Breakingದೇಶ-ವಿದೇಶ

ಧರ್ಮಸ್ಥಳಕ್ಕೆ ಹೊರಟ ಪಾದಯಾತ್ರಿಗಳು ಬಿಸಾಡಿದ ಆಹಾರ ಸೇವಿಸಿ 30 ಜಾನುವಾರು ಬಲಿ 30 cow die after have food

ಶಿವರಾತ್ರಿ ಪ್ರಯುಕ್ತ ಪಾದಯಾತ್ರೆ ಹೊರಟವರು ಬಿಸಾಡಿದ್ದ ಆಹಾರ ತುಂಬಿದ ಪ್ಯಾಕೆಟ್ ಗಳನ್ನು ಸೇವಿಸಿದ ಜಾನುವಾರುಗಳು ಮೃತಪಟ್ಟ ಘಟನೆ ಚಿಕ್ಕಮಗಳೂರಿನಲ್ಲಿ ಸಂಭವಿಸಿದೆ.

ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಪಾದಯಾತ್ರೆಗಳು ಬಿಸಾಡಿದ ಅನ್ನ, ಪ್ಲಾಸ್ಟಿಕ್ ತಿಂದ ಜಾನುವಾರುಗಳು ಮೃತಪಟ್ಟಿವೆ.

ಮೂಡಿಗೆರೆ ತಾಲೂಕಿನ ಗೋಣಿಬೀಡು, ಜನ್ನಾಪುರ, ಬಣಕಲ್, ಕೊಟ್ಟಿಗೆಹಾರ ಸೇರಿ ಹಲವೆಡೆ ದನಕರುಗಳು ಮೃತಪಟ್ಟಿದ್ದು, ಜಾನುವಾರುಗಳನ್ನು ಕಳೆದುಕೊಂಡ ಮಾಲೀಕರು ಕಣ್ಣೀರು ಹಾಕುತ್ತಿದ್ದಾರೆ.

ಶಿವರಾತ್ರಿ ಪ್ರಯು್ಕತ ಸಾವಿರಾರು ಪಾದಯಾತ್ರಿಗಳು ಚಿಕ್ಕಮಗಳೂರು ಮೂಲಕ ಧರ್ಮಸ್ಥಳಕ್ಕೆ ತೆರಳಿದ್ದರು. ಬೆಂಗಳೂರು, ಮೈಸೂರು, ಮಂಡ್ಯ, ಕೋಲಾರ, ಹಾಸನ ಸೇರಿದಂತೆ ಅನೇಕ ಜಿಲ್ಲೆಗಳಿಂದ ಪಾದಯಾತ್ರೆ ನಡೆಸಿದ್ದರು.

Spread the love

Related Articles

Leave a Reply

Your email address will not be published.

Back to top button
Flash News