SECRETES BEHIND THE SUPARI SKETCH..?! ಒಂದು ವೀಡಿಯೋ..ನೂರಾರು ಶಂಕೆ..”ವೀಡಿಯೋ”ದ ಹಿಂದಿನ “ಅಸಲಿ”ಯತ್ತೇನು..? ವೀಡಿಯೋದ ನೈಜ “ಸೃಷ್ಟಿಕರ್ತ” ಯಾರು..? ಈ ಕಾರಣಗಳಿಗೇನೇ “ಸ್ಟಿಂಗ್ ” ಮಾಡಿರಬಹುದಾ..?

MLC ಎಲೆಕ್ಷನ್ ಬೆನ್ನಲ್ಲಿ ವೀಡಿಯೋ ರಿವೀಲ್ ಆಗಿದ್ದೇಕೆ..? ಯಾರನ್ನೋ ಮೆಚ್ಚಿಸೊಕ್ಕೆ “ಕುಳ್ಳ ದೇವರಾಜ್” ಮಾಡಿದ ಸ್ಟಿಂಗಾ ಅದು.?!

0

ಬೆಂಗಳೂರು:ವಿಧಾನಪರಿಷತ್ ಚುನಾವಣೆ ಹೊಸ್ತಿಲಲ್ಲೇ  ವೀಡಿಯೋ ಬಹಿರಂಗವಾಗಿರುವುದು ಸಾಕಷ್ಟು ಗುಮಾನಿಗೆ ಕಾರಣವಾಗಿದೆ. ಆರು ತಿಂಗಳ ಹಿಂದೆ ಚಿತ್ರೀಕರಣವಾಯಿತೆನ್ನಲಾಗುತ್ತಿರುವ ವೀಡಿಯೋವನ್ನು ಚುನಾವಣೆ ನಡೆಯುತ್ತಿರುವ ಸನ್ನಿವೇಶದಲ್ಲಿ ಬಹಿರಂಗ ಗೊಳಿಸಿರುವುದರ ಹಿಂದೆ ರಾಜಕೀಯ ಕಾರಣಗಳು ಕೆಲಸ ಮಾಡಿವೆಯಾ..? ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿರುವ ಮಾತುಗಳಿವು.

ಗೋಪಾಲಕೃಷ್ಣ ಮತ್ತು ಕುಳ್ಳ ದೇವರಾಜ್ ನಡುವಿನ ಸಂಭಾಷಣೆಯ ವೀಡಿಯೋ ವೈರಲ್ ಆಗೊಕ್ಕೆ ಇವರಿಬ್ಬರಲ್ಲೇ ಒಬ್ಬರು ಕಾರಣವಾಗಿರಬೇಕು.ತನ್ನ ಮಾನವನ್ನು ತಾನೇ ಹರಾಜಾಕಿಕೊಳ್ಳಲು ರಾಜಕೀಯದಲ್ಲಿ ಬೆಳೆಯಬೇಕೆನ್ನುವ ಉಮೇದಿನಲ್ಲಿರುವ ಗೋಪಾಲಕೃಷ್ಣ  ಅವರಂತೂ ಪ್ರಯತ್ನಿಸಿರೊಕ್ಕೆ ಸಾಧ್ಯವಿಲ್ಲ..ಹಾಗೆಂದ ಮೇಲೆ ವೀಡಿಯೋವನ್ನು ಕುಳ್ಳ ದೇವರಾಜ್ ಅಥವಾ ಆ ಸಂದರ್ಭದಲ್ಲಿ ಅವರ ಜತೆಗಿರಬಹುದಾದ ಯಾರೋ ಒಬ್ಬರು ಬಹಿರಂಗ ಮಾಡಿರಬಹುದೆನ್ನಲಾಗುತ್ತಿದೆ.

ಕುಳ್ಳ ದೇವರಾಜ್ ಇಡೀ ವೀಡಿಯೋದ ಕಥಾನಾಯಕ ಎನ್ನುವ ಮಾತುಗಳು ಕೇಳಿಬರುತ್ತಿವೆ.ಯಲಹಂಕದ ರಾಜಕೀಯವನ್ನು ತುಂಬಾ ಹತ್ತಿರದಿಂದ ಬಲ್ಲಂಥ, ಕುಳ್ಳ ದೇವರಾಜ್, ಗೋಪಾಲಕೃಷ್ಣ ಹಾಗೂ ಎಸ್.ಆರ್ ವಿಶ್ವನಾಥ್ ಅವರ ವ್ಯಕ್ತಿತ್ವ-ಸ್ವಭಾವ-ಸಂಪೆರ್ಕಗಳನ್ನು ಕಂಡವರು ಹೇಳುವ ಪ್ರಕಾರ ದೇವರಾಜ್ ಮೂಲಕ ವೀಡಿಯೋವನ್ನು ಬಹಿರಂಗೊಳಿಸಲಾಗಿದೆಯಂತೆ.

