Breakingರಾಜಕೀಯರಾಜ್ಯ-ರಾಜಧಾನಿ

ಮೇಕಪ್ ಹಾಕಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದರು: ಸಿಎಂ ಇಬ್ರಾಹಿಂ i am free bard: cm ibrahim

ಕಾಂಗ್ರೆಸ್ ನಲ್ಲಿ ಮೇಕಪ್ ಹಾಕಿ ಬಸ್ ನಿಲ್ದಾಣದಲ್ಲಿ ಗಿರಾಕಿಗಳನ್ನು ಕರೆತರಲು ನಿಲ್ಲಿಸಿದ್ದರು. ಆದರೆ ನಾನೀಗ ಸ್ಥಾನಕ್ಕಾಗಿ ಅಲ್ಲ, ಮಾನಕ್ಕಾಗಿ ಪಕ್ಷ ತೊರೆಯುತ್ತಿದ್ದೇನೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಫ್ರೀ ಬರ್ಡ್ ಆಗಿದ್ದೇನೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಕುಮಾರಸ್ವಾಮಿ ಜೊತೆ ಮಾತನಾಡಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.

ಕಾಂಗ್ರೆಸ್ ನಲ್ಲಿ ಈಗ ಬರೀ ಗೊಡ್ಡಮ್ಮೆಗಳಿವೆ. ನಾಲ್ಕು ವೋಟು ಹಾಕಿಸೋ ತಾಕತ್ತು ಇಲ್ಲ ಅವುಕ್ಕೆ. ಈಗ ಒಬ್ಬನಿಗೆ ಚೆಡ್ಡಿಕೊಟ್ಟು ನಿಲ್ಲಿಸಿದ್ದಾರೆ. ಶ್ಯಾಮನೂರು ಶಿವಶಂಕರಪ್ಪ ಅವರಿಗೆ ಮುಸ್ಲಿಮರು ವೋಟು ಹಾಕಿದ್ದಕ್ಕೆ ಗೆದ್ದಿದ್ದಾರೆ. ಅವರಿಗೆ ಅವರ ಮನೆಯವರೇ ಓಟು ಹಾಕಲ್ಲ ಎಂದು ಇಬ್ರಾಹಿಂ ಕಿಡಿಕಾರಿದರು.

ನಾನು ಯಾವ ಪಕ್ಷದಲ್ಲೂ ಸ್ಥಾನ ಕೇಳಲ್ಲ. ಮಾನ ಕೇಳ್ತಿನಿ. ನಾನು ಕಿಂಗ್ ಆಗಲು ಇಷ್ಟಪಡಲ್ಲ. ಕಿಂಗ್ ಮೇಕರ್ ಆಗಲು ಬಯಸುತ್ತೇನೆ ಎಂದು ಅವರು ಹೇಳಿದರು.

Spread the love

Related Articles

Leave a Reply

Your email address will not be published.

Back to top button
Flash News