BIG SHOCK..!! TO Rtd ADGP BHASKAR RAO..?! BJP’S REVENGE AGAINST RAO…?! “ಆಪ್” ಸೇರ್ಪಡೆ ಬೆನ್ನಲ್ಲೇ ಭಾಸ್ಕರ್ ರಾವ್ ಗೆ ಬಿಗ್ ಶಾಕ್..?! ನಿವೃತ್ತ ಐಪಿಎಸ್ ಗೆ ಖೆಡ್ಡಾ ತೋಡಲಿಕ್ಕೆ ಮೆಗಾ ಪ್ಲ್ಯಾನ್ ರೆಡಿ..?!

ಕೇಂದ್ರ ಬಿಜೆಪಿಯಿಂದ ಬಿಟ್ ಕಾಯಿನ್ ಫೈಲ್ ಓಪನ್.?! ಭಾಸ್ಕರ್ ರಾವ್ ವಿರುದ್ಧದ ಸಚಿನ್ ಮಾಮನಿ ಪತ್ರಕ್ಕೆ ಜೀವಕೊಡುತ್ತಾ ಬಿಜೆಪಿ..?!

0
ನಿವೃತ್ತ ಐಪಿಎಸ್ ಭಾಸ್ಕರ ರಾವ್ ಪುತ್ರ( ಕಾಲ್ಪನಿಕ)
ನಿವೃತ್ತ ಐಪಿಎಸ್ ಭಾಸ್ಕರ ರಾವ್ ಪುತ್ರ( ಕಾಲ್ಪನಿಕ)

ಬೆಂಗಳೂರು: ಅದ್ಯಾವ ಘಳಿಗೆಯಲ್ಲಿ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರರಾವ್ ಕೆಲವರ ಫೈಲ್ಸ್ ಗಳು ನನ್ನ ಬಳಿ ಇವೆ..ಅದನ್ನು ಓಪನ್ ಮಾಡ್ತೇನೆ ಎಂದು ಹೇಳಿಕೆ ಕೊಟ್ರೋ ಗೊತ್ತಿಲ್ಲ, ಅವರು ಓಪನ್ ಮಾಡೊಕ್ಕೆ ಮುನ್ನವೇ ಕೇಂದ್ರದ ಬಿಜೆಪಿ ಸರ್ಕಾರ ಭಾಸ್ಕರ್ ರಾವ್ ಅವರ ಮೇಲಿರುವ ಆಪಾದನೆಗಳ ಫೈಲ್ ಓಪನ್ ಮಾಡೊಕ್ಕೆ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗುತ್ತಿದೆ.

ಆಪ್ ಸೇರಿದ ಬೆನ್ನಲ್ಲಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಮಾದ್ಯಮ ಸಂವಾದದಲ್ಲಿ ಮಾತನಾಡುವ ವೇಳೆ ನಮ್ಮ ಮೇಲೆ ಒತ್ತಡ ಹೇರಿ,ನಮ್ಮನ್ನು ದುರ್ಬಳಕೆ ಮಾಡಿಕೊಂಡಿದ ಕೆಲವು ಅಧಿಕಾರಿಗಳು,ಕೆಲಸ ಮಾಡಿಸಿಕೊಂಡಿರುವ ಅಧಿಕಾರಿಗಳ ಬಂಡವಾಳ ಬಿಚ್ಚಿಡಬೇಕಿದೆ ಎಂದಿದ್ದರಲ್ಲದೇ ಬರುವ ದಿನಗಳಲ್ಲಿ ಆ ಎಲ್ಲಾ ಫೈಲ್ಸ್ ಗಳನ್ನು ಬಯಲು ಮಾಡುತ್ತೇನೆ ಎಂದಿದ್ದರು.ಅಲ್ಲದೇ ನನ್ನ ಮೇಲೆಯೂ ಇದೇ ಕಾರಣಕ್ಕೆ ರೇಡ್ ನಡೆಯಬಹುದೆಂದು ಅಂದಾಜಿಸಿದ್ದರು.ಅವರು ಏನಾಗಬಹುದೆಂದು ಅಂದಾಜಿಸಿಕೊಂಡಿದ್ದರೋ ಅದೇ ನಡೆಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ ಎಂದು ಕೆಲವು ಮೂಲಗಳು ಹೇಳ್ತಿವೆ.

