Breakinglock downMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆರಾಜಕೀಯವಿಚಿತ್ರ-ವಿಶೇಷ

“SINGHAM”BRIBE ALLEGATION OVER…NOW LAND ENCHROCHMENT..?! 55 ಲಕ್ಷ ಲಂಚವಾಯ್ತು..ಈಗ “ಸಿಂಗಂ” ವಿರುದ್ದ 78 ಎಕರೆ ದಲಿತ ಭೂಮಿ ಗುಳುಂ ಆರೋಪ..?!

ಬೆಂಗಳೂರು:ಸಿಂಗಂ ಖ್ಯಾತಿಯ ರವಿ.ಡಿ ಚನ್ನಣ್ಣನವರ್ ಅವರ ಬಂಡವಾಳ ಒಂದೊಂದಾಗಿಯೇ ಬಯಲಾಗುತ್ತಿದೆ.ಅಧಿಕಾರ ದುರ್ಬಳಕೆ ಮಾಡಿಕೊಂಡು ದುಂಡಾವರ್ತನೆ ನಡೆಸುತ್ತಿರುವ ಆರೋಪಗಳ ಬೆನ್ನಲ್ಲೇ ಮತ್ತೊಂದು ಗಂಭೀರ ಆಪಾದನೆ ರವಿ ಡಿ ಚೆನ್ನಣ್ಣನವರ್ ವಿರುದ್ಧ ಕೇಳಿಬಂದಿದೆ..ಅದು ಸರ್ಕಾರಿ ಭೂಮಿಗೆ ಬೇಲಿ ಸುತ್ತಿರುವಂಥ ಭೂಕಬಳಿಕೆ ಆಪಾದನೆ..

ಅಂದ್ಹಾಗೆ ಅವರು ನುಂಗಿ ಹಾಕಿದ್ದಾರೆನ್ನಲಾಗುತ್ತಿರುವ ಭೂಮಿ ಪ್ರಮಾಣ ಎಷ್ಟು ಗೊತ್ತಾ..?ಬರೋಬ್ಬರಿ 78 ಎಕರೆ..ಇಂತದ್ದೊಂದು ಸ್ಪೋಟಕ ಮಾಹಿತಿಯನ್ನು ರೈತ ಮುಖಂಡರೋರ್ವರು ಸಾಮಾಜಿಕ ಜಾಲತಾಣದಲ್ಲಿ ಹೊರಹಾಕಿದ್ದಾರೆ..ಇದು ಸತ್ಯವೇ ಆಗಿದ್ದಲ್ಲಿ ರವಿ.ಡಿ.ಚನ್ನಣ್ಣನವರ್ ಸರ್ಕಾರಿ ಹುದ್ದೆ ಹಾಗೂ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಗುವುದರಲ್ಲಿ ಅನುಮಾನವೇ ಇಲ್ಲ..

ಖಡಕ್ ಪೊಲೀಸ್ ಅಧಿಕಾರಿಯ ಸಾಹಸಗಾಥೆಯನ್ನು ಆಧರಿಸಿದ ಸಿನೆಮಾ ತಮಿಳಿನಲ್ಲಿ ಯಾವಾಗ ಬಂತೋ..ಸಂಚಲನ ಮೂಡಿಸ್ತೋ ಆಗಿನಿಂದ ಯಾವುದೇ ಪೊಲೀಸ್ ಶೋ ಅಪ್ ಮಾಡಿದ್ರೂ ಅವರನ್ನು ಸಿಂಗಂ ಹೆಸರಿನಲ್ಲಿ ಹಾಡಿ ಹೊಗಳುವಂಥ ಕೆಟ್ಟ ಸಂಪ್ರದಾಯವೂ ಬೆಳೀತಾ ಹೋಯ್ತು.ಕೆಲಸ ಮಾಡದಿದ್ದರೂ ಕೇವಲ ಮಾತಿನಲ್ಲೇ ಮಂಟಪ ಕಟ್ಟುವಂತವರೂ ರಾತ್ರೋರಾತ್ರಿ ಹೀರೋಗಳಾಗಿ ಹೋದ್ರು..

