BreakingMoreScrollTop NewsUncategorizedಕ್ರೈಮ್ /ಕೋರ್ಟ್ದೇಶ-ವಿದೇಶಫೋಟೋ ಗ್ಯಾಲರಿರಾಜ್ಯ-ರಾಜಧಾನಿವಿಚಿತ್ರ-ವಿಶೇಷಸಿನೆಮಾ ಹಂಗಾಮ

VALENTAIN DAY MORAL STORY..DONT MISS IT TO READ..ತಿರಸ್ಕರಿಸಿದಳೆನ್ನುವ ಕೋಪಕ್ಕೆ ACID ನಿಂದ ಬದುಕನ್ನೇ ಕತ್ತಲು ಮಾಡಿದ ಪಾಪಿ.. “ಆಕೆ”ಯ 5 ವರ್ಷಗಳ “ನರಕ” ಗೆಲೊಕ್ಕೆ ಆ “ರಿಯಲ್ ಹೀರೋ ” ಬರಬೇಕಾಯ್ತು..

ಇಂದು ವ್ಯಾಲೆಂಟೈನ್ಸ್ ಡೇ..ಪ್ರೇಮಿಗಳ ಸಂಭ್ರಮಕ್ಕೆಂದೇ ನಿಗಧಿಯಾದ ದಿನ. ಇದು ಎರಡು ದೇಹಗಳ ವ್ಯವಹಾರಕ್ಕೆ ಸೀಮಿತ ವಾದ ಪ್ರಣಯ ಸಂಬಂಧಗಳ ಆಚರಣೆ ಅಲ್ಲವೇ ಅಲ್ಲ. ಎರಡು ಮನಸು,ಇಬ್ಬರ ವ್ಯಕ್ತಿತ್ವಗಳು ಸಂಭ್ರಮಿಸುವ ಹಬ್ಬ ಕೂಡ..

ಜತೆಗಿರಲು ಒಬ್ಬ ಸಂಗಾತಿ ಬೇಕೆನ್ನುವ ವಯೋಸಹಜ ಆಸೆಯಲ್ಲಿ,ಅ ಪರಿಚಿತ ವಾದ ವರೊಂದಿಗೆ ಕೆಲವೇ ದಿನಗಳಲ್ಲಿ ಈತನೇ/ ಈಕೆಯೇ ಲೈಫ್ ಪಾರ್ಟ್ನರ್ ಎಂದು ನಿರ್ಧರಿಸುವಷ್ಟು  ಅತ್ಯಾಪ್ತತೆ ಯನ್ನು ಬೆಳೆಸಿಕೊಳ್ಳುವ ಪ್ರೇಮ್ ಕಹಾನಿಗಳೇ ಇವತ್ತು ಹೆಚ್ಚು. ಯಾವುದೋ ಸೆಳೆತ- ಆಕರ್ಷಣೆಗೆ ಸೀಮಿತವಾಗಿ ಎರಡು ದೇಹಗಳ ಮಿಲನೋತ್ಸವದಲ್ಲಿ ಮುಗಿದು ಹೋಗುವ ಇಂಥಾ ಎಷ್ಟೋ “ಪ್ರೇಮ ಕಹಾನಿ”ಗಳ ನಡುವೆ ಈ ಒಂದು ಸ್ಟೋರಿ ಪ್ರೀತಿಯ ನಿಷ್ಕಲ್ಮಶತೆ, ಉತ್ಕಟತೆ ಜತೆಗೆ ಅದರ ಧೀಶಕ್ತಿಗೆ ಸಾಕ್ಷಿಯಾಗುತ್ತದೆ. ಪ್ತೀತಿಗಿರೋ ಅಗಾಧಶಕ್ತಿಯನ್ನು ಜಗಜ್ಜಾಹೀರುಗೊಳಿಸಿದ ಸಾವಿರ..ಸಾವಿರ ಕಥೆಗಳು ಇತಿಹಾಸದಲ್ಲಿವೆ. ಪ್ರೀತಿಯ ಅನಂತ- ಅಗಾಧತೆಯನ್ನು ರುಜುವಾತುಗೊಳಿಸುತ್ತದೆ ಈ ಕಥೆ,,ಸೋ ಮಿಸ್ ಮಾಡದೆ ಈ ಸ್ಟೋರಿ ಓದಿ..