ಭಾಸ್ಕರ್ ರಾವ್ ನೀಡಿದ್ದ ಹೇಳಿಕೆಗಳು ಬಿಜೆಪಿ ವರಿಷ್ಠರನ್ನು ಕೆಂಡಾಮಂಡಲಗೊಳಿಸಿವೆ ಎನ್ನಲಾಗುತ್ತಿದೆ.ಹಾಗಾಗಿನೇ ಭಾಸ್ಕರ್ ರಾವ್ ಅವರ ಫೈಲ್ಸ್ ಗಳನ್ನು ಒಂದೊಂದಾಗಿಯೇ ಓಪನ್ ಮಾಡ ಲಿಕ್ಕೆ ಸಿದ್ಧತೆಗಳು ನಡೆಯುತ್ತಿವೆ ಎನ್ನಲಾಗ್ತಿದೆ.ಇದರ ಮೊದಲ ಭಾಗವಾಗಿ ಅವರ ಮಗ ಭಾಗಿಯಾಗಿದ್ದಾನೆ ಎನ್ನಲಾಗಿರುವ ಬಿಟ್ ಕಾಯಿನ್ ಹಗರಣವನ್ನೇ ಮೊದಲ ಫೈಲ್ ಆಗಿ ಓಪನ್ ಮಾಡೊಕ್ಕೆ ಪ್ರಿಪೇರ್ ಮಾಡಿಕೊಳ್ಳಲಾಗುತ್ತಿದೆಯಂತೆ.

ಬಿಟ್ ಕಾಯಿನ್ ಕಿಂಗ್ ಪಿನ್ ಶ್ರೀಕಿ
ಬಿಟ್ ಕಾಯಿನ್ ಕಿಂಗ್ ಪಿನ್ ಶ್ರೀಕಿ

ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳೆದ ವರ್ಷ ಸಾಮಾಜಿಕ ಕಾರ್ಯಕರ್ತ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಸಚಿನ್ ಮಾಮನಿ ಎನ್ನುವವರು ಪತ್ರವೊಂದನ್ನು ಬರೆದಿದ್ದರು.ಆ ಪತ್ರದಲ್ಲಿ ಮಾಜಿ ಪೊಲೀಸ್ ಕಮಿಷ ನರ್ ಭಾಸ್ಕರ ರಾವ್ ಹಾಗೂ ಅವರ ಪುತ್ರನ ಬಗ್ಗೆ ಸಾಕಷ್ಟು ಉಲ್ಲೇಖಗಳಿದ್ದವು,. ಪತ್ರದಲ್ಲಿರುವ ಸಂಗತಿಗಳ ಪೈಕಿ ಇಂಟರ್ ನ್ಯಾಶನಲ್ ಹ್ಯಾಕರ್ ಶ್ರೀಕಿ, ಭಾಸ್ಕರ್ ರಾವ್ ಅವರ ಪುತ್ರ ಅನಿರುದ್ಧ್ ಅಲಿಯಾಸ್ ರುದ್ಧ ನ ಪ್ರಸ್ತಾಪವಾಗಿತ್ತು.

ಆಮ್ ಆದ್ಮಿ ಸೇರಿದ ಸಂದರ್ಭದಲ್ಲಿ ಕೆಲವರ ಅಕ್ರಮಗಳ ಫೈಲ್ಸ್ ಬಹಿರಂಗಪಡಿಸುವುದಾಗಿ ಹೇಳಿದ್ದ ಭಾಸ್ಕರರಾವ್
“ಆಮ್ ಆದ್ಮಿ” ಸೇರಿದ ಸಂದರ್ಭದಲ್ಲಿ ಕೆಲವರ ಅಕ್ರಮಗಳ ಫೈಲ್ಸ್ ಬಹಿರಂಗಪಡಿಸುವುದಾಗಿ ಹೇಳಿದ್ದ ಭಾಸ್ಕರರಾವ್….

