PLEASE BAN “MAHARSHI..AVADHOOTHA…VEDABRAHMA” REWARDS..?! ….“ಮಹರ್ಷಿ..ಅವಧೂತ….ವೇದಬ್ರಹ್ಮ”..ನಾಮಾಂಕಿತ ಇಟ್ಟುಕೊಂಡ ಕೆಲವರಿಂದ “ಮಹಾಪಚಾರ”..?!- ಲೂಟಿ..!?

ಹಿಂದೂ ಧಾರ್ಮಿಕ ಪರಂಪರೆಗೆ ಕೆಲವರಿಂದ ದೋಖಾ-ಮುಜರಾಯಿ ಇಲಾಖೆಗೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ಮನವಿ-ಮುಸ್ಲಿಂ ಶಿಲ್ಪಿಗಳ ವಿರುದ್ಧ ನಾಲಿಗೆ ಹರಿಬಿಟ್ಟ ಶ್ರೀನಿವಾಸ ಅಯ್ಯಂಗಾರ್ ವಿರುದ್ದ ಕ್ರಮಕ್ಕೆ ಮನವಿ

0

ಬೆಂಗಳೂರು:  ಇದು ಮುಂಚೆಯೇ ಆಗಬೇಕಿತ್ತೇನೋ..ಆದರೆ ತಡವಾದರೂ ಪರ್ವಾಗಿಲ್ಲ..ಉತ್ತಮವಾದ ರೀತಿಯಲ್ಲೇ ಆಗುತ್ತಿದೆ ಎನ್ನುವುದೇ ಸಮಾಧಾನ..ದೇವರು-ಧರ್ಮದ ಹೆಸರಲ್ಲಿ ವಂಚನೆ-ಮೋಸ ಮಾಡುವಂಥ ಕೆಲವು ಡೋಂಘೀಗಳ ಹೆಡೆಮುರಿ ಕಟ್ಟುವ ಕೆಲಸವಾಗಬೇಕೆನ್ನುವ ಒಂದು ಚರ್ಚೆಗೆ ವೇದಿಕೆ ಸಿಗುತ್ತಿರುವುದು ನಿಜಕ್ಕೂ ಸ್ವಾಗತಾರ್ಹ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.ಅಂದ್ಹಾಗೆ ಇಂತದ್ದೊಂದು ವಿಚಾರದ ಚರ್ಚೆಗೆ ವೇದಿಕೆ ಸೃಷ್ಟಿಸಿರುವುದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ.

ಆಚಾರ್ಯ..ಮಹರ್ಷಿ..ವೇದಬ್ರಹ್ಮ..ಶ್ರೀ….ಶ್ರೀ..ಹೀಗೆ ಜಾಹಿರಾತು ಹಾಕ್ಕೊಂಡಂಥವರು ಇಂದು ಹಾದಿಗೊಬ್ಬ ಬೀದಿಗೊಬ್ಬರಂತೆ ಸಿಗ್ತಾರೆ..ಮನುಷ್ಯನ ಅಸಹಾಯ ಕತೆ-ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡು ಹಣ ಮಾಡುವ ಇಂಥಾ ಸಾಕಷ್ಟು ಡೋಂಗಿಗಳ ವಿರುದ್ಧ ಕಠಿಣ ಕ್ರಮ ಕೈ್ಗೊಂಡು,ಅವರಿಂದ ಈ ಸ್ವಘೋಷಿತ-ಬಿರುದು-ನಾಮಾಂಕಿತಗಳನ್ನು ವಾಪಸ್ ಪಡೆಯಬೇಕೆನ್ನುವುದು ಸಾಯಿದತ್ತಾ ಒತ್ತಾಯ. ಮೇಲ್ಕಂಡ ನಾಮಾಂಕಿತಗಳನ್ನು ಬಳಸಿಕೊಂಡು ಹಿಂದೂ ಧರ್ಮ ಪರಂಪರೆಗೆ ಧಕ್ಕೆ ತರುತ್ತಿರುವ ಕೆಲವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾಯಿದತ್ತಾ ಮನವಿ ಮಾಡಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ.
ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ.

