Breaking

ಮೊದಲ ಟೆಸ್ಟ್: ಬುಮ್ರಾ ದಾಳಿಗೆ ಲಂಕೆ ಧಗಧಗ! bumrah attac, srilanka collepse

ಶ್ರೇಯಸ್ ಅಯ್ಯರ್ ನೆರವಿನಿಂದ ಭಾರತ ಮೊದಲ ಇನಿಂಗ್ಸ್ ನಲ್ಲಿ ಉತ್ತಮ ಮೊತ್ತ ದಾಖಲಿಸಿದರೆ, ಮಧ್ಯಮ ವೇಗಿ ಜಸ್ ಪ್ರೀತ್ ಬುಮ್ರಾ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿದೆ.

ಹೌದು, ಬೆಂಗಳೂನಲ್ಲಿ ಶನಿವಾರ ಆರಂಭಗೊಂಡ ಹೊನಲು-ಬೆಳಕಿನ 2ನೇ ಟೆಸ್ಟ್ ಪಂದ್ಯದ ಮೊದಲ ದಿನ ಭಾರತ ಸ್ಪಷ್ಟವಾಗಿ ಮೇಲುಗೈ ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ಮೊದಲ ಇನಿಂಗ್ಸ್ ಗಳಲ್ಲಿ 252 ರನ್ ಗಳಿಗೆ ಆಲೌಟಾದರೆ, ಶ್ರೀಲಂಕಾ ತಂಡ ದಿನದಾಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 86 ರನ್ ಗೆ 6 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿದೆ.

ಜಸ್ ಪ್ರೀತ್ ಬುಮ್ರಾ 3 ವಿಕೆಟ್ ಪಡೆದರೆ, ಮೊಹಮದ್ ಶಮಿ 2 ವಿಕೆಟ್ ಗಳಿಸಿದರು. ಇವರಿಬ್ಬರ ದಾಳಿ ನಡುವೆಯೂ ಆಂಜೆಲೊ ಮ್ಯಾಥ್ಯೂಸ್ (43) ಏಕಾಂಗಿ ಹೋರಾಟ ನಡೆಸಿದರೂ ಮತ್ತೊಂದು ಕಡೆಯಿಂದ ಉತ್ತಮ ಬೆಂಬಲ ದೊರೆಯದೇ ಕುಸಿತ ಅನುಭವಿಸಿತು.

Spread the love

Related Articles

Leave a Reply

Your email address will not be published.

Back to top button
Flash News