BJP MLA MURDER SUPAARI VIDEO VIRAL..?! MLA ವಿಶ್ವನಾಥ್ “ಮರ್ಡರ್ ಸ್ಕೆಚ್” ರಹಸ್ಯ ಬಯಲು..?! ಪರಾಜಿತ “ಕೈ” ಅಭ್ಯರ್ಥಿಯಿಂದ ಕುಳ್ಳ ದೇವರಾಜ್ ಗೆ ಸುಪಾರಿ..?!

ವೀಡಿಯೋ ರಹಸ್ಯ ಬಹಿರಂಗದ ಹಿಂದೆ ಸಾಕಷ್ಟು ಪ್ರಶ್ನೆ..?ಶಂಕೆ..! ವೀಡಿಯೋ ಮಾಡಿದ್ದೋ.?ಮಾಡಿಸಿದ್ದೋ..?ಕುತೂಹಲ ಮೂಡಿಸಿದೆ ವಿಶ್ವನಾಥ್ ರ ಸಂಜೆಯ ಸುದ್ದಿಗೋಷ್ಠಿ..

0

 ಬೆಂಗಳೂರು:ಯಲಹಂಕ ಎಮ್ಮೆಲ್ಲೆ,ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  ಎಸ್.ಆರ್.ವಿಶ್ವನಾಥ್ ಅವರನ್ನು ಮುಗಿಸೊಕ್ಕೆ ಕೈ ಮುಖಂಡ ಹಾಗೂ ಕಳೆದ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿ ಗೋಪಾಲಕೃಷ್ಣ ಸುಪಾರಿ ಕೊಟ್ಟಿದ್ದಾರೆನ್ನುವ ಸ್ಪೋಟಕ ಮಾಹಿತಿ ಹೊರಬಿದ್ದಿದೆ.

ರಾಜಕೀಯವಾಗಿ ಮುಗಿಸೊಕ್ಕೆ ನಡೆಸಲಾದ ಪ್ರಯತ್ನಗಳೆಲ್ಲಾ ವಿಫಲವಾದ ಹಿನ್ನಲೆಯಲ್ಲಿ ಜೀವವನ್ನೇ ತೆಗೆದರೆ ಅಧ್ಯಾಯವೇ ಮುಗಿದೋಗುತ್ತದೆ ಎಂದು ಗೋಪಾಲಕೃಷ್ಣ ಮಾತನ್ನಾಡಿದ್ದಾರೆನ್ನುವ ವೀಡಿಯೋ ಈಗಾಗಲೇ ಎಲ್ಲಾ ದೃಶ್ಯ ಮಾದ್ಯಮಗಳಲ್ಲಿ ಪ್ರಸಾರವಾಗುತ್ತಿದೆ.ವಿಶ್ವನಾಥ್ ಅವರನ್ನು ಮುಗಿಸೊಕ್ಕೆ ಗೋಪಾಲಕೃಷ್ಣ ರೌಡಿ ಜಗತ್ತಿನಲ್ಲಿ ಒಂದಷ್ಟು ಹೆಸರು ಮಾಡಿರುವ ಕುಳ್ಳ ದೇವರಾಜ್ ಎನ್ನುವವನ ಜತೆ ಮಾತನಾಡುತ್ತಿರುವ ವೀಡಿಯೋಗಳು ಈಗ ರಾಜಕೀಯ ಪಡಸಾಲೆಯಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ.

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ವಿಶ್ವನಾಥ್ ವಿರುದ್ಧ ಹೀನಾಯವಾಗಿ ಸೋಲು ಕಂಡಿದ್ದ ಗೋಪಾಲಕೃಷ್ಣ ತಮ್ಮ ಮುಂದಿನ ರಾಜಕೀಯ ಅಸ್ಥಿತ್ವ ಹಾಗೂ ಭವಿಷ್ಯಕ್ಕಾಗಿ ವಿಶ್ವನಾಥ್ ಅವರನ್ನೆ ಮುಗಿಸೊಕ್ಕೆ ಇಂತದ್ದೊಂದು ಸಂಚು ಮಾಡಿದ್ದರಾ..? ತನ್ನ ದಾರಿಗೆ ಅಡ್ಡಲಾಗಿರುವುದೇ ವಿಶ್ಚನಾಥ್,ಹಾಗಾಗಿ ಅವರನ್ನೇ ಇಲ್ಲವಾಗಿಸಿದ್ರೆ ರಾಜಕೀಯವಾಗಿ ಸೃಷ್ಟಿಯಾಗುವ ನಿರ್ವಾತವನ್ನು ತಾವ್ ತುಂಬಬಹುದು..ಶಾಶ್ವತವಾಗಿ ಯಲಹಂಕವನ್ನು ತನ್ನದಾಗಿಸಿಕೊಳ್ಳಬಹುದೆನ್ನುವ ದುರಾಲೋಚನೆಯಲ್ಲಿ  ಹೀಗೆ ಮಾಡಿದ್ರಾ..? ಗೊತ್ತಿಲ್ಲ.ಆದ್ರೆ ಗೋಪಾಲಕೃಷ್ಣ ಮತ್ತು  ಕುಳ್ಳ ದೇವರಾಜ್ ನಡುವಿನ ಸಂಭಾಷಣೆಯ ಗೂಡಾರ್ಥ ಇಂತದ್ದೊಂದು ಸ್ಪೋಟಕ ವಿಚಾರವನ್ನು ಸಾರಿ ಹೇಳುವಂತಿದೆ.

