Breakinglock downMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆರಾಜಕೀಯರಾಜ್ಯ-ರಾಜಧಾನಿ

KANNADA ACTIVISTS VOICE AGAINST VATAALS KARNATAKA BAND INTENTION: ವಾಟಾಳ್ “ಕರ್ನಾಟಕ ಬಂದ್” ಗೆ ಕೆಲ ಕನ್ನಡಪರ ಸಂಘಟನೆಗಳು ಉಲ್ಟಾ..?!

ಬೆಂಗಳೂರು:ಕನ್ನಡ..ಹೋರಾಟ…ಎನ್ನೋದನ್ನು ಸರಕಿನ ರೇಂಜ್ ನಲ್ಲಿ ಗುತ್ತಿಗೆ ಹಿಡಿದಂತಿರುವ ಕನ್ನಡ ದ ಕಟ್ಟಾಳು ವಾಟ್ಹಾಳ್ ನಾಗರಾಜ್ ಗೆ ಈ ಬಾರಿ ಅದೇಕೋ ಅವರು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಅಷ್ಟು ಸಕಾರಾತ್ಮಕವಾದ ಪ್ರತಿಕ್ರಿಯೆ-ಬೆಂಬಲ ವ್ಯಕ್ತವಾಗುತ್ತಿಲ್ಲ.ಯಾರನ್ನೂ ಕೇಳದೆ..ಯಾರನ್ನೂ ವಿಶ್ವಾಸಕ್ಕೆ ತೆಗೆದು ಕೊಳ್ಳದೆ ಬಂದ್… ಬಂದ್… ಬಂದ್..ಎಂದು ಘೋಷಿಸಿರುವುದಕ್ಕೆ ಬೆಂಬಲಕ್ಕಿಂತ ವಿರೋಧವೇ ಹೆಚ್ಚಾಗಿ ಕಂಡುಬರುತ್ತಿದೆ.ಅದರ ಭಾಗವಾಗಿಯೇ ವಾಟಾಳ್ ಕರೆ ನೀಡಿರುವ ಡಿಸೆಂಬರ್ 31ರ ಕರ್ನಾಟಕ ಬಂದ್ ವಿರೋಧಿಸೊಕ್ಕೆ ಒಂದಷ್ಟು ಕನ್ನಡಪರ ಸಂಘಟನೆಗಳು ಮುಂದಾಗಿವೆ.

ಕನ್ನಡದ ಸ್ವಘೋಷಿತ ಕಾವಲುಗಾರ..ಕನ್ನಡದ ಕಟ್ಟಾಳು ವಾಟಾಳ್ ನಾಗರಾಜ್ ಹಾಗೂ ವಿವಿಧ ಕನ್ನಡಪ ರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಆರಂಭದಲ್ಲೇ ವಿಘ್ನಗಳು ಶುರುವಾಗಲಾರಂಭಿಸಿವೆ ಅನ್ನಿಸುತ್ತೆ..ಯಾರ ಪ್ರಯೋಜನ ಕ್ಕೂ ಬಾರದ ಕರ್ನಾಟಕ ಬಂದ್ ವಿರುದ್ಧ 25ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ಬಂದ್ ವಿರೋಧಿಸಿ ಬೃಹತ್ ಜಾಥಾ ಮಾಡಲು ಮುಂದಾಗಿರುವ ಸುದ್ದಿ ಹೊರಬಿದ್ದಿದೆ.

