ಜಗತ್ತಿನ 100 ಕಲುಷಿತ ನಗರಗಳಲ್ಲಿ ಭಾರತದ 63 ನಗರಗಳಿಗೆ ಸ್ಥಾನ!

ಜಗತ್ತಿನ 100 ಕಲುಷಿತ ನಗರಗಳಲ್ಲಿ ಭಾರತದ 63 ನಗರಗಳಿಗೆ ಸ್ಥಾನ!

0

ಇದನ್ನು ಸಾಧನೆ ಅನ್ನಬೇಕೋ, ಆತಂಕಪಡಬೇಕೋ ಅಥವಾ ಬೇಜಾಬ್ದಾರಿಯ ಪರಮಾವಧಿಯೋ ಗೊತ್ತಿಲ್ಲ. ಏಕೆಂದರೆ ಜಗತ್ತಿನ 100 ಕಲುಷಿತ ನಗರಗಳ ಪಟ್ಟಿಯಲ್ಲಿ 63 ಭಾರತದ ನಗರಗಳೇ ತುಂಬಿಕೊಂಡಿವೆ.

ಭಾರತದಲ್ಲಿನ ವಾಯುಮಾಲಿನ್ಯ 2021ಕ್ಕೆ ಹೋಲಿಸಿದರೆ ಮತ್ತುಷ್ಟು ಬಿಗಡಾಯಿಸಿದೆ. ಭಾರತದ 63 ನಗರಗಳು ವಿಶ್ವದ 100 ನಗರಗಳಲ್ಲಿ ಸ್ಥಾನ ಪಡೆದಿದೆ. ಅದರಲ್ಲಿ ಎರಡು ಭಾರತದ ನಗರಗಳು ಅಗ್ರಸ್ಥಾನ ಪಡೆದಿದೆ.

ವಿಶ್ವ ವಾಯು ಗುಣಮಟ್ಟ ಸಂಸ್ಥೆ ನಡೆಸಿದ ಜಗತ್ತಿನಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಪಿಎಂ 2.5 ವಾಯುಮಾಲಿನ್ಯ ಪ್ರಮಾಣದಲ್ಲಿ ಕ್ಯುಬಿಕ್ ಮೀಟರ್ ನಲ್ಲಿ 58.1 ಮೆಕ್ರೊಗ್ರಾಂ ಮಾಲಿನ್ಯ ಹೊಂದಿದ್ದು, ಇದು ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ವಾಯು ಗುಣಮಟ್ಟಕ್ಕಿಂತ 10 ಪಟ್ಟು ಹೆಚ್ಚು ಮಾಲಿನ್ಯಕಾರಕವಾಗಿದೆ.

ಜಗತ್ತಿನ ಕಲುಷಿತ ನಗರಗಳ ಪಟ್ಟಿಯಲ್ಲಿ ಅತೀ ಹೆಚ್ಚು ಉತ್ತರ ಪ್ರದೇಶ ಮತ್ತು ಹರಿಯಾಣದ ಅತೀ ಹೆಚ್ಚು ನಗರಗಳು ಸ್ಥಾನ ಪಡೆದಿವೆ. ರಾಜಸ್ಥಾನ್ ಭಿವಾಡಿ ಮೊದಲ ಸ್ಥಾನ ಪಡೆದಿದ್ದರೆ, ಉತ್ತರ ಪ್ರದೇಶದ ಗಾಜಿಯಾಬಾದ್ 2ನೇ ಸ್ಥಾನ ಗಳಿಸಿದೆ. ದೆಹಲಿ 4ನೇ ಸ್ಥಾನ ಗಳಿಸಿದೆ.

Spread the love
Leave A Reply

Your email address will not be published.

Flash News