BreakingKANNADAFLASHNEWSFIGHTAGAINSTCORONAMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC-KSRTC)ರಾಜಕೀಯರಾಜ್ಯ-ರಾಜಧಾನಿ

RAPE ALLEGATION OVER IFS RAVISHANKAR..?! ಯುವತಿ ಮೇಲೆ IFS ರವಿಶಂಕರ್ ಲೈಂಗಿಕ ದೌರ್ಜನ್ಯ.!? ಮದುವೆಯಾಗಿಸುವುದಾಗಿ ನಂಬಿಸಿ “ದ್ರೋಹ” ?!

ಲೈಂಗಿಕ ದೌರ್ಜನ್ಯ-ನಂಬಿಕೆ ದ್ರೋಹ ಆರೋಪಕ್ಕೆ ತುತ್ತಾಗಿರುವ ಐಎಫ್ ಎಸ್ ಅಧಿಕಾರಿ ರವಿಶಂಕರ್
ಲೈಂಗಿಕ ದೌರ್ಜನ್ಯ-ನಂಬಿಕೆ ದ್ರೋಹ ಆರೋಪಕ್ಕೆ ತುತ್ತಾಗಿರುವ ಐಎಫ್ ಎಸ್ ಅಧಿಕಾರಿ ರವಿಶಂಕರ್

ಬೆಂಗಳೂರು:ಬದುಕಿನ ಒಂದು ಕಾಲಘಟ್ಟವನ್ನು ಸಾಧನೆಗಾಗಿ ಮೀಸಲಿಟ್ಟು ಅದಕ್ಕಾಗಿ ನಿದ್ರಾಹಾರ ತೊರೆದು, ಸುಖ ಸಂತೋಷ ವನ್ನೆಲ್ಲಾ ತ್ಯಾಗ ಮಾಡಿರುತ್ತಾರೆ ಐಎಎಸ್-ಐಪಿಎಸ್-ಐಎಫ್ ಎಸ್ ಅಧಿಕಾರಿಗಳು.

ಆದ್ರೆ ಪರೀಕ್ಷೆ ಪಾಸ್ ಮಾಡಿ ಸೇವೆಗೆ ನಿಯೋಜನೆಗೊಂಡವರ ಪೈಕಿ ಕೆಲವು ಅಧಿಕಾರಿಗಳು ನೀಯತ್ತು ಕಳೆದುಕೊಳ್ತಾರೆ..ಬದ್ಧತೆ ಮರೆಯುತ್ತಾರೆ.. ಪ್ರಾಮಾಣಿಕತೆಯನ್ನು ಅಡವಿಟ್ಟು ಭ್ರಷ್ಟರಾಗಿಬಿಡ್ತಾರೆ..ಇದು ಒಂದ್ ಕೆಟಗರಿಯಾದ್ರೆ ಇವರಲ್ಲೇ ಇನ್ನೊಂದು ಕೆಟಗರಿಯ ಅಧಿಕಾರಿಗಳಿರುತ್ತಾರೆ.

ಅವರಿಗೆ  ಹೆಣ್ಣೆ ವೀಕ್ ನೆಸ್..ಹೆಣ್ಣಿನ ಮೋಹದ ಬಲೆಯಲ್ಲಿ ಸಿಕ್ಕಾಕೊಂಡು ಕಳಂಕ ಮೆತ್ತಿ ಕೊಂಡುಬಿಡ್ತಾರೆ..ನಿಮಗೆ ಗೊತ್ತಿರಲಿ, ಹೆಣ್ಣಿನ ಕಾರಣಕ್ಕೆ ವೃತ್ತಿ ಹಾಗೂ ವ್ಯಕ್ತಿತ್ವಕ್ಕೆ ಕಳಂಕ ತಂದುಕೊಂಡ ಅದೆಷ್ಟೋ ಅಧಿಕಾರಿಗಳಿದ್ದಾರೆ..

