BreakingMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿರಾಜಕೀಯರಾಜ್ಯ-ರಾಜಧಾನಿ

SANTHOSH PATIL SUSPICIOUS DEATH..: TOOLKIT SOUNDS ONCE AGAIN..? BJP SUSPECTS ON CONGRESS..?! ಟೂರ್” ಟು “ಸೂಸೈಡ್..?! ”. ಅಸಹಜ ಸಾವಿನ ಸುತ್ತ ಟಾಪ್ ಟೆನ್ ಅನುಮಾನಗಳು..?!!

ಬೆಂಗಳೂರು/ಉಡುಪಿ/ಬೆಳಗಾಂ: ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾಗಿದೆ. ಸಾವಿಗೆ ಕಾರಣವೇನು ಎನ್ನುವ ಸತ್ಯವೇ ಸಮಾಧಿಯಾಗಿದೆ.ಆದರೆ ಆತ್ಮಹತ್ಯೆಯನ್ನು ರಾಜಕೀಯ ಹಿತಾಸಕ್ತಿಗೆ-ಕೆಸರೆರಾಚಟಕ್ಕೆ ಬಳಸಿಕೊಳ್ಳಲಾಗ್ತಿದೆ ಎನ್ನುವುದು ಕೂಡ ಅಷ್ಟೇ ಸತ್ಯ..

ಬಿಜೆಪಿ ಅವರು ಹೇಳುವ ಪ್ರಕಾರ ಇದೊಂದು ಕಾಂಗ್ರೆಸ್ ಟೂಲ್ ಕಿಟ್, ಆತ ಮೂಲತಃ ಬಿಜೆಪಿ ಕಾರ್ಯಕರ್ತನೇನೂ ಅಲ್ಲ..ಇತ್ತೀಚೆಗೆ ಸೇರ್ಪಡೆಯಾಗಿದ್ದ ಅಷ್ಟೆ…ಮೊದಲು ಕೈ ಕಾರ್ಯಕರ್ತನಾಗಿದ್ದ. ಜಿ.ಪಂ ಗೆ ಎಲೆಕ್ಷನ್ ಗೆ ನಿಲ್ಲಲು ರಾಹುಲ್ ಗಾಂಧೀ ಅವರ ಸಹಿ-ಸೀಲನ್ನೇ ಫೋರ್ಜರಿ ಮಾಡಿದ್ದ.ಆದರೆ ಕಾಂಗ್ರೆಸ್ ಕ್ರಮ ಕೈಗೊಳ್ಳದೆ ಮೌನ ವಹಿಸ್ತು.

ಆತ ಕಾಮಗಾರಿ ನಿರ್ವಹಿಸಿರವುದು ಹಿಂಡಲಗಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ,ಆ ಹಿಂಡಲಗಾ ಬರೋದು ಬೆಳಗಾಂ ಗ್ರಾಮೀಣ ಕ್ಷೇತ್ರ. ಆ ಭಾಗದ ಶಾಸಕಿ ಕಾಂಗ್ರೆಸ್ ನ ಲಕ್ಷ್ಮಿ ಹೆಬ್ಬಾಳ್ಕರ್.ಹಿಂಡಲಗಾ ಗ್ರಾಮದ ಜಾತ್ರೆಯ ಕಾರಣಕ್ಕೆ ವರ್ಕ್ ಆರ್ಡರ್ ಇಲ್ಲದೆ ತರಾತುರಿಯಲ್ಲಿ ಕಾಮಗಾರಿ ಮಾಡಬೇಕಾಯ್ತು ಎಂದು ಹಿಂಡಲಗಾ ಗ್ರಾ ಪಂಚಾಯತ್ ಅಧ್ಯಕ್ಷರೇ ಹೇಳಿದ್ದಾರೆ.

