KANNADA SENIOR ACTRESS DR.LEELAVATHI ILL: ಶಾಕಿಂಗ್ ನ್ಯೂಸ್-ಕನ್ನಡದ ಹಿರಿಯ ನಟಿ ಡಾ.ಲೀಲಾವತಿ ಅಸ್ವಸ್ಥ?!-ಆರೋಗ್ಯದಲ್ಲಿ ಏರುಪೇರು..!! ಮನೆಯಲ್ಲೇ ಆರೈಕೆ..?!

ಬಚ್ಚಲುಮನೆಯಲ್ಲಿ ಕಾಲು ಜಾರಿ ಬಿದ್ದಾಗಿನಿಂದ ಹಾಸಿಗೆ ಹಿಡಿದಿರುವ ಹಿರಿಜೀವ-ವದಂತಿ ಅಲ್ಲಗೆಳೆದ ಕುಟುಂಬ-ಅಮ್ಮನ ಚೇತರಿಕೆಗೆ ಪ್ರಾರ್ಥಿಸಿ ಎಂದು ಮನವಿ

0

ಬೆಂಗಳೂರು: ಕನ್ನಡದ ಹಿರಿಯ ಪೋಷಕ ನಟಿ ಲೀಲಾವತಿ ಆರೋಗ್ಯದಲ್ಲಿ ಏರುಪೇರಾಗಿರುವ ಬಗ್ಗೆ ಮಾಹಿತಿಗಳು ಹೊರಬಿದ್ದಿವೆ.ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಲೀಲಾವತಿ ಅವರು ಇತ್ತೀಚೆಗೆ ಆಯತಪ್ಪಿ ಬಿದ್ದು ಗಾಯಗೊಂಡಿದ್ದರು.ಇದು ಅವರ ಆರೋಗ್ಯ ಸಮಸ್ಯೆಯನ್ನು ಮತ್ತಷ್ಟು ಉಲ್ಬಣ ಮಾಡಲು ಕಾರಣ ಎನ್ನಲಾಗುತ್ತಿದೆ.

83 ವರ್ಷ ವಯಸ್ಸಿನ ಹಿರಿಯ ಜೀವ ಲೀಲಾವತಿ ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿಯ ತಮ್ಮ ಮನೆಯಲ್ಲಿ ಮಗ ವಿನೋದ್ ರಾಜ್ ಜತೆ ವಾಸವಾಗಿದ್ದಾರೆ.ಕಳೆದ ಆಗಸ್ಟ್ ನಲ್ಲಿ ತಮ್ಮ ಬಚ್ಚಲು ಮನೆಯಲ್ಲಿ ಕಾಲು ಜಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದರು.ವೈದ್ಯರ ಬಳಿ ಚಿಕಿತ್ಸೆ ಪಡೆಯುವ ವೇಳೆ  ಧೀರ್ಘಕಾಲದ ರೆಸ್ಟ್ ಅಗತ್ಯವಿರುವುದನ್ನು ಒತ್ತಿ ಹೇಳಿದ್ದರು.

ವೈದ್ಯರ ಸಲಹೆಯಂತೆ  ಲೀಲಾವತಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.ವೈದ್ಯರು ನಿರಂತರವಾಗಿ ಅವರ ಆರೋಗ್ಯ ಸ್ಥಿತಿಯ ಪರಿಶೀಲನೆ ನಡೆಸುತ್ತಿದ್ದಾರೆ.ಆದರೆ ಕಳೆದ ಒಂದು ವಾರದಿಂದ ಇತ್ತೀಚೆಗೆ ಲೀಲಾವತಿ ತೀವ್ರ ಬಳಲಿದಂತೆ ಕಾಣುತ್ತಿದ್ದಾರೆ.ಅವರ ಆರೋಗ್ಯದಲ್ಲಿ ಏರುಪೇರು ಕಂಡುಬರುತ್ತಿದ್ದ ದ್ರವ ರೂಪದ ಆಹಾರವನ್ನು ಸೇವಿಸುತ್ತಿದ್ದಾರೆನ್ನುವ ಮಾತುಗಳು ಅವರ ಆತ್ಮೀಯ ವಲಯದಲ್ಲಿ ಕೇಳಿಬರುತ್ತಿದೆ.ಇದು ಅವರ ಪುತ್ರ ವಿನೋದ್ ರಾಜ್ ಸೇರಿದಂತೆ ಅಪಾರ ಅಭಿಮಾನಿಗಳಿಗೆ ಆತಂಕ ಉಂಟುಮಾಡಿದೆ.