ಇವತ್ತು ನಾವು ಹೇಳೊಕ್ಕೆ ಹೊರಟಿರುವುದು ಇಂತದ್ದೇ ಒಂದು ಕಥೆಯನ್ನು,ಆತ ಹಿರಿಯ ಐಎಫ್ ಎಸ್ ಅಧಿಕಾರಿ.ಆ ಐಎಫ್ ಎಸ್ ವಿರುದ್ದವೇ ಇದೀಗ ಲೈಂಗಿಕ ದೌರ್ಜನ್ಯ ಹಾಗೂ ನಂಬಿಕೆ ದ್ರೋಹದಂತ ಗಂಭೀರ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲ,ಸಂತ್ರಸ್ಥೆ ಎಂದು ಹೇಳಿಕೊಂಡಿರುವ 33 ವರ್ಷದ  ಬೆಂಗಳೂರಿನ ವಿಳಾಸದಲ್ಲಿರುವ  ಯುವತಿಯೋರ್ವಳು ಧಾರವಾಡದ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.ಯುವತಿ ದಾಖಲಿಸಿರುವ ದೂರಿನ ಆಧಾರದಲ್ಲಿ ಎಫ್ ಐಆರ್ ಕೂಡ ದಾಖಲಾಗಿದೆ.ಸರಿಯಾಗೇ ತಗುಲಾಕಿಕೊಂಡಿರುವ ಆ ಅಧಿಕಾರಿಯೇ ಹಿರಿಯ ಐಎಫ್ ಎಸ್ ರವಿಶಂಕರ್.

ಧಾರವಾಡದಲ್ಲಿ ನೆಲೆಸಿದ್ದ ಬೆಂಗಳೂರು 33 ವರ್ಷದ ಯುವತಿ 22-10-2021 ರಂದು ಧಾರವಾಡದ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತನ್ನನ್ನು ರವಿಶಂಕರ್ ವಿರುದ್ದ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ.ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ಆಪಾದಿಸಿದ್ದಾಳೆ.

ಆಕೆ ದೂರಿನಲ್ಲಿ ಉಲ್ಲೇಖಿಸಿರುವಂತೆ “2018ರಲ್ಲಿ ಫೇಸ್ ಬುಕ್ ನಲ್ಲಿ ತನ್ನನ್ನು ಪರಿಚಯಿಸಿಕೊಂಡ  ರವಿಶಂಕರನ್ 12-07-2019 “ಸೆಂಟರ್ ಫಾರ್ ಎಂಟರ್ ಪ್ರಿಯನಿಯರ್ ಶಿಪ್ ಡೆವಲಪ್ ಮೆಂಟ್ ಆಫ್ ಕರ್ನಾಟಕ (CEDOK)| ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರಂತೆ.ಅದೇ ದಿನ  ಈ ಮಹಾನುಭಾವ ತಮ್ಮದೇ ವಾಹನದಲ್ಲಿ ಧಾರವಾಡದ ವಸತಿ ಗೃಹಕ್ಕೆ ಕರೆದೊಯ್ದು  ಹುಲಿ ಹಲ್ಲಿನ ನೆಕ್ಲೆಸ್ ತೊಡಿಸಿ ಮನೆಯ ದೇವಸ್ಥಾನದಲ್ಲೇ ಸಿಂಧೂರ ಹಚ್ಚಿ ಮದುವೆಯಾಗುವುದಾಗಿ ನಂಬಿಸಿದರೆಂದು ಉಲ್ಲೇಖವಾಗಿದೆ.