ಎಲ್ಲರಿಗೂ ಗೊತ್ತಿರುವಂತೆ, ಮಾತೆತ್ತಿದರೆ ಬಂದ್..ಬಂದ್..ಬಂದ್ ಎನ್ನುವ ವಾಟಾಳ್ ನಾಗರಾಜ್ ಹಾಗೂ ಅವರ ಬೆಂಬಲಿಗರಿಗೆ ಮುಖಭಂಗ ಮಾಡಲು ಕನ್ನಡಪರ ಸಂಘಟನೆಗಳೇ ಮುಂದಾಗುತ್ತಿವೆ.ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮ್ಮ ಸುತ್ತಮುತ್ತ ಅಡ್ಡಾಡುವ ಕೆಲವೇ ಕೆಲವು ಝೀ ಹುಜೂರ್ ಸಂಸ್ಕ್ರತಿಯ ಕನ್ನಡಪರ ಹೋರಾಟಗಾರರೊಂದಿಗೆ ಚರ್ಚಿಸಿ ಕರ್ನಾಟಕ ಬಂದ್ ಮಾಡೋ ವಾಟಾಳ್ ಜಾಯಮಾನಕ್ಕೆ ಕನ್ನಡ ಹೋರಾಟಗಾರರೇ ಕೆಂಡಾಮಂಡಲವಾಗಿದ್ದಾರೆ.

ಯಾರನ್ನೂ ಕೇಳದೆ ಕರ್ನಾಟಕ ಬಂದ್ ಗೆ ಕರೆ ನೀಡಿರುವುದು ವಾಟಾಳ್ ಅವರ ಏಕಪಕ್ಷೀಯ ನಿರ್ದಾರ ಎನ್ನೋದು ಬಂದ್ ವಿರೋಧಿಸುತ್ತಿರುವವರ ವಾದ.ಕನ್ನಡಿಗರ ಹಿತಾಸಕ್ತಿ-ಅಸ್ಮಿತೆಯನ್ನು ಕಾಪಾಡದ ವಾಟಾಳ್ ಏಕಪಕ್ಷೀಯ ನಿರ್ದಾರದ ಕರ್ನಾಟಕ ಬಂದ್ ನ್ನು ನಾವ್ಹೇಕೆ ಬೆಂಬಲಿಸಬೇಕು ಎನ್ನೋದು ವಾಟಾಳ್ ಹಾಗೂ ಅವರ ಬೆಂಬಲಿಗರನ್ನು ವಿರೋಧಿಸುತ್ತಿರುವ ಕನ್ನಡಪರ ಹೋರಾಟಗಾರರ ವಾದ.

ಕಳೆದೆರೆಡು ವರ್ಷಗಳಲ್ಲಿ ಕೊರೊನಾದಿಂದ ಜನ ಬೀದಿ ಪಾಲಾಗಿದ್ದಾರೆ.ವಹಿವಾಟುಗಳೆಲ್ಲಾ ಬುಡಮೇ ಲಾಗಿವೆ.ತುತ್ತಿನ ಚೀಲ ತುಂಬಿಸಿಕೊಳ್ಳೊಕ್ಕೆ ಶ್ರಮಿಕರು  ಹರಸಾಹಸ ಪಡುವಂತಾಗಿದೆ.ಇಂಥಾ ಪರಿಸ್ಥಿತಿ ಯಲ್ಲಿ ಬಂದ್ ಎಂದು ಘೋಷಿಸಿರುವ ವಾಟಾಳ್ ಹಾಗೂ ಬೆಂಬಲಿಗರಿಗೆ ಕಾಮನ್ ಸೆನ್ಸ್ ಇದೆಯಾ..? ಕನ್ನಡದ ಬಗ್ಗೆ ನಮಗೂ ಅಭಿಮಾನ ಇದೆ..ಹಾಗಂತ ರಾಜ್ಯವನ್ನು ಬಂದ್ ಮಾಡಿ ಸಾಧಿಸುವುದೇನಿದೆ.. ಹಿಂದಿನ ಅದೆಷ್ಟೋ ಸನ್ನಿವೇಶಗಳೇ ಇದಕ್ಕೆ ಉದಾಹರಣೆಯಾಗಿಲ್ಲವೇ..? ಬಂದ್ ಮಾಡೋ ಜಾಗದಲ್ಲಿ ಮಾಡಿದ್ರೆ ಅದರ ಎಫೆಕ್ಟ್ ಆಗೋ ಜಾಗದಲ್ಲಿ ಆಗುತ್ತೆ..ಅದನ್ನು ಬಿಟ್ಟು ತನ್ನ ಪರ್ಮನೆಂಟ್ ಅಡ್ಡಾ ವುಡ್ ಲ್ಯಾಂಡ್ ಹೊಟೇಲ್ ನಲ್ಲಿ ಕುತ್ಕೊಂಡು ಬಂದ್..ಬಂದ್..ಬಂದ್ ಎಂದು ಘೋಷಿಸುವುದು ಎಷ್ಟು ಸರಿ…ಎನ್ನೋದು ಕನ್ನಡಪರ ಹೋರಾಟಗಾರರ ಪ್ರಶ್ನೆ.