ಒಂದಷ್ಟು ಲಕ್ಷದ ಕಾಮಗಾರಿ ನಡುದ್ರೇನೆ ಗೊತ್ತಾಗುವ ಶಾಸಕಿಗೆ  4 ಕೋಟಿ ರೂ ಗಳಷ್ಟು  ಕಾಮಗಾರಿ ನಡೆದಿದದ್ರೂ ಏಕೆ ಗೊತ್ತಾಗಲಿಲ್ಲ.ಗೊತ್ತಾದ ಮೇಲೆ ಶಾಸಕರ ಅನುದಾನದಲ್ಲಿ ವಿತೌಟ್ ಟೆಂಡರ್ 2 ಕೋಟಿ ಕಾಮಗಾರಿ ಮಾಡುವ ಅವಕಾಶವಿತ್ತು.ಆದರೆ ಅದನ್ನು ಮಾಡದೆ ಇದೀಗ ಹೆಣದ ಮುಂದೆ ಅನುಕಂಪದ ನಾಟಕವಾಡುತ್ತಿದ್ದಾರೆ..?

ಸಂತೋಷ್ ಪಾಟೀಲ್ ನನಗೆ ಗೊತ್ತೇ ಇಲ್ಲ ಎನ್ನುತ್ತಿರುವ ಸಚಿವ ಈಶ್ವರಪ್ಪ ಇದಕ್ಕೇನು ಹೇಳ್ತಾರೋ..?!
ಸಂತೋಷ್ ಪಾಟೀಲ್ ನನಗೆ ಗೊತ್ತೇ ಇಲ್ಲ ಎನ್ನುತ್ತಿರುವ ಸಚಿವ ಈಶ್ವರಪ್ಪ ಇದಕ್ಕೇನು ಹೇಳ್ತಾರೋ..?!

ಆದರೆ ಮೇಲ್ಕಂಡ ಪ್ರಕರಣದಲ್ಲಿ ಹತ್ತಾರು ಅನುಮಾನಗಳು ಸೃಷ್ಟಿಯಾಗುತ್ತಿವೆ.ಕನ್ನಡ ಫ್ಲ್ಯಾಶ್ ನ್ಯೂಸ್ ಈ ಒಂದು ಅನುಮಾನಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದೆ.

ಅನುಮಾನ-1:ಸಂತೋಷ್ ಪಾಟೀಲ್,ತನ್ನ ಇಬ್ಬರು ಸ್ನೇಹಿತರೊಂದಿಗೆ ಟೂರ್ ಗೆ ಹೋಗಿದ್ದರು.ಬೇರೆಯೆಲ್ಲಾ ಊರುಗಳಿಗೆ ತೆರಳಿ ನಂತರ ಉಡುಪಿಗೆ ವಿಸಿಟ್ ಕೊಟ್ಟಿದ್ದಾರೆ.ಆದರೆ ಉಡುಪಿಯಲ್ಲೇ ಉಳಿಯೊಕ್ಕೆ ಕಾರಣವೇನು,..? ಸಿಎಂ-ಮಾಜಿ ಸಿಎಂ ಇಬ್ಬರೂ ಉಳಿದಿರುವ ಉಡುಪಿಯಲ್ಲೇ ಏಕೆ ಲಾಡ್ಜ್ ನಲ್ಲಿ ಉಳಿದುಕೊಂಡ್ರು..? ಅಥವಾ ಬೇರೆ ಯಾರಾದ್ರೂ ಉಳಿಸಿಕೊಂಡ್ರಾ..?

 ಅನುಮಾನ-2:ಲಾಡ್ಜ್ ನಲ್ಲಿ ಮೂವರು ಒಂದೇ ರೂಂನಲ್ಲಿ ಉಳಿದುಕೊಳ್ಳೋಕ್ಕೆ ಅವಕಾಶ ಇತ್ತಾದ್ರೂ ಅವರಿಬ್ಬರನ್ನು ಬೇರೆ ರೂಂ ನಲ್ಲಿ ಮಲಗಿಸಿ,ತಾನೇಕೆ ಪ್ರತ್ಯೇಕ ರೂಂನಲ್ಲಿ ಉಳಿದುಕೊಂಡ.?ಅವರುಗಳ ನಡುವೆ ಯಾವುದೇ ಮಾತುಕತೆಗಳು ನಡೆಯಲಿಲ್ಲವೇ..?