ಇದೇ ರವಿಶಂಕರ್ 12-07-2019 ರಿಂದ 14-07-2019 ರವರೆಗೆ ಅಂದರೆ ಎರಡು ದಿನ ನಿರಂತರ ದೈಹಿಕ ಸಂಪರ್ಕ ಸಾಧಿಸಿರುತ್ತಾರೆ.ಅಷ್ಟೇ ಅಲ್ಲ,ಕಚೇರಿ ಕೆಲಸದ ನಿಮಿತ್ತ ದೆಹಲಿಗೆ ತನ್ನನ್ನು ಕರೆದೊಯ್ದು 18-08-2019 ರಿಂದ 20-08-2019 ರವರೆಗೆ ಅಲ್ಲಿನ ಚಾಣಕ್ಯಪುರಿ ಸಾಮ್ರಾಟ್ ಹೊಟೇಲ್ ನಲ್ಲಿರಿಸಿಕೊಂಡು ಅಲ್ಲಿಯೂ ನಿರಂತರವಾಗಿ ಲೈಂಗಿಕ ಸಂಪರ್ಕ ಹೊಂದಿದ್ದರು.ಅದಷ್ಟೇ ಅಲ್ಲ 09-05-2020 ರಿಂದ 10-05-2020 ರಲ್ಲೂ ತನ್ನನ್ನು ರವಿಶಂಕರ್ ಲೈಂಗಿಕವಾಗಿ ಬಳಸಿಕೊಂಡಿದ್ದರು. ತನ್ನನ್ನು ಮದುವೆಯಾಗು ವುದಾಗಿ ಹೇಳಿದ್ದರಿಂದ ಅವರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದೆ ಎನ್ನುವ ಹೇಳಿಕೆಯನ್ನೂ ನೀಡಿದ್ದಾಳೆ.

ಲೈಂಗಿಕ ಸುಖ ಬೇಕೆಂದಾಗೆಲ್ಲಾ ಮದುವೆಯ ಮಾತನ್ನೇಳಿ ದೈಹಿಕ ಸಂಪರ್ಕ ಸಾಧಿಸುತ್ತಿದ್ದ ಎಂದು ದೂರಿನಲ್ಲಿ ಯುವತಿ ಆಪಾದಿಸಿದ್ದು, ರವಿಶಂಕರ್  ಧಾರವಾಡದಲ್ಲಿರುವಷ್ಟು  ದಿನ ಚೆನ್ನಾಗಿಯೇ ಇದ್ದರಂತೆ. ಧಾರವಾಡದಿಂದ ಶಿವಮೊಗ್ಗಕ್ಕೆ ವರ್ಗವಾದ ಮೇಲೆ ತನ್ನಿಂದ ಅಂತರ ಕಾಯ್ದುಕೊಳ್ಳೊಕ್ಕೆ ಶುರುಮಾಡಿದರು.. 18-06-2020 ರಂದು ತಾನು ಯಾವುದೇ ಸಂದೇಶ-ಕರೆ ಮಾಡಿದರೂ ಅದಕ್ಕೆ ರಿಯಾಕ್ಟ್ ಮಾಡದೆ ತನ್ನ ನಂಬರ್ ನ್ನೇ ಬ್ಲ್ಯಾಕ್  ಮಾಡಿದರೆನ್ನುವುದು ಪೊಲೀಸರು ದಾಖಲಿಸಿರುವ ಎಫ್ ಐ ಆರ್ ನಲ್ಲಿ ಉಲ್ಲೇಖವಾಗಿದೆ.