ಕರ್ನಾಟಕ ಬಂದ್ ನ ಔಚಿತ್ಯ ಪ್ರಶ್ನಿಸಿ ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರಿಗೆ ಪತ್ರ ಬರೆದಿರುವ ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್
ಕರ್ನಾಟಕ ಬಂದ್ ನ ಔಚಿತ್ಯ ಪ್ರಶ್ನಿಸಿ ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರಿಗೆ ಪತ್ರ ಬರೆದಿರುವ ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್
ಮಹಾರಾಷ್ಟ್ರದಲ್ಲಿ ಮರಾಠಿಗರಿಂದ ಹಲ್ಲೆಗೊಳಗಾಗಿ ಕರ್ನಾಟಕದಲ್ಲಿ ವಾಟಾಳ್ ನಾಗರಾಜ್ ಬೆಂಬಲಿಗರಿಂದ ಹಲ್ಲೆಗೊಳಗಾದ ಸಾಮಾಜಿಕ ಕಾರ್ಯಕರ್ತ ಶಿವಕುಮಾರ ನಾಯ್ಕ
ಮಹಾರಾಷ್ಟ್ರದಲ್ಲಿ ಮರಾಠಿಗರಿಂದ ಹಲ್ಲೆಗೊಳಗಾಗಿ ಕರ್ನಾಟಕದಲ್ಲಿ ವಾಟಾಳ್ ನಾಗರಾಜ್ ಬೆಂಬಲಿಗ ರಿಂದ ಹಲ್ಲೆಗೊಳಗಾದ ಸಾಮಾಜಿಕ ಕಾರ್ಯಕರ್ತ ಶಿವಕುಮಾರ ನಾಯ್ಕ

ಇತ್ತೀಚೆಗೆ ಪೇಲವ ಎನಿಸುತ್ತಿರುವ..ಢಾಳು ಢಾಳಾಗಿ ಕಾಣಿಸುತ್ತಿರುವ ವಾಟಾಳ್ ಅವರ ಹೋರಾಟಗಳು ಕೇವಲ ಶೋ ಅಪ್ ಎನಿಸುತ್ತಿವೆ.ಇಂಥಾ  ಹೋರಾಟಗಳಿಗೆ ಸೀಮಿತವಾಗಿರುವ ವಾಟಾಳ್ ನಾಗರಾಜ್ ಕನ್ನಡಪರ ಸಂಘಟನೆ ಗಳ ನಡುವೆ ಸಮನ್ವಯವನ್ನೇ ಕಾಯ್ದುಕೊಳ್ಳುತ್ತಿಲ್ಲ..ಕರವೇ ನಾರಾಯಣ ಗೌಡ, ಜಯಕರ್ನಾಟಕ ಸಂಘಟನೆಗಳು ಸೇರಿದಂತೆ ಕನ್ನಡ ನಾಡು-ನುಡಿ-ಜಲ-ಗಡಿಗೆ ಹೋರಾಟ ಮಾಡುತ್ತಾ ಬಂದಿರುವ ಅದೆಷ್ಟೋ ಸಂಘಟನೆಗಳನ್ನು ವಿಶ್ವಾಸಕ್ಕೆ ಪಡೆದಿಲ್ಲ..ಹೋರಾಟ ರೂಪಿಸುವ ಮುನ್ನ,ಸಮಾಲೋಚಿ ಸಬೇಕಿತ್ತು.ಅದನ್ನು ಮಾಡಿಯೇ ಇಲ್ಲ..ಬಂದ್ ಬೆಂಬಲಿಸಿ ಎಂದರೆ ಅರ್ಥವೇನು..?

