“BITCOIN” SHOCK-COMPLAINT TO “PRIME MINISTER” AGAINST “EX-POLICE COMMISSINOR” :“ಬಿಟ್ ಕಾಯಿನ್” ದಂಧೆಕೋರನ ಜತೆ ಮಾಜಿ ಪೊಲೀಸ್ ಕಮಿಷನರ್ ಗೆ ಲಿಂಕ್..?! ಪ್ರಧಾನಿಗೆ ಬರೆದ ಪತ್ರದಲ್ಲಿ ಸ್ಪೋಟಕ ಸಂಗತಿ ಉಲ್ಲೇಖ..?!

ತನ್ನ “ಡ್ರಗ್ ಅಡಿಕ್ಟ್ “ಮಗನ ಮೂಲಕ “ಶ್ರೀಕಿ” ಸಂಪರ್ಕ ಪಡೆದದ್ದು ನಿಜನಾ..? ಮತ್ತೋರ್ವ “ಐಪಿಎಸ್ ಅಧಿಕಾರಿಯ “ಫೋನ್ ಟ್ಯಾಪಿಂಗ್” ಮಾಡಿಸಿದ್ದು ಸತ್ಯನಾ..?!

0

ಬೆಂಗಳೂರು:ಬಿಟ್ ಕಾಯಿನ್ ಅಕ್ರಮ ದಿನಕ್ಕೊಂದು ಸ್ವರೂಪ ಪಡೆಯುತ್ತಿದೆ. ಊಹಿಸಿ ಕೊಳ್ಳಲು ಸಾಧ್ಯವೇ ಇರದಂಥವರ ಹೆಸರುಗಳು ಅಕ್ರಮದ ಜತೆ ಥಳಕು ಹಾಕ್ಕೊಳ್ತಿವೆ. ಅಕ್ರಮ ಹೇಳೊಕ್ಕೆ ಹೊರಟಿರುವ ಸತ್ಯ ಕರ್ನಾಟಕವನ್ನೇ ಬೆಚ್ಚಿಬೀಳಿಸುವಂತೆ ಮಾಡಿದೆ.

ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ ಅಕ್ರಮ ಸರ್ಕಾರದ ಬುಡವನ್ನೇ ಕಾಯಿಸುವ ಸಾಧ್ಯತೆಗಳನ್ನು ತೋರುತ್ತಿದೆ.. ಮುಖ್ಯಮಂತ್ರಿಗಳಷ್ಟೇ ಅಲ್ಲ, ಸರ್ಕಾರದಲ್ಲಿರುವ ಅನೇಕರು ರಾಜೀನಾಮೆ ಕೊಡುವ ಸ್ಥಿತಿ ನಿರ್ಮಾಣವಾದರೂ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ..ಇನ್ನೆರೆಡು ದಿನಗಳಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಬಟಾಬಯಲು ಮಾಡೊಕ್ಕೆ ಹೊರಟಿರುವ ಸ್ಪೋಟಕ ಸಂಗತಿಯೊಂದರ ದಾಖಲೆಗಳಲ್ಲಿ ಅಡಗಿರುವುದು ಕೂಡ “ಸರ್ಕಾರದ ಬುಡ ಸುಡಲಿರುವ  ಬಾಂಬಾ ಎನ್ನುವ ಅನುಮಾನ ಕಾಡಲಿಕ್ಕೆ ಶುರುವಾಗಿದೆ.

ಬಿಟ್ ಕಿಂಗ್ ಪಿನ್ ಎಂದೇ ಬಿಂಬಿಸಲಾಗುತ್ತಿರುವ ಇಂಟರ್ ನ್ಯಾಶನಲ್ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀ ಕೃಷ್ಣನ ಜತೆಗೆ ಥಳಕು ಹಾಕ್ಕೊಂಡಿರುವ ಸಂಗತಿಗಳು ಸ್ಪೋಟಕ ಸತ್ಯವನ್ನು ಹೇಳೊಕ್ಕೆ ಶುರು ಮಾಡಿವೆ.ನೋಡಲು ಸಣಕಲ ನಂತಿರುವ ಶ್ರೀಕಿಯ ತಲೆಯಲ್ಲಿ ಅಂತದ್ದೊಂದು ಖತರ್ನಾಕ್ ಮೆದುಳಿದೆಯಾ..?ಅದು ಅಕ್ರಮಕ್ಕೆ ದುರ್ಬಳಕೆ ಆಗುವ ಬದಲು ದೇಶ ಕಟ್ಟುವ ಕೆಲಸಕ್ಕೆ ಬಳಕೆಯಾಗಿದಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು ಎಂದು ಜನ ಮಾತನಾಡಿಕೊಳ್ಳುತ್ತಿರುವುದು ಸುಳ್ಳಲ್ಲ..