ರವಿಶಂಕರ್ ವಿರುದ್ದ ಸಂತ್ರಸ್ಋ ಯುವತಿ ನೀಡಿದ ದೂರಿನ ಮೇಲೆ ದಾಖಲಿಸಲಾಗಿರುವ ಎಫ್ ಐಆರ್ ಪ್ರತಿಗಳು
ರವಿಶಂಕರ್ ವಿರುದ್ದ ಸಂತ್ರಸ್ಋ ಯುವತಿ ನೀಡಿದ ದೂರಿನ ಮೇಲೆ ದಾಖಲಿಸಲಾಗಿರುವ ಎಫ್ ಐಆರ್ ಪ್ರತಿಗಳು
ರವಿಶಂಕರ್ ವಿರುದ್ದ ಸಂತ್ರಸ್ಋ ಯುವತಿ ನೀಡಿದ ದೂರಿನ ಮೇಲೆ ದಾಖಲಿಸಲಾಗಿರುವ ಎಫ್ ಐಆರ್ ಪ್ರತಿಗಳು-1
ರವಿಶಂಕರ್ ವಿರುದ್ದ ಸಂತ್ರಸ್ಋ ಯುವತಿ ನೀಡಿದ ದೂರಿನ ಮೇಲೆ ದಾಖಲಿಸಲಾಗಿರುವ ಎಫ್ ಐಆರ್ ಪ್ರತಿಗಳು-1
ರವಿಶಂಕರ್ ವಿರುದ್ದ ಸಂತ್ರಸ್ಋ ಯುವತಿ ನೀಡಿದ ದೂರಿನ ಮೇಲೆ ದಾಖಲಿಸಲಾಗಿರುವ ಎಫ್ ಐಆರ್ ಪ್ರತಿಗಳು-2
ರವಿಶಂಕರ್ ವಿರುದ್ದ ಸಂತ್ರಸ್ಋ ಯುವತಿ ನೀಡಿದ ದೂರಿನ ಮೇಲೆ ದಾಖಲಿಸಲಾಗಿರುವ ಎಫ್ ಐಆರ್ ಪ್ರತಿಗಳು-2

ತನ್ನಿಂದ ಕಾಯ್ದುಕೊಳ್ಳುತ್ತಿರುವ ಅಂತರದ ಬಗ್ಗೆ ಆತಂಕ ಹಾಗೂ ಅನುಮಾನಗೊಂಡ ಯುವತಿ ನೇರವಾಗಿ ರವಿಶಂಕರ್ ಕೆಲಸ ಮಾಡುತ್ತಿದ್ದ ಶಿವಮೊಗ್ಗಕ್ಕೆ  ತೆರಳಿದ್ದಾಳೆ.ಕಾರಣ ಕೇಳಿದ್ದಕ್ಕೆ ತನಗೆ  ಈಗಾಗಲೇ ಮದುವೆಯಾಗಿದೆ,ಆಕೆಯಿಂದ ದೂರವಾಗೊಕ್ಕೆ ಒಂದಷ್ಟು ಕಾಲಾವಕಾಶ ಕೋರಿದರಂತೆ.ಅವತ್ತು ಕೂಡ ಮದುವೆ ಆಣೆ ಮಾಡಿ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡರು. 29-03-2021 ರಂದು ಮತ್ತೆ  ಮದುವೆ ವಿಷಯ ಪ್ರಸ್ತಾಪಿಸಿದ್ದಾಳೆ.ತನ್ನ ಹಳೇ ವರಸೆ ಶುರುವಿಟ್ಟುಕೊಂಡು ಮತ್ತೆ 3-4 ತಿಂಗಳಷ್ಟು ಕಾಲಾವಕಾಶವನ್ನು ಕೇಳಿದ್ದರಂತೆ.

ರವಿಶಂಕರ್ ಹೇಳಿದಂತೆಯೇ ಒಂದಷ್ಟು ದಿನ ತಾಳ್ಮೆಯಿಂದಿದ್ದ ತಾನು, ಕೊಟ್ಟ ಗಡುವು ಮುಗಿಯುತ್ತಿದ್ದಂತೆ ಮದುವೆ ವಿಷಯವನ್ನು ಪ್ರಸ್ತಾಪಿಸಿದ್ದಳಂತೆ.ಅಷ್ಟು ದಿನ ಮದುವೆಗೆ ಕಾಲಾವಕಾಶ ಕೇಳುತ್ತಿದ್ದ ರವಿಶಂಕರ್ ಇದ್ದಕ್ಕಿದ್ದಂತೆ ಉಗ್ರಪ್ರತಾಪಿಯಾದರಂತೆ. “ಮದುವೆನೂ ಇಲ್ಲ..ಏನೂ ಇಲ್ಲ..ಅದೇನ್ ಮಾಡಿಕೊಳ್ಳುತ್ತಿಯೋ ಮಾಡಿಕೋ ಹೋಗು ಎಂದು ಅವಾಜ್ ಹಾಕಿದರಂತೆ.ಅಷ್ಟೇ ಅಲ್ಲ,ಈ ವಿಷಯವನ್ನು ಪೊಲೀಸ್ ಅಥವಾ ಇತರ ಯಾರದಾದರೂ ಗಮನಕ್ಕೆ ತಂದ್ರೆ ನಿನ್ನ ಕೆಲವು ಭಾವಭಂಗಿಯ ಫೋಟೋಗಳು ನನ್ನ ಬಳಿ ಇವೆ..ಅದನ್ನು ವೈರಲ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎಂದು ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.

