DRUNKEN FATHER MURDERED HIS SON:”ಕುಡಿ”ಬೇಡಪ್ಪ ಅಂದಿದ್ದಕ್ಕೆ “ಮಗ”ನನ್ನೇ “ಕೊಲೆ” ಮಾಡಿದ ಪಾಪಿ “ತಂದೆ”.

ಅಪ್ಪನಿಂದಲೇ ಕೊಲೆಯಾದ ಮಗನ ಪ್ರಕರಣಕ್ಕೆ ಬೆಚ್ಚಿಬಿದ್ದ ಕಾಮಾಕ್ಷಿಪಾಳ್ಯ

0

ಬೆಂಗಳೂರು:ಕುಡಿಬೇಡ ಎಂದು ಗಲಾಟೆ ಮಾಡಿದ್ದಕ್ಕೆ ಕೋಪಗೊಂಡ ತಂದೆ ಆವೇಶದಲ್ಲಿ ಕೈಗೆ ಸಿಕ್ಕ ಚಾಕುವಿನಿಂದಲೇ ಮಗನನ್ನು ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ.

ಕಾಮಾಕ್ಷಿಪಾಳ್ಯದ ಮೊದಲ ಹಂತದಲ್ಲಿ ಘಟನೆ ನಡೆದಿದ್ದು ಯುವರಾಜ್ ಎಂಬಾತನೇ ಕುಡಿಬೇಡ ಅಪ್ಪ ಎಂದು ರೇಗಿದ್ದಕ್ಕೆ ಕೋಪಗೊಂಡು ಮಗ ಸಂತೋಷ್ ನನ್ನು ಚಾಕುವಿನಿಂದ ಇರಿದುಬಿಟ್ಟಿದ್ದಾನೆ.ಕಲ್ಪನೆನೇ ಇಲ್ಲದ ಕುಟುಂಬದವರು ಕಣ್ಣೆದುರೇ ನಡೆದ ಘಟನೆಯಿಂದ ಶಾಕ್ ಗೆ ಒಳಗಾಗಿದ್ದಾರೆ.ತತ್ ಕ್ಷಣ ಸ್ಥಳೀಯರ ನೆರವಿನಿಂದ ಹತ್ತಿರದ ಪುಣ್ಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಆದ್ರೆ ಪರಿಸ್ಥಿತಿ ಕೈ ಮೀರಿದ್ದರಿಂದ ಆಸ್ಪತ್ರೆಯಲ್ಲೆ ಕೊನೆಯುಸಿರೆಳೆದಿದ್ದಾನೆ.

28 ವರ್ಷದ ಸಂತೋಷ್ ತನ್ನ ತಂದೆ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಆರ್ ಟಿಓದಲ್ಲೇ ಕಾರ್ಯನಿರ್ವಹಿಸುತ್ತಿದ್ದ.ತಂದೆಗಷ್ಟೇ ಅಲ್ಲ,ಇಡೀ ಕುಟುಂಬಕ್ಕೆ ಆಧಾರಸ್ಥಂಬವಾಗಿದ್ದ.ದುಡಿದ ದುಡ್ಡನ್ನೆಲ್ಲಾ ಕುಡಿತಕ್ಕೆ ವ್ಯಯ ಮಾಡುತ್ತಿದ್ದರಿಂದ ಅನೇಕ ಬಾರಿ ಮನೆಯಲ್ಲಿ ಗಲಾಟೆಗಳಾಗುತ್ತಲೇ ಇದ್ದವು.ಆದ್ರೆ ಯಾವತ್ತೂ ಇಷ್ಟು ಅತಿರೇಕಕ್ಕೆ ಹೋಗುತ್ತಿರಲಿಲ್ಲ.

ಇಂದು ಮಧ್ಯಾಹ್ನ ಕೂಡ ಕುಡಿದು ಮನೆಗೆ ಬಂದಾಗ ಎಂದಿನಂತೆ ಸಂತೋಷ್ ಗಲಾಟೆ ಮಾಡಿದ್ದಾನೆ.ಆದ್ರೆ ಅದ್ಯಾವ ಪರಿ ಸಿಟ್ಟಿನಿಂದ ಕೂಡಿದ್ದನೋ ಗೊತ್ತಿಲ್ಲ.ತಂದೆ ಗುರುರಾಜ್ ಕೈಗೆ ಸಿಕ್ಕ ಚಾಕುವಿನಿಂದ ಹೊಟ್ಟಗೆ ಇರಿದಿದ್ದಾನೆ.ಮಗ ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ.ರಕ್ತಸ್ರಾವ ಹೆಚ್ಚಾಗಿದ್ದರಿಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.ಕೊಲೆ ಮಾಡಿದ ತಂದೆಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಅರೆಸ್ಟ್ ಮಾಡಿ ಕೇಸ್ ದಾಖಲಿಸಿಕೊಂಡಿದ್ದಾರೆ.

ಕುಡಿತದ ಚಟಕ್ಕೆ ಬಲಿಯಾಗಿದ್ದ ತಂದೆಯನ್ನು ಸರಿದಾರಿಗೆ ತರೊಕ್ಕೆ ದಿನಂಪ್ರತಿ ಹೋರಾಡುತ್ತಿದ್ದ,ಅದಕ್ಕಾಗಿ ಗಲಾಟೆಯನ್ನೂ ಮಾಡುತ್ತಿದ್ದ ಮಗ ಇವತ್ತು ತಂದೆಯಿಂದಲೇ ಕೊಲೆಯಾಗಿರುವ ಘಟನೆಗೆ ಇಡೀ ಕಾಮಾಕ್ಷಿಪಾಳ್ಯವೇ ಬೆಚ್ಚಿಬಿದ್ದಿದೆ.

Spread the love
Leave A Reply

Your email address will not be published.

Flash News