ಶ್ರೀಕಿ ತಲೆ ಹಾಗೂ ಆ ಮೆದುಳಿನಲ್ಲಿರುವ ಟ್ಯಾಲೆಂಟನ್ನು ಮಿಸ್ಯೂಸ್ ಮಾಡಿಕೊಂಡು ಹಣವನ್ನು ಕೋಟಿ ಕೋಟಿಗಳಲ್ಲಿ ಲೂಟಿ  ಮಾಡಿದವರು ಇವತ್ತು ಶ್ರೀಕಿಯನ್ನು ಹರಕೆಯ ಕುರಿಯನ್ನಾಗಿಸೊಕ್ಕೆ ಹೊರಟಿದ್ದಾರಾ ಗೊತ್ತಾಗುತ್ತಿಲ್ಲ..ಆದರೆ ಈ ನಡುವೆ ಶ್ರೀಕಿಯನ್ನು ಬಳಸಿಕೊಂಡವರ ವೃತ್ತಾಂತಗಳ ಬಗ್ಗೆ ದೊಡ್ಡವರಿಗೆ ಬರೆದಿದ್ದೆನ್ನಲಾದ ದೂರೊಂದು ಹರಿದಾಡುತ್ತಿದೆ.ಅದರಲ್ಲಿರುವ ಸಂಗತಿಗಳು ಎಷ್ಟು ಸ್ಪೋಟಕವೋ..ಅಷ್ಟೇ ಅಘಾತಕಕಾರಿಯೂ ಹೌದು..ಆ ದೂರಿನ ಪ್ರತಿ ಎಕ್ಸ್ ಕ್ಲ್ಯೂಸಿವ್ ಆಗಿ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭಿಸಿದೆ.ಅದರಲ್ಲಿ ಉಲ್ಲೇಖವಾಗಿರುವ ಹೆಸರುಗಳ ಪೈಕಿ ಮುನ್ನಲೆಗೆ ಬರುತ್ತಿರುವುದು ಹಿರಿಯ ಐಪಿಎಸ್ ಭಾಸ್ಕರ್ ರಾವ್ ಹಾಗೂ ಅವರ ಪುತ್ರ ಶಿರೋಮಣಿದು.

ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಮಾಜಿಕ ಕಾರ್ಯಕರ್ತರು ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ  ಸಚಿನ್ ಮಾಮನಿ ಎನ್ನುವವರು  ಬರೆದಿದ್ದೆನ್ನಲಾದ ಪತ್ರದಲ್ಲಿ ಮಾಜಿ ಪೊಲೀಸ್ ಕಮಿಷ ನರ್ ಭಾಸ್ಕರ ರಾವ್ ಹಾಗೂ ಅವರ ಪುತ್ರನ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ. ಪತ್ರದಲ್ಲಿರುವ ಸಂಗತಿಗಳ ಪೈಕಿ ಇಂಟರ್ ನ್ಯಾಶನಲ್ ಹ್ಯಾಕರ್ ಶ್ರೀಕಿ, ಭಾಸ್ಕರ್ ರಾವ್ ಅವರ ಪುತ್ರ ಅನಿರುದ್ಧ್ ಅಲಿಯಾಸ್ ರುದ್ಧ ನ ಕ್ಲಾಸ್ ಮೇಟ್ ಆಗಿದ್ದನೆನ್ನಲಾಗಿದೆ.ಅನಿರುದ್ಧ ಒಬ್ಬ ಡ್ರಗ್ ಅಡಿಕ್ಟ್ ಎಂದೂ ಉಲ್ಲೇಖಿಸಲಾಗಿರುವ  ಆ ಪತ್ರದಲ್ಲಿ ಭಾಸ್ಕರ್ ರಾವ್ ತನ್ನ ಮಗನ ಮೂಲಕ ಶ್ರೀಕಿಯ ಸಂಪರ್ಕ ಪಡೆದು ಸಾಕಷ್ಟು ಕಾನೂನು ಬಾಹಿರ ಕೃತ್ಯಗಳನ್ನು ಮಾಡಿಸಿದರೆನ್ನುವ ಗಂಭೀರ ಆರೋಪ ಮಾಡಲಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ ರಾವ್ ಹಾಗೂ ಪುತ್ರನ ಜತೆಗೆ ಶ್ರೀಕಿಗೆ ಇರುವ ಸಂಬಂಧದ ಬಗ್ಗೆ ಉಲ್ಲೇಖ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ಮಾಜಿ ಪೊಲೀಸ್ ಕಮಿಷ ನರ್ ಭಾಸ್ಕರ ರಾವ್ ಹಾಗೂ ಪುತ್ರನ ಜತೆಗೆ ಶ್ರೀಕಿಗೆ ಇರುವ ಸಂಬಂಧದ ಬಗ್ಗೆ ಉಲ್ಲೇಖ