ಮೋಸ ಹೋಗೋರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆನ್ನುವ ಮಾತಿನಂತೆ ಇವತ್ತು ಜನರನ್ನು ಮೋಸ ಮಾಡಲು ಕೆಲವರಿಗೆ ಸಿಗುವ ಹಗ್ಗದ ಹಾಗೆಯೇ ಸುಲಭವಾದ ಮಾರ್ಗವೇ ಧರ್ಮ ಹಾಗೂ ದೇವರು.ಇದಕ್ಕಾಗಿ ಬಹುತೇಕರು ಆಯ್ದುಕೊಳ್ಳುವ ಮಾರ್ಗವೇ ಜ್ಯೋತಿಷ್ಯ-ಭವಿಷ್ಯ.

ಸತ್ಯಕ್ಕೆ ಹತ್ತಿರವಾದ ಸಾಕಷ್ಟು ಅಂಶಗಳನ್ನು ಹೇಳುವ ಮೂಲಕ ಜ್ಯೋತಿಷ್ಯ-ಭವಿಷ್ಯದ ಬಗ್ಗೆ ನಂಬಿಕೆ ಇಟ್ಟುಕೊಳ್ಳುವಂತೆ ಮಾಡುವ ಒಂದಷ್ಟು ಜನ ಹಿಂದೆ ಇದ್ದರು.ಆದರೆ ಕಾಲಘಟ್ಟದಲ್ಲಿ ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.ಎಲ್ಲಿ ನೋಡಿದರಲ್ಲಿ,,ಪತ್ರಿಕೆ-ಟಿವಿ ಜಾಹಿರಾತುಗಳಲ್ಲಿ ಮಿಂಚುತ್ತಾ ಫೋಸ್ ಕೊಡುವವರ ಸಂಖ್ಯೆಯಂತೂ ಅಪಾಯಕಾರಿ ಎನ್ನುವ ರೀತಿಯಲ್ಲಿ ಹೆಚ್ಚಾಗುತ್ತಿರುವುದು ಕೂಡ ಅಷ್ಟೇ ಸತ್ಯ.

ಆಚಾರ್ಯ..ಮಹರ್ಷಿ..ವೇದಬ್ರಹ್ಮ..ಶ್ರೀ….ಶ್ರೀ..ಪಂಡಿತ್..ಹೀಗೆ ಹಗ್ಗದ ಸರಕಿನಂತೆ ಬಳಕೆಯಾಗುತ್ತಿರುವ ಈ ನಾಮಾಂಕಿತಗಳಿಗೆ ಸಾವಿರಾರು ವರ್ಷಗಳಷ್ಟು ಧಾರ್ಮಿಕ ಪರಂಪರೆ ಇದೆ.ಒಬ್ಬ ಆಚಾರ್ಯನಾಗಲು,. ಒಬ್ಬ ಮಹರ್ಷಿ ಆಗೊಕ್ಕೆ..ಒಬ್ಬ ವೇದಬ್ರಹ್ಮ ನಾಗೋದು..ಸುಲಭದ ಮಾತಾಗಿರಲಿಲ್ಲ. .ಅದು ಸಿದ್ದಿಸೊಕ್ಕೆ ತಪಸ್ಸನ್ನೇ ಮಾಡಬೇಕಿತ್ತು.ಅಥವಾ ಧರ್ಮದ ತಳಹದಿ ಮೇಲೆ ತನ್ನನ್ನು ಆತ ತನ್ನನ್ನು ಪ್ರೂವ್ ಮಾಡಿಕೊಳ್ಳಬೇಕಿತ್ತು.ಆತ ಎಲ್ಲಾ ಮಾನದಂಡಗಳಲ್ಲೂ ಪಾರಂಗತನಾದ್ರೆ, ಪ್ರಾವೀಣ್ಯತೆ ಪಡೆದರೆ..ನಿಷ್ಣಾತನಾದ್ರೆ ಮಾತ್ರ ಆ ಬಿರುದುಗಳೆಲ್ಲಾ ಸಿದ್ಧಿಸುತ್ತಿತ್ತು.