83ರ ಇಳಿ ವಯಸ್ಸಾಗಿರುವುದರಿಂದ ವಯೋಸಹಜ ಆರೋಗ್ಯ ಸಮಸ್ಯೆಗಳು ಇದ್ದೇ ಇರುತ್ತವೆ.ಅದು ಸರ್ವೇ ಸಾಮಾನ್ಯ.ಈ ಸನ್ನಿವೇಶದಲ್ಲಿ ಆರೋಗ್ಯ ಹಾಗೂ ಆಹಾರದ ವಿಚಾರದಲ್ಲಿ ತುಂಬಾ ಮುತುವರ್ಜಿ ಹಾಗೂ ಕಾಳಜಿ ವಹಿಸಬೇಕಾಗಿರುತ್ತದೆ.ಇದರತ್ತ ಲೀಲಾವತಿ ಗಮನ ಹರಿಸುತ್ತಲೇ ಇದ್ದಾರೆ.ಅವರು ನಿರ್ಲಕ್ಷ್ಯ ಮಾಡಿದ್ರೂ ಮಗ ವಿನೋದ್ ರಾಜ್ ಮಾತ್ರ ಕ್ಷಣ ಕ್ಷಣಕ್ಕೂ ತಾಯಿ ಆರೋಗ್ಯದ ಮೇಲೆ ನಿಗಾ ಇಟ್ಟು ಕಾಳಜಿ ಮಾಡುತ್ತಿದ್ದಾರೆ.

ಇದೆಲ್ಲದರ ನಡುವೆ  ಬಚ್ಚಲು ಮನೆಯಿಂದ ಜಾರಿಬಿದ್ದಿದ್ದು ಲೀಲಾವತಿ ಅವರ ಆರೋಗ್ಯ ಏರುಪೇರಾಗ ಲು ಕಾರಣ ಎನ್ನಲಾಗುತ್ತಿದೆ.ತುಂಬಾ ಸುಸ್ತು ಹಾಗೂ ಬಳಲಿದವರಂತೆ ಕಾಣುತ್ತಿರುವುದು ಕೂಡ ಸತ್ಯ.ಆದ್ರೆ ಗಟ್ಟಿಸ್ವರೂಪದ ಆಹಾರವನ್ನು ಬಿಟ್ಟಿದ್ದಾರೆ ಎನ್ನುವುದು ವೈದ್ಯರ ಸಲಹೆ ಮೇರೆಗೂ ಅಥವಾ ಇನ್ನ್ಯಾವ ಕಾರಣಕ್ಕೋ ಎನ್ನುವುದು ಸ್ಪಷ್ಟವಾಗಿಲ್ಲ.ಅವರ ಅಪಾರ ಪ್ರಮಾಣದ ಅಭಿಮಾನಿಗಳಿಗೆ ಆತಂಕ ಶುರುವಾಗಿರುವುದೇ ಇದೇ ಕಾರಣಕ್ಕೆ.ಆದ್ರೆ ಅಮ್ಮನ ಆರೋಗ್ಯದ ಬಗ್ಗೆ ಯಾರೂ ಅಂಜಬೇಕಿಲ್ಲ..ನಿಮ್ಮಗಳ ಆಶೀರ್ವಾದ,ಹಾರೈಕೆ ಹಾಗೂ ವೈದ್ಯರ ಆರೈಕೆ ಎಲ್ಲವೂ ಸೇರಿ ಅಮ್ಮ ಚೆನ್ನಾಗಿದ್ದಾರೆ.ಅವರ ಚೇತರಿಕೆಗಾಗಿ ಪ್ರಾರ್ಥಿಸಿ ಎಂದು ಅವರ ಕುಟುಂಬದ ಮೂಲಗಳು ವಿನಂತಿಸಿಕೊಂಡಿವೆ.

