ಕಾಂಗ್ರೆಸ್ ಶಾಸಕನ ಪುತ್ರನಿಂದ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ! 4 failed marriages, man kills self after fifth wife runs away with jewellery, cash
ಕಾಂಗ್ರೆಸ್ ಶಾಸಕನ ಪುತ್ರನಿಂದ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ!
ರಾಜಸ್ಥಾನ್ ನ ಡಸುವಾ ಜಿಲ್ಲೆಯ ಕಾಂಗ್ರೆಸ್ ಶಾಸಕನ ಪುತ್ರ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಗುರಿಯಾಗಿದ್ದಾರೆ.
ರಾಜ್ ಗಢ್ ಮತ್ತು ಅಲ್ವಾರ್ ಕ್ಷೇತ್ರದ ಶಾಸಕ ಜೊಹಾರಿ ಲಾಲ್ ಮೀನಾ ಅವರ ಪುತ್ರ ದೀಪಕ್ ಮೀನಾ ಮೇಲೆ ಬಾಲಕಿಯ ಕುಟುಂಬದವರು ಅತ್ಯಾಚಾರ ದೂರು ಸಲ್ಲಿಸಿದ್ದಾರೆ.
ಮಾರ್ಚ್ 20ರಂದು ಬಾಲಕಿಯನ್ನು ಹೋಟೆಲ್ ಗೆ ಕರೆದೊಯ್ದು, ಮದ್ಯಪಾನ ಮಾಡಿಸಿ ಅತ್ಯಾಚಾರ ನಡೆಸಲಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.
ಅತ್ಯಾಚಾರ ನಡೆಸಿದ ನಂತರ ವಿಷಯ ಬಾಯಿ ಬಿಡದಂತೆ 15 ಲಕ್ಷ ರೂ. ಮೌಲ್ಯದ ನಗದು ಹಾಗೂ ಚಿನ್ನಾಭರಣ ನೀಡುವುದಾಗಿ ಆಮೀಷ ಒಡ್ಡಿದ್ದರು. ಇದಕ್ಕೆ ಒಪ್ಪಿಕೊಳ್ಳದೇ ಇದ್ದಲ್ಲಿ ಅತ್ಯಾಚಾರದ ವೀಡಿಯೋ ಹಾಗೂ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬ್ಲಾಕ್ ಮೇಲ್ ಮಾಡಲಾಗಿತ್ತು ಎಂದು ದೂರಿನಲ್ಲಿ ಬಾಲಕಿ ಆರೋಪಿಸಿದ್ದಾಳೆ.