ಭಾಸ್ಕರ್ ರಾವ್ ಕರೆಯನ್ನು ಅಲೋಕ್ ಕುಮಾರ್ ಟ್ಯಾಪ್ ಮಾಡಿಸಿದ್ರು ಎನ್ನುವ ಸಂಗತಿ ಸಿಬಿಐ ಮರು ತನಿಖೆಯ ಹಂತದಲ್ಲಿರುವಾಗಲೇ ಭಾಸ್ಕರ್ ರಾವ್ ಅವ್ರೇ ಅಲೋಕ್ ಕುಮಾರ್ ಅವರ ಫೋನ್ ಟ್ಯಾಪ್ ಮಾಡಿಸಿದರೆನ್ನುವ ಸ್ಪೋಟಕ ಸಂಗತಿಯನ್ನು ಪ್ರಧಾನಿ ಅವರಿಗೆ ಬರೆಯಲಾಗಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.ಈ ಕರೆಯನ್ನು ಟ್ಯಾಪ್ ಮಾಡಲು ಭಾಸ್ಕರ ರಾವ್ ಸಹಾಯ ಪಡೆದಿದ್ದು ಒನ್ಸ್ ಅಗೈನ್ ಈ ಶ್ರೀಕಿ ಮೂಲಕವೆನ್ನುವುದು ಕೂಡ ಸಚಿನ್ ಮಾಮನಿ ಅವರ  ದೂರಿನಲ್ಲಿ ಉಲ್ಲೇಖವಾಗಿದೆ.

ಅಷ್ಟಕ್ಕೆ ಭಾಸ್ಕರ್ ರಾವ್ ಅವರು ಶ್ರೀಕಿಯ ಸಹಾಯ ಪಡೆದುಕೊಂಡಿದಿದ್ದರೆ ಅದನ್ನು ವೃತ್ತಿ ಮತ್ಸರಕ್ಕೆ ನಡೆದೋದ ಘಟನೆ ಎಂದುಕೊಳ್ಳಬಹುದಿತ್ತೇನೋ..ಆದರೆ ಪತ್ರದಲ್ಲಿ ಉಲ್ಲೇಖವಾಗಿರುವಂತೆ ಶ್ರೀಕಿಯನ್ನು ಅನೇಕ ಪ್ರಮುಖ ವೆಬ್ ಸೈಟ್ ಗಳ ಹ್ಯಾಕ್ ಗೂ ಭಾಸ್ಕರ್ ರಾವ್ ಅವರು ಬಳಸಿಕೊಂಡರೆನ್ನಲಾಗಿದೆ. ಡೆವಲಪ್ ಆಗಿರುವ ಅನೇಕ ಸಾಫ್ಟ್ ವೇರ್ ಗಳನ್ನು ಹ್ಯಾಕ್ ಮಾಡಿಸಿ ಪ್ರಮುಖ ಮಾಹಿತಿಗಳನ್ನು ಸಂಗ್ರಹಿಸಿದರಂತೆ.