ಹಾಗೆ ನೋಡಿದ್ರೆ ಗೋಪಾಲಕೃಷ್ಣ ಜತೆ ತೀರಾ ಅನ್ಯೋನ್ಯವಾಗಿರುವಂತೆ ಮಾತನಾಡಿರುವ,ನಡೆದುಕೊಂಡಿರುವ ಕುಳ್ಳ ದೇವರಾಜ್  ಸಂಬಂಧ ಎಸ್.ಆರ್.ವಿಶ್ವನಾಥ್ ಜತೆಗೂ ಚೆನ್ನಾಗಿದೆಯಂತೆ.ಹೀಗಿರುವಾಗ ಕುಳ್ಳ ದೇವರಾಜ್ ವೀಡಿಯೋ ಬಹಿರಂಗ ಮಾಡುತ್ತಾನೆಂದರೆ ಅದರ ಹಿಂದೆ ವಿಶ್ವನಾಥ್ ಅವರ ಕೈವಾಡ ಇರಬಹುದಾ..? ಎನ್ನುವುದು ಕೂಡ ಪ್ರಶ್ನೆಯಾಗಿ ಕಾಡುತ್ತಿದೆ.

ವಿಶ್ವನಾಥ್ ಅವರೇಕೆ ವೀಡಿಯೋ ಬಹಿರಂಗದ ಹಿಂದೆ ಕೆಲಸ ಮಾಡಿರುತ್ತಾರೆ..ಅವರಿಗೇನಂಥ ದರ್ದ್ ಇದೆ..ಈಗಾಗಲೇ ಯಲಹಂಕದಲ್ಲಿ ಹ್ಯಾಟ್ರಿಕ್ ಸರದಾರ ಎಂದೇ ಗುರುತಿಸಿಕೊಂಡಿರುವ ವಿಶ್ವನಾಥ್ ಕಳೆದ ಬಾರಿಯ ಚುನಾವಣೆಯಲ್ಲಿ 44503 ಮತಗಳ ಅಂತರದಿಂದ ಗೆದ್ದವರು..ಮತ್ತೊಮ್ಮೆಯಲ್ಲ ಸತತವಾಗಿ ಗೆದ್ದು ಬರುವಂತ ಕೆಪಾಸಿಟಿ ಅವರಿಗಿದೆ..ಯಲಹಂಕದ ಮಟ್ಟಿಗೆ ಸಾರ್ವಭೌಮನಾಗಿ ಮೆರೆಯುತ್ತಿದ್ದಾರೆ..ಹೀಗಿರುವಾಗ ಅವರೇಕೆ ಗೋಪಾಲಕೃಷ್ಣ ವಿರುದ್ಧ ರಾಜಕೀಯ ಹಗೆ ಸಾಧಿಸುತ್ತಾರೆ..? ಎನ್ನುವ ಪ್ರಶ್ನೆ ಎಲ್ಲರನ್ನು ಕಾಡೋದು ಕಾಮನ್.ಇದಕ್ಕೆ ಕಾರಣಗಳು ಇಲ್ಲದೇ ಇಲ್ಲ..

