ಹಿಂದಿಯಲ್ಲಿ ಕಾಶ್ಮೀರಿ ಫೈಲ್ಸ್ ಹಿಂದಿಕ್ಕಿದ ಆರ್ ಆರ್ ಆರ್! RRR Hindi beats The Kashmir Files and Gangubai Kathiawadi to become fastest entrant to Rs 100-crore club

ಹಿಂದಿಯಲ್ಲಿ ಕಾಶ್ಮೀರಿ ಫೈಲ್ಸ್ ಹಿಂದಿಕ್ಕಿದ ಆರ್ ಆರ್ ಆರ್!

0

ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರ ಬಾಕ್ಸ್ ಆಫೀಸಲ್ಲಿ ಧೂಳೀಪಟ ಮಾಡುತ್ತಿದ್ದು, ಕೇವಲ ಮೂರು ದಿನದಲ್ಲೇ 100 ಕೋಟಿ ರೂ. ಬಾಚಿಕೊಂಡು ಹೊಸ ದಾಖಲೆ ಬರೆದಿದೆ.

5 ಭಾಷೆಗಳಲ್ಲಿ ಬಿಡುಗಡೆ ಆಗಿರುವ ಆರ್ ಆರ್ ಆರ್ ಚಿತ್ರ ಎಲ್ಲಾ ಭಾಷೆಗಳಲ್ಲೂ ದಾಖಲೆ ಬರೆದಿದೆ. ಅದರಲ್ಲೂ ಹಿಂದಿಯಲ್ಲಿ 100 ಕೋಟಿ ರೂ. ಗಳಿಸುವ ಮೂಲಕ ಕಾಶ್ಮೀರಿ ಫೈಲ್ಸ್ ಮತ್ತು ಗಂಗೂಭಾಯಿ ದಾಖಲೆಗಳನ್ನು ಹಿಂದಿಕ್ಕಿದೆ.

ಕೇಂದ್ರ ಹಾಗೂ ರಾಜ್ಯ ಸರಕಾರಗಳ ಬೆಂಬಲ, ತೆರಿಗೆ ವಿನಾಯಿತಿಗಳಿಂದ ರಾಜಕೀಯ ಬಣ್ಣ ಪಡೆದ ಕಾಶ್ಮೀರಿ ಫೈಲ್ಸ್ ಚಿತ್ರ 7 ದಿನದಲ್ಲಿ 100 ಕೋಟಿ ರೂ. ಸಂಗ್ರಹಿಸಿತ್ತು. ಆದರೆ ಕಮರ್ಷಿಯಲ್ ಆರ್ ಆರ್ ಆರ್ ಚಿತ್ರ 3 ದಿನದಲ್ಲೇ 100 ಕೋಟಿ ಬಾಚಿ ದಾಖಲೆ ಬರೆದಿದೆ. ಆಲಿಯಾ ಭಟ್ ನಟಿಸಿ, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗಂಗೂಬಾಯಿ ಚಿತ್ರ 13 ದಿನದಲ್ಲಿ 100 ಕೋಟಿ ಬಾಚಿತ್ತು.

Spread the love
Leave A Reply

Your email address will not be published.

Flash News