NO JOB NOW….?! LEGAL CELL SHOCK TO BMTC EMPLOYEES..!! “ಕೆಲಸದ ನಿರೀಕ್ಷೆ” ಯಲ್ಲಿದ್ದರೆ ಆ “ಆಸೆ” ಬಿಟ್ಟುಬಿಡಿ”-ಸಾರಿಗೆ ಕಾರ್ಮಿಕರಿಗೆ ಲೀಗಲ್ ಸೆಲ್ ಶಾಕ್…..

2 ಷರತ್ತಿಗೆ ಒಪ್ಪಿದರಷ್ಟೇ ಕೆಲಸ...ಹೊಸದಾಗಿಯೇ ಕೆಲಸಕ್ಕೆ ಸೇರಿ..ಮುಷ್ಕರ-ಸ್ಕ್ರೈಕ್ ಪಾಲ್ಗೊಳ್ಳುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಡಿ.

0

ಬೆಂಗಳೂರು:ಸಾರಿಗೆ ಕಾರ್ಮಿಕರಿಗೆ ಸಧ್ಯಕ್ಕೆ ಕೆಲಸ ಸಿಗೋ ಅವಕಾಶ ಕಡಿಮೆನೇ ಅನ್ಸುತ್ತೆ..ಯಾಕಂದರೆ ಅಂತದ್ದೊಂದು ಸಲಹೆ ಯನ್ನು ಬಿಎಂಟಿಸಿ ಲೀಗಲ್ ಸೆಲ್ ಕೊಟ್ಟಿದೆ.ಆಡಳಿತ ಮಂಡಳಿ ತಮಗೆ ಮೋಸ ಮಾಡಿರಬಹುದು…ಆದ್ರೆ ಲೀಗಲ್ ಸೆಲ್ ನಲ್ಲಿರೋರು ನಮ್ಮ ಕಷ್ಟಗಳನ್ನು ಅರಿತು ಸಮಂಜಸವಾಗುವಂಥ ಸಲಹೆಯನ್ನು ಕೊಡಬಹುದು ಎಂದು ಅತಿಯಾದ ನಂಬಿಕೆಯಲ್ಲಿದ್ದ ಸಾರಿಗೆ ಕಾರ್ಮಿಕರಿಗೆ ಭಾರೀ ನಿರಾಶೆಯನ್ನೇ ಮಾಡಿದೆ.ಆಡಳಿತ ಮಂಡಳಿಯ ಷರತ್ತುಗಳನ್ನು ಒಪ್ಪಿಕೊಳ್ಳದೆ ಬೇರೆ ವಿಧಿಯಿಲ್ಲ ಎನ್ನುವಂಥ ಅಸಹಾಯಕ ಸ್ತಿತಿಯನ್ನು ಲೀಗಲ್ ಸೆಲ್ ಕಾರ್ಮಿಕರ ಮುಂದೆ ಸೃಷ್ಟಿಸಿಬಿಟ್ಟಿದೆ.

ಸಾರಿಗೆ ಸಚಿವರು ಹೇಳಿದಂತೆ ಕೆಲಸ ಸಿಕ್ಕುಬಿಡುತ್ತೆ..ನಮ್ಮ ಜೀವನಗಳು ಹಸನಾಗುತ್ತವೆ..ಮೊದಲಿನಂತೆ ನಮ್ಮ ಬದುಕುಗಳಲ್ಲಿ ನಗು-ನೆಮ್ಮದಿ-ಮಂದಹಾಸ ಮೂಡುತ್ತೆ ಎನ್ನುವ ನಂಬಿಕೆಯನ್ನೇನಾದ್ರೂ ವಜಾಗೊಂಡು ಕೆಲಸದ ನಿರೀಕ್ಷೆಯಲ್ಲಿರುವ 2690 ಕಾರ್ಮಿಕರು ಇಟ್ಟುಕೊಂಡಿದ್ದರೆ ಆ ಆಸೆಗೆ ಎಳ್ಳುನೀರು ಬಿಡೋದು ಸೂಕ್ತ ಎನಿಸುತ್ತದೆ.ಆ ಆಸೆ ಸಧ್ಯಕ್ಕೆ ಕನ್ನಡಿಯೊಳಗಿನ ಗಂಟಾ ಗೇ ಉಳಿಯುವ ಅವಕಾಶಗಳು ಹೆಚ್ಚಿವೆ..ಸಾರಿಗೆ ನಿಗಮಗಳ ಆಡಳಿತ ಮಂಡಳಿ ಯಾವ ರೀತಿಯ ಸಲಹೆ-ಅಭಿಪ್ರಾಯವನ್ನು ನೀಡಿತ್ತೋ ಅದೇ ಅಭಿಪ್ರಾಯವನ್ನು ಕಾನೂನು ಕೋಶ ವ್ಯಕ್ತಪಡಿಸಿದೆ.ಆಡಳಿತ ಮಂಡಳಿಯ ಷರತ್ತುಗಳಿಗೆ ಒಪ್ಪಿಕೊಂಡರೇನೆ ನೌಕರಿ..ಇಲ್ಲವಾದ್ರೆ ಅದೂ ಇಲ್ಲ ಎನ್ನುವ ಸಂದೇಶವನ್ನು ಸೂಚ್ಯವಾಗಿ ರವಾನಿಸಿದೆ.

