Breakingಕ್ರೈಮ್ /ಕೋರ್ಟ್

ತೆಪ್ಪ ಮುಳುಗಿ ಮೂವರು ಸ್ನೇಹಿತರು ಜಲಸಮಾಧಿ three friends drown in kolar lake

ಪಾರ್ಟಿ ಮಾಡಿ ತೆಪ್ಪದಲ್ಲಿ ರೌಂಡ್ ಹೊಡೆದು ಮೋಜು ಮಾಡಲು ಹೋದಾಗ ತೆಪ್ಪ ಮಗುಚಿ ಮೂವರು ಯುವಕರು ಕೆರೆಯಲ್ಲಿ ಮುಳುಗಿದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ನೇರಳೆಕೆರೆ ಬಳಿ ಸಂಭವಿಸಿದೆ.

ಚಿಕ್ಕವಲಗಮಾದಿ ನವೀನ್ (32), ನೇರಳೆಕೆರೆ ರಾಜೇಂದ್ರ (32) ಮತ್ತು ಮೋಹನ್ (28) ಮೃತಪಟ್ಟ ದುರ್ದೈವಿಗಳು. ಶಿವರಾಜ್ ಎಂಬಾತ ಊಟ ತರಲು ತೆರಳಿದ್ದರಿಂದ ಬದುಕುಳಿದಿದ್ದಾನೆ.

ಇಂದು ಮುಂಜಾನೆ ಟೇಕಲ್ ನಲ್ಲಿ ರೈಲು ತಡವಾದ ಹಿನ್ನೆಲೆ ಊರಿಗೆ ವಾಪಸ್ ಆಗಿದ್ದ ಸ್ನೇಹಿತರು, ಕೆರೆ ಬಳಿ ಪಾರ್ಟಿ ಮಾಡಿ ತೆಪ್ಪದಲ್ಲಿ ರೌಂಡ್ಸ್ ಮಾಡಲು ಹೋಗಿದ್ದರು.

ತೆಪ್ಪ ಮುಗುಚಿದ ವೇಳೆ ನೀರಿನಲ್ಲಿ ಮುಳುಗುತ್ತಿದ್ದವರ ರಕ್ಷಣೆಗೆ ಸ್ಥಳೀಯರು ಮುಂದಾಗಿದ್ದಾರೆ. ಕೆರೆ ಮಧ್ಯದಲ್ಲಿ ಯುವಕರು ಸಿಲುಕಿದ್ದರಿಂದ ಅವರ ರಕ್ಷಣೆ ಮಾಡುವಷ್ಟರಲ್ಲಿ ತಡವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಮೂವರ ಶವಗಳಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಸ್ಥಳಕ್ಕೆ ಕೆಜಿಎಫ್ ಎಸ್ಪಿ ಡಿ.ಕೆ. ಧರಣಿ ದೇವಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Spread the love

Related Articles

Leave a Reply

Your email address will not be published.

Back to top button
Flash News