ಅಷ್ಟೇ ಅಲ್ಲ ಅವರ ಬದುಕು ಕೂಡ ಅಷ್ಟೇ ಆದರಣೀಯವಾಗಿರುತ್ತಿತ್ತು.ಎಲ್ಲರಿಗೂ ಆದರ್ಶಪ್ರಾಯವಾಗಿರುತ್ತಿತ್ತು.ಅವರನ್ನು ಕಂಡರೆ ಗೌರವ ಉಕ್ಕಿ ಬರುತ್ತಿತ್ತು.ಅವರು ಕೂಡ ಹಾಗೆಯೇ ನಡೆದುಕೊಳ್ಳುತ್ತಿದ್ದರು.ಆದರೆ..ಕಾಲಾನುಕ್ರಮದಲ್ಲಿ ಈ ಪದಗಳು ಸುಲಿಗೆಗೆ-ಜನರ ಅಮಾಯಕತೆ ದುರುಪಯೋಗಕ್ಕೆ,ಮನೋದೌರ್ಬಲ್ಯವನ್ನಿಟ್ಟುಕೊಂಡೇ ಹಣ ಮಾಡೊಕ್ಕೆ ದುರ್ಬಳಕೆ ಮಾಡಿಕೊಳ್ಳುವ ಸ್ಥಿತಿ ತಲುಪಿದ್ದು ಮಾತ್ರ ದೌರ್ಬಾಗ್ಯಪೂರ್ಣ.

ಇವತ್ತು ಆ ನಾಮಾಂಕಿತಗಳ ಬಳಕೆಗೆ ಯಾವುದೇ ಮಾನದಂಡಗಳಿಲ್ಲ ಎನ್ನುವಂತಾಗಿದೆ.ದೊಡ್ಡ ದೊಡ್ಡವರೇ ಈ ಆಚಾರ್ಯ..ಮಹರ್ಷಿ..ವೇದಬ್ರಹ್ಮ..ಶ್ರೀ….ಶ್ರೀ.. ಪಂಡಿತ್ ಗಳ ಕಾಲಿಗೆ ಬಿದ್ದು ಬರುವ ಸ್ಥಿತಿ ಇದೆ.ತಮ್ಮ ರಾಜಕೀಯ ಹಾಗೂ ವೈಯುಕ್ತಿಕ ಬದುಕಿನ ನಿರ್ದಾರಗಳನ್ನು ಅವರ ಮುಂದೆ,ಮಾರ್ಗದರ್ಶನದಲ್ಲಿ ಮಾಡುವ ದಯನೀಯ ಸ್ಥಿತಿ ತಲುಪಿದ್ದಾರೆ.

ಹಾಗಾಗಿನೇ ಈ ಆಚಾರ್ಯ..ಮಹರ್ಷಿ..ವೇದಬ್ರಹ್ಮ..ಶ್ರೀ….ಶ್ರೀ.. ನಾಮಾಂಕಿತಗಳನ್ನು ಇಟ್ಟುಕೊಂಡು ಮೋಸ ಮಾಡುವ ಬಹುತೇಕರಿಗೆ ಕಡಿವಾಣವೇ ಇಲ್ಲದಂತಾಗಿದೆ.ಲಂಗುಲಗಾಮಿಲ್ಲದ ಹೋರಿಗಳಂತಾಗಿದ್ದಾರೆ.ಆದರೆ ತಮ್ಮ ಸ್ವಾರ್ಥಕ್ಕಾಗಿ ಹಿಂದೂ ಧಾರ್ಮಿಕ ಪರಂಪರೆ-ಮಹತ್ವ-ಅರ್ಥ ಇರುವ ಈ ಪೂಜ್ಯನೀಯ ನಾಮಾಂಕಿತಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವಂಥವರಿಗೆ ಕಡಿವಾಣ ಹಾಕಲೇಬೇಕೆಂದು ಸಾಯಿದತ್ತಾ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ ಕೂಡ.