ಕೆಲವರು ಹೇಳುವ ಪ್ರಕಾರ ಎಲೆಕ್ಷನ್ ಗೆದ್ದ ಮೇಲಿಂದ ಹಿಡಿದು ಈ ಕ್ಷಣದವರೆಗೂ ವಿಶ್ವನಾಥ್ ವಿರುದ್ಧ ಜನಾಭಿಪ್ರಾಯ ಅಷ್ಟೊಂದು ಸಕಾರತ್ಮಕವಾಗಿ ಇಲ್ಲವಂತೆ.ಮತದಾರರಲ್ಲಿ ಒಂದಷ್ಟು ಪ್ರತಿಶತಃ ಜನ ವಿಶ್ವನಾಥ್ ಧೋರಣೆಗೆ ಬೇಸತ್ತು ಕೈನತ್ತ ವಾಲುತ್ತಿದ್ದಾರಂತೆ.ಗೋಪಾಲಕೃಷ್ಣ ಪರ ಸಹಾನುಭೂತಿ ವ್ಯಕ್ತವಾಗುತ್ತಿದೆಯಂತೆ..ಇದು ವಿಶ್ವನಾಥ್ ಅವರಿಗೆ ಮುಜುಗರ ಹಾಗೂ ಕಳವಳ ಸೃಷ್ಟಿಸಿದೆಯಂತೆ..ಇದು ಹೀಗೆ ಮುಂದುವರೆದರೆ 2023 ರ ಚುನಾವಣೆಯಲ್ಲಿ ತನಗೆ ಅಪಾಯ ತಂದೊಡ್ಡಬಹುದೆನ್ನುವ ಅಂಜಿಕೆಯಿಂದ ಹೀಗೆ ಮಾಡಿಸಿರಬಹುದೆನ್ನುವ ವಿಶ್ಲೇಷಣೆಗಳಿವೆ.ಗೋಪಾಲಕೃಷ್ಣ ಅವರ ಜನಪ್ರಿಯತೆಗೆ ಕಂಗಾಲಾಗಿರುವ ವಿಶ್ವನಾಥ್, ತನ್ನ ರಾಜಕೀಯ ಪ್ರತಿಸ್ಪರ್ದಿ ಗೋಪಾಲಕೃಷ್ಣ ವರ್ಚಸ್ಸು ಹಾಳು ಮಾಡೊಕ್ಕೆ ಕುಳ್ಳ ದೇವರಾಜ್ ಮೂಲಕ ಚಿತ್ರಿಕರಿಸಬಹುದಾಗಿರಬಹುದು ಎನ್ನಲಾಗಿರುವ ವೀಡಿಯೋವನ್ನು ಬಹಿರಂಗಗೊಳಿಸಿದ್ದಾರೆನ್ನುವುದು ಅನೇಕ ಕಾಂಗ್ರೆಸ್ಸಿಗರ ಆಪಾದನೆ.

ಇದು ಒಂದ್ ಕಾರಣವಾದ್ರೆ, ಎಮ್ಮೆಲ್ಸಿ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ಪ್ರಯೋಜನವಾಗಲಿ ಎನ್ನುವ ಕಾರಣಕ್ಕೂ ಹೀಗೊಂದು ವೀಡಿಯೋ ರಿಲೀಸ್ ಮಾಡಿರಬಹುದಲ್ವೇ..? ಇದನ್ನು ನೋಡಿ ಕೈ ಅಭ್ಯರ್ಥಿಗಳ ಬಗ್ಗೆ ಕೆಟ್ಟ ಆಭಿಪ್ರಾಯ ಮೂಡಿ ಬಿಜೆಪಿ ಬೆಂಬಲಿಸಬಹುದೆನ್ನುವ ಆಲೋಚನೆ ವಿಶ್ವನಾಥ್ ಅವರದ್ದಾಗಿದ್ದರೂ ಆಶ್ಚರ್ಯವಿಲ್ಲ ಎನ್ನುವುದು ಇನ್ನು ಕೆಲವರ ಅನಿಸಿಕೆ.