ರವಿ ಚನ್ನಣ್ಣನವರ್ ಬಗ್ಗೆ ಇತ್ತೀಚೆಗೆ ಕೇಳಿಬರಲಾರಂಭಿಸಿದ ವರ್ಣರಂಜಿತ ಕಥೆಗಳನ್ನು ಗಮನಿಸಿದ್ರೆ ಈ ಮಹಾನುಭಾವನ ವಿಷಯದಲ್ಲಿ ನಮ್ಮ ಕರ್ನಾಟಕದ ಜನತೆ ಹಾಗು ಮಾದ್ಯಮಗಳು ಎಡವಿಬಿಟ್ಟವಾ ಎನಿಸದೆ ಇರೊಲ್ಲ..ಆದ್ರೆ ಅಂತದ್ದೊಂದು ಹೊಗಳಿಕೆಗೆ ಅವರು ನಿಜಕ್ಕೂ ಯೋಗ್ಯರಾ ಎನ್ನುವುದನ್ನು ಅರ್ಥೈಸಿಕೊಳ್ಳದೆ ಹೈಪ್ ಕೊಟ್ಟಂಥ ಬೆಳವಣಿಗೆಗಳಿವೆಯೆಲ್ಲಾ ಅದಂತೂ, ತೆರೆ ಮರೆಯಲ್ಲಿದ್ದುಕೊಂಡು ಯಾವುದೇ ಪ್ರಚಾರ ಬಯಸದೇ ಇಲಾಖೆ ಕೊಡೋ ಸಂಬಳಕ್ಕೆ ನೀಯತ್ತಾಗಿದ್ದುಕೊಂಡು ಕೆಲಸ ಮಾಡುವ ಅದೆಷ್ಟೋ ದಕ್ಷ-ನಿಷ್ಟಾವಂತ-ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಿಗೆ ಬೇಸರ ತರಿಸಿದ್ದು ಮಾತ್ರ ಸತ್ಯ.

ರವಿ ಚನ್ನಣ್ಣನವರ್ ಭೂ ಕಬಳಿಕೆ ಬಗ್ಗೆ ರೈತ ಮುಖಂಡ ಕುಮಾರಸ್ವಾಮಿ ಹಾಗೂ ಬೆಂಗಳೂರಿನ ಪ್ರಸಿದ್ಧ ವಕೀಲ ಜಗದೀಶ್ ನಡುವೆ ಸಂಭಾಷಣೆಯ ಚಿತ್ರ
ರವಿ ಚನ್ನಣ್ಣನವರ್ ಭೂ ಕಬಳಿಕೆ ಬಗ್ಗೆ ರೈತ ಮುಖಂಡ ಕುಮಾರಸ್ವಾಮಿ ಹಾಗೂ ಬೆಂಗಳೂರಿನ ಪ್ರಸಿದ್ಧ ವಕೀಲ ಜಗದೀಶ್ ನಡುವೆ ಸಂಭಾಷಣೆಯ ಚಿತ್ರ

ಚನ್ನಣ್ಣನವರ್ ವಿರುದ್ಧ ಇತ್ತೀಚೆಗೆ  55 ಲಕ್ಷ ಲಂಚದ ಆರೋಪ ಕೇಳಿಬಂದ ಮೇಲಂತೂ ಚನ್ನಣ್ಣನವರ್ ಪರಿಸ್ತಿತಿ ವಿಲ ವಿಲ ಒದ್ದಾಡುತ್ತಿರುವ ಮೀನಿನಂತಾಗಿದೆ.ತನ್ನ  ಬಹುದೊಡ್ಡ ಫ್ಯಾನ್ ಫಾಲೋವರ್ಸ್ ನಂಬಿಕೆ ಕಳೆದುಕೊಳ್ಳಬೇಕಾದ ಸ್ತಿತಿ ಇಂದು ಅವರದು.ತನಿಖೆ ನಡೆಯಲಿ,ಸತ್ಯಾಂಶ ಬಯಲಾಗಲಿ,,.ನಾನೇಕೆ ಹೆದರಬೇಕು ಎಂದುಕೊಂಡು ತನ್ನ ಬಗೆಗಿನ ವರದಿ ಮೇಲೆ ಪ್ರತಿಬಂಧಕಾಜ್ಞೆ ತಾರದೆ ಇದ್ದಿದ್ದರೆ ಅವರಲ್ಲಿನ್ನೂ ಸಾಚಾತನ ಉಳಿದಿದೆ ಎಂದುಕೊಳ್ಳಬಹುದಿತ್ತೇನೋ.. ಆದರೆ ಪ್ರತಿಬಂಧಕಾಜ್ಞೆ ತರುವ ಮೂಲಕ ಜನತೆ  ತನ್ನನ್ನು ಮತ್ತಷ್ಟು ಅನುಮಾನದಿಂದ ದೃಷ್ಟಿಯಿಂದ  ನೋಡುವಂತೆ ಮಾಡಿಕೊಂಡಿದ್ದಾರೆನ್ನುವ ವಾತಾವರಣ ನಿರ್ಮಾಣವಾಗಿದೆ.(ತನ್ನ ವಿರುದ್ಧ ಯಾವುದೇ ಮಾನಹಾನಿ ವರದಿ ಪ್ರಕಟಿಸದಂತೆ ಈಗಾಗಲೇ ರವಿ ಚನ್ನಣ್ಣನವರ್ ಪ್ರತಿಬಂಧಕಾಜ್ಞೆ ತಂದಿದ್ದಾರೆ)

