BIG..BIG RAID ON BDA BY ACB TEAMS: BDA ಮೇಲೆ ACB ಬೃಹತ್ ರೇಡ್-ಏಕಕಾಲಕ್ಕೆ 50ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ-ಪರಿಶೀಲನೆ: ಅಪಾರ ಅಕ್ರಮ ಹಣ ಪತ್ತೆ

ಆಲ್ಟರ್ನೇಟಿವ್ ಸೈಟ್-ಕಾರ್ನರ್ ಸೈಟ್ ಹಂಚಿಕೆಯಲ್ಲಿ ಡಿಎಸ್ ಗಳೇ ಮೀಡಿಯೇಟರ್ಸ್-ನವೀನ್ ಜೊಸೇಫ್ ಕಚೇರಿಯಲ್ಲಿ ಲಕ್ಷಾಂತರ ನಗದು ಸೀಜ್

0

ಬೆಂಗಳೂರು: ಇದು ಬಿಡಿಎ ಇತಿಹಾಸದಲ್ಲಿ ಹಿಂದೆಂದೂ ನಡೆದಿರದಂಥ ಬೃಹತ್ ಎಸಿಬಿ ರೇಡ್..ಅಕ್ರಮಗಳ ಗೂಡಾಗಿದ್ದ ಬಿಡಿಎನ ಬಿಲಕ್ಕೆ ನೇರವಾಗಿ ಕೈ ಹಾಕಿ ಹೆಗ್ಗಣಗಳನ್ನು  ಬಗೆದಾಕುವ ಕೆಲಸವನ್ನು ಎಸಿಬಿ ಮಾಡಿದೆ..ಅದಕ್ಕಾಗಿ ಅವರಿಗೊಂದು ಹ್ಯಾಟ್ಸಾಫ್..ಏಕೆಂದ್ರೆ  ಇಲ್ಲಿ ಅಕ್ರಮಕ್ಕೆ ಅದಿಕಾರಿಗಳೇ ಮೀಡಿಯೇಟರ್..ಬ್ರೋಕರ್ ಗಳ ಮೂಲಕ ರೈತರು,ಭೂ ಮಾಲೀಕರನ್ನು ಕರೆಯಿಸಿಕೊಂಡು ಪರ್ಸಂಟೇಜ್ ಫಿಕ್ಸ್ ಮಾಡಿಕೊಂಡು ದಂಧೆ ನಡೆಸುವ ಕೆಲಸವನ್ನು ನಾಚಿಕೆ-ಮಾನ ಮರ್ಯಾದೆ ಇಲ್ಲದೆ ಅಧಿಕಾರಿಗಳೇ ಮಾಡುತ್ತಾ ಬಂದಿರೋದು ದಾಳಿಗೆ ಪ್ರಮುಖ ಕಾರಣ ಎನ್ನಲಾಗಿದೆ.

ಬ್ರಹ್ಮಾಂಡ ಭ್ರಷ್ಟರ ಗೂಡಾಗಿರುವ ಬೆಂಗಳೂರು ನಗರಾಭಿವೃದ್ದಿ ಪ್ರಾಧಿಕಾರ ( ಬಿಡಿಎ) ಮೇಲೆ ಎಸಿಬಿ ಅಧಿಕಾರಿಗಳು ತಂಡವಾಗಿ ಬೃಹತ್ ರೇಡ್ ನಡೆಸಿದ್ದಾರೆ.ಉಪ ಕಾರ್ಯದರ್ಶಿಗಳು ಸೇರಿದಂತೆ ಪ್ರಾಧಿಕಾರದಲ್ಲಿರುವ ಸಾಕಷ್ಟು ಅಧಿಕಾರಿಗಳ ವಿರುದ್ಧ ವಸೂಲಿ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ.

