Breaking

ನಾಳೆ ತವರಿಗೆ ಬರಲಿದೆ ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ಮೃತದೇಹ! naveen body will reach tommrow karnataka

ರಷ್ಯಾ ದಾಳಿ ಹಿನ್ನೆಲೆಯಲ್ಲಿ ಉಕ್ರೇನ್ ನಲ್ಲಿ ಮೃತಪಟ್ಟ ವೈದ್ಯ ವಿದ್ಯಾರ್ಥಿ ನವೀನ್ ಮೃತದೇಹ ನಾಳೆ ತವರು ಜಿಲ್ಲೆ ಹಾವೇರಿಗೆ ತಲುಪಲಿದೆ.

ಉಕ್ರೇನ್ ನಲ್ಲಿದ್ದ ನವೀನ್ ಮೃತದೇಹ ಈಗಾಗಲೇ ಪೋಲೆಂಡ್ ಮೂಲಕ ದುಬೈಗೆ ವಿಮಾನದ ಮೂಲಕ ಕರೆತರಲಾಗಿದೆ. ಪ್ರಸ್ತುತ ದುಬೈನಲ್ಲಿ ಮೃತದೇಹ ಇರಿಸಲಾಗಿದ್ದು, ನಾಳೆ ಬೆಳಿಗ್ಗೆ ನೇರವಾಗಿ ಬೆಂಗಳೂರಿಗೆ ಬರಲಿದೆ.

ಬೆಂಗಳೂರಿಗೆ ಮಾರ್ಚ್ 21ರಂದು ಬೆಳಿಗ್ಗೆ 3 ಗಂಟೆಗೆ ಮೃತದೇಹ ತಲುಪಿದ ನಂತರ ಹಾವೇರಿಗೆ ಆಂಬುಲೆನ್ಸ್ ಮೂಲಕ ಕಳುಹಿಸಿಕೊಡಲಾಗುವುದು. ನಾಳೆ ತವರು ಹಾವೇರಿಗೆ ಮಧ್ಯಾಹ್ನ ತಲುಪಲಿದ್ದು, ಅಂತ್ಯ ಸಂಸ್ಕಾರ ನಾಳೆಯೇ ನಡೆಯುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವೀನ್ ಅಂತಿಮ ದರ್ಶನ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.

Spread the love

Related Articles

Leave a Reply

Your email address will not be published.

Back to top button
Flash News