ಬದುಕು ಇನ್ನೇನು ಮುಗಿದೇ ಹೋಯಿತು..ಬದುಕಿದ್ದೇನೂ ಪ್ರಯೋಜನವಿಲ್ಲ..ಬದುಕಿದ್ದರೆ ಭೂಮಿಗೆ ಭಾರ…. ಹೆತ್ತವರಿಗೆ ಹೊರೆ..ಇಂಥಾ ಅನಪೇಕ್ಷಿತವಾದ ಬದುಕನ್ನು ಕೊನೆಗಾಣಿಸಿಕೊಳ್ಳೊಕ್ಕೆ ದಯವಿಟ್ಟು ವಿಷದ ಮಾತ್ರೆಯೋ-ಇಂಜೆಕ್ಷನ್ನೋ ಕೊಡಿ..ನೆಮ್ಮದಿಯ ನಿಟ್ಟುಸಿರೊಂದನ್ನು ಬಿಟ್ಟು ಶಾಶ್ವತವಾಗಿ ಕಣ್ಣು ಮುಚ್ಚಿ ಬಿಡುತ್ತೇನೆ ಡಾಕ್ಟರ್ ಎಂದು ಕಣ್ಣೀರಿಡುತ್ತಿದ್ದ  ಆ ಯುವತಿಗಾಗಿ ಯಾವುದೇ ಪ್ರತಿಫಲಾಪೇಕ್ಷೆ ಯಿಲ್ಲದೆ, ತನ್ನ ಬದುಕಿನ ಸುಖ ಸಂತೋಷಗಳನ್ನೆಲ್ಲಾ ಬಲಿಗೊಟ್ಟು ಆಕೆಯ  ಬದುಕಿಗೆ ಆಸರೆ-ಆಶಾಕಿರಣ-ಆಶ್ರಯವಾದಂಥ ಆ ಕಥೆ ಯಾವ ಅಮರ ಪ್ರೇಮ ಕಥೆಗಳಿಗಿಂತ ಕಡ್ಮೆ ಇಲ್ಲ.

ಎಲ್ಲವನ್ನೂ ಕಳೆದುಕೊಂಡ ಬದುಕೇ ಬೇಡ ಎಂದು ಕೈ ಚೆಲ್ಲಿದ ಯುವತಿ…ಆಕೆಯ ಬದುಕಿನಲ್ಲಿ ಭರವಸೆ ಮೂಡಿಸಿಯೇ ತೀರುತ್ತೇನೆಂದು ಹಠ ತೊಟ್ಟ ಯುವಕನ ಕಥೆ,,, ಪ್ರೀತಿಯ ಶಕ್ತಿ ಇಷ್ಟೊಂದು ಅಗಾಧನಾ..ಅದರ ಸಾಮರ್ಥ್ಯ ಅಷ್ಟೊಂದು ಬ್ರಹ್ಮಾಂಡನಾ ಎನಿಸಿದ್ದಂತೂ ಸತ್ಯ..ನಿಷ್ಕಲ್ಮಶ ಪ್ರೀತಿಗೆ ಎಲ್ಲವನ್ನು ಗೆಲ್ಲುವ-ಎಲ್ಲವನ್ನು ಸಾಧಿಸುವ ಶಕ್ತಿಯಿದೆ.ಅದು ಒಮ್ಮೆ ಮನಸುಗಳಲ್ಲಿ ಅಂಕುಸಿರಿಬಿಟ್ಟರೆ ಅದರ ಬೇರು-ಬಿಳಲುಗಳು ಆಲದ ಮರವೇ ಸರಿ.

