BreakingMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ರಾಜಕೀಯರಾಜ್ಯ-ರಾಜಧಾನಿ

MASSIVE PROTEST AGAINST IAS TULASI MADDINENI.. “ತುಳಸಿ” ಹಠಾವೋ..ಹಮೇ ಬಚಾವೋ”.. ಬಿಬಿಎಂಪಿ ಕ್ಯಾಂಪಸ್ ನಲ್ಲಿ ಬೃಹತ್-ಸರಣಿ ಪ್ರತಿಭಟನೆ..

ಗುತ್ತಿಗೆದಾರರ ಕೆಂಗಣ್ಣಿಗೆ ಗುರಿಯಾಗಿ..ನಾಳೆಯಿಂದ ಪ್ರತಿಭಟನೆ ಎದುರಿಸಲಿರುವ ಐಎಎಸ್ ತುಳಸಿ ಮದ್ದಿನೇನಿ..?!
ಗುತ್ತಿಗೆದಾರರ ಕೆಂಗಣ್ಣಿಗೆ ಗುರಿಯಾಗಿ..ನಾಳೆಯಿಂದ ಪ್ರತಿಭಟನೆ ಎದುರಿಸಲಿರುವ ಐಎಎಸ್ ತುಳಸಿ ಮದ್ದಿನೇನಿ..?!

ಬೆಂಗಳೂರು:ಬಿಬಿಎಂಪಿ ಗುತ್ತಿಗೆದಾರರ ಪಾಲಿಗೆ “ವಿಲನ್”..! ಅಷ್ಟೇ ಅಲ್ಲ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕೆ ದೊಡ್ಡ ತೊಡಕಾಗಿ ಪರಿಣಮಿಸಿದ್ದಾರೆನ್ನುವ ಆರೋಪಕ್ಕೆ ತುತ್ತಾಗಿರುವ ಬಿಬಿಎಂಪಿ ವಿಶೇಷ ಆಯುಕ್ತೆ, ಐಎಎಸ್ ಅಧಿಕಾರಿ ತುಳಸಿ ಮದ್ದಿನೇನಿ ವಿರುದ್ಧ  ಬಿಬಿಎಂಪಿ ಆವರಣದಲ್ಲಿ ಬೃಹತ್ ಹಾಗು ಸರಣಿ ಪ್ರತಿಭಟನೆಗಳು ಶುರುವಾಗಲಿವೆ.

ಗುತ್ತಿಗೆದಾರರಿಗೆ ಬರಬೇಕಿರುವ ಸಾವಿರಾರು ಕೋಟಿ ಹಣವನ್ನು ಬಿಡುಗಡೆಗೆ ಶಿಫಾರಸ್ಸು ಮಾಡದೆ ಎಲ್ಲಾ ಫೈಲ್ ಗಳ ಕ್ಲಿಯರೆನ್ಸ್ ಗೆ ತುಳಸಿ ಮದ್ದಿನೇನಿ ಕೊಕ್ಕೆ ಹಾಕ್ಕೊಂಡು ಕೂತಿದ್ದಾರೆ..ಇದರಿಂದ ನಮ್ಮ ಬದುಕುಗಳು ಬೀದಿಗೆ ಬಿದ್ದಿವೆ..ಪರಿಸ್ತಿತಿ ಹೀಗೆಯೇ ಮುಂದುವ ರೆದರೆ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎನ್ನುವುದು ಗುತ್ತಿಗೆದಾರರ ಆರೋಪ.

ತುಳಸಿ ಮದ್ದಿನೇನಿ ಬೆನ್ನಿಗೆ ನಿಂತಿರುವ ನಾಯಕ ಅವರೇನಾ..?
ತುಳಸಿ ಮದ್ದಿನೇನಿ ಬೆನ್ನಿಗೆ ನಿಂತಿರುವ ನಾಯಕ ಅವರೇನಾ..?

