Breakingಕ್ರೈಮ್ /ಕೋರ್ಟ್

ಮನೆಯಲ್ಲಿ ಯಾರೂ ಇಲ್ಲದ ವೇಳೆ ದೋಚುತ್ತಿದ್ದ ಗ್ಯಾಂಗ್ ಅರೆಸ್ಟ್! thief gang arrest in bengaluru

ಕೆಲ‌ ದಿನಗಳ ಹಿಂದೆ ಬೆಳಗಿನ ಜಾವ ಮಹದೇವಪುರದ ದೊಡ್ಡಕನ್ನಲ್ಲಿಯ ಮನೆಯೊಂದರಲ್ಲಿ ಬಂಗಾರ ಹಾಗೂ ಬೆಳ್ಳಿಯನ್ನು ದೋಚಿ ಪರಾರಿಯಾಗಿದ್ದ ಕುಖ್ಯಾತ ಕಳ್ಳರ ಗ್ಯಾಂಗ್ ಅನ್ನು ಬೆಂಗಳೂರಿನ ವೈಟ್ ಫೀಲ್ಡ್ ವಿಭಾಗದ ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.

ಮನೆಯಲ್ಲಿ ಯಾರು ಇಲ್ಲದ ವೇಳೆ ನೋಡಿ ಕಳ್ಳತನಕ್ಕೆ ಮುಂದಾಗುತ್ತಿದ್ದ ಆರೋಪಿಗಳಾದ ಕೋಲಾರ ಮೂಲದ ಸಂತೋಷ ಅಲಿಯಾಸ್ ಸಂತು, ಹಾಸನ‌ ಮೂಲದ ಮೋಹನ್ ಅಲಿಯಾಸ್ ಮನು,‌ ಸಾವಿತ್ರಿ, ಹಾಗೂ ರೇಣುಕಾ ಬಂಧಿತ ಆರೋಪಿಗಳು.

ಆರೋಪಿಗಳು ಸುಮಾರು ಏಳು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಬಂಧಿತರಿಂದ 25 ಲಕ್ಷ ಬೆಲೆ ಬಾಳುವ 510 ಗ್ರಾಂ ಚಿನ್ನ ಹಾಗೂ 500 ಗ್ರಾಂ ತೂಕದ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.. ಬೆಳ್ಳಂದೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹೇಂದ್ರ ಕುಮಾರ್, ಸಬ್ ಇನ್ ಸ್ಪೆಕ್ಟರ್ ಪರಶುರಾಮ ಹಾಗೂ ಠಾಣೆಯ ಸಿಬ್ಬಂದಿಯ ಕಾರ್ಯಕ್ಕೆ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಗಿರೀಶ್ ಎಸ್. ಮೆಚ್ಚುಗೆ ವ್ಯಕ್ತಪಡಿಸಿದರು.

Spread the love

Related Articles

Leave a Reply

Your email address will not be published.

Back to top button
Flash News