ಮದುವೆಯಾದ ವಿಷಯವನ್ನು ಮುಚ್ಚಿಟ್ಟಿದ್ದರಾ ರವಿಶಂಕರ್:2013ರ  ಬ್ಯಾಚ್ ನ ಐಎಫ್ ಎಸ್ ಆಧಿಕಾರಿಯಾಗಿರುವ ರವಿಶಂಕರ್ ಮೂಲತಃ ತಮಿಳ್ನಾಡಿನವರು.,ಮೆಟ್ಟೂರು ಇವರ ಸ್ವಂತ ಊರು..ಅವರ ಸಾಕಷ್ಟು ವಿಷಯಗಳು ಇಲ್ಲಿ ಅಪ್ರಸ್ತುತ.ಆದರೆ ಲೈಂಗಿಕ ದೌರ್ಜನ್ಯ ಹಾಗೂ ನಂಬಿಕೆ ದ್ರೋಹದ ಆರೋಪ ಕೇಳಿಬಂದಿರುವ ಹಿನ್ನಲೆಯಲ್ಲಿ ಕಾಡುತ್ತಿರುವ ಪ್ರಶ್ನೆ,ತನಗೆ ಮೋಸ ಮಾಡಿದರೆಂದು ಹೇಳುತ್ತಿರುವ 33 ವರ್ಷದ ಯುವತಿಗೆ ರವಿಶಂಕರ್ ತಾನು ಮದುವೆಯಾಗಿರುವ ವಿಷಯವನ್ನೇನಾದ್ರೂ ಮುಚ್ಚಿಟ್ಟಿದ್ರಾ ಎನ್ನುವುದು.

ಐಎಎಸ್ ಅಧಿಕಾರಿಯನ್ನು ಮದುವೆಯಾಗಿ ಸುಂದರ-ಸುಖದ ಸಂಸಾರವನ್ನು ನಡೆಸುತ್ತಿರುವ ಸಂಗತಿಯನ್ನೇಕೆ ಯುವತಿಯಿಂದ ಮುಚ್ಚಿಟ್ಟಿದ್ದರು ರವಿಶಂಕರ್.ಅಥವಾ ಯುವತಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದ 2019 ರಲ್ಲಿ ರವಿಶಂಕರನ್ ಗೆ ಮದುವೆ ಏನಾದ್ರೂ ಆಗಿರಲಿಲ್ಲವೇ..? ಎನ್ನುವ ಗೊಂದಲ ಮೂಡಿದೆ.ಮದುವೆಯಾಗಿರುವ ವಿಚಾರವನ್ನು ಮುಚ್ಚಿಟ್ಟಿದ್ದೇ ಆದಲ್ಲಿ,ಯಾಕೆ ಹಾಗೆ ಮಾಡಿದರೆನ್ನುವುದು ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ.