55 ಲಕ್ಷ ಲಂಚದ ಆರೋಪದಿಂದ ಮುಜುಗರ ಅನುಭವಿಸುತ್ತಿರುವಾಗಲೇ ರವಿ ಡಿ.ಚನ್ನಣ್ಣನವರ್ ವಿರುದ್ಧ ಸರ್ಕಾರಿ ಭೂಮಿ ಕಬಳಿಕೆಯ ಗುರುತರ ಆಪಾದನೆ ಕೇಳಿಬಂದಿದೆ.ಮೈಸೂರಿನ ಹೆಗ್ಗಡದೇವನಕೋಟೆ( ಎಚ್.ಡಿ ಕೋಟೆ)ಯ ಮಾದಾಪುರ ಗ್ರಾಮದ ರೈತ ಮುಖಂಡ ಎಂ.ಡಿ ಕುಮಾರಸ್ವಾಮಿ ದಲಿತರಿಗೆ ಸರ್ಕಾರದಿಂದ ಮಂಜೂರಾದ ಜಮೀನನ್ನು ರವಿ.ಡಿ ಚನ್ನಣ್ಣನವರ್ ಕಬಳಿಸಿ ಫಲವತ್ತಾದ ತೋಟ ನಿರ್ಮಿಸಿದ್ದಾರೆ ಎನ್ನುವ ಆಪಾದನೆಯ ಬಾಂಬ್ ಎಸೆದಿದ್ದಾರೆ.ಇದನ್ನು ಕೇಳಿ ಕರ್ನಾಟಕದ ಜನತೆ ಹೌಹಾರಿದೆ.

ಬೆಂಗಳೂರಿನ ವಕೀಲ ಜಗದೀಶ್
ಬೆಂಗಳೂರಿನ ವಕೀಲ ಜಗದೀಶ್

ರವಿ ಡಿ.ಚನ್ನಣ್ಣನವರ್ ಬಂಡವಾಳ ಬಯಲು ಮಾಡುತ್ತೇನೆಂದು ಹೊರಟಿರುವ ಬೆಂಗಳೂರಿನ ವಕೀಲ ಜಗದೀಶ್ ಅವರೊಂದಿಗೆ ಮಾತನಾಡುವ ವೇಳೆ ಮೊಬೈಲ್ ಸಂಭಾಷಣೆಯಲ್ಲಿ ಕುಮಾರಸ್ವಾಮಿ ಇಂತದ್ದೊಂದು ಸ್ಪೋಟಕ ಮಾಹಿತಿ ಹೊರ ಹಾಕಿದ್ದಾರೆ.

ಕುಮಾರಸ್ವಾಮಿ ಅವರ ಆಪಾದನೆಯ ಸಾರಾಂಶವೇನು..? ರೈತ ಮುಖಂಡ ಎಂಡಿ ಕುಮಾರಸ್ವಾಮಿ ಅವರ ಆರೋಪದ ಪ್ರಕಾರ ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲೂಕಿನ ಮಾದಾಪುರ ಗ್ರಾಮದಲ್ಲಿ ದಲಿತನೋರ್ವನಿಗೆ  78 ಎಕರೆ ಜಮೀನು ಮಂಜೂರಾಗಿತ್ತಂತೆ.ಈ ಜಮೀನನ್ನು ಆಂಧ್ರಪ್ರದೇಶ ಮೂಲದ ನಾರಾಯಣ ರಾವ್ ಎನ್ನುವ ಗಣಿ ಉದ್ಯಮಿ 1995 ರಲ್ಲಿ ಗಣಿಗಾರಿಕೆಗಾಗಿ ಖರೀದಿಸಿದ್ದರಂತೆ.ಪಿಟಿಸಿಎಲ್ ಆಕ್ಟ್ ಗೆ ಒಳಪಡುವ   ಈ ಜಮೀನನ್ನು ಖರೀದಿಸಿದ ನಾರಾಯಣರಾವ್ ರವಿಬಾಬು ಎನ್ನುವವರಿಗೆ ಜಿಪಿಎ ಮಾಡಿಸಿ 2005 ರಲ್ಲಿ ತೀರಿ ಹೋದರಂತೆ.ಯಾವಾಗ ಜಿಪಿಎ ಮಾಡಿಸಿದವರು ಸತ್ತರೆ ಅವರ ಹೆಸರಲ್ಲಿನಲ್ಲಿರುವ ಜಿಪಿಎನೂ ನಿಷ್ಪ್ರಯೋಜಕವಂತೆ. ವಾರಸುದಾರರಿಲ್ಲದೆ ಬಿದ್ದಿದ್ದ 78 ಎಕರೆ ಜಮೀನಿನ ಮೇಲೆ ಕಣ್ಣಾಕಿದವರೇ ಈ ರವಿ ಡಿ.ಚನ್ನಣ್ಣನವರ್ ಎನ್ನುವುದು ಕುಮಾರಸ್ವಾಮಿ ಅವರ ಗಂಭೀರ ಆರೋಪ. ಸರ್ಕಾರಿ ಬೀಳು ಜಮೀನು 36 ಎಕರೆ ಸೇರಿದಂತೆ ಒಟ್ಟು 87 ಎಕರೆ ಜಮೀನಿಗೆ ಅಕ್ರಮವಾಗಿ ಬೇಲಿ ಸುತ್ತಿರುವ ಆರೋಪಕ್ಕೆ ರವಿ ಡಿ.ಚನ್ನಣ್ಣನವರ್ ತುತ್ತಾಗಿದ್ದಾರೆ.

