SANDALWOOD ACTRESS SANJANA CLASH WITH OLA DRIVER: ಓಲಾ ಡ್ರೈವರ್ ಜತೆ ನಶೆ ಹುಡುಗಿ ಸಂಜನಾ ಕಿರಿಕ್:ಪೊಲೀಸ್ ಠಾಣೆಗೆ ದೂರು-ಪ್ರತಿ ದೂರು ನೀಡಲು ನಿರ್ಧಾರ

ಓಲಾ ಚಾಲಕನೊಂದಿಗೆ ಜಗಳವಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸಂಜನಾ

0

ಬೆಂಗಳೂರು:ಸ್ಯಾಂಡಲ್ ವುಡ್ ನಲ್ಲಿ ಉತ್ತಮ ಅಭಿನಯದಿಂದ ಹೆಸರು ಮಾಡಲಿಕ್ಕಾಗದಿದ್ರೂ ವಿವಾದಗಳಿಂದ ಸುದ್ದಿಯಾದವರೇ ಹೆಚ್ಚು.ಆ ರೀತಿ ಹುಡುಕುತ್ತಾ ಹೋದರೆ ಬಹಳಷ್ಟು ಕಿರಿಕ್ ನಟ-ನಟಿಯರು ಸಿಗ್ತಾರೆ.ಡ್ರಗ್ ಸೇವನೆ ಪ್ರಕರಣದಲ್ಲಿ ಸಿಕ್ಕಾಕೊಂಡು ಹೆಸರು ಖರಾಬ್ ಮಾಡ್ಕೊಂಡ ಸಂಜನಾ ಗಲ್ರಾನಿ ಇದೀಗ ಓಲಾ ಕ್ಯಾಬ್ ಚಾಲಕನ ಜತೆ ಗಲಾಟೆ ಮಾಡ್ಕೊಂಡು ಸುದ್ದಿಯಾಗಿದ್ದಾಳೆ.

ಶೂಟಿಂಗ್ ಸ್ಪಾಟ್ ಗೆ ಹೋಗ್ಬೇಕು ಅಂತ ಓಲಾ ಬುಕ್ ಮಾಡಿದ್ದ ಸಂಜನಾ.ಇಂದಿರಾನಗರದಿಂದ ಕೆಂಗೇರಿಗೆ ಕ್ಯಾಬ್ ಬುಕ್ ಮಾಡಬೇಕಿತ್ತು. ಆದ್ರೆ, ಆರ್ ಆರ್ ನಗರಕ್ಕೆ ಕ್ಯಾಬ್ ಬುಕ್ ಮಾಡಿದ್ದಾಳೆ. ಓಲಾ‌ ಚಾಲಕ ಮಣಿ ಓಲಾ ಕಸ್ಟಮರ್ ಕೇರ್ ಗೆ ಕಾಲ್ ಮಾಡಿ ಲೊಕೇಶನ್ ಬದಲಿಸುವಂತೆ ಹೇಳಿದ್ದನಂತೆ. ಆದ್ರೆ, ಲೊಕೇಶನ್ ಬದಲಾಯಿಸದೇ ಚಾಲಕನ ಜೊತೆ ವಾಗ್ವಾದಕ್ಕೆ ಇಳಿದು ಕಿರಿಕ್ ಮಾಡಿಕೊಂಡಿದ್ದಾಳಂತೆ ಸಂಜನಾ.

ತನ್ನ ಮೊಬೈಲ್ ನಲ್ಲಿಯೇ ಸಂಜನಾ ತನ್ನ ಜೊತೆ ಅಸಭ್ಯ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಸಂಜನಾ ಹೇಳಿದ ಜಾಗಕ್ಕೆ ಹೋಗಿಲ್ಲ ಅಂತ ಕೆಂಡಾಮಲರಾಗಿದ್ದರಂತೆ ಎಂದು ಈ ಬಗ್ಗೆ ವೀಡಿಯೋ ಮಾಡಿದ್ದಾನೆ  ಕ್ಯಾಬ್ ಚಾಲಕ ಮಣಿ. ಆದ್ರೆ,‌ಸಂಜನಾ ತನ್ನ ಟ್ವಿಟರ್ ಖಾತೆಯಲ್ಲಿ ಓಲಾ ಕ್ಯಾಬ್ ನಂಬರ್ ಹಾಗೂ ಚಾಲಕನ ಹೆಸರಾಕಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಎಸಿ ಇನ್ಕ್ರೀಸ್ ಮಾಡು ಅಂದಿದ್ದಕ್ಕೆ ಉಡಾಫೆ ತೋರಿಸಿ ತೊಂದರೆಯನ್ನ ಉಂಟುಮಾಡಿದ್ದಾನೆ‌ ಎಂದು ಟ್ವೀಟ್ ಮಾಡಿದ್ದ ಸಂಜನಾಗೆ ಠಕ್ಕರ್ ಕೊಟ್ಟಿರುವ ಚಾಲಕ ಮಣಿ ಸಂಜನಾ ತನ್ನನ್ನು ಅವಾಚ್ಯ ಶಬ್ಧದಿಂದ ನಿಂದಿಸಿದ್ರು ಅಂತ ಆರ್  ಆರ್ ನಗರ ಠಾಣೆಯಲ್ಲಿ ದೂರು‌ ನೀಡಲು ಮುಂದಾಗಿದ್ದಾನೆ ಎನ್ನಲಾಗಿದೆ.

Spread the love
Leave A Reply

Your email address will not be published.

Flash News