ಬಿಡಿಎ ಭೂಸ್ವಾಧೀನಾಧಿಕಾರಿಗಳ ಕಚೇರಿ ಹಾಗೂ ಅವರ ಆಪ್ತ ಸಹಾಯಕರ ಕಚೇರಿಗಳ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳ ತಂಡ ಅಕ್ರಮಕ್ಕೆ ಸಂಬಂಧಿಸಿದ ಸ್ಪೋಟಕ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದೆ.ಬದಲಿ ನಿವೇಶನ,ಕಾರ್ನರ್ ಸೈಟ್ ಗಳನ್ನು ನೀಡುವ ವಿಚಾರದಲ್ಲಿ ಮೇಲ್ಮಟ್ಟದ ಅಧಿಕಾರಿಗಳು ವಸೂಲಿಬಾಜಿ ಮಾಡುತ್ತಿದ್ದಾರೆ ಎನ್ನುವ ವ್ಯಾಪಕ ಆರೋಪಗಳ  ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ.ದಾಳಿ ವೇಳೆ ಅಧಿಕಾರಿಗಳು ಮತ್ತು ನೌಕರರ ಬಳಿ ಹಣ ಪತ್ತಯಾಗಿದ್ದು ಹಣದ ಮೂಲವನ್ನು ಕೆದಕುವ ಕಾರ್ಯದಲ್ಲಿ ನಿರತವಾಗಿದ್ದಾರೆ.ಅಲ್ಲದೇ ಪ್ರಾಥಮಿಕ ವಿಚಾರಣೆ ವೇಳೆ ಅಧಿಕಾರಿಗಳು ರೈತರು ಸೇರಿ ಹಲವರ ಹಣ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ.

ಸೈಟುಗಳ ಹಂಚಿಕೆ‌ ವಿಚಾರದಲ್ಲಿ ಅವ್ಯವಹಾರವಾಗಿರುವ ಹಾಗೂ ಅದಕ್ಕೆ ಸಂಬಂಧಿಸಿದಂತೆ ಹಣ ಬಿಡುಗಡೆ ಮಾಡುವ ವಿಚಾರದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿರೋ ಆರೋಪದಲ್ಲಿ ಹಿನ್ನಲೆಯಲ್ಲಿ ನಡೆದ ದಾಳಿ ವೇಳೆ ಕಂಪ್ಯೂಟರ್ ನಲ್ಲಿ ಸಿಕ್ಕ ಕಡತಗಳನ್ನು ಪರಿಶೀಲಿಸಲಾಗಿದೆ.ಅದೇ ರೀತಿ ಅಧಿಕಾರಿಗಳ ಕಾರುಗಳನ್ನು ಕೂಡ  ತಪಾಸಣೆ ಮಾಡಿ ಹೊರ ಕಳಿಸಲಾಗುತ್ತಿದೆ. ಅಷ್ಟೇ ಅಲ್ಲ ಕಚೇರಿಯ ಒಳಗೆ  ಮತ್ತು ಹೊರ ಬರುವರ ತಪಾಸಣೆ ಕೂಡ ನಡೆಯುತ್ತಿದೆ.

ದಾಳಿ ವೇಳೆ ಬಿಡಿಎ ನೌಕರರ ಬಳಿ ಇರುವ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.ದಾಳಿ ವೇಳೆ ತಪ್ಪಿಸಿಕೊಳ್ಳುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ಬಿಡಿಎ ಪ್ರಮುಖ ದ್ವಾರದಲ್ಲಿರುವ ಗೇಟ್ ಗಳನ್ನು ಕ್ಲೋಸ್ ಮಾಡಲಾಗಿದೆ.ದಿಢೀರ್ ದಾಳಿಯಿಂದ ಬಿಡಿಎ ನೌಕರರು ತಬ್ಬಿಬ್ಬಾಗಿದ್ದಾರೆ.

ಅಧಿಕಾರಿ ಹಾಗೂ ಸಿಬ್ಬಂದಿಯ ಮೊಬೈಲ್ ಮತ್ತು ವ್ಯಾಲೆಟ್ ವಶ ಪಡಿಸಿಕೊಂಡು ಪರಿಶೀಲನೆ ನಡೆಸಲಾಗುತ್ತಿದ್ದು,ದಾಳಿ ವೇಳೆ ಮಾಹಿತಿ ಸೋರಿಕೆಯಾಗಬಾರದೆನ್ನುವ ಕಾರಣಕ್ಕೆ ಮೊಬೈಲ್ ಸ್ವಿಚ್ ಅಫ್ ಮಾಡಿಸಲಾಗಿದೆ.ಬಳಿಕ ಕಚೇರಿಯ ಒಳಗಿದ್ದ ಎಲ್ಲಾ ಕಡತಗಳನ್ನ ಒಂದು ಕಡೆ ಇಟ್ಟು ಪರಿಶೀಲನೆ ನಡೆಸಲಾಗುತ್ತಿದೆ.