ಮೈಸೂರಿಂದ 45 ಕಿಲೋಮೀಟರ್ ಹಾಗೂ ಎಚ್ ಡಿ ಕೋಟೆಯಿಂದ 4 ಕಿಲೋಮೀಟರ್ ದೂರದಲ್ಲಿರುವ ಮಾದಾಪುರ ಗ್ರಾಮದಲ್ಲಿರುವ ವಿಶಾಲವಾದ ತೋಟಕ್ಕೆ 11 ಕೆವಿ ಸಾಮರ್ಥ್ಯದ ವಿದ್ಯುತ್ ತಂತಿ ಬೇಲಿಯನ್ನು ರವಿ ಡಿ.ಚನ್ನಣ್ಣನವರ್ ಅಳವಡಿಸಿದ್ದಾರಂತೆ.ಜನಸಾಮಾನ್ಯರು ಸಲೀಸಾಗಿ ತೋಟ ಪ್ರವೇಶಿಸದಂತೆ ಬಿಗಿ ಬಂದೋಬಸ್ತ್ ಕೂಡ ಮಾಡಿದ್ದಾರಂತೆ. ತನ್ನ ಸಹೋದರನನ್ನೇ ತೋಟ ನೋಡಿಕೊಳ್ಳಲು ಬಿಟ್ಟಿದ್ದು, ರವಿ ಡಿ.ಚನ್ನಣ್ಣನವರ್ ಕದ್ದುಮುಚ್ಚಿ ನಡು ರಾತ್ರಿ ತೋಟಕ್ಕೆ ಬಂದು ಮಧ್ಯರಾತ್ರಿ ಯಾರಿಗೂ ತಿಳಿಯದಂತೆ ವಾಪಸ್ಸಾಗುತ್ತಿದ್ದಾರೆ..ತೋಟಕ್ಕೆ ಬರೋ ಹೋಗೋರ ಬಗ್ಗೆ ಮಾಹಿತಿ ಪಡೆಯಲು 78 ಎಕೆರೆ ವ್ಯಾಪ್ತಿಗೂ ಸಿಸಿಟಿವಿಯನ್ನು ಅಳವಡಿಸಿದ್ದಾರಂತೆ.

ರವಿ ಡಿ.ಚನ್ನಣ್ಣನವರ್ ಅವರ ಭೂ ಕಬಳಿಕೆ ಬಗ್ಗೆ ಕೆಂಡಾಮಂಡಲವಾಗಿರುವ ಗ್ರಾಮಸ್ಥರು ಈ ಖಡಕ್ ಐಪಿಎಸ್ ತೋಟದ ಮೇಲೆ ಹೊಂದಿರಬಹುದಾದ ಮಾಲೀಕತ್ವದ ಮಾಹಿತಿ ಪಡೆಯೊಕ್ಕೆ ಆರ್ ಟಿ ಐ ನಲ್ಲೂ ಅರ್ಜಿ ಹಾಕಿದ್ದಾರಂತೆ.ದುರಂತ ಎಂದರೆ ರವಿ ಡಿ.ಚನ್ನಣ್ಣನವರ್ ಅವರ ಚಮಚಾಗಿರಿ ಮಾಡಿಕೊಂಡಿರುವ ಒಂದಷ್ಟು ಅಧಿಕಾರಿಗಳು ಮಾಹಿತಿಯನ್ನು ನೀಡದೆ ಸತಾಯಿಸುತ್ತಿದ್ದಾರೆನ್ನುವುದು ಕುಮಾರಸ್ವಾಮಿ ಅವರ ಆರೋಪ.