ಅಮ್ಮ ಶೀಘ್ರ ಚೇತರಿಸಿಕೊಳ್ಳಲಿ..ಮುಖದಲ್ಲಿ ನಗು ಮರುಕಳಿಸಲಿ…. ಮಹಾನಟಿ ಲೀಲಾವತಿ ಅವರ ಆರೋಗ್ಯ ಹಾಗೂ ಯೋಗಕ್ಷೇಮ ವಿಚಾರಿಸಲು ಇತ್ತೀಚೆಗೆ ತೆರಳಿ ಅಮ್ಮನ ಅಪ್ಪುಗೆಯ ವಾತ್ಸಲ್ಯವನ್ನು ಅನುಭವಿಸಿದ್ದ ಚಿತ್ರನಟಿಯರು
ಅಮ್ಮ ಶೀಘ್ರ ಚೇತರಿಸಿಕೊಳ್ಳಲಿ….ಮುಖದಲ್ಲಿ ನಗು ಮರುಕಳಿಸಲಿ…. “ಮಹಾನಟಿ” ಲೀಲಾವತಿ ಅವರ ಆರೋಗ್ಯ ಹಾಗೂ ಯೋಗಕ್ಷೇಮ ವಿಚಾರಿಸಲು ಇತ್ತೀಚೆಗೆ ತೆರಳಿ ಅಮ್ಮನ ಅಪ್ಪುಗೆಯ ವಾತ್ಸಲ್ಯವನ್ನು ಅನುಭವಿಸಿದ್ದ ಚಿತ್ರನಟಿಯರು

1938 ರಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಲೀಲಾಕಿರಣ್ ಹೆಸರಲ್ಲಿ ಜನಿಸಿದ ಲೀಲಾವತಿ 1950 ರಿಂದಲೂ ಸಕ್ರೀಯವಾಗಿ ಚಿತ್ರರಂಗದಲ್ಲಿದ್ದಾರೆ.1949ರಲ್ಲಿ ನಾಗಕನ್ನಿಕಾ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರಜೀವನ ಆರಂಭಿಸಿದ ಅವರು,ಕನ್ನಡ ತಮಿಳು ತೆಲುಗು ಹಾಗೂ ಮಲಯಾಳಂನ 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.1999 ರಲ್ಲಿ ಚಿತ್ರರಂಗದಲ್ಲಿ ಜೀವಮಾನ ಸಾಧನೆ ಮಾಡಿದ ಕಲಾವಿದರಿಗೆ ನೀಡಲಾಗುವ ಡಾ.ರಾಜ್ ಕುಮಾರ್ ಪ್ರಶಸ್ತಿ ಪಡೆದಿರುವ ಲೀಲಾವತಿ, ತುಮಕೂರು ವಿವಿಯಿಂದಲೂ ಗೌರವ ಡಾಕ್ಟರೇಟ್ ಪಡೆದಿದ್ದಾರೆ.ಗೆಜ್ಜೆಪೂಜೆ,ಸಿಪಾಯಿರಾಮು ಹಾಗೂ ಡಾಕ್ಟರ್ ಕೃಷ್ಣ ಚಿತ್ರಗಳಲ್ಲಿನ ಪೋಷಕ ಪಾತ್ರಗಳಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿದ್ದಾರೆ.

ಮಗನನ್ನು ಚಿತ್ರರಂಗದಲ್ಲಿ ಬೆಳೆಸುವುದಕ್ಕೆ ತಮ್ಮ ಬದುಕನ್ನು ಧಾರೆ ಎರೆದ ಮಹಾತಾಯಿ ಅನೇಕ ವರ್ಷಗಳಿಂದ ಮಗನ ಜತೆಯಲ್ಲಿ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.ಕೃಷಿ-ತೋಟಗಾರಿಕೆ ಜತೆ ಸಾರ್ವಜನಿಕ ಆರೋಗ್ಯಸೇವೆಯಲ್ಲೂ ತೊಡಗಿಕೊಂಡಿದ್ದಾರೆ.ಇಂಥಾ ಮಹಾನ್ ನಟಿ ಹಾಗೂ ಮಹಾತಾಯಿ ಆರೋಗ್ಯ ಚೇತರಿಸಿಕೊಳ್ಳಲಿ,ಶೀಘ್ರ ಗುಣಮುಖರಾಗಿ ಮತ್ತೆ ತಮ್ಮ ಆಸಕ್ತಿಗಳಲ್ಲಿ ತೊಡಗಿಸಿಕೊಳ್ಳಲಿ,ಇನ್ನೂ ಲೀಲಾವತಿ ನೂರ್ಕಾಲ ಬಾಳುವಂತಾಗಲಿ ಎನ್ನುವುದು ಕನ್ನಡ  ಫ್ಲ್ಯಾಶ್ ನ್ಯೂಸ್ ನ ಆಶಯ ಹಾಗೂ ಹಾರೈಕೆ ಕೂಡ..

 

Spread the love
Leave A Reply

Your email address will not be published.

Flash News