ಹೀಗೆಲ್ಲಾ ಅಂದಾಜು,ಲೆಕ್ಕಾಚಾರ..ಅನುಮಾನ..ಶಂಕೆ..ಮೂಡುವುದರ ಜತೆಗೇ ಇಲ್ಲಿ ಮೂಡೋ ಗಂಭೀರವಾದ ಹಾಗೂ ಮಹತ್ವದ ಪ್ರಶ್ನೆ ಎಂದ್ರೆ ಎಮ್ಮೆಲ್ಲೆ ವಿಶ್ವನಾಥ್  ಅವರ ಕೊಲೆಗೆ ಸ್ಕೆಚ್ ರೂಪಿಸುವ ವಿಷಯದ ಪ್ರಸ್ತಾವನೆ ಮೊದಲು ಮಾಡಿದ್ದು ಯಾರೆನ್ನುವುದು..? ಗೋಪಾಲಕೃಷ್ಣ ಅವರೇ ಮನೆಗೆ ಕುಳ್ಳ ದೇವರಾಜ್ ಕರೆಯಿಸಿ ವಿಷಯವನ್ನು ಪ್ರಸ್ತಾಪಿಸಿದ್ರೋ ಅಥವಾ ಗೋಪಾಲಕೃಷ್ಣರನ್ನು ಮಾತಿಗೆ ಎಳೆದುಕೊಂಡು ಕುಳ್ಳ  ದೇವರಾಜ್ ನೇ  ಇದನ್ನೆಲ್ಲಾ ಅವರ ಬಾಯಿಂದ ಹೇಳುವಂತೆ ಮಾಡಿದ್ನಾ..?ಎನ್ನುವುದು.ಏಕೆಂದರೆ  ಗೋಪಾಲಕೃಷ್ಣ ಹಾಗೂ ಕುಳ್ಳ ದೇವರಾಜ್ ನಡುವೆ ನಡೆದಿದೆ ಎನ್ನಲಾದ ಮಾತಿನ ಸಂಭಾಷಣೆಯೇ ಸಾಕಷ್ಟು ಅನುಮಾನ ಮೂಡಿಸುವಂತಿದೆ. ಪದೇ ಪದೇ  ಕುಳ್ಳ ದೇವರಾಜ್ ನೇ ಗೋಪಾಲಕೃಷ್ಣ ಅವರನ್ನು ಕೊಲೆ ಸ್ಕೆಚ್ ಗೆ ಸಂಬಂಧಿಸಿದಂತೆ ಒತ್ತಾಯಪೂರ್ವಕವಾಗಿ ಮಾತನಾಡಿಸಿರುವಂತಿದೆ..ಇದನ್ನೆಲ್ಲಾ ನೋಡಿದ್ರೆ ಮೇಲ್ನೋಟಕ್ಕೆ ಏನೋ ಷಡ್ಯಂತ್ರ ನಡೆದಿರುವಂತಿದೆ.

ವೀಡಿಯೋದಲ್ಲಿ ಶಾಸಕರ ಕೊಲೆಗೆ ಸ್ಕೆಚ್ ರೂಪಿಸುವ ಬಗ್ಗೆ ಗೋಪಾಲಕೃಷ್ಣ ಮತ್ತು ಕುಳ್ಳ ದೇವರಾಜ್ ಮಾಡಿರುವುದು ಅಕ್ಷಮ್ಯ..ಯಾವುದೇ ಕಾರಣಕ್ಕೂ ಅದಕ್ಕೆ ಕ್ಷಮೆಯಿಲ್ಲ..ಯಾವುದೇ ಮುಲಾಜಿಲ್ಲದೆ ಅವರಿಬ್ಬರನ್ನು ಒದ್ದು ಒಳಗೆ ಹಾಕಿ ಬಾಯಿ ಬಿಡಿಸಲೇಬೇಕು..ಸತ್ಯ ಅನಾವರಣಗೊಳ್ಳಲೇಬೇಕು.ಅದರಲ್ಲಿ ಸ್ಕೆಚ್ ರೂಪುಗೊಂಡಿದ್ದು ಸತ್ಯ ಎನ್ನೋದು ಸಾಬೀತಾಗಿದ್ದೇ ಆದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು..ಶಾಸಕ ವಿಶ್ವನಾಥ್ ಗೆ ಹೆಚ್ಚಿನ ಭದ್ರತೆ ಕಲ್ಪಿಸಲೇಬೇಕು..

ಆದ್ರೆ..ಆದ್ರೆ…ವಿಷಯ ಇಷ್ಟಕ್ಕೆ ಸೀಮಿತವಾಗದೆ ಒಟ್ಟಾರೆ ಸುಪಾರಿ ಕೊಲೆಯ ಸ್ಕೆಚ್  ಪ್ರಹಸನದ ಹಿಂದೆ ಬೇರೆಯದೇ ಷಡ್ಯಂತ್ರಗಳು ನಡೆದಿರುವುದು ಸತ್ಯವೇ ಆಗಿದ್ದಲ್ಲಿ ಅವರು ಯಾರೇ ಆಗಿರಲಿ, ಅವರನ್ನೂ ಶಿಕ್ಷಿಸಬೇಕಿದೆ..ಹಾಗಾಗಿ ಸರ್ಕಾರ ಪ್ರಕರಣವನ್ನು  ಉನ್ನತ ಮಟ್ಟದ ತನಿಖೆಗೆ ಒಳಪಡಿಸಲೇಬೇಕಾಗಿದೆ.

Spread the love
Leave A Reply

Your email address will not be published.

Flash News