Breakingದೇಶ-ವಿದೇಶ

ತಮಿಳುನಾಡು ಸಚಿವರ ಪುತ್ರಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ಕರ್ನಾಟಕದಲ್ಲಿ ಗುಟ್ಟಾಗಿ ಮದುವೆ! tamilnadu minister daughter marry in karnataka

ತಮಿಳುನಾಡು ಸಚಿವರ ಪುತ್ರಿಯೊಬ್ಬಳು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಲಭಿಸಿದ್ದು, ಕರ್ನಾಟಕದಲ್ಲಿ ಪ್ರಿಯಕರನ ಜೊತೆ ಮದುವೆ ಆಗಿ ಪೊಲೀಸರ ಮುಂದೆ ಶರಣಾಗಿದ್ದಾರೆ.

ತಮಿಳುನಾಡು ಮುಜರಾಯಿ ಇಲಾಖೆ ಸಚಿವ ಶೇಖರ್ ಬಾಬು ಪುತ್ರಿ ಜಯಕಲ್ಯಾಣಿ ಟ್ರಾನ್ಸ್ ಪೋರ್ಟ್ ಉದ್ದಿಮೆ ನಡೆಸುತ್ತಿರುವ ಪ್ರಿಯಕರ ಸತೀಶ್ ಕುಮಾರ್ ಜೊತೆ ಕರ್ನಾಕಟಕಕ್ಕೆ ಬಂದು ಮದುವೆಯಾಗಿದ್ದಾರೆ.

ಬೆಂಗಳೂರಿನ ಕಮಿಷನರ್ ಕಚೇರಿಯಲ್ಲಿ ಸೋಮವಾರ ದಿಢೀರ್ ಪ್ರತ್ಯಕ್ಷರಾದ ಜೋಡಿತಮಗೆ ಜೀವ ಬೆದರಿಕೆ ಇದ್ದು, ರಕ್ಷಣೆ ನೀಡಿ ಎಂದು ಕೋರಿಕೊಂಡಿದೆ.

ಹಡಗಲಿ ತಾಲೂಕಿನ ಹಾಲಸ್ವಾಮಿ ಮಠದಲ್ಲಿ ಈ ಜೋಡಿಗೆ ಮದುವೆ ಮಾಡಿಸಲಾಗಿದೆ ಎಂದು ತಿಳಿದುಬಂದಿದೆ. ತಮಿಳುನಾಡಿಗೆ ಹೋದರೆ ನಮ್ಮನ್ನು ಕೊಲೆ ಮಾಡುತ್ತಾರೆಂದು ಯುವತಿ ಹೇಳಿಕೊಂಡಿದ್ದಾಳೆ. ಹಾಗಾಗಿ ತಮಿಳುನಾಡು ಪೊಲೀಸರ ಮೇಲೆ ತಮಗೆ ನಂಬಿಕೆ ಇಲ್ಲದ ಕಾರಣ ಕರ್ನಾಟಕ ಪೊಲೀಸರ ಮೊರೆ ಹೋಗಿರುವುದಾಗಿ ಜೋಡಿ ತಿಳಿಸಿದೆ.

ಯೂಟ್ಯೂಬ್ ನಲ್ಲಿ ಕನ್ನಡ ಸಂಘಟನೆ ಬಗ್ಗೆ ಹುಡುಕಾಡಿ ಮಾಹಿತಿ ಪಡೆದುಕೊಂಡಿದ್ದೆ. ಆಗ ಭರತ್ ಶೆಟ್ಟಿ, ಮಧುಗಿರಿ ಅವರ ಬಗ್ಗೆ ತಿಳಿದು ಅವರನ್ನು ಸಂಪರ್ಕಿಸಿ ಕರ್ನಾಟಕಕ್ಕೆ ಬಂದಿದ್ದೇವೆ. ನನ್ನ ತಂದೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ರೈಟ್ ಹ್ಯಾಂಡ್. ತುಂಬಾ ಪವರ್ ಫುಲ್ ಆಗಿರುವ ತನ್ನ ತಂದೆ ಶೇಖರ್ ಬಾಬು ಹೇಳಿದ ಹಾಗೆ ಪೊಲೀಸರು ಕೇಳುತ್ತಾರೆ. ಈಗಾಗಲೇ ಸತೀಶ್ ಕುಮಾರ್ ಮನೆಯವರನ್ನು ಅರೆಸ್ಟ್ ಮಾಡಿದ್ದಾರೆ ಅಂತಾ ಜಯಕಲ್ಯಾಣಿ ಹೇಳಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News