VETERAN POLITICIAN R.L JAALAPPA NO MORE: ಜನತಾ ಪರಿವಾರದ ಹಿರಿಯ ರಾಜಕಾರಣಿ R.L ಜಾಲಪ್ಪ ವಿಧಿವಶ-ಶಿಕ್ಷಣ ಸಂಸ್ಥೆಗಳ ರೂವಾರಿ ಇನ್ನಿಲ್ಲ.

ಸಂಸದ-ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದ ಜಾಲಪ್ಪ-ಪಕ್ಷಾಂತರಿ ಕಳಂಕದಲ್ಲೇ ನೊಂದಿದ್ದ ಹಿರಿಯ ಮುತ್ಸದ್ಧಿ.

0

ಬೆಂಗಳೂರು:ಕರ್ನಾಟಕ ಕಂಡ ಹಿರಿಯ ಮುತ್ಸದ್ಧಿ, ರಾಜಕಾರಣಿ,ಶಿಕ್ಷಣ ಸಂಸ್ಥೆಗಳ ರೂವಾರಿ ಆರ್.ಎಲ್ ಜಾಲಪ್ಪ ಧೀರ್ಘಾವಧಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.

ಆರ್.ಲಕ್ಷ್ಮಿನಾರಾಯಣಪ್ಪ ಜಾಲಪ್ಪ  ಅವರಿಗೆ 96 ವರ್ಷ ವಯಸ್ಸಾಗಿತ್ತು.ತಮ್ಮದೇ ಒಡೆತನದ ಆರ್.ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಜಾಲಪ್ಪ ಸಂಸದರಾಗಿ ಕಾರ್ಯನಿರ್ವಹಿಸಿದ್ದರು.

ಕೇಂದ್ರ ಜವಳಿ ಖಾತೆ ಸಚಿವರಾಗಿಯೂ ಕೆಲಸ ಮಾಡಿದ್ದರು.ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸದಸ್ಯರಾಗಿ 1979 ರವರೆಗೆ ಕೆಲಸ ಮಾಡಿದ್ದ ಜಾಲಪ್ಪ,ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜತೆ ಕ್ರಾಂತಿರಂಗ ಸೇರಿದರು.ನಂತರ ಜನತಾಪಾರ್ಟಿ ,ಜನತಾದಳ ಸೇರಿದರು.

ಅದೇ ಪಕ್ಷದಿಂದ 1996 ರಲ್ಲಿ ಚಿಕ್ಕಾಬಳ್ಳಾಪುರ ಲೋಕಸಭಾ ಕ್ಷೇತ್ರದ ಸದಸ್ಯರಾಗಿಯೂ ಆಯ್ಕೆಯಾದರು.ಅದೇ ಅವಧಿಯಲ್ಲಿ 1996 ರಿಂದ 1998 ರವರೆಗೆ ಕೇಂದ್ರ ಜವಳಿ ಖಾತೆ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದರು.ನಂತರ ಜನತಾದಳ ತೊರೆದು  ಕಾಂಗ್ರೆಸ್ ಸೇರಿ ಮತ್ತೆ 2009ರವರೆಗೆ ಸಂಸದರಾದರು. ಕೋಲಾರದಲ್ಲಿರುವ ದೇವರಾಜ ಅರಸು ಮೆಡಿಕಲ್ ಕಾಲೇಜ್ ನ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದ ಜಾಲಪ್ಪ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು.ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಅವರ ಸಾವಿಗೆ ಮುಖ್ಯಮಂತ್ರಿ,ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಹಿರಿಯ ರಾಜಕಾರಣಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.

Spread the love
Leave A Reply

Your email address will not be published.

Flash News