ಅನುಮಾನ-3:ಬೇರೆ ಊರುಗಳಿಗೆ ಟೂರ್ ಗೆ ತೆರಳುವ ವೇಳೆ ತಾನು ಎಲ್ಲಿಗೆ ಹೋಗುತ್ತಿರುವೆ ಎನ್ನುವುದನ್ನು ಕುಟುಂಬಕ್ಕೆ ಮುಂತಿಳಿಸಿರಲಿಲ್ಲವೇ..? ನಿಯತವಾಗಿ ಕುಟುಂಬದೊಂದಿಗೆ ಸಂಪರ್ಕದಲ್ಲಿ ಇರಲಿಲ್ಲವೇ.?ಆತ  ಕಾಣೆಯಾಗಿದ್ದಾನೆಂಬ ದೂರನ್ನು ಕುಟುಂಬ ಬೆಳಗಾಂನಲ್ಲಿ ದಾಖಲಿಸಿದ್ದೇಕೆ..? ಕುಟುಂಬಸ್ಥರೇ ಈ ನಡುವೆ ಆತನೊಂದಿಗೆ ಸಂಪರ್ಕ ಸಾಧಿಸುವ ಕೆಲಸ ಮಾಡಲಿಲ್ಲವೇ..?

ಅನುಮಾನ-3:ಕಾಣೆಯಾದ ಬಗ್ಗೆ ಮನೆಯವರು ಕೊಟ್ಟ ದೂರಿನ ಮೇಲೆ ಪೊಲೀಸರು ಮೊಬೈಲ್ ಟವರ್ ಲೊಕೇಶನ್ ಟ್ರೇಸ್ ಮಾಡಿದಾಗ ಅದು ಉಡುಪಿ ಶಾಂಭವಿ ಲಾಡ್ಜ್ ನಲ್ಲಿ ಪತ್ತೆಯಾಗಿತ್ತು.ಆದರೆ ಪೊಲೀಸರು ಹೋಗಿ ತನಿಖೆ ಮಾಡಿದಾಗ ಆ ಹೆಸರಿನವರು  ಯಾರೂ ಇಲ್ಲ ಎಂದಿದ್ದೇಕೆ..ಲಾಡ್ಜ್ ಬುಕ್ ಮಾಡುವಾಗ ಅಡ್ರಸ್ ಫ್ರೂಫ್ ಆಗಿ ಆಧಾರ್ ಅಥವಾ ಪಾನ್ ಕಾರ್ಡ್ ನ್ನು ಸಂತೋಷ್ ಪಾಟೀಲ್ ನೀಡಿರಲಿಲ್ಲವೇ..ಹಾಗೆ ನೀಡದೆ ಬುಕ್ ಮಾಡಿಸಿಕೊಂಡಿದ್ದರೆ ಅದು ಲಾಡ್ಜ್ ಮಾಲೀಕನ ತಪ್ಪಾಗುತ್ತದೆಯಲ್ಲವೇ,? ಹಾಗಾದ್ರೆ ಲಾಡ್ಜ್ ಯಾರ ಹೆಸರಲ್ಲಿ ಬುಕ್  ಆಗಿತ್ತು..? ಬಂದಿರೋದು ಪೊಲೀಸ್ ಎಂದು ಗೊತ್ತಾದ ಮೇಲೂ ಲಾಡ್ಜ್ ನವರು ಸರಿಯಾಗಿ ಪ್ರತಿಕ್ರಿಯಿಸದಿದ್ದುದು ಯಾಕೆ..? ಲಾಡ್ಜ್ ಗೆ ಪೊಲೀಸರು ಭೇಟಿ ಕೊಟ್ಟ ವೇಳೆ ಸಂತೋಷ್ ಮೊಬೈಲ್ ಆಫ್ ಆಗಿತ್ತಾ..? ಒಂದ್ವೇಳೆ ಆನ್ ಆಗಿದಿದ್ದರೆ  ಟವರ್ ಟ್ರೇಸ್ ಮಾಡಿ ಪತ್ತೆ ಮಾಡಬಹುದಿತ್ತಲ್ಲ..? ಪೊಲೀಸ್ರು ಹಾಗೆ ಏಕೆ ಮಾಡಲಿಲ್ಲ..?