ಕೆಲವು ಮೂಲಗಳ ಪ್ರಕಾರ  ಈ ವೀಡಿಯೋ ಗೋಪಾಲಕೃಷ್ಣ ಅವರ ಮನೆಯಲ್ಲೇ ಚಿತ್ರೀಕರಣವಾಗಿದೆ ಎನ್ನಲಾಗುತ್ತಿದೆ.ಕಳೆದ 6 ತಿಂಗಳ ಹಿಂದೆ ಚಿತ್ರೀಕರಣವಾಗಿರಬಹುದಾದ ವೀಡಿಯೋವನ್ನು ವಿಶ್ವನಾಥ್ ಅವರನ್ನು ಮುಗಿಸುವ ಸುಪಾರಿ ಪಡೆಯಲಿದ್ದ ದೇವರಾಜ್ ಚಿತ್ರೀಕರಿಸಿದ್ನಾ ಎನ್ನುವುದು ಗೊತ್ತಾಗುತ್ತಿಲ್ಲ..ಮಾತಿನ ಲಹರಿಯಲ್ಲಿ ವಿಶ್ವನಾಥ್ ಅವರನ್ನು ಮುಗಿಸಲು ಮಾಡಿರುವ ಪ್ಲ್ಯಾನ್ ನ್ನು ಕುಳ್ಳ ದೇವರಾಜ್ ಜತೆ ಹಂಚಿಕೊಳ್ಳುವಾಗ  ಈ ವೀಡಿಯೋವನ್ನು ಗೌಪ್ಯವಾಗಿ ಚಿತ್ರೀಕರಿಸಿಕೊಳ್ಳಲಾಗಿದೆ.

ರಹಸ್ಯವಾಗಿ ನಡೆಯೋ ಮಾತುಕತೆಯ ವೀಡಿಯೋವನ್ನು ಕುಳ್ಳ ದೇವರಾಜ್ ಅವನೇ ಚಿತ್ರೀಕರಿಸಿದ್ನಾ ಎನ್ನುವ ಅನುಮಾನ ಕಾಡುತ್ತಿದೆ.ಅಥವಾ ದೇವರಾಜ್ ಜತೆ  ಇದ್ದ ಇನ್ನ್ಯಾರಾದ್ರೂ ಕದ್ದುಮುಚ್ಚಿ ವೀಡಿಯೋ ಚಿತ್ರೀಕರಿಸಿಕೊಂಡ್ರಾ ಎನ್ನುವುದಕ್ಕೆ ಸದ್ಯಕ್ಕೆ ಯಾವುದೆ ಸ್ಪಷ್ಟತೆಯಾಗಲಿ, ಸ್ಪಷ್ಟನೆಯಾಗಲಿ ಸಿಗುತ್ತಿಲ್ಲ.

ಗೋಪಾಲಕೃಷ್ಣ ಜತೆ ಆತ್ಮೀಯವಾಗೇ ಇದ್ದ ಕುಳ್ಳ ದೇವರಾಜ್ ಜತೆ ಇಷ್ಟೊಂದು ರಹಸ್ಯವಾದ ಮಾತುಕತೆ ಆಡುವಾಗ ಇದೆಲ್ಲಾ ಹೇಗೆ ಚಿತ್ರೀಕರಿಲ್ಪಡ್ತು..? ದೇವರಾಜ್ ಬೇಕಂತಲೇ ಇಂತದ್ದೊಂದು ವೀಡಿಯೋವನ್ನು ತಾನೇ ಗೌಪ್ಯವಾಗಿ ಚಿತ್ರಿಕರಿಸಿಕೊಂಡ್ನಾ..? ಇದರಿಂದೆ ಇರಬಹುದಾದ ಉದ್ದೇಶವೇನು..? ಬೇರೆ ಏನಾದ್ರೂ ಕುತಂತ್ರವಿತ್ತಾ…? ಎಸ್.ಆರ್ ವಿಶ್ಚನಾಥ್ ಅವರ ಕಡೆಯವರೇ ಇಂತದ್ದೊಂದು ಕೆಲಸ ಮಾಡಿಸಿದ್ರಾ..? ಗೋಪಾಲಕೃಷ್ಣ ಅವರನ್ನು ರಾಜಕೀಯವಾಗಿ ಶಾಶ್ವತವಾಗಿ ಮುಗಿಸುವ ಹುನ್ನಾರದ ಭಾಗವಾಗಿಯೇ ಇಂತದ್ದೊಂದು ಕೃತ್ಯವನ್ನು ನಡೆಸಲಾಯಿತೇ..? ಇದರಿಂದ ಯಾರಿಗೇನು ಪ್ರಯೋಜನವಿದೆ..? ಎನ್ನುವ ಸಾಕಷ್ಟು ಪ್ರಶ್ನೆಗಳು ಈ ಎಲ್ಲಾ ಎಪಿಸೋಡ್ ಹಿನ್ನಲೆಯಲ್ಲಿ ಕಾಡ ಹತ್ತಿದೆ.

Spread the love
Leave A Reply

Your email address will not be published.

Flash News