Breakinglock downMoreScrollTop Newsಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿರಾಜಕೀಯರಾಜ್ಯ-ರಾಜಧಾನಿ

STAY AGAINST KANNADAFLASHNEWS BY IPS RAVI “D” CHENNANNANAVAR :IPS ರವಿ ಡಿ ಚನ್ನಣ್ಣನವರ್ ವಿರುದ್ಧ ಸುದ್ದಿ ಪ್ರಕಟಿಸದಂತೆ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ತಡೆಯಾಜ್ಞೆ..

ಬೆಂಗಳೂರು:ಸನ್ಮಾನ್ಯ ರವಿ ಡಿ ಚನ್ನಣ್ಣನವರ್ ತಮ್ಮ ವಿರುದ್ಧ ಯಾವುದೇ ಮಾನಹಾನಿ ಅಥವಾ ಅವಹೇಳನಕಾರಿ ವರದಿಗಳನ್ನು ಪ್ರಕಟಿಸದಂತೆ ಕೋರ್ಟ್ ಮೂಲಕ ಪ್ರತಿಬಂಧಕಾಜ್ಞೆ ತಂದಿರುತ್ತಾರೆ..ತಮ್ಮ ವಕೀಲರಾದ ಸುಧನ್ವಾ  ಅವರ ಮೂಲಕ ಕನ್ನಡ ಫ್ಲ್ಯಾಶ್ ನ್ಯೂಸ್ ಸೇರಿದಂತೆ  8 ಸಾಮಾಜಿಕ ಜಾಲತಾಣಗಳಿಗೆ ಪ್ರತಿಬಂಧಕಾಜ್ಞೆ ತಂದಿರುತ್ತಾರೆ.

ಜಗದೀಶ್ ಕುಮಾರ್  ಕೆ.ಎನ್,ಫೇಸ್ ಬುಕ್, ವಿಜಯ 24/7,ಪ್ರತಿಕ್ಷಣ ನ್ಯೂಸ್,ಸುದ್ದಿಮನೆ,ಸ್ಪೀಡ್ ನ್ಯೂಸ್,ಯೂ ಟ್ಯೂಬ್ ವಿರುದ್ದವೂ ಯಾವುದೇ ಸುದ್ದಿ ಪ್ರಕಟಿಸದಂತೆ U/S 26 AND ORDER 7 RULE 1 OF CPS ಅನ್ವಯ  ಐಪಿಎಸ್ ಅಧಿಕಾರಿ ರವಿ.ಡಿ ಚನ್ನಣ್ಣನವರ್ ತಮ್ಮ ವಕೀಲರ ಮೂಲಕ ಪ್ರತಿಬಂಧಕಾಜ್ಞೆ ತಂದಿರುತ್ತಾರೆ.

ಅಂದ್ಹಾಗೆ ಕನ್ನಡ ಫ್ಲ್ಯಾಶ್ ನ್ಯೂಸ್ ರವಿ ಡಿ ಚನ್ನಣ್ಣನವರ್ ಅವರ ವಿರುದ್ದ ಕೇಳಿಬಂದ ದೂರುಗಳ ಹಿನ್ನಲೆಯಲ್ಲಿ ಸರಣಿ ಸುದ್ದಿಗಳನ್ನು ಪ್ರಕಟಿಸಿತ್ತು.ಇನ್ನು ಸಾಕಷ್ಟು ಸುದ್ದಿಗಳು ಪ್ರಕಟಣೆಗೆ ಸಿದ್ದವಾಗಿದ್ದವು.ಆದರೆ ಕಾನೂನಿನ ಮೂಲಕ ಅದೆಲ್ಲವನ್ನು ನಿಗ್ರಹಿಸುವ ಪ್ರಯತ್ನವನ್ನು ಮಾಡಿದ್ದಾರೆ.ನ್ಯಾಯಾಲಯದ ಆದೇಶಕ್ಕೆ ಖಂಡಿತಾ ಗೌರವ ಸಲ್ಲಿಸಲಿರುವ,ಕೋರ್ಟ್ ಆದೇಶವನ್ನು ಖಂಡಿತಾ ಪಾಲಿಸಲಿರುವ ಕನ್ನಡ ಫ್ಲ್ಯಾಶ್ ನ್ಯೂಸ್ ತಂಡ ಮುಂದಿನ ದಿನಗಳಲ್ಲಿಯೂ ತನ್ನ ಸಾಮಾಜಿಕ ಬದ್ಧತೆಯ ಕೆಲಸವನ್ನು ಮುಂದುವರೆಸೊಕೊಡು ಹೋಗಲಿದೆ.ಇದು ಖಂಡಿತಾ..

Spread the love

Related Articles

Leave a Reply

Your email address will not be published.

Back to top button
Flash News