ಕರ್ನಾಟಕ ಮುಖ್ಯ ನ್ಯಾಯಮೂರ್ತಿಗೆ ಜೀವ ಬೆದರಿಕೆ! karnataka high cour CJI get life threat
ಕರ್ನಾಟಕ ಮುಖ್ಯ ನ್ಯಾಯಮೂರ್ತಿಗೆ ಜೀವ ಬೆದರಿಕೆ!
ಇತ್ತೀಚೆಗಷ್ಟೇ ಹಿಜಾಬ್ ವಿವಾದದ ಕುರಿತು ತೀರ್ಪು ನೀಡಿದ್ದ ತ್ರಿಸದಸ್ಯ ಪೀಠದಲ್ಲಿ ಒಬ್ಬರಾಗಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಜೀವ ಬೆದರಿಕೆ ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಕೀಲ ಉಮಾಪತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿಗೆ ವ್ಯಾಟ್ಸಪ್ ನಲ್ಲಿ ವೀಡಿಯೋ ಮೂಲಕ ಬಹಿರಂಗವಾಗಿ ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.
ಬೆಳಿಗ್ಗೆ 9.45ರ ಸುಮಾರಿಗೆ ವೀಡಿಯೊ ಬಂದಿದ್ದು, ಇದು ತಮಿಳು ಭಾಷೆಯಲ್ಲಿತ್ತು. ಜೀವ ಬೆದರಿಕೆ ಒಡ್ಡಿದ ವಿಷಯ ಇದ್ದು, ಇದೇ ವೀಡಿಯೋ ಮುಖ್ಯ ನ್ಯಾಯಮೂರ್ತಿಗಳಿಗೂ ತಲುಪಿದೆ. ಇದರಲ್ಲಿನ ವಿಷಯ ಕಂಡು ಗಾಬರಿ ಆಗಿದ್ದು, ಕೂಡಲೇ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದೇನೆ ಎಂದು ವಕೀಲ ಉಮಾಪತಿ ತಿಳಿಸಿದ್ದಾರೆ.