ಆಕೆ ಬದುಕಿನಲ್ಲಿ ಮಹತ್ತವಾದುದನ್ನು ಸಾಧಿಸಬೇಕೆನ್ನುವ ಮಹತ್ವಾಕಾಂಕ್ಷಿ ಹೆಣ್ಣುಮಗಳು.ಐಎಎಸ್ ಮಾಡಬೇಕೆನ್ನುವ ಅಗಾಧ ಆಸೆ ಹೊಂದಿದಾಕೆ.ಆಕೆಯ ಮೇಲೊಂದು ವಯೋಸಹಜ ಆಸೆ ಮೂಡಿಸಿಕೊಂಡ ಅದೇ ಏರಿಯಾದ ಹುಡುಗ ದಿಢೀರ್ ಎದುರಾಗಿ ನನ್ನನ್ನು ಮದುವೆಯಾಗ್ತೀಯ ಎಂದುಬಿಟ್ಟನಂತೆ. ಏನ್ ಹೇಳಬೇಕೆಂದು ತೋಚದೆ ಕಂಗಾಲಾಗಿ ಹೋದ ಆಕೆ ಮನೆಯವರಿಗೆ ವಿಷಯ ತಿಳಿಸಿದ್ಲು.ಆ ಚರ್ಚೆ ನಡೆಯುತ್ತಿರುವಾಗ್ಲೇ ಮಾರನೇ ದಿನವೇ ಮನೆಯಲ್ಲಿ ಪ್ರತ್ಯಕ್ಷವಾದ ಆತ ಮದುವೆ ಪ್ರಪೋಸಲ್ ಇಡ್ತಾನೆ..ಹುಡುಗಿಗೆ ಇನ್ನೂ 16 ವರ್ಷ..ಪ್ರವರ್ಧೆಯಾದ ಮೇಲೆ ನೋಡೋಣ ಎಂದ ತಾಯಿ ಮಾತಿಗೆ ಅಲ್ಲಿವರೆಗೆ ಕಾಯುತ್ತೇನೆ ಎಂದು ಹೊರಟುಬಿಟ್ಟ.

ದೊಡ್ಡ ಕಂಟಕ ದೂರವಾಯ್ತೆಂದುಕೊಂಡ ಯುವತಿಯನ್ನು ಮಾರನೇ ದಿನವೇ ಎದುರಾದ ಆತ ಮದುವೆಯಾಗಲೇಬೇಕೆಂದು ಕಾಡಿದಾಗ ಆಗೊಲ್ಲ ಎಂದಿದ್ದಾಳೆ.ಅಲ್ಲಿಂದ ಶುರುವಾಯ್ತು ಆತನ ಟಾರ್ಚರ್,ಎಲ್ಲೆಂದರಲ್ಲಿ ಅಡ್ಡಗಟ್ಟಿ ಪೀಡಿಸಲಾರಂಭಿಸಿದ..ಕೊನೆಗೆ ಧಮ್ಕಿ ಹಾಕೊಕ್ಕೆ ಶುರುವಿಟ್ಟುಕೊಂಡ..ತುಂಬಾ ವಿನಯವಾಗೇ ನಿರಾಕರಿಸಿದ ಯುವತಿಗೆ ತನ್ನ ಅದೇ ನಿರಾಕರಣೆ ದೊಡ್ಡ ಸಂಕಷ್ಟ ತಂದೊಡ್ಡಬಹುದೆನ್ನುವ ಸಣ್ಣ ಕಲ್ಪನೆಡಯೂ ಇರಲಿಲ್ಲ..