ತಮ್ಮ ಸ್ವಾರ್ಥರಹಿತ ಬದುಕು-ನಿಷ್ಕಳಂಕ ವ್ಯಕ್ತಿತ್ವ-ಸಮಾಜಮುಖಿ,ಮಾನವಮುಖಿ ಕಾರ್ಯಸಾಧನೆ ಗಳಿಂದಲೇ ಪೂಜ್ಯನೀಯವಾದವರ ದೊಡ್ಡ ಸಂಖ್ಯೆಯೇ ನಮ್ಮಲ್ಲಿದೆ. ವೇದಪುರಾಣಗಳಲ್ಲಿ ಹಿಂದೂ ಪರಂಪರೆ ಹಿನ್ನಲೆಯಲ್ಲಿ ಅತ್ಯಂತ ಕಠಿಣ ತಪಸ್ಸು-ಪರಿಶ್ರಮದ ತರುವಾಯ ಈ ನಾಮಾಂಕಿತಗಳೆಲ್ಲಾ ಸಿದ್ಧಿಸುತ್ತಿದ್ದವು.ಹಾಗೆ ಸಿದ್ದಿಸಿಕೊಂಡ ಪೂಜ್ಯನೀಯರು ಈ ನಾಮಾಂಕಿತಗಳಿಗೆ ಕೊಂಚವೂ ಧಕ್ಕೆ ಯಾಗದಂತೆ ಬದುಕು-ವ್ಯಕ್ತಿತ್ವ-ಆಚಾರ-ವಿಚಾರ-ನಡತೆಗಳನ್ನು ರೂಢಿಸಿಕೊಂಡಿದ್ದರು.ಅವರ ಮೇಲೆ ಈವರೆಗೂ ಒಂದೇ ಒಂದು ಕಳಂಕ ಬಂದ ನಿದರ್ಶನಗಳಿಲ್ಲ.

ಅಷ್ಟೊಂದು ಶೃದ್ಧೆ-ಜತನದಿಂದ ಕಾಪಾಡಿಕೊಂಡು ಬಂದ ಪೂಜ್ಯನೀಯರ ಬದುಕು-ವ್ಯಕ್ತಿತ್ವಕ್ಕೆ ಕಳಂಕ ಮೆಟ್ಟಿಸಿದವರು ಈ ನಾಮಾಂಕಿತಗಳನ್ನು ಬಳಸಿಕೊಳ್ಳುತ್ತಿರುವರಲ್ಲಿ ಎಷ್ಟೋ ಮಂದಿ ಇದ್ದಾರೆ.ಧಾರ್ಮಿಕ ಪರಂಪರೆಗೆ ಬದ್ಧವಾಗಿ ನಡೆದುಕೊಳ್ಳುವ ಮನಸ್ಥಿತಿ ಅವರಿಗೆ ಇದ್ದಿದ್ದೇ ಆಗಿದ್ದಲ್ಲಿ ಆ ನಾಮಾಂಕಿತಗಳನ್ನೆಲ್ಲಾ ಕಳಚಿಟ್ಟು ಪ್ರಾಯಶ್ಚಿತದ ರೂಪದಲ್ಲಿ ತಮ್ಮನ್ನು ದಂಡಿಸಿಕೊಳ್ಳಬೇಕಿತ್ತು.ದುಡಿಸಿಕೊಳ್ಳಬೇಕಿತ್ತು.

ಆದರೆ ಕಳಂಕವನ್ನು ಮೆತ್ತಿಕೊಳ್ಳುತ್ತಲೇ ಮುಂದುವರೆದಿದ್ದಾರೆ.ಅವರಿಗೆ ಪಾಪಪ್ರಜ್ಞೆ ಎನ್ನೋದೇ ಇಲ್ಲವಾಗಿದೆ.ಇಂಥವರಿಂದಲೇ ಇವತ್ತು ಆಚಾರ್ಯ..ಮಹರ್ಷಿ..ವೇದಬ್ರಹ್ಮ..ಶ್ರೀ….ಶ್ರೀ.. ಪಂಡಿತ್ ನಾಮಾಂಕಿತಗಳಿಗೆ ಕಳಂಕ ತಟ್ಟುತ್ತಿದೆ ಎನ್ನುವುದು ಅನೇಕ ಧರ್ಮ ಚಿಂತಕರ ನಿಲುವು.

