Breakingಸಿನೆಮಾ ಹಂಗಾಮ

RRR ಮೊದಲ ದಿನ ಗಳಿಕೆ ಎಷ್ಟು ಗೊತ್ತಾ? ಹೊಸ ದಾಖಲೆ RRR first day collection: record break

ಹಲವಾರು ಬಾರಿ ಮುಂದೂಡಿಕೆ ನಂತರ ಕೊನೆಗೂ ಬಿಡುಗಡೆ ಆದ ಆರ್ ಆರ್ ಆರ್ ಚಿತ್ರ ಬಾಕ್ಸ್ ಆಫೀಸನ್ನು ಧೂಳೀಪಟ ಮಾಡುತ್ತಿದ್ದು, ಒಂದೇ ವಾರದಲ್ಲಿ 257 ಕೋಟಿ ರೂ. ಗಡಿ ದಾಟುವ ಎಲ್ಲಾ ಸಾಧ್ಯತೆಗಳಿವೆ.

ಎಸ್ ಎಸ್ ರಾಜಮೌಳಿ ನಿರ್ದೇಶಿಸಿ ಜೂನಿಯರ್ ಎನ್ ಟಿಆರ್ ಮತ್ತು ರಾಮ್ ಚರಣ್ ಮೊದಲ ಬಾರಿ ಜೊತೆಯಾಗಿ ನಟಿಸಿರುವ ಆರ್ ಆರ್ ಆರ್ ಚಿತ್ರದಲ್ಲಿ ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಆರ್ ಆರ್ ಆರ್ ಚಿತ್ರಕ್ಕೆ ಅಮೆರಿಕ, ನ್ಯೂಜಿಲೆಂಡ್ ಸೇರಿದಂತೆ ವಿದೇಶಗಳಲ್ಲಿ ಕೂಡ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಮೂಲಗಳ ಪ್ರಕಾರ ಮೊದಲ ದಿನದ ಗಳಿಕೆ 257 ಕೋಟಿ ರೂ. ಗಳಿಸುವ ಮೂಲಕ ಭರ್ಜರಿ ಆರಂಭ ಪಡೆದಿದೆ.

ಆಂಧ್ರಪ್ರದೇಶದಲ್ಲಿ 120 ಕೋಟಿ, ಕರ್ನಾಟಕದಲ್ಲಿ 16.48 ಕೋಟಿ, ತಮಿಳುನಾಡಿನಲ್ಲಿ 12.73 ಕೋಟಿ, ಕೇರಳದಲ್ಲಿ 4.36 ಕೋಟಿ, ಉತ್ತರ ಭಾರತದಲ್ಲಿ 251.4 ಕೋಟಿ ರೂ. ಹಾಗೂ ವಿದೇಶದಲ್ಲಿ 78.25 ಕೋಟಿ ರೂ. ಸಂಗ್ರಹಿಸಿದೆ ಎಂದು ಮೂಲಗಳು ತಿಳಿಸಿವೆ.

Spread the love

Related Articles

Leave a Reply

Your email address will not be published.

Back to top button
Flash News