Breakingಸಿನೆಮಾ ಹಂಗಾಮ

RRR ವಿಮರ್ಶೆ: ರಾಜಮೌಳಿ ಮ್ಯಾಜಿಕ್: ರಾಮ್ ಚರಣ್, ಜೂ.ಎನ್ ಟಿಆರ್ ಆಕರ್ಷಣೆ! On RRR DayJr NTR-Ram Charan’s Film

ಬಾಹುಬಲಿ ನಂತರ ಭಾರತೀಯ ಸಿನಿಮಾವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ನಿರ್ದೇಶಕ ಎಸ್.ಎಸ್. ರಾಜಮೌಳಿ ಮೂರೂವರೆ ವರ್ಷಗಳ ನಂತರ ನಿರ್ದೇಶನದ ಆರ್ ಆರ್ ಆರ್ ಚಿತ್ರ ಬಿಡುಗಡೆ ಮಾಡಿದ್ದು, ನಿರೀಕ್ಷೆಯಂತೆ ಅದ್ಭುತವಾಗಿ ಮೂಡಿ ಬಂದಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆಯುವ ಎಲ್ಲಾ ಸಾಧ್ಯತೆಗಳು ಇವೆ.

ಆರ್ ಆರ್ ಆರ್ ಚಿತ್ರ ಜಗತ್ತಿನಾದ್ಯಂತ ಸುಮಾರು 10 ಸಾವಿರ ಥಿಯೇಟರ್ ಗಳಲ್ಲಿ ಬಿಡುಗಡೆ ಆಗಿದ್ದು, ಎಲ್ಲೆಡೆ ಅಭಿಮಾನಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಿನಿಮಾಗೆ ಜನರು ಗೇಟ್ ಮುರಿದು ಥಿಯೇಟರ್ ಒಳಗೆ ನುಗ್ಗುತ್ತಿದ್ದಾರೆ.

ಸಿನಿಮಾದಲ್ಲಿ ಅಭಿಮಾನಿಗಳನ್ನು ರಂಜಿಸುವ ಎಲ್ಲಾ ಅಂಶಗಳು ಇದ್ದು, ದೇಶಭಕ್ತಿಯ ಹಿನ್ನೆಲೆ ಹೊಂದಿರುವುದರಿಂದ ಚಿತ್ರ ಹೊಸ ಎತ್ತರಕ್ಕೇರಿದೆ. ಅಲ್ಲದೇ ಇದೇ ಮೊದಲ ಬಾರಿ ಜೊತೆಯಾಗಿ ನಟಿಸಿರುವ ರಾಮ್ ಚರಣ್ ಮತ್ತು ಜೂನಿಯರ್ ಎನ್ ಟಿಆರ್ ಜೀವನಶ್ರೇಷ್ಠ ಪ್ರದರ್ಶನ ನೀಡಿ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಕಥೆ ಏನು?

ಬ್ರಿಟಿಷ್ ದಂಪತಿಯ ಮಗುವನ್ನು (ಜೂ.ಎನ್ ಟಿಆರ್) ಬುಡಕಟ್ಟು ಜನಾಂಗದ ನಾಯಕನೊಬ್ಬ ಅಪಹರಿಸುತ್ತಾನೆ. ಆತ ಬೆಳೆದು ದೆಹಲಿಗೆ ಬರುತ್ತಾರೆ. ಇದೇ ವೇಳೆ ರಾಮ್ ಚರಣ್ ಬ್ರಿಟಿಷ್ ಸರಕಾರದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದು, ಬುಡಕಟ್ಟು ಜನರ ಹೋರಾಟವನ್ನು ಹತ್ತಿಕ್ಕಿದರೆ ಬಡ್ತಿ ನೀಡುವುದಾಗಿ ಆಮೀಷ ಒಡ್ಡಲಾಗುತ್ತದೆ.

ನಂತರ ಕಥೆ ಏನಾಗುತ್ತದೆ. ರಾಮ್ ಚರಣ್ ಗೆ ಬಡ್ತಿ ಸಿಗುತ್ತದೆಯೇ ಅಥವಾ ಜೂ. ಎನ್ ಟಿಆರ್ ಗೆ ಅಪ್ಪ-ಅಮ್ಮ ಸಿಗುತ್ತಾರಾ ಎಂಬುದು ಕಥೆಯ ಮೂಲ ತಿರುಳು. ಇದರ ನಡುವೆ ದೇಶ ಹೋರಾಟ ಇದಾಗಿದೆ.

Spread the love

Related Articles

Leave a Reply

Your email address will not be published.

Back to top button
Flash News