“ಅನಿರುದ್ಧ ಒಬ್ಬ ಡ್ರಗ್ ಅಡಿಕ್ಟ್ ಎಂದೂ ಉಲ್ಲೇಖಿಸಲಾಗಿದ್ದ  ಆ ಪತ್ರದಲ್ಲಿ ಭಾಸ್ಕರ್ ರಾವ್ ತನ್ನ ಮಗನ ಮೂಲಕ ಶ್ರೀಕಿಯ ಸಂಪರ್ಕ ಪಡೆದು ಸಾಕಷ್ಟು ಕಾನೂನು ಬಾಹಿರ ಕೃತ್ಯಗಳನ್ನು ಮಾಡಿಸಿದರೆನ್ನುವ ಗಂಭೀರ ಆರೋಪ ಮಾಡಲಾಗಿತ್ತು. ಮುಂದುವರೆದು ಭಾಸ್ಕರ್ ರಾವ್ ಕರೆಯನ್ನು ಅಲೋಕ್ ಕುಮಾರ್ ಟ್ಯಾಪ್ ಮಾಡಿಸಿದ್ರು ಎನ್ನುವ ಸಂಗತಿ ಸಿಬಿಐ ಮರು ತನಿಖೆಯ ಹಂತದಲ್ಲಿರುವಾಗಲೇ ಭಾಸ್ಕರ್ ರಾವ್ ಅವ್ರೇ ಅಲೋಕ್ ಕುಮಾರ್ ಅವರ ಫೋನ್

ಟ್ಯಾಪ್ ಮಾಡಿಸಿದರೆನ್ನುವ ಸ್ಪೋಟಕ ಸಂಗತಿಯನ್ನು ಪ್ರಧಾನಿ ಅವರಿಗೆ ಬರೆಯಲಾಗಿರುವ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.ಈ ಕರೆಯನ್ನು ಟ್ಯಾಪ್ ಮಾಡಲು ಭಾಸ್ಕರ ರಾವ್ ಸಹಾಯ ಪಡೆದಿದ್ದು ಒನ್ಸ್ ಅಗೈನ್ ಈ ಶ್ರೀಕಿ ಮೂಲಕವೆನ್ನುವುದು ಕೂಡ ಸಚಿನ್ ಮಾಮನಿ ಅವರ  ದೂರಿನಲ್ಲಿ ಉಲ್ಲೇಖವಾಗಿದೆ.

ಭಾಸ್ಕರರಾವ್ ವಿರುದ್ದ ಸಚಿನ್ ಮಾಮನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿದ್ದ ದೂರಿನ ಪ್ರತಿ
ಭಾಸ್ಕರರಾವ್ ವಿರುದ್ದ ಸಚಿನ್ ಮಾಮನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿದ್ದ ದೂರಿನ ಪ್ರತಿ…………