ಸಾಮಾಜಿಕ ಕಾರ್ಯಕರ್ತ ಸಚಿನ್ ಮಾಮನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ದೂರಿನ ಪ್ರತಿ
ಸಾಮಾಜಿಕ ಕಾರ್ಯಕರ್ತ ಸಚಿನ್ ಮಾಮನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ದೂರಿನ ಪ್ರತಿ

ಪೊಲೀಸ್ ಹುದ್ದೆಯಲ್ಲಿದ್ದರೂ ರಾಜಕೀಯ ಮಹತ್ವಾಕಾಂಕ್ಷಿಯಾಗಿದ್ದ ಭಾಸ್ಕರ್ ರಾವ್ ತಮ್ಮ ರಾಜಕೀಯ ಭವಿಷ್ಯ ಭದ್ರ ಮಾಡಿಕೊಳ್ಳಲು ಕೂಡ ಶ್ರೀಕಿಯನ್ನು ಬಳಸಿಕೊಂಡಿದ್ದರೆನ್ನುವುದನ್ನು ದೂರು ವಿವರಿಸುತ್ತದೆ.

ಅನೇಕ ರಾಜಕೀಯ ದುರುದ್ದೇಶದ ಕೆಲಸಗಳಿಗೂ ಭಾಸ್ಕರ್ ರಾವ್ ಅವರು ಶ್ರೀಕಿಯ ಖತರ್ನಾಕ್ ಮೆದುಳನ್ನು ಬಳಸಿಕೊಂಡು ಪ್ರಮುಖ ಹಾಗೂ ಸ್ಪೋಟಕ ಮಾಹಿತಿ ಸಂಗ್ರಹಿಸಿದ್ದಾರೆನ್ನುವ ಗಂಭೀರ ಆರೋಪವನ್ನು ಸಚಿನ್ ಮಾಮನಿ ದೂರಿನಲ್ಲಿ ಮಾಡಿದ್ದಾರೆ.

ಆದರೆ ಸಚಿನ್ ಮಾಮನಿ ಅವರು ಮಾಡಿರುವ ಆರೋಪಗಳಲ್ಲಿ ಎಷ್ಟರ ಮಟ್ಟಿಗೆ ಸತ್ಯಾಂಶವಿದೆ ಎನ್ನುವುದು ತನಿಖೆ ಶುರುವಾದ ಮೇಲೆ ಗೊತ್ತಾಗಲಿದೆ.ಆದರೆ ಭಾಸ್ಕರ್ ರಾವ್ ಮೇಲ್ಕಂಡ ಆರೋಪಗಳನ್ನು ಸಾರಾಸಗಟಾಗಿ ತಳ್ಳಿ ಹಾಕುತ್ತಿದ್ದಾರೆನ್ನಲಾಗಿದೆ.ಆದರೆ ಯಾವ ಹುತ್ತದಲ್ಲಿ ಯಾವ್ ಹಾವು ಇರುತ್ತದೆ ಎನ್ನೋದು ಗೊತ್ತಾಗುವುದಾದರೂ ಹೇಗೆ..ಹಾಗಾಗಿ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ಮಾತ್ರ ನೈಜಾಂಶವನ್ನು ಹೊರ ಹಾಕಬಲ್ಲದೇನೋ..

ಮೇಲ್ಕಂಡ ದೂರನ್ನು  ಪ್ರಧಾನಿಗಳ ಕಾರ್ಯದರ್ಶಿ ಪಿ.ಕೆ ಮಿಶ್ರಾ, ಪ್ರದಾನಿಗಳ ರಾಜಕೀಯ ಸಲಹೆಗಾರ ಭಾಸ್ಕರ್ ರಾವ್ ಕುಲ್ಬೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಜಾರಿದಳದ ನಿರ್ದೇಶಕರು ಮತ್ತು  ಎಂಎಚ್ ಎ ನ ಇಂಟೆಲಿಜೆನ್ಸ್ ವಿಂಗ್ ನ ವಿಶೇಷ ನಿರ್ದೇಶಕರಿಗೂ ಸಚಿನ್ ಮಾಮನಿ ಬರೆದಿರುವುದು ವಿಶೇಷ.

Spread the love
Leave A Reply

Your email address will not be published.

Flash News