ಹಾಗೆಂದು ತುಳಸಿ ಮದ್ದಿನೇನಿ ತುಂಬಾ ಪ್ರಾಮಾಣಿಕವಾದ ಅಧಿಕಾರಿ ಎಂದೇನು ಅಲ್ಲ,ಕೆಲವರಿಗಷ್ಟೇ ಹಣ ಬಿಡುಗಡೆಗೆ ಶಿಫಾರಸ್ಸು ಮಾಡುವಂಥ ಪಕ್ಷಪಾತಿ ಅಧಿಕಾರಿ ಎನ್ನುವ ಗಂಭೀರ ಆಪಾದನೆ ಗುತ್ತಿಗೆದಾರರದ್ದು.ಕಮಿಷನ್ ಫಿಕ್ಸ್ ಮಾಡಿಕೊಂಡು ತನ್ನ ಪಟಾಲಂ ಮೂಲಕ ಅದನ್ನು ವಸೂಲಿ ಮಾಡಿಸುತ್ತಿದ್ದಾರೆ.

ಕೆಲವರನ್ನು ಬಿಟ್ಟರೆ ಬಹುತೇಕ ಗುತ್ತಿಗೆದಾರರನ್ನು ತಮ್ಮ ಚೇಂಬರ್ ಒಳಗೂ ಬಿಟ್ಟುಕೊಳ್ಳುತ್ತಿಲ್ಲ ಎಂದು ಆಪಾದಿಸಿರುವ ಗುತ್ತಿಗೆದಾರರು ನಮ್ಮ ತಾಳ್ಮೆಯ ಕಟ್ಟೆಯೂ ಒಡೆದಿದೆ.ನಾವಿನ್ನೂ ಸುಮ್ಮನಿರೊಕ್ಕೆ ಸಾಧ್ಯವಿಲ್ಲ..ಹಾಗಾಗಿಯೇ ಕೊನೇ ಅಸ್ತ್ರ ಎನ್ನುವಂತೆ ನಾಳೆಯಿಂದ ಸರಣಿ ಪ್ರತಿಭಟನೆ ನಡೆಸಲು ನಿರ್ದರಿಸಿದ್ದೇವೆ.

ಬಿಬಿಎಂಪಿ ಕ್ಯಾಂಪಸ್ ನಲ್ಲಿ ಒಂದಾ ತುಳಸಿ ಇರಬೇಕು..ಇಲ್ಲಾ ನಾವಿರಬೇಕು ಎನ್ನುವ ಹಠ ತೊಟ್ಟಿಯೇ ಪ್ರತಿಭಟನೆಗೆ ಮುಂದಾಗಿದ್ದೇವೆ..ಸರ್ಕಾರವೇ ನಮ್ಮ ಬಳಿ ಬಂದು ನಮ್ಮ ಬೇಡಿಕೆ ಈಡೇರಿಸಬೇಕು..ಇಲ್ಲದಿದ್ದಲ್ಲಿ ನಾವು ನಮ್ಮ ಪ್ರತಿಭಟನೆ ಮುಂದುವರೆಸಲಿದ್ದೇವೆ ಎನ್ನುತ್ತಾರೆ ಕಸ ಗುತ್ತಿಗೆದಾರರ ಸಂಘದ ನಾಯಕ ಬಾಲಸುಬ್ರಹ್ಮಣ್ಯ.