ಧಾರ್ಮಿಕ ತಳಹದಿಯ ಮೇಲೆ ನಮ್ಮ ಸಮಾಜ ಹಾಗೂ ಬದುಕುಗಳು ನಿಂತಿರುವುದರಿಂದ ಆಚಾರ್ಯ..ಮಹರ್ಷಿ..ವೇದಬ್ರಹ್ಮ..ಶ್ರೀ….ಶ್ರೀ.. ಹೀಗೆ ನಾಮಾಂಕಿತಗಳಿಗೆ ಭಾರೀ ಬೆಲೆ ಹಾಗೂ ಗೌರವ ನೀಡುವ ಸಂಪ್ರದಾಯವೂ ನಮ್ಮಲ್ಲಿದೆ.ಹಾಗಾಗಿ ಈ ನಾಮಾಂಕಿತಗಳಿಗೆ ಕೆಲವು ವಂಚಕರು-ಡೋಂಘಿ-ದ್ರೋಹಿಗಳಿಂದ ದೊಡ್ಡ ಆತಂಕವಿದೆ.ಆ ಆತಂಕ ದೂರ ಮಾಡಬೇಕಾದರೆ ಈ ನಾಮಾಂಕಿತಗಳನ್ನು ಬಳಸಿಕೊಳ್ಳುವವರ ದುರ್ವರ್ತನೆಗೆ ಬ್ರೇಕ್ ಹಾಕಲೇಬೇಕು.ಗುರುಪರಂಪರೆಯ ಪಾವಿತ್ರ್ಯತೆ ಕಾಪಾಡಬೇಕು ಎಂದು ಸಾಯಿದತ್ತಾ ಮನವಿ ಮಾಡಿದ್ದಾರೆ.

ಹಿಂದೂ ಧಾರ್ಮಿಕ ಪರಂಪರೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಆಗಮಶಾಸ್ತ್ರ ಪಂಡಿತರು ಹಾಗೂ ವೇದ ಪಾರಂಗತರು ಮೇಲ್ಕಂಡ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಆಚಾರ್ಯ..ಮಹರ್ಷಿ..ವೇದಬ್ರಹ್ಮ..ಶ್ರೀ….ಶ್ರೀ..ನಾಮಾಂಕಿತಗಳನ್ನು ಯಾರ್ಯಾರು ಬಳಸಬೇಕು.ಯಾರ್ಯಾರು ಈ ನಾಮಾಂಕಿತಗಳ ಬಳಕೆಗೆ ನಿಜವಾಗ್ಯೂ ಯೋಗ್ಯರು ಎನ್ನುವ ಸಲಹೆಯನ್ನು ಮುಜರಾಯಿ ಇಲಾಖೆಗೆ ನೀಡಬೇಕೆನ್ನುವ ಮನವಿ ಸಾಯಿದತ್ತಾ ಅವರದು.

ಇಂದಿನ ಸಮಾಜದಲ್ಲಿ ನಿಜವಾಗ್ಯೂ ಚರ್ಚೆಯಾಗಬೇಕಿರುವುದು ಇಂಥಾ ವಿಚಾರಗಳಿಂದ. ಆಚಾರ್ಯ.. ಮಹರ್ಷಿ..ವೇದಬ್ರಹ್ಮ..ಶ್ರೀ….ಶ್ರೀ.. ನಾಮಾಂಕಿತಗಳನ್ನು ಇಟ್ಟುಕೊಂಡು ಜನರ ಧಾರ್ಮಿಕ ನಂಬಿಕೆಗ ಳೊಂದಿಗೆ ಚೆಲ್ಲಾಟವಾಡುವ ಡೋಂಘೀಗಳಿಗೆ ಬ್ರೇಕ್ ಬೀಳಬೇಕಾದ್ರೆ ಸರ್ಕಾರ ಹಾಗೂ ಮುಜರಾಯಿ ಇಲಾಖೆ ಈ ನಾಮಾಂಕಿತಗಳ ಬಳಕಗೆ ಮಾನದಂಡ ಹಾಗೂ ಸ್ಪಷ್ಟ ಸುತ್ತೋಲೆ ಹೊರಡಿಸಲೇಬೇಕಿದೆ.