ಒಂದಷ್ಟು ದಿನಗಳ ತರುವಾಯ ಆಕೆ ಕಾಲೇಜ್ ಗೆ ಹೋಗುವ ಮಾರ್ಗದಲ್ಲಿ ಅಡ್ಡಗಟ್ಟಿದ ಆತ ತುಂಬಾ ಒರಟಾಗಿ ನಡೆದುಕೊಂಡಿದ್ದಾನೆ.ಅದೇ ಒತ್ತಾಯ..ಅದೇ ಬಲವಂತ..ಆದ್ರೆ ಅವತ್ತು ಒಂದು ಹೆಜ್ಜೆ ಮುಂದ್ಹೋಗಿ ನಾನಲ್ಲದಿದ್ದರೆ ಇನ್ನೊಬ್ಬನೂ ಇಲ್ಲ..ಎಂದು ಅಬ್ಬರಿಸಿದ್ದ..ಆತ ಏನ್ ಮಾಡಬಹುದೆನ್ನುವ ಕಲ್ಪನೆ ಇರದ ಆಕೆ ಕೈ ಹಿಡಿದುಕೊಂಡಿದ್ದ ಆತನನ್ನು ತಳ್ಳಿ ಒಂದೈದು ಹೆಜ್ಜೆ ಮುಂದಿಟ್ಟಿದ್ದಳಷ್ಟೇ..

ಆಗ ನಡೆದೋಯ್ತು ನೋಡಿ..ಯಾರೂ ಊಹಿಸಿದ ಭಯಾನಕ ದುರಂತ.ತನ್ನ ಕೈಯಲ್ಲಿದ್ದ ಆಸಿಡ್ ಬಾಟಲಿಯನ್ನು ತೆಗೆದವನೇ ಆಕೆಯ ಮುಖಕ್ಕೆ ಎರಚಿ ಪರಾರಿಯಾಗಿಬಿಟ್ಟ..ಪಾಪ..ಆ ಹೆಣ್ಣುಮಗಳ ಮುಖ ಕ್ಷಣಾರ್ಧದಲ್ಲೆ ಸುಟ್ಟು ಹೋಗಿತ್ತು.ದುರಂತ ಏನ್ ಗೊತ್ತಾ..ಆ ಘಟನೆ ನಡೆಯುವಾಗ ಅಲ್ಲಿದ್ದವರೇ ಪೊಲೀಸ್ ಕೇಸ್ ಸಹಜವಾಸ ಏಕ್ ಬೇಕೆಂದುಕೊಂಡು ಹತ್ತಿರವೂ ಸುಳಿಯಲಿಲ್ಲ..ಆಕೆ ನೆರವಿಗೆ ಬರಬೇಕಾದವರು ಆಕೆ ಶೀಲದ ಬಗ್ಗೆಯೇ ಅನುಮಾನದ ಮಾತುಗಳನ್ನಾಡತೊಡಗಿದ್ರು.

ಆಸಿಡ್ ದಾಳಿಗೆ ತುತ್ತಾದ ಹುಡುಗಿ ನಂತರ ಅನುಭವಿಸಿದ್ದು ಮಾತ್ರ ಅಕ್ಷರಶಃ ನರಕ..ದಾಳಿಯ ತೀವ್ರತೆ ಆಕೆಯನ್ನು ಕುರುಡನ್ನಾಗಿಸಿತ್ತು.ಕೆಲವು ಅಂಗಗಳನ್ನು ಊನಗೊಳಿಸಿಬಿಟ್ಟಿತ್ತು.ದೇಹದ ಮೇಲೆಲ್ಲಾ ದುರ್ಮಾಂಸ ಬೆಳೆಯಲಾರಂಭಿಸಿತ್ತು.ಕೈ ಕಾಲು ಸ್ವಾಧೀನವನ್ನೇ ಕಳೆದುಕೊಂಡಿದ್ವು.ಮಲಗಿದ್ದಲ್ಲೇ ಎಲ್ಲವೂ..ಪಾಪ.. ತಾಯಿ ಆಕೆಗೆ ಚಿಕ್ಕಮಗುವಿದ್ದಾಗ ಮಾಡಿದಷ್ಟೇ ಲಾಲನೆ ಪಾಲನೆ ಮಾಡುತ್ತಿದ್ಲು.ಆ ದಾಳಿ ಆ ಪರಿ, ಆಕೆಯ ಬದುಕಿನ ಪ್ರಪಂಚದ ಸುಖ ಸಂತೋಷ ನೆಮ್ಮದಿ ಭರವಸೆಗಳನ್ನೆಲ್ಲಾ ನಾಶ ಮಾಡಿಬಿಟ್ಟಿತು.ಕತ್ತಲಾದ ತನ್ನ ಬದುಕನ್ನು ಶಪಿಸಿಕೊಳ್ಳುತ್ತಿದ್ದಳು.ಅದೆಷ್ಟೋ ಸಲ ನನಗೆ ಸ್ಲೋ ಪಾಯ್ಸನ್ ಇಂಜೆಕ್ಷನ್ ಕೊಟ್ಟು ಸಾಯಿಸಿಬಿಡಿ ಡಾಕ್ಟರ್ ಎಂದು ಅಂಗಲಾಚಿದ್ದುಂಟಂತೆ.ಅವರಿವರ ಮನೆ ಕೆಲಸ ಮಾಡಿ ಸಂಸಾರ ನಡೆಸುತ್ತಿದ್ದ ತಾಯಿ ಮಗಳ ಮದುವೆಯಾಗಾಗಬಹುದೆಂಬ ಲೆಕ್ಕಾಚಾರದಲ್ಲಿ ಕೂಡಿಸಿಟ್ಟಿದ್ದ ಹಣವನ್ನೆಲ್ಲಾ ಚಿಕಿತ್ಸೆಗಾಗಿ ಖರ್ಚು ಮಾಡಿ ಬರಿಗೈಯಾಗಿಬಿಟ್ಟಿದ್ರು.