ಪತಿಯನ್ನು ರಕ್ಷಿಸಲು  ಐಎಎಸ್ ಪತ್ನಿಯ ಹರಸಾಹಸ: ಸಾಕಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ..ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ರವಿಶಂಕರ್ ಮದುವೆಯಾಗಿರುವುದು ಓರ್ವ ಐಎಎಸ್ ಅಧಿಕಾರಿಯನ್ನು.. “ಕಾರ್ಪೊರೇಷನ್” ನಲ್ಲಿ ಆಯಕಟ್ಟಿನ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ ಆ ಮಹಿಳಾ ಐಎಎಸ್ ಗೆ ತನ್ನ ಪತಿಯ ವಿರುದ್ಧ ಆರೋಪ ಕೇಳಿಬಂದಾಗಿನಿಂದ ತಿಂದ ಅನ್ನ ಅರಗುತ್ತಿಲ್ಲ..ನಿದ್ದೆ ಕಣ್ಣತ್ತುತ್ತಿಲ್ಲವಂತೆ..

ಪತಿಯ ವಿರುದ್ಧದ ಆರೋಪದ ಕಾರಣದಿಂದ ತೀವ್ರ ನಾಚಿಕೆಗೀಡಾಗಿರುವ-,ಮುಜುಗರಕ್ಕೊಳಗಾಗಿರುವ ಐಎಎಸ್ ಮೇಡಂ,ಪ್ರಕರಣವನ್ನು ಮುಚ್ಚಾಕೊಕ್ಕೆ ತರೇವಾರಿ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರಂತೆ. ಬಿಜೆಪಿ ಸರ್ಕಾರದಲ್ಲಿರುವ ಸಚಿವರನ್ನು ಸಂಪರ್ಕಿಸಿ ತನ್ನ ಪತಿಗೆ ಅಂಟಿರುವ ಕಳಂಕವನ್ನು ಹೇಗೆ ಹೋಗಲಾಡಿಸಬೇಕೆಂಬ ಸಲಹೆ-ಮಾರ್ಗದರ್ಶನ ಕೇಳಿದ್ದಾರಂತೆ.ಆ ಸಚಿವರಿಂದ ಸೂಕ್ತ ಭರವಸೆಯೂ  ಸಿಕ್ಕಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ತಾನು ಕೆಲಸ ಮಾಡುತ್ತಿರುವ “ಕಾರ್ಪೊರೇಷನ್” ನಲ್ಲಿ ಸಧ್ಯಕ್ಕೆ ಈ ವಿಷಯ ಹೆಚ್ಚೇನು ಪಸರ್ ಆಗಿಲ್ಲದ್ದರಿಂದ  ಐಎಎಸ್  ಮೇಡಂ ಸೇಫ್..ಆದ್ರೆ ಇಂಥಾ ವಿಷಯಗಳು ಮುಚ್ಚಿಟ್ಟುಕೊಳ್ಳೊಕ್ಕೆ ಸಾಧ್ಯವಿಲ್ಲದ ಬಸಿರಿನಂತಾಗಿರುವುದರಿಂದ ಅದು ಯಾವಾಗ ಸ್ಪೋಟಗೊಳ್ಳುತ್ತದೋ..ಅದರಿಂದ ಮೇಡಂ ಎಷ್ಟರ ಮಟ್ಟಿಗೆ ಮುಜುಗರ ಅನುಭವಿಸಬೇಕಾಗುತ್ತದೋ ಕಾದು ನೋಡಬೇಕಿದೆ.ಆಪಾದಿತ ಸ್ಥಾನದಲ್ಲಿರುವ  ರವಿಶಂಕರ್,  ದೊಡ್ಡವರ ಮೂಲಕ ತನ್ನ ಮೇಲೆ ದೂರು ಕೊಟ್ಟ ಯುವತಿ ವಿರುದ್ಧವೇ ಆಪಾದನೆ ಕೇಳಿಬರುವಂತೆ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆನ್ನುವ ಮಾತು ಕೇಳಿಬರುತ್ತಿವೆ.

Spread the love

Related Articles

Leave a Reply

Your email address will not be published.

Back to top button
Flash News