ಅಷ್ಟಕ್ಕೆ ಭಾಸ್ಕರ್ ರಾವ್ ಅವರು ಶ್ರೀಕಿಯ ಸಹಾಯ ಪಡೆದುಕೊಂಡಿದಿದ್ದರೆ ಅದನ್ನು ವೃತ್ತಿ ಮತ್ಸರಕ್ಕೆ ನಡೆದೋದ ಘಟನೆ ಎಂದುಕೊಳ್ಳಬಹುದಿತ್ತೇನೋ..ಆದರೆ ಪತ್ರದಲ್ಲಿ ಉಲ್ಲೇಖವಾಗಿರು ವಂತೆ ಶ್ರೀಕಿಯನ್ನು ಅನೇಕ ಪ್ರಮುಖ ವೆಬ್ ಸೈಟ್ ಗಳ ಹ್ಯಾಕ್ ಗೂ ಭಾಸ್ಕರ್ ರಾವ್ ಅವರು ಬಳಸಿಕೊಂಡರೆನ್ನಲಾಗಿದೆ. ಡೆವಲಪ್ ಆಗಿರುವ ಅನೇಕ ಸಾಫ್ಟ್ ವೇರ್ ಗಳನ್ನು ಹ್ಯಾಕ್ ಮಾಡಿಸಿ ಪ್ರಮುಖ ಮಾಹಿತಿಗಳನ್ನು ಸಂಗ್ರಹಿಸಿದರಂತೆ.ಪೊಲೀಸ್ ಹುದ್ದೆಯಲ್ಲಿದ್ದರೂ ರಾಜಕೀಯ ಮಹತ್ವಾಕಾಂಕ್ಷಿಯಾಗಿದ್ದ ಭಾಸ್ಕರ್ ರಾವ್ ತಮ್ಮ ರಾಜಕೀಯ ಭವಿಷ್ಯ ಭದ್ರ ಮಾಡಿಕೊಳ್ಳಲು ಕೂಡ ಶ್ರೀಕಿಯನ್ನು ಬಳಸಿಕೊಂಡಿದ್ದರೆನ್ನುವುದನ್ನು ದೂರು ವಿವರಿಸಿತ್ತು.

ಭಾಸ್ಕರರಾವ್ ವಿರುದ್ದ ಸಚಿನ್ ಮಾಮನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿದ್ದ ದೂರಿನ ಪ್ರತಿ-2
ಭಾಸ್ಕರರಾವ್ ವಿರುದ್ದ ಸಚಿನ್ ಮಾಮನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿದ್ದ ದೂರಿನ ಪ್ರತಿ-2…

ಆದರೆ ಸಚಿನ್ ಮಾಮನಿ ಅವರು ಮಾಡಿರುವ ಆರೋಪಗಳಲ್ಲಿ ಎಷ್ಟರ ಮಟ್ಟಿಗೆ ಸತ್ಯಾಂಶವಿದೆ ಎನ್ನುವುದು ತನಿಖೆ ಶುರುವಾದ ಮೇಲೆ ಗೊತ್ತಾಗಲಿದೆ.ಆದರೆ ಭಾಸ್ಕರ್ ರಾವ್ ಮೇಲ್ಕಂಡ ಆರೋಪಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದರು.. ಮೇಲ್ಕಂಡ ದೂರನ್ನು  ಪ್ರಧಾನಿಗಳ ಕಾರ್ಯದರ್ಶಿ ಪಿ.ಕೆ ಮಿಶ್ರಾ, ಪ್ರದಾನಿಗಳ ರಾಜಕೀಯ ಸಲಹೆಗಾರ ಭಾಸ್ಕರ್ ರಾವ್ ಕುಲ್ಬೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಜಾರಿದಳದ ನಿರ್ದೇಶಕರು ಮತ್ತು  ಎಂಎಚ್ ಎ ನ ಇಂಟೆಲಿಜೆನ್ಸ್ ವಿಂಗ್ ನ ವಿಶೇಷ ನಿರ್ದೇಶಕರಿಗೂ ಸಚಿನ್ ಮಾಮನಿ ಬರೆದಿದ್ದರು.