ಹತ್ತಿರತ್ತಿರ 2 ವರ್ಷ ಆಸ್ಪತ್ರೆಯಲ್ಲೇ ಕಳೆದ ಆ ಯುವತಿ ನಂತರ ಮನೆಗೆ ಶಿಫ್ಟ್ ಆದ್ರೂ ಅಕ್ಕಪಕ್ಕದವರ ಹೀಯಾಳಿಕೆ-ಮೂದಲಿಕೆ ತಪ್ಪಲಿಲ್ಲ.ಯೋಗಕ್ಷೇಮ ವಿಚಾರಿಸುವ ನೆವದಲ್ಲಿ ಬರುತ್ತಿದ್ದವರು ಆಕೆಯ ಸುಟ್ಟಭಾಗಗಳನ್ನು ಬಟ್ಟೆ ಸರಿಸಿ ನೋಡಿ ಹೇಸಿಗೆ ಪಟ್ಟುಕೊಳ್ಳುತ್ತಿದ್ದರು.ಆಸಿಡ್ ದಾಳಿಯಾಗೊಕ್ಕೆ ಈಕೆಯೇ ಏನೋ ಮಾಡಿದ್ಲು ಎನ್ನುವ ರೀತಿಯಲ್ಲಿ ಮಾತನಾಡುತ್ತಿದ್ದರು.ಮಾಯದ ಸುಟ್ಟ ಗಾಯಗಳ ನೋವಿನ ಯಾತನೆ ಒಂದೆಡೆಯಾದ್ರೆ ಆ ದೇಹದಿಂದ ಬರುತ್ತಿದ್ದ ದುರ್ವಾಸನೆ ಅಕ್ಕಪಕ್ಕದವರ ಆಕ್ರೋಶಕ್ಕೆ ಕಾರಣವಾಗಿತ್ತು.ಬೆಳಗಾದ್ರೆ ಸಾಕು ಮನೆ ಬಳಿ ಬಂದು ಮೂದಲಿಸಿ ಹೋಗುತ್ತಿದ್ದವರ ಹೀಯಾಳಿಕೆ ಪಾಪ ಆ ಹೆಣ್ಣುಮಗುವನ್ನು ದೈಹಿಕ-ಮಾನಸಿಕವಾಗಿ ಕುಸಿಯುವಂತೆ ಮಾಡಿಬಿಟ್ಟಿತ್ತು.

