Breakingದೇಶ-ವಿದೇಶ

ಅಪಾರ್ಟ್ ಮೆಂಟ್ ನ 23ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

ಅಪಾರ್ಟ್ ಮೆಂಟ್ ನ 23ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಕೋಣನಕುಂಟೆಯಲ್ಲಿ ನಡೆದಿದೆ.

ಪ್ರತಿಷ್ಠಿತ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದ ಅಭಿಷೇಕ್ (ಹೆಸರು ಬದಲಾಯಿಸಲಾಗಿದೆ) ಕೋಣನಕುಂಟೆ ಠಾಣೆ ವ್ಯಾಪ್ತಿಯ ಅಪಾರ್ಟ್‌ಮೆಂಟ್ ಸಮುಚ್ಚಯದ 23ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಆತ್ಮಹತ್ಯೆಗೆ ಮುನ್ನ ಅಭಿಷೇಕ್, ‘ಕ್ಷಮಿಸಿ ಅಪ್ಪ. ನಾನು ನಿಮ್ಮನ್ನು ಬಿಟ್ಟು ಹೋಗುತ್ತಿದ್ದೇನೆ’ ಎಂದು ಹೇಳಿ ಸೆಲ್ಫಿ ವೀಡಿಯೊ ಮಾಡಿ ಆಡಿಯೊ ತಂದೆ ಹಾಗೂ ಸ್ನೇಹಿತರಿಗೆ ಕಳುಹಿಸಿದ್ದ.

ತಂದೆ, ಸಂಬಂಧಿಕರು ಸ್ಥಳಕ್ಕೆ ಬರುವಷ್ಟರಲ್ಲೇ ಅಭಿಷೇಕ್ ಆತ್ಮಹತ್ಯೆಗೆ ಶರಣಾಗಿದ್ದ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆತನಿಗೆ ಯಾವುದೇ ಸಮಸ್ಯೆಯಿರಲಿಲ್ಲ, ಚೆನ್ನಾಗಿ ಓದುತ್ತಿದ್ದ, ವೈಯಕ್ತಿಕವಾಗಿಯೂ ಯಾವುದೇ ತೊಂದರೆಯಿರಲಿಲ್ಲ ಎಂದು ಅಭಿಷೇಕ್ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.

ಸಂಬಂಧಿಕರ ಮನೆಯಲ್ಲಿ ತಂಗಿದ್ದ ಅಭಿಷೇಕ್ ಮುಂಜಾನೆ 3.15ರ ಸುಮಾರಿಗೆ 23ನೇ ಮಹಡಿಯಿಂದ ಜಿಗಿದಿದ್ದು, ಈ ವೇಳೆ ಸಂಬಂಧಿಕರು ನಿದ್ರಿಸುತ್ತಿದ್ದರು.

ಮೇಲಿನಿಂದ ಬಿದ್ದ ಶಬ್ದ ಕೇಳಿ ಅಪಾರ್ಟ್ ಮೆಂಟ್ ಸೆಕ್ಯೂರಿಟಿ ಸ್ಥಳಕ್ಕೆ ಬಂದಿದ್ದಾರೆ, ಈ ವೇಳೆ ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ, ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಮೃತಪಟ್ಟಿದ್ದ.

Spread the love

Related Articles

Leave a Reply

Your email address will not be published.

Back to top button
Flash News