ಅನುಮಾನ-4:ಜತೆಗಿದ್ದ ಸ್ನೇಹಿತರಿಗೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಸುದ್ದಿ ಮಾದ್ಯಮಗಳಲ್ಲಿ ಬಂದ ಮೇಲೆ ತಿಳಿದಿದ್ದು ಹೇಗೆ..? ಪಕ್ಕದಲ್ಲೇ ಇದ್ದರೂ ಅದು ಗೊತ್ತಾಗದೇ ಹೋದದ್ದು ಏಕೆ..? ಮಾದ್ಯಮಗಳಲ್ಲಿ ಸುದ್ದಿ ಬಂದ ಮೇಲೆನೇ ಲಾಡ್ಜ್ ನವರಿಗೆ ಗೊತ್ತಾಯ್ತು ಎಂದಿದ್ದು ಹೇಗೆ..? ಹೋಗ್ಲಿ, ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಸುದ್ದಿ ಮಾದ್ಯಮಗಳಿಗೆ ಕೊಟ್ಟಿದ್ದಾದರೂ ಯಾರು..? ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸುದ್ದಿಯನ್ನು ಮಾದ್ಯಮಗಳಿಗೆ ನೇರವಾಗಿಯೇ ಕೊಟ್ಟಿದ್ದನಾ,..?

ಅನುಮಾನ-5:ಸ್ನೇಹಿತರಿಗೆ ವಾಟ್ಸಪ್ ನಲ್ಲಿ ತಾನು ಸೂಸೈಡ್ ಮಾಡಿಕೊಳ್ಳುವುದಾಗಿ  ಹೇಳಿದ್ದ ಸಂತೋಷ್ ,ಸಾಯುತ್ತಿರುವ ಸನ್ನಿವೇಶವನ್ನು ಮೊಬೈಲ್ ನಲ್ಲಿ ಮಾಡಲಿಲ್ಲವೇಕೆ..? ತನಗೇ ಸಮಸ್ಯೆಯಾದರೂ ಬಳಸಿಕೊಳ್ಳುತ್ತಿದ್ದುದೇ ವೀಡಿಯೋವನ್ನು. ಆದರೆ ಆತ್ಮಹತ್ಯೆ ಸಂದರ್ಭದಲ್ಲಿ ಅದನ್ನೇಕೆ ಮಾಡಲಿಲ್ಲ..?

ಅನುಮಾನ-6:ವಾಟ್ಸ್ ಪ್ ನಲ್ಲಿ ಮೆಸೇಜ್ ಮಾಡಿರುವ ಸೂಸೈಡ್ ನೋಟ್ ನಲ್ಲಿ ನನ್ನ ಇಬ್ಬರು ಸ್ನೇಹಿತರಿಗು ಸಾವಿಗೂ ಸಂಬಂಧವಿಲ್ಲ ಎಂದಿರುವುದೇಕೆ..? ಸಾಯೋವನು ಒಬ್ಬನೇ ಹೋಗಿ ಆತ್ಮಹತ್ಯೆ ಮಾಡಿಕೊಳ್ತಾನೆ..ಆದರೆ ಈತ ಇಬ್ಬರನ್ನು ಕರೆದುಕೊಂಡು ಹೋಗಿದ್ದೇಕೆ..?

ಅನುಮಾನ-7:ಮೃತ ದೇಹದ ಮೇಲೆ ಎದೆವರೆಗೂ ಬ್ಲಾಕೆಂಟ್ ಇದೆ..ವಿಷ ಕುಡಿದವರು ಸಂಕಟದಿಂದ ಒದ್ದಾಡುತ್ತಾರೆ.ಆ ವೇಳೆ ಮೈಮೇಲೆ ಸಹಜವಾಗಿ ಬಟ್ಟೆಗಳು ವಿವಸ್ತ್ರವಾಗಿರುತ್ತವೆ..ಆದ್ರೆ ಸಂತೋಷ್ ಎದೆವರೆಗೆ ನೀಟಾಗಿ ಬ್ಲಾಂಕೆಟ್ ಹಾಕಿ ಕೊಂಡಿದ್ದಾನೆ. ಬಹುಷಃ ನೀಟಾಗಿ ಬ್ಲಾಂಕೆಟ್ ಹಾಕ್ಕೊಂಡು ವಿಷ ಕುಡಿದಿರಬಹುದಾ..? ಬೇಸಿಗೆಯಲ್ಲಿ ಕಾದ ಕಾವಲಿಯಂತಾಗಿರುವ ಉಡುಪಿಯಲ್ಲಿ ನೀಟಾಗಿ .ಬ್ಲಾಂಕೆಟ್ ಹೊದ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದೇಕೆ..?