ತನ್ನಿಂದ ಅಮ್ಮನಿಗೇಕೆ ತೊಂದರೆ..ಅಕ್ಕಪಕ್ಕದವರಿಗೇಕೆ ಸಮಸ್ಯೆ ಎಂದುಕೊಂಡವಳೇ  ಆಸಿಡ್ ದಾಳಿ ಸಂತ್ರಸ್ಥರಿಗೆಂದೇ ಕೆಲಸ ಮಾಡುವ ಎನ್ ಜಿಓ ಒಂದರ ವಿಳಾಸ ಪಡೆದು ಅಲ್ಲಿ ಅಡ್ಮಿಟ್ ಆಗುತ್ತಾಳೆ..ಅಲ್ಲಿ ತನ್ನಂತೆಯೇ ಇದ್ದ ನೂರಾರು ಸಂತ್ರಸ್ಥೆಯರ ಬದುಕನ್ನು ತನ್ನ ಸ್ಥಿತಿ ಜತೆ ಹೋಲಿಸಿಕೊಂಡು ತನಗಾದ ನೋವು-ದುಃಖ ಮರೆಯೊಕ್ಕೆ ಶುರುಮಾಡುತ್ತಾಳೆ..ಅಷ್ಟರಲ್ಲ

ಏನೇ ಆದ್ರೂ ತಾನು ಕುರುಡಿ..ತಾನು ಇತರರಂತೆ ಬದುಕೊಕ್ಕೆ ಆಗೋದೇ ಇಲ್ಲ..ನನ್ನ ಬದುಕು ಇಲ್ಲಿಗೇ ಮುಗಿದೋಯ್ತು..ನಾನು ಬದುಕಿದ್ದರೂ ನಿಷ್ಪ್ರಯೋಜಕ ಅಲ್ಲವೇ ಎನ್ನುವುದು ನೆನಪಾದಾಗಲೆಲ್ಲಾ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.ಎನ್ ಜಿಓ ಸಿಬ್ಬಂದಿ ಎಷ್ಟೇ  ಸಮಾಧಾನ ಮಾಡಿದ್ರೂ ನೋವು ಕಡಿಮೆಯಾಗುತ್ತಿರಲಿ ಲ್ಲ. ಆದ್ರೆ ನರ್ಸ್ ಒಬ್ಬರ ಸ್ನೇಹದಿಂದ  ಆಕೆಯ ಬದುಕಿನಲ್ಲಿ ಬಂದ ಆ ಮೆಡಿಕಲ್ ರೆಪ್ ಯುವತಿಯ ಜೀವನದ ಗತಿಯನ್ನೇ ಬದಲಿಸಿಟ್ಟಿದ್ದು ಮಾತ್ರ ಪವಾಡವೇ ಸರಿ.

ಕುರುಡಾಗಿದ್ದ ಆಕೆಯ ಕಣ್ಣಗಳಿಗೆ ದೃಷ್ಟಿಯ ಬೆಳಕು ನೀಡಿಯೇ ನೀಡುತ್ತೇನೆ..ಎದ್ದು ಓಡಾಡೊಕ್ಕೆ ಆಗೊಲ್ಲ ಎಂದ ವೈದ್ಯರ ಮಾತನ್ನು ಹುಸಿಗೊಳಿಸುತ್ತೇನೆ.ಮೊದಲಿನಿಂತೆ ಎಲ್ಲರೊಂದಿಗೆ ಬೆರೆಯುವಂಥ ದಿನಗಳನ್ನು ಆಕೆಯ ಬದುಕಿನಲ್ಲಿ ಸೃಷ್ಟಿಸುತ್ತೇನೆಂದುಕೊಂಡ ಆತ ಆ ತಪಸ್ಸಿಗಾಗಿ ದುಡಿಮೆಗಿದ್ದ ಕೆಲಸವನ್ನೇ ಬಿಟ್ಟ.ಮನೆಯವರನ್ನು ದೂರ ಮಾಡಿಕೊಂಡ.ದಿನದ ಬಹುತೇಕ ಸಮಯವನ್ನು ಆಕೆಯ ಜತೆಗಿದ್ದೇ ಕಳೆಯಲಾರಂಭಿಸಿದ.