ಕೆಲಸ ಬೇಕಾದ್ರೆ  2 ಷರತ್ತು ಗಳನ್ನು ಒಪ್ಪಿಕೊಳ್ಳಲೇಬೇಕು. ಕಾನೂನಾತ್ಮಕ ಇತ್ಯರ್ಥಕ್ಕೆ ಸಲಹೆ ಕೊಡುವಂತೆ ಕಳುಹಿಸಿದ್ದ ಪ್ರಸ್ತಾವನೆಗೆ ಲೀಗಲ್ ಸೆಲ್ ಇಂತದ್ದೊಂದು ಓಪಿನಿಯನ್ ರವಾನಿಸಿದೆ.ನೀವು ಹೆಚ್ಚು ಸಮಯದಿಂದ ದುಡಿದು ಸೀನಿಯಾರಿಟಿ ಪಡೆದುಕೊಂಡಿದ್ರೂ ಹೊಸದಾಗಿಯೇ ಕೆಲಸಕ್ಕೆ ನಿಯೋಜನೆಗೊಳ್ಳಬೇಕು..ಮುಷ್ಕರದ ಪಾಲ್ಗೊಳ್ಳುವ ಇರಾದೆಯಿದ್ದಲ್ಲಿ ಅದಕ್ಕೆ ಎಳ್ಳುನೀರು ಬಿಟ್ಟುಬಿಡಿ ಎನ್ನುವ ಎರಡು ಪ್ರಮುಖ ಷರತ್ತುಗಳನ್ನು ಲೀಗಲ್ ಸೆಲ್ ಕೂಡ ಎತ್ತಿಹಿಡಿದಿದೆ. ಕೆಲಸ ಕಳೆದುಕೊಂಡು ಅತಂತ್ರವಾಗಿರುವ ಕಾರ್ಮಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮುಷ್ಕರ ಮಾಡಿ ಕೆಲಸ ಕಳೆದುಕೊಂಡವರಿಗೆ ಸರ್ಕಾರದಿಂದ ಮತ್ತೆ ಕೆಲಸದ ಭರವಸೆ ಸಿಕ್ಕಿತ್ತು.ಸಚಿವ ಶ್ರೀರಾಮುಲು ಕೂಡ ಅನೇಕ ಸಭೆಗಳಲ್ಲಿ ಮೊನ್ನೆ ಮೊನ್ನೆ ತಾನೇ ನಡೆದ ಬೆಳಗಾವಿ ಅಧಿವೇಶನದಲ್ಲೂ ಈ ಮಾತನ್ನು ಪುನರುಚ್ಛರಿಸಿದ್ದರು.ಆದ್ರೆ ಸಚಿವ್ರ ಮಾತಿಗೂ ಕ್ಯಾರೆ ಎನ್ನದ ಅಧಿಕಾರಿಗಳು ಕೆಲಸ ಕಳೆದುಕೊಂಡವರಿಗೆ ಯಾವುದೇ ಕಾರಣಕ್ಕೂ ರೀ ಎಂಟ್ರಿ ಸಾಧ್ಯವಿಲ್ಲ ಎಂದ್ಹೇಳಿ ಟೆಕ್ನಿಕಲ್ಲಾಗಿ ಕೊಕ್ಕೆ ಹಾಕಿದ್ರು.ಅದನ್ನೇ ಲೀಗಲ್ ಸೆಲ್ ಕೂಡ ಎತ್ತಿಹಿಡಿದಿದೆ. ಆಡಳಿತ ಮಂಡಳಿ ಕೊಟ್ಟಿದ್ದ ಸಲಹೆಯನ್ನೇ ಪುಷ್ಪೀಕರಿಸುವಂತ ಅಭಿಪ್ರಾಯ ನೀಡಿ ಕೈತೊಳೆದುಕೊಂಡಿದೆ.