ರವಿ ಚನ್ನಣ್ಣನವರ್  ವಿರುದ್ಧ ಸಿಡಿದೆದ್ದಿರುವ  ರೈತ ಮುಖಂಡ ಕುಮಾರಸ್ವಾಮಿ ಅವರ ಬೆಂಬಲಕ್ಕೆ ನಿಂತಿರುವ ವಕೀಲ ಜಗದೀಶ್ ಖಡಕ್ ಎಸ್ಪಿಯ ಅಸಲೀಯತ್ತನ್ನು ಬಯಲು ಮಾಡಿಯೇ ತೀರಲು ನಿರ್ದರಿಸಿದ್ದಾರಂತೆ. ಮಾದಾಪುರ ಗ್ರಾಮಕ್ಕೇನೆ ಇನ್ನೆರೆಡು ದಿನಗಳಲ್ಲಿ ಖುದ್ದು ಭೇಟಿ ಕೊಟ್ಟು ಕುಮಾರಸ್ವಾಮಿ ಅವರ ಬಳಿ ಇದೆ ಎನ್ನಲಾಗುವ ಸ್ಪೋಟಕ ಮಾಹಿತಿ ಹಾಗೂ ದಾಖಲೆಗಳನ್ನು ಉಲ್ಲೇಖಿಸಿ ರವಿ ಡಿ  ಚನ್ನಣ್ಣನವರ್ ಅವರ ಅಸಲೀಯತ್ತನ್ನು ರಾಜ್ಯದ ಜನತೆ ಮುಂದಿಡುವುದಾಗಿ ಮೊಬೈಲ್ ಸಂಭಾಷಣೆ ವೇಳೆ ಕುಮಾರಸ್ವಾಮಿ ಅವರಿಗೆ ಭರವಸೆ ಇತ್ತಿದ್ದಾರಂತೆ.ಅಷ್ಟೇ ಅಲ್ಲ. ರವಿ ಚನ್ನಣ್ಣನವರ್  ಮೇಲಿನ ಕುರುಡು ಅಭಿಮಾನಕ್ಕೋ,ಪವರ್ ಗೋ ಹೆದರಿ ಅಕ್ರಮಕ್ಕೆ ಸಾಥ್ ನೀಡಿರುವ ತಾಲೂಕು ಮಟ್ಟದ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಪಿಸಿಆರ್ ದಾಖಲಿಸುವುದಾಗಿಯೂ ವಕೀಲ ಜಗದೀಶ್ ಹೇಳಿದ್ದಾರೆ.

ರೈತ ಮುಖಂಡ ಕುಮಾರಸ್ವಾಮಿ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಆರೋಪಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.ರವಿ ಚನ್ನಣ್ಣನವರ್ ಮಾಡಿರೋ ಬೃಹತ್ ಭೂ ಕಬಳಿಕೆಗೆ ತಕ್ಕಶಾಸ್ತಿಯಾಗಬೇಕೆಂದು ಮನವಿ ಮಾಡಿದ್ದಾರೆ.ಸಾಕ್ಷ್ಯಗಳು ಇದ್ದಿದ್ದೇ ಆದಲ್ಲಿ,ಅವು ರವಿ ಚನ್ನಣ್ಣನವರ್   ಮಾಡಿದ್ದಾರೆನ್ನಲಾಗುತ್ತಿರುವ ಅಕ್ರಮವನ್ನು ಪುಷ್ಟಿಕರಿಸುವಂತಿದ್ದರೆ ರವಿ ಚನ್ನಣ್ಣನವರ್ ಇಷ್ಟು ವರ್ಷ ಜತನ ಹಾಗೂ ಅಪ್ಯಾಯಮಾನತೆಯಿಂದ ಕಾಯ್ದುಕೊಂಡು ಬಂದಿದ್ದ  ವೃತ್ತಿ-ವ್ಯಕ್ತಿತ್ವ-ಘನತೆ-ಗೌರವಕ್ಕೆ ಧಕ್ಕೆ ಬರೋದರಲ್ಲಿ ಅನುಮಾನವೇ ಇಲ್ಲ..

Spread the love

Related Articles

Leave a Reply

Your email address will not be published.

Back to top button
Flash News