ತುಳಸಿ ಮದ್ದಿನೇನಿ ವಿರುದ್ಧ ಸಿಡಿದೆದ್ದಿರುವುದು  ಕೇವಲ ಗುತ್ತಿಗೆದಾರರಷ್ಟೇ ಅಲ್ಲ, ಅನೇಕ ಕಲ್ಯಾಣ ಕಾರ್ಯಕ್ರಮಗಳಿಂದ ಬರಬೇಕಿರುವ ಕೋಟ್ಯಾಂತರ ಹಣದ ನಿರೀಕ್ಷೆಯಲ್ಲಿರುವ ಅನೇಕ ಎಜೆನ್ಸಿಗಳು ಕೂಡ ತುಳಸಿ ಹಠಾವೋ ಅಭಿಯಾನಕ್ಕೆ ಕೈ ಜೋಡಿಸಿವೆ.ಫಲಾನುಭವಿಗಳು ಕೂಡ ಯಾವುದೇ ಹಣ ಬಿಡುಗಡೆಯಾಗದಿರುವುದರಿಂದ ತೀವ್ರ ನೊಂದಿದ್ದಾರೆ.ಅದರ ಆಕ್ರೋಶದ ಭಾಗವಾಗಿ ನಾಳೆಯ ಪ್ರತಿಭಟನೆಯಲ್ಲಿ ಮಂಚೂಣಿಯಲ್ಲಿರಲು ನಿರ್ಧರಿಸಿದ್ದಾರೆ.

ಕಸ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಾಲಸುಬ್ರಮಣ್ಯ
ಕಸ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಾಲಸುಬ್ರಮಣ್ಯ

ತುಳಸಿ ಮದ್ದಿನೇನಿ ವಿರುದ್ಧ ಅನೇಕ ವರ್ಷಗಳಿಂದಲೂ ವ್ಯಾಪಕ ಆರೋಪ-ಆಕ್ರೋಶದ ವಾತಾವರಣ ಇದ್ದರೂ ಸರ್ಕಾರವೇ ಅವರ ವಿರುದ್ದ ಕ್ರಮ ಕೈಗೊಳ್ಳಲು ಸಾಧ್ಯವಾಗದಿರುವುದು ಕೂಡ ಅನೇಕ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.ಸರ್ಕಾರದ ಮಟ್ಟದಲ್ಲಿ ತುಳಸಿ ಮೇಡಮ್ ವಿರುದ್ದ ಏನೇ ಆರೋಪ ಬಂದಾಗ್ಯೂ..ತೊಂದರೆ ಉಂಟಾದ್ರೂ ಪ್ರಭಾವಿ ಸಚಿವರೊಬ್ಬರು ಕಾಯುವ ಕೆಲಸವನ್ನು ಮಾಡುತ್ತಿದ್ದಾರೆ ಎನ್ನುವ ಮಾತುಗಳಿವೆ( ಆ ಸನ್ಮಾನ್ಯ ಸಚಿವರು  ಈ ಹಿಂದೇ ಇದೇ ಬಿಬಿಎಂಪಿ ಕಾರ್ಪೊರೇಟರ್ ಆಗಿದ್ದವರು..ಅವರು  ಬೃಹತ್ ಭ್ರಷ್ಟಾಚಾರದಲ್ಲಿ   ಸಿಲುಕಿಕೊಂಡಿದ್ದಾಗ ಅವರಿಗೆ ಸಹಾಯ ಮಾಡಿದವರೇ ಈ ಮೇಡಮ್ ಎನ್ನುವ ಮಾತುಗಳಿವೆ..ಅದೇ ಉಪಕಾರವನ್ನು ಈಗ   ಆ ಸಚಿವರು ತೀರಿಸುತ್ತಿದ್ದಾರೆನ್ನುವ ಮಾತು ಕೇಳಿಬರುತ್ತಿದೆ).