ಲೀಗಲ್ ಸೆಲ್ ನಲ್ಲಿರುವ  ಮಹಾನುಭಾವರು ಕೆಲಸ ಕಳೆದುಕೊಂಡು ಮರು ನಿಯೋಜನೆ ನಿರೀಕ್ಷೆಯಲ್ಲಿ ಇರುವ ಕಾರ್ಮಿಕರಿಗೆ ಶಾಕ್ ನೀಡುವಂಥ ಓಪಿನಿಯನ್ ಕೊಟ್ಟಿದ್ದಾರೆ.2 ಷರತ್ತುಗಳನ್ನೇ ರಿಪೀಟ್ ಮಾಡಿದ್ದಾರೆ.ಯಾರೇ ಕೆಲಸಕ್ಕೆ  ನಿಯೋಜನೆಗೊಂಡರೂ ಅವರೆಲ್ಲಾ ಹೊಸ ಕಾರ್ಮಿಕರೆಂದೇ ಪರಿಗಣಿಸಲ್ಪಡುತ್ತಾರೆ.ಅವರ ಸೇವೆ ಹೊಸದಾಗಿ ಶುರುವಾಗುತ್ತದೆ,ಅವರು ಈ ಹಿಂದೆ ಮಾಡಿದ  ಸರ್ವಿಸ್…ಅವರ ಜೇಷ್ಠತೆ..ಸೇವಾಹಿರಿತನ ಯಾವುದನ್ನೂ ಪರಿಗಣಿಸೊಕ್ಕೆ ಸಾಧ್ಯವಿಲ್ಲ ಎನ್ನುವ ಮರಣಶಾಸನದಂತಿರುವ ಷರತ್ತಿಗೆ ಒಪ್ಪಿದರೆ ಮಾತ್ರ ಮರುನಿಯೋಜನೆ ಎನ್ನುವ ಷರತ್ತನ್ನೇ  ಲೀಗಲ್ ಸೆಲ್  ಪುನರುಚ್ಛರಿಸಿದೆ.

ಇದಿಷ್ಟೇ ಅಲ್ಲ, ಕಾರ್ಮಿಕರ ಹಕ್ಕುಗಳಿಗೆ ಧಕ್ಕೆ ಬಂದರೆ ಹೋರಾಟಕ್ಕೆ ಅವಕಾಶ ಕಲ್ಪಿಸುವ  ಟ್ರೇಡ್ ಯೂನಿಯನ್ ನಿಯಮಗಳಿಗೆ ಬ್ರೇಕ್ ಹಾಕುವ ಷರತ್ತನ್ನು ಪುನರುಚ್ಛರಿಸಲಾಗಿದೆ.ಕಾರ್ಮಿಕ ಹೋರಾಟ ಮಾಡುವಂತಿಲ್ಲ..ಮುಷ್ಕರದಲ್ಲಿ ಭಾಗಿಯಾಗುವಂತಿಲ್ಲ..ಹಾಗೇನಾದ್ರು ಆಗಿದ್ದಲ್ಲಿ ಆಡಳಿತ ವರ್ಗತೆಗೆದುಕೊಳ್ಳುವ ಎಂತದ್ದೇ  ಕಠಿಣ ನಿರ್ದಾರಕ್ಕೆ  ತಾನು ಬದ್ಧ ಎನ್ನುವುದನ್ನು ಒಪ್ಪಿಕೊಂಡ್ರೆ ಮಾತ್ರ ಕೆಲಸ ಎಂದು ಹೇಳಿದ್ದ ಆಡಳಿತ ಮಂಡಳಿ ನಿಲುವನ್ನೇ ಲೀಗಲ್ ಸೆಲ್ ಎತ್ತಿ ಹಿಡಿದಿದೆ.

