ಹೊರಡಿಸಲಾಗಿದೆ.

ಆದ್ರೆ  ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಕಾರ್ಮಿಕರಿಗೆ ಅಘಾತ ಮೂಡಿಸುವಂತೆ ಕಾರ್ಮಿಕರನ್ನು ವಿಚಾರಣೆ ನೆವದಲ್ಲಿ ಕರೆಯಿಸಿ ನಿಮ್ಮ ತಪ್ಪುಗಳು ಸಾಬೀತಾಗಿರುವ ಹಿನ್ನಲೆಯಲ್ಲಿ ಕೆಲಸದಿಂದಲೇ ವಜಾಗೊಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆನ್ನಲಾಗಿದೆ.ಇದಕ್ಕೆ ಪುಷ್ಟಿ ನೀಡುವಂತೆ ಇಂದು ಸುಮಾರು 50ಕ್ಕೂ ಕಾರ್ಮಿಕರನ್ನು ವಜಾಗೊಳಿಸಿರುವ ಸುದ್ದಿ ಹೊರಬಿದ್ದಿದೆ. ವಜಾ ಮಾಡಲಾಗಿದೆ ಎನ್ನುವ ಆದೇಶದ ಪ್ರತಿಗಳು EXCLUSIVE  ಆಗಿ ಕನ್ನಡ ಫ್ಲಾಶ್ ನ್ಯೂಸ್ ಗೆ ಲಭ್ಯವಾಗಿದೆ.

ಅಧಿಕಾರಿಗಳು ಮನಸೋಇಚ್ಛೆ ಕಾರ್ಮಿಕರು ಮಾಡಿಸಿಕೊಂಡ ವರ್ಗಾವಣೆಯನ್ನು ರದ್ದು ಮಾಡುತ್ತಿದ್ದಾರೆನ್ನುವುದು… ಮುಷ್ಕರದಲ್ಲಿ ಅಮಾನತ್ತಾದ ಕಾರ್ಮಿಕರನ್ನು ವಜಾ ಮಾಡುತ್ತಿದ್ದಾರೆ ಎನ್ನುವುದು  ಎಷ್ಟರ  ಮಟ್ಟಿಗೆ ಸರಿ ಎನ್ನುವುದು ಅನೇಕ ಸಾರಿಗೆ ಕಾರ್ಮಿಕ ಮುಖಂಡರ ಪ್ರಶ್ನೆ.ಅಧಿಕಾರಿಗಳಿಗೆ ಸಚಿವರ ಮಾತಿನ ಮೇಲೆ ಗೌರವವಿಲ್ಲವೇ..? ಸಚಿವರ ಮಾತಿಗೆ ಕಿಮ್ಮತ್ತು ಬೆಲೆ ನೀಡದಷ್ಟು ಕೊಬ್ಬಿ ಹೋಗಿದ್ದಾರಾ..? ಈ ಎಲ್ಲಾ ಪ್ರಶ್ನೆ ಮೂಡುತ್ತಿದೆ.

ಈಗಾಗಲೇ ಮುಷ್ಕರ ಮಾಡಿ ಕೆಲಸ ಕಳೆದುಕೊಂಡು ಜೀವನದಲ್ಲಿ ಬೇಸತ್ತು ಹೋಗಿರುವ ಕಾರ್ಮಿಕರ ಬದುಕಿನಲ್ಲಿ ಶ್ರೀರಾಮುಲು ಅವರ ಹೇಳಿಕೆ ಆಶಾವಾದ ಮೂಡಿಸಿತ್ತು.ಆದ್ರೆ ಆ ಆಶಾಗೋಪುರವನ್ನು ಅದೇ ಇಲಾಖೆಯ ಅಧಿಕಾರಿಗಳು ಬೀಳಿಸಲಾರಂಭಿಸಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಕಾರ್ಮಿಕ ಮುಖಂಡ ಆನಂದ್ ಅಸಮಾಧಾನ.

ಶ್ರೀರಾಮುಲು ಅವರ ಹೇಳಿಕೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ,ತಮ್ಮ ಬದುಕುಗಳ ಜತೆಗೆ ಚೆಲ್ಲಾಟ ಆಡುತ್ತಿರುವ ಅಧಿಕಾರಿಗಳ ಧೋರಣೆಗೆ ಕಾರ್ಮಿಕರು ಕೆಂಡಾಮಂಡಲವಾಗಿದ್ದಾರೆ.ಸಚಿವ ಶ್ರೀರಾಮುಲು ಈ ಹಂತದಲ್ಲಿ ಯಾವ್ ರೀತಿ ಕಾರ್ಮಿಕರಿಗೆ ಸ್ಪಂದಿಸುತ್ತಾರೆ…ಅಧಿಕಾರಿಗಳ ವಿರುದ್ಧ ಎಂಥಾ ಕ್ರಮ ಕೈಗೊಳ್ಳುತ್ತಾರೆನ್ನುವುದು ಕುತೂಹಲ ಮೂಡಿಸಿದೆ.

Spread the love

Related Articles

Leave a Reply

Your email address will not be published.

Back to top button
Flash News