ಎಲ್ಲಾ‌ ಕಡತಗಳನ್ನ ಪರಿಶೀಲಿಸಿ ಮಾಹಿತಿ ಪಡೆಯಲಾಗುತ್ತಿದೆ.ಪರಿಶೀಲನೆ ವೇಳೆ ಹಲವು ಅಕ್ರಮ ಎಸಗಿರುವುದು ಬೆಳಕಿಗೆ ಬಂದಿದೆ.ಹಾಗೆಯೇ ಇನ್ನು ಹಲವರು ಹಣಕ್ಕೆ ಬೇಡಿಕೆ ಇಟ್ಟ ಆರೋವೂ ದೃಢಪಟ್ಟಿದೆ.

ನವೀನ್ ಜೋಸೆಪ್,
ನವೀನ್ ಜೋಸೆಪ್,
ಡಾ.ಎನ್.ಎನ್. ಮದು
ಡಾ.ಎನ್.ಎನ್. ಮದು
ಗೀತಾ ಹುಡೇದ್
ಗೀತಾ ಹುಡೇದ್

ಬಿಡಿಎ ಡೆಪ್ಯೂಟಿ ಸೆಕ್ರೆಟರಿ ನವೀನ್ ಜೋಸೆಫ್ ಕಚೇರಿಯಲ್ಲಿ  ಸಿಕ್ಕ ಲಕ್ಷಾಂತರ  ನಗದನ್ನು ಜಪ್ತಿ  ಮಾಡಲಾಗಿದೆ. ಬಿಡಿಎ 50 ಕ್ಕೂ ಹೆಚ್ಚು ಕಚೇರಿ  ಕೊಠಡಿಗಳಲ್ಲಿ ಪರಿಶೀಲನೆ ಮುಂದುವರೆದಿದೆ.

ಬಿಡಿಎ ಕಚೇರಿ ಆವರಣದಲ್ಲಿರುವ ಏಜೆಂಟ್ ಗಳ ಬ್ಯಾಗ್ ಹಾಗೂ  ಬ್ರೀಫ್ ಕೇಸ್ ಪರಿಶೀಲನೆ ಮುಂದುವರೆದಿದೆ, ಬಿಡಿಎ ಕಚೇರಿಯ ಇಂಚಿಂಚೂ ಶೋಧ ನಡೆಸ್ತಿದ್ದಾರೆ.ದಾಳಿ ವೇಳೆ ಸಿಕ್ಕ ದಾಖಲೆಗಳನ್ನು ಬ್ಯಾಗ್ ಗಳಲ್ಲಿ ತುಂಬಿಕೊಂಡು ತೆರಳುತ್ತಿದ್ದಾರೆ.

5 ಡಿವೈಎಸ್ ಪಿ, 12 ಇನ್ಸ್ ಪೆಕ್ಟರ್ ಸೇರಿ 50ಕ್ಕೂ ಎಸಿಬಿ ಅಧಿಕಾರಿಗಳಿಂದ ದಾಳಿ ನಡೆಯುತ್ತಿದ್ದು, ಎಸ್ ಪಿ ಗಳಾದ ಅಬ್ದುಲ್ ಅಹದ್, ಉಮಾ ಪ್ರಶಾಂತ್, ಯತೀಶ್ ಚಂದ್ರ ದಾಳಿಯ ನೇತೃತ್ವ ವಹಿಸಿದ್ದಾರೆ.

ಡಿ.ಎಸ್ -1 ಡಾ.ಎನ್.ಎನ್. ಮದು ,ಡಿ.ಎಸ್.-2. ನವೀನ್ ಜೋಸೆಪ್, ಡಿ.ಎಸ್- 3. ಸುಮಾ., ಡಿ.ಎಸ್-4 ಗೀತಾ ಹುಡೇದ್. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆದಾಳಿ ಮುಂದುವರೆದಿದೆ.

Spread the love
Leave A Reply

Your email address will not be published.

Flash News