ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಫೀಲ್ಡಿಂಗ್ ಮಾಡಲು ಮೈದಾನಕ್ಕಿಳಿದ ಭಾರತೀಯ ಆಟಗಾರರು ವಿಶೇಷ ಗೌರವ ನೀಡಿ ಸ್ವಾಗತಿಸಿದರು.
ಮೊಹಾಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶನಿವಾರ ಭಾರತ 8 ವಿಕೆಟ್ ಗೆ 574 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಶ್ರೀಲಂಕಾ ತಂಡ ಬ್ಯಾಟಿಂಗ್ ಗೆ ಇಳಿಯುವ ಮುನ್ನ ಭಾರತೀಯ ಆಟಗಾರರು ಫೀಲ್ಡಿಂಗ್ ಮಾಡಲು ಮೈದಾನಕ್ಕಿಳಿದಾಗ ಕೊಹ್ಲಿಗೆ ಆಟಗಾರರು ಗಾಡ್ ಆಫ್ ಆನರ್ ನೀಡಿ ಗೌರವಿಸಿದರು.
ಮೊದಲ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ನಡೆಸಿದ ಭಾರತ ಬೃಹತ್ ಮೊತ್ತ ದಾಖಲಿಸಿದರೂ ವಿರಾಟ್ ಕೊಹ್ಲಿ 45 ರನ್ ಗಳಿಸಿದ್ದಾಗ ಔಟಾಗಿ ನಿರಾಸೆ ಮೂಡಿಸಿದರು. ಆದರೆ ಈ ಪಂದ್ಯವನ್ನು ಗೆದ್ದು ಕೊಹ್ಲಿಗೆ ವಿಶೇಷ ಗೌರವ ನೀಡಲು ಆಟಗಾರರು ಉದ್ದೇಶಿಸಿದ್ದರು.