ಸಚಿವರ ಕೃಪಕಟಾಕ್ಷ ಇರುವುದರಿಂದ ಈ ಮೇಡಮ್ ಬಗ್ಗೆ ಏನೇ ಆರೋಪ ಬಂದಾಗ್ಯೂ ಅವರ ವಿರುದ್ಧ ಕ್ರಮ ಕೈಗೊಳ್ಳೊಕ್ಕೆ ಆಡಳಿತಗಾರರಾದ ರಾಕೇಶ್ ಸಿಂಗ್ ಹಾಗೂ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರಿಗೆ ಸಾಧ್ಯವಾಗುತ್ತಿಲ್ಲ ಎನ್ನುವ ಮಾತುಗಳಿವೆ. ಈ ಎಲ್ಲಾ ಅಂಶಗಳೇ ತುಳಸಿ ಮದ್ದಿನೇನಿ ಗಟ್ಟಿಯಾಗಿ ಬಿಬಿಎಂಪಿಯಲ್ಲಿ ತಳವೂರೊಕ್ಕೆ ಕಾರಣವಾಗುತ್ತಿದೆಯೇ..;? ಗೊತ್ತಿಲ್ಲ..ಅದೇನೇ ಇರಲಿ,.ಪಾಲಿಕೆಯ ಕ್ಯಾಂಪಸ್ ನಲ್ಲಿ ಒಬ್ಬ ಐಎಎಸ್ ಅಧಿಕಾರಿ ವಿರುದ್ಧ ಇಷ್ಟೊಂದು ಗಂಭೀರ ಆರೋಪ ಕೇಳಿಬಂದ ಉದಾಹರಣೆಗಳೇ ಇಲ್ಲ.ಐಎಎಸ್  ತೊಲಗಲಿ ಎಂದು ಬೃಹತ್ ಹೋರಾಟ ನಡೆದ ನಿದರ್ಶನಗಳೂ ಇರಲಿಕ್ಕಿಲ್ಲವೇನೋ…

ಏನೇ ಆಗಲಿ ಯಾವುದೆ ಒಬ್ಬ ಐಎಎಸ್ ಮಾನವಮುಖಿಯಾಗಿರಬೇಕು..ಗುತ್ತಿಗೆದಾರರು ಅಕ್ರಮ ನಡೆಸಿದ್ದರೆ ಅವರ ಪೇಮೆಂಟ್ ಗಳನ್ನು ತಡೆಹಿಡಿಯಲಿ ಅದಕ್ಕೆ ಯಾರ ಆಕ್ಷೇಪವೂ ಇಲ್ಲ.ಆದರೆ ನೀಯತ್ತಾಗಿ ಕೆಲಸ ಮಾಡಿಯು ಬರಬೇಕಾದ ಹಣಕ್ಕೆ ಕೊಕ್ಕೆ ಹಾಕಿ ಕೂರೋದೆಂದ್ರೆ ಅದು ನಿಜಕ್ಕೂ ಅಕ್ಷಮ್ಯ..ಇನ್ನೊಂದೆಡೆ  ಕಲ್ಯಾಣ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸದೆ ಕಲ್ಯಾಣ ವಿರೋಧಿಯಾಗಿರುವ  ಆರೋಪ ಎದುರಿಸಬೇಕಾಗಿ ಬಂದಿರೋದು ತುಳಸಿ ಮದ್ದಿನೇನಿ ಅವರಿಗೆ ನಿಜಕ್ಕೂ ಶೋಭೆ ತರೊಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ.

ಬಹುದೊಡ್ಡ ಸಮುದಾಯಕ್ಕೆ ಅನ್ಯಾಯ ಮಾಡಿ ಮೆರೆಯುತ್ತಿದ್ದಾರೆ ಎನ್ನುವ ಆರೋಪ ಓರ್ವ ಐಎಎಸ್    ಅಧಿಕಾರಿಯಾಗಿರುವ ತುಳಸಿ ಮದ್ದಿನೇನಿ ಅವರ ವಿರುದ್ಧ ಕೇಳಿಬಂದಿರುವುದನ್ನು ಸರ್ಕಾರ ಕೂಡ ಗಂಭೀರವಾಗಿ ಪರಿಗಣಿಸುವುದು ಸೂಕ್ತವೇನೋ..ನಾಳೆ ನಡೆಯಲಿರುವ ಪ್ರತಿಭಟನೆ ಇದೆಲ್ಲಕ್ಕೂ ಉತ್ತರ ನೀಡಬಹುದೇನೋ..?

Spread the love

Related Articles

Leave a Reply

Your email address will not be published.

Back to top button
Flash News