ಒಂದ್ವೇಳೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದೇ ಆದಲ್ಲಿಈ ಬಾರಿಯ ಕರ್ನಾಟಕ ಬಂದ್ ಸಂಘಟನಾತ್ಮಕವಾಗಿ ಪರಿಣಾಮಕಾರಿಯಾಗಿ ನಡೆಯೊಕ್ಕೆ ಸಾಧ್ಯ..ಅದನ್ನು ಬಿಟ್ಟು ಬಂದ್ ಗೆ ಕರೆ ಕೊಡುವುದು ನನ್ನ ಆಜನ್ಮ ಸಿದ್ದ ಹಕ್ಕು ಎನ್ನುವಂತೆ ಭಾವಿಸಿರುವುದಕ್ಕೆ ನಾವೇಕೆ ಮಣೆ ಹಾಕಬೇಕೆನ್ನುವ ಮಟ್ಟಕ್ಕೆ ಬಂದು ನಿಂತಿರುವ ಕನ್ನಡಪರ ಹೋರಾಟಗಾರರು, ಬಂದ್ ಹಿಂದೆ ಅಡಗಿದೆ ಎನ್ನಲಾಗುತ್ತಿರುವ ವಾಟಾಳ್ ಅಂಡ್ ಟೀಮ್ ನ ಹಿತಾಸಕ್ತಿಯನ್ನು ಸಾರ್ವಜನಿಕರಿಗೆ ತಿಳಿಸೊಕ್ಕೆ ತಮ್ಮದೇ ಆದ ಹೋರಾಟ ರೂಪಿಸೊಕ್ಕೆ ಮುಂದಾಗಿದ್ದಾರೆನ್ನು ಸುದ್ದಿ ಕೇಳಿಬರುತ್ತಿದೆ.

ಕನ್ನಡದ ಕಟ್ಟಾಳು ವಾಟಾಳ್ ನಾಗರಾಜ್ ಹಾಗೂ ತಂಡದವರ ವಿರುದ್ಧದ ಹೋರಾಟಕ್ಕೆ 25ಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು ಒಂದಾಗಲಿವೆಯಂತೆ. ಇದು  ವಾಟಾಳ್ ಹಾಗೂ ತಂಡಕ್ಕೆ ದೊಡ್ಡ ಹಿನ್ನಡೆಯಾದರೂ ಆಶ್ವರ್ಯವಿಲ್ಲ.ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗೂಡಿಸಿಕೊಂಡು ಹೋಗಿದ್ದೇ ಆದಲ್ಲಿ ವಾಟಾಳ್ ವ್ಯಕ್ತಿತ್ವ-ಮಾತಿಗೂ ಬೆಲೆ ಬರುತ್ತಿತ್ತು. ಹೋರಾಟವೂ ಪರಿಣಾಮಕಾರಿಯಾಗುತ್ತಿತ್ತೇನೋ..ತನ್ನ ಕೋಳಿ ಕೂಗಿದರೇನೆ ಮಾತ್ರ ಬೆಳಕಾಗೋದು ಎನ್ನುವ ಮನಸ್ಥಿತಿಯಲ್ಲಿರುವ ವಾಟಾಳ್ ಗೆ ಇದಕ್ಕಿಂತ ದೊಡ್ಡ ಅವಮಾನ ಮತ್ತೊಂದು ಬೇಕಾ..?!

Spread the love

Related Articles

Leave a Reply

Your email address will not be published.

Back to top button
Flash News