ಭಾಸ್ಕರ್ ರಾವ್ ಅವರ ವಿರುದ್ದ ಸಚಿನ್ ಮಾಮನಿ ಅವರು ಬರೆದಿದ್ದ ದೂರನ್ನೇ ಅಸ್ತ್ರವಾಗಿಟ್ಟುಕೊಂಡು ಬಿಜೆಪಿ ಕೇಂದ್ರ ವರಿಷ್ಠರು ಗೇಮ್ ಪ್ಲ್ಯಾನ್ ರೂಪಿಸಿದ್ದಾರೆ ಎನ್ನಲಾಗಿದೆ. ಬಿಟ್ ಕಾಯಿನ್ ಹಗರಣದಲ್ಲಿ ತಗಲಾಕೊಕ್ಕೆ ಗೃಹ ಇಲಾಖೆ ಸಿದ್ಧತೆ ನಡೆಸಿದೆ..ಶೀಘ್ರದಲ್ಲೇ ಭಾಸ್ಕರ್ ರಾವ್ ಪುತ್ರ ಸೇರಿದಂತೆ 12 ಹಿರಿಯ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಲು ಸಿದ್ಧತೆ ಮಾಡಿಕೊಳ್ಳ ಲಾಗುತ್ತಿದೆ. ಎರಡು ತಿಂಗಳಲ್ಲೇ ತನಿಖೆ ನಡೆಸುತ್ತಿರುವ ಭಾಸ್ಕರ್ ರಾವ್ ಪುತ್ರನ ಮೇಲೆ ಎಫ್ ಐಆರ್ ದಾಖಲಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.ಒಟ್ಟಿನಲ್ಲಿ ಭಾಸ್ಕರ್ ರಾವ್ ಅವರೇ ಮೊದಲು ಫೈಲ್ಸ್ ಓಪನ್ ಮಾಡ್ತಾರೋ ಅಥವಾ ಅವರ ಫೈಲ್ಸ್ ಬಿಜೆಪಿ ಅವರಿಂದಲೇ ಓಪನ್ ಆಗುತ್ತೋ ಕಾದುನೋಡಬೇಕಿದೆ.

ನವೆಂಬರ್ 6,2021 ರಂದೇ  “BITCOIN” SHOCK-COMPLAINT TO “PRIME MINISTER” AGAINST “EX-POLICE COMMISSINOR” :“ಬಿಟ್ ಕಾಯಿನ್ದಂಧೆಕೋರನ ಜತೆ ಮಾಜಿ ಪೊಲೀಸ್ ಕಮಿಷನರ್ ಗೆ ಲಿಂಕ್..?! ಪ್ರಧಾನಿಗೆ ಬರೆದ ಪತ್ರದಲ್ಲಿ ಸ್ಪೋಟಕ ಸಂಗತಿ ಉಲ್ಲೇಖ..?! ಶೀರ್ಷಿಕೆಯಲ್ಲಿ ಬಿಟ್ ಕಾಯಿನ್ ಅಕ್ರಮದ ಕಿಂಗ್ ಪಿನ್ ಶ್ರೀಕಿ ಜತೆ  ಭಾಸ್ಕರ್ ರಾವ್ ಹಾಗೂ ಪುತ್ರ ಹೊಂದಿರಬಹುದಾದ ಸಂಪರ್ಕದ ಬಗ್ಗೆ ದೂರುದಾರ ಸಚಿನ್ ಮಾಮನಿ ಪ್ರಧಾನಿ ಅವರಿಗೆ ಬರೆದಿದ್ದ ದೂರಿನ ಪ್ರತಿಯನ್ನು ಆಧರಿಸಿ ಕನ್ನಡ ಫ್ಲ್ಯಾಶ್ ನ್ಯೂಸ್ ವರದಿ ಮಾಡಿತ್ತು ಅದರ ಲಿಂಕ್ ಕೆಳಕಂಡಂತಿದೆ..ಸಂಪೂರ್ಣ ಮಾಹಿತಿಗೆ ಲಿಂಕ್ ಕ್ಲಿಕ್ ಮಾಡಿ

“BITCOIN” SHOCK-COMPLAINT TO “PRIME MINISTER” AGAINST “EX-POLICE COMMISSINOR” :“ಬಿಟ್ ಕಾಯಿನ್” ದಂಧೆಕೋರನ ಜತೆ ಮಾಜಿ ಪೊಲೀಸ್ ಕಮಿಷನರ್ ಗೆ ಲಿಂಕ್..?! ಪ್ರಧಾನಿಗೆ ಬರೆದ ಪತ್ರದಲ್ಲಿ ಸ್ಪೋಟಕ ಸಂಗತಿ ಉಲ್ಲೇಖ..?!

Spread the love
Leave A Reply

Your email address will not be published.

Flash News