ಶ್ರೀನಿವಾಸ ಅಯ್ಯಂಗಾರ್
ಶ್ರೀನಿವಾಸ ಅಯ್ಯಂಗಾರ್

ಶ್ರೀನಿವಾಸ ಅಯ್ಯಂಗಾರ್ ವಿರುದ್ದ ಕ್ರಮಕ್ಕೆ ಮನವಿ:ಕೋಮು ದಳ್ಳುರಿಯಲ್ಲಿ ಬೇಯುತ್ತಿರುವ ಸಧ್ಯದ ಸ್ಥಿತಿಯಲ್ಲಿ ಅದನ್ನು ತಿಳಿಗೊಳಿಸುವ ಕೆಲಸ ಧಾರ್ಮಿಕ ಪರಂಪರೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಮಾಡಬೇಕು.ಅದೇ ನಿಜವಾದ ಧರ್ಮ.ಆದರೆ ಸುಡೋ ಬೆಂಕಿಗೆ ತುಪ್ಪ ಸುರಿದಂಗೆ ಇಡೀ ರಾಜ್ಯವೇ ಧಾರ್ಮಿಕ ಸಾಮರಸ್ಯದ ಕೊರತೆಯಲ್ಲಿ ಬಳಲುತ್ತಿರುವಾಗ ಪ್ರಚೋದನಾಕಾರಿಯಾದಂಥ ರೀತಿಯ ಹೇಳಿಕೆ ಕೊಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.ಈ ಸಾಲಿಗೆ ಸೇರುವ ಮತ್ತೊಂದು ಹೆಸರು ಮೇಲುಕೋಟೆ ಶ್ರೀನಿವಾಸ ಅಯ್ಯಂಗಾರ್.

ಮೇಲುಕೋಟೆಯ ಚೆಲುವ ನಾರಾಯಣಸ್ವಾಮಿ ದೇವಸ್ಥಾನದ ನಾಲ್ಕನೇ ಸ್ಥಾನಿಕರಾಗಿ ಕೆಲಸ ಮಾಡುತ್ತಿರುವ ಶ್ರೀನಿವಾಸ ಅಯ್ಯಂಗಾರ್ ಇತ್ತೀಚೆಗೆ ಮುಸ್ಲಿಂ ಶಿಲ್ಪಿಗಳು ಮಾಡಿದ  ಹಿಂದೂ ವಿಗ್ರಹವನ್ನು ಯಾರೊಬ್ಬ ಹಿಂದೂ ಖರೀದಿಸಬಾರದು..ಪೂಜಿಸಬಾರದು ಎಂಬ ಹೇಳಿಕೆ ಕೊಟ್ಟು ಕೋಮುದ್ವೇಷ ಬಿತ್ತೊಕ್ಕೆ ಕಾರಣವಾಗಿದ್ರು.ಇದರ ಬಗ್ಗೆ ಖಂಡನೆ ಕೂಡ ವ್ಯಕ್ತವಾಗಿತ್ತು.ಇದು ಒಂದ್ ವಿಷಯವಾದ್ರೆ ಸರ್ಕಾರದ ಮುಜರಾಯಿ ಇಲಾಖೆಯಿಂದ ಗೌರವ ವೇತನ ಪಡೆಯುತ್ತಿರುವುದರಿಂದ ಸರ್ಕಾರಿ ನೌಕರರಾಗಿ ಪರಿಗಣಿಸಲ್ಪಡುತ್ತಾರೆ.

ಒಬ್ಬ ಸರ್ಕಾರಿ ನೌಕರನಾದವನು ಈ ರೀತಿಯ ಕೋಮು ಪ್ರಚೋದನೆಯ ಹೇಳಿಕೆ ಕೊಡುವುದು ಕಾನೂನಾತ್ಮಕವಾಗಿಯೂ ತಪ್ಪು.ಧರ್ಮ ಸೂಕ್ಷ್ಮವಾದ ವಿಚಾರದಲ್ಲಿ ಸಂವೇದನಾರಹಿತವಾಗಿ ಮಾತನಾಡಿದ್ದಷ್ಟೇ ಅಲ್ಲ,ಕಾನೂನು ಚೌಕಟ್ಟು ಮೀರಿಯೂ ವರ್ತಿಸಿರುವುದು ಅಕ್ಷಮ್ಯವಾಗಿರುವುದರಿಂದ  ಶ್ರೀನಿವಾಸ ಅಯ್ಯಂಗಾರ್ ವಿರುದ್ದ ಕಠಿಣಾತೀಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ಮನವಿ ಮಾಡಿದ್ದಾರೆ.

 

Spread the love
Leave A Reply

Your email address will not be published.

Flash News