ಆದ್ರೆ ಈ ಷರತ್ತುಗಳು ಕಾರ್ಮಿಕರ ಪಾಲಿಗೆ ಮಾರಕವಾಗಲಿವೆ.10 ತಿಂಗಳು ಕೆಲಸವಿಲ್ಲದೆ ಬಸವಳಿದಿರುವ ಕಾರ್ಮಿಕರು ಅನಿವಾರ್ಯತೆಯಿಂದ  ಷರತ್ತುಗಳಿಗೆ ಒಪ್ಪಿಕೊಂಡು ಕೆಲಸಕ್ಕೆ ಮರುನಿಯೋಜನೆಯೂ ಆಗಬಹುದು..ಅದು ಅವ ಅಸಹಾಯಕತೆ..ಇದನ್ನೇ ಮ್ಯಾನೇಜ್ಮೆಂಟ್ ಮಿಸ್ ಯೂಸ್ ಮಾಡಿಕೊಳ್ಳೊಕ್ಕೆ ಯತ್ನಿಸುತ್ತಿದೆ.ಆದ್ರೆ ಅವೈಜ್ಞಾನಿಕ ಹಾಗೂ ಅಮಾನವೀಯವಾಗಿರುವ ಈ ಷರತ್ತುಬದ್ದ ಮರುನಿಯೋಜನೆಯನ್ನು ಯೂನಿಯನ್ ಗಳು ಉಗ್ರವಾಗಿ ಖಂಡಿಸಲಿವೆ.ಸಿಎಂ,ಸಾರಿಗೆ ಸಚಿವರ ಜತೆ ಈ ಬಗ್ಗೆ ಗಂಭೀರವಾಗಿ ಮಾತುಕತೆ ನಡೆಸಲಿದ್ದೇವೆ..ಅಗತ್ಯ ಬಿದ್ದರೆ ಹೋರಾಟ ಮತ್ತೊಮ್ಮೆ ಅನಿವಾರ್ಯ ಎಂದು ಕೆಎಸ್ಆರ್ ಟಿಸಿ ಟ್ರೇಡ್ ಯೂನಿಯನ್ ಅಧ್ಯಕ್ಷ ಅನಂತಸುಬ್ಬರಾವ್ ಎಚ್ಚರಿಸಿದ್ದಾರೆ.

ಲೀಗಲ್ ಸೆಲ್ ನೀಡಿರುವ ಸಲಹೆಯಿಂದ  ಕೆಲಸದ ನಿರೀಕ್ಷೆ ಯಲ್ಲಿದ್ದ ಕಾರ್ಮಿಕರು ಮತ್ತಷ್ಟು ಕೆಂಡಾಮಂಡಲವಾಗಿದ್ದಾರೆ.ಕೆಲಸ ಸಿಕ್ಕರೆ ಸಾಕು ಎನ್ನುವಂತಿರುವ ಕಾರ್ಮಿಕರು ಷರತ್ತುಗಳಿಗೆ ಒಪ್ಪಿಕೊಂಡ್ರೂ ಬಹುತೇಕ ಕಾರ್ಮಿಕರು ಹೋರಾಟಕ್ಕೆ ಮುಂದಾಗಿದ್ದಾರೆ.ಇದಕ್ಕೆ  ಆಡಳಿತ ಮಂಡಳಿ ಯಾವ್ ರೀತಿ ರಿಯಾಕ್ಟ್ ಮಾಡಲಿದೆ ಎನ್ನುವುದು ಕುತೂಹಲ ಮೂಡಿಸಿದೆ.ಅದೇನೇ ಆಗಲಿ ಆಡಳಿತ ಮಂಡಳಿ ಕೈ ಕೊಟ್ಟರೂ ಕಾನೂನುಕೋಶ ನಮ್ಮ ಕೈ ಹಿಡಿಯಬಹುದು ಎನ್ನುವ ಕಾರ್ಮಿಕರ ನಿರೀಕ್ಷೆ ಸಧ್ಯಕ್ಕೆ ಕನ್ನಡಿಯೊಳಗಿನ ಗಂಟಾಗೇ ಉಳಿದಿದೆ.

Spread the love
Leave A Reply

Your email address will not be published.

Flash News