ನಿತ್ಯವೂ ಪ್ರಖರ ಬೆಳಕಿನಲ್ಲಿ ಕೂರಿಸಿ ತಂಗಾಳಿ ದೇಹ ಸೋಕುವಂತೆ ಮಾಡುತ್ತಲೇ ಜೀವನೋತ್ಸಾಹ ಮೂಡಿಸುವ ವಿಚಾರಗಳನ್ನು ಹೇಳುತ್ತಿದ್ದ.ಸಕಾರಾತ್ಮಕವಾದ ವಿಚಾರ ಬಿಟ್ಟು ಬೇರೆ ಯಾವುದು ಅನಗತ್ಯವಾಗಿ ಆಕೆಯ ತಲೆಯಲ್ಲಿ ಬೀಜವಾಗೊಕ್ಕೆ ಬಿಡಲೇ ಇಲ್ಲ..ಈ ನಡುವೆ ಆಕೆಯ ಕಣ್ಣುಗಳಿಗೆ ಆಪ ರೇಷನ್ ಮಾಡಿಸಿ ದೃಷ್ಟಿ ಕೊಡಿಸಿದ.ತಾನೇ ಆಕೆಗೆ ಊರುಗೋಲಾಗಿ ವೈದ್ಯರೇ ಮೂಗಿನ ಮೇಲೆ ಬೆರಳಿಟ್ಟು ಕೊಳ್ಳುವಂತೆ ಮಾಡಿದ.ಯಾರನ್ನೂ ಆಶ್ರಯಿಸದಂತೆ ಆಕೆಯ ಬದುಕಿಗೊಂದು ಆತ್ಮಸ್ಥೈರ್ಯ ಮೂಡಿಸಿದ.ಇದಲ್ವೇ ಪ್ರೀತಿಗಿರುವ ನಿಜವಾದ ತಾಕತ್ತು.

ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಶುದ್ಧಾಂತಕರಣದಿಂದ ಆಕೆಯನ್ನು ಕಾಳಜಿ ಮಾಡಿದ,ಪ್ರೀತಿಸಿದ ಕಷ್ಟಕಾರ್ಪಣ್ಯದ ಸಂಕಟ-ಸಂಕಷ್ಟದ ದಿನಗಳಲ್ಲಿ ಜತೆಗಿದ್ದ,ಎಲ್ಲಾ ಹಂತಗಳಲ್ಲೂ ಆಕೆಗಾಗಿ ಸರಿಯಾದ ನಿರ್ದಾರಗಳನ್ನೇ ತೆಗೆದುಕೊಳ್ಳುತ್ತಿದ್ದ ಆದರ್ಶಪ್ರಾಯ ವ್ಯಕ್ತಿತ್ವದ ಆ ಯುವಕನೇ, ಮನೆಯವರ ವಿರೋಧ  ಧಿಕ್ಕರಿಸಿ ಆಕೆಯನ್ನೇ ತನ್ನ ಜೀವನ ಸಂಗಾತಿಯನ್ನಾಗಿಸಿಕೊಂಡು ನೆಮ್ಮದಿಯಿಂದ ಜೀವನ ನಡೆಸಲಾರಂಭಿಸಿದ್ದಾನೆ..ವ್ಯಾಲೆಂಟೈನ್ಸ್ ಡೇಯಂಥ ಸನ್ನಿವೇಶದಲ್ಲಿ ಪ್ರೇಮಿಗಳ  ಆತ್ಮಾವಲೋಕನಕ್ಕೆ ಇದಕ್ಕಿಂತ ಮಾದರಿ-ಆದರ್ಶಪ್ರಾಯವಾದ ನಿದರ್ಶನ ಮತ್ತೊಂದಿರಲಾರದೇನೋ..?

Spread the love

Related Articles

Leave a Reply

Your email address will not be published.

Back to top button
Flash News