ಅನುಮಾನ-8:ವಿಷ ತೆಗೆದುಕೊಂಡ್ರೆ ಸಹಜವಾಗಿ ವಾಮಿಟ್ ಆಗಿತ್ತು.ಆದರೆ ಇಲ್ಲಿ ನೊರೆ ಬಂದಿದೆ ಎನ್ನುವುದನ್ನು ಬಿಟ್ಟರೆ ಬೇರೇನೂ ಇಲ್ಲ. ಒದ್ದಾಡದೆ ಸಾಯುವಂತ ವಿಷವನ್ನೇನಾದ್ರೂ ಆತ ಖರೀದಿಸಿದ್ನಾ..ಆತ ಕುಡಿದ ಅಂಥಾ ವಿಷವಾದ್ರೂ ಏನು..? ವಿಷ ಕುಡಿದ ಬಾಟಲಿಯನ್ನು ಕಸದ ಬುಟ್ಟಿಗೆ ಬಿಸಾಡಿ,ಆಮೇಲೆ ಬ್ಲಾಕೆಂಟ್ ನ್ನು ಎದೆವರೆಗೆ ಹಾಕ್ಕೊಂಡು ಕೊನೆಯುಸಿರೆಳೆದ್ನಾ ಸಂತೋಷ್..

ಅನುಮಾನ-9:ಸಂತೋಷ್ ಪಾಟೀಲ್ ಬಿಜೆಪಿ ಕಾರ್ಯಕರ್ತನಾಗಿದ್ದ ಎನ್ನೋದು ಎಷ್ಟು ಸತ್ಯವೋ..? ಇತ್ತೀಚಿನ ಬೆಳವಣಿಗೆಯಿಂದ ಪಕ್ಷದ ಬಗ್ಗೆ ಬೇಸರಗೊಂಡಿದ್ದ ಎನ್ನೋದು ಕೂಡ ಅಷ್ಟೇ ಸತ್ಯ..ದ್ವೇಷ ಮನೋಭಾವನೆ ಹೊಂದಿದ್ದ ಪಾಟೀಲ್,ಸಾಯುವಾಗ ಕೇಸರಿ ಶಾಲನ್ನು ಹಾಕ್ಕೊಂಡಿದ್ದನಂತೆ..ಅದು ದ್ವೇಷಕ್ಕೆ ಹೀಗೆ ಮಾಡಿದ್ನೋ..ಅಥವಾ ಆ ಶಾಲನ್ನು ಯಾರಾದ್ರೂ ತಂದು ಹಾಕಿದ್ರೋ..?

ಅನುಮಾನ-10:ಪ್ರಕರಣದಲ್ಲಿ ಡಿಕೆಶಿ-ಹೆಬ್ಬಾಳ್ಕರ್ ಹೆಸರು ಕೇಳಿಬರುತ್ತಿರುವುದೇಕೆ..? ಈಶ್ವರಪ್ಪ ಮೇಲಿನ ದ್ವೇಷಕ್ಕೆ ಪ್ರಕರಣವನ್ನು ಕೈ ಬಳಸಿಕೊಳ್ಳುತ್ತಿದೆಯೇ..? ಇದೇ ಪ್ರಕರಣ ಬಳಸಿಕೊಂಡು ಮುಂದಿನ ಚುನಾವಣೆಯಲ್ಲಿ ಗೆಲ್ಲೋಕೆ ರಣತಂತ್ರ ರೂಪಿಸಲಾಗುತ್ತಿದೆಯೇ..? ಸಂತೋಷ್ ಪಾಟೀಲ್ ಆತ್ಮಹತ್ಯೆ ಹಿಂದೆ ಕೊಲೆಯ ಸಂಚಿದೆಯೇ..? ಅದನ್ನು ಹೊಸೆದದ್ದು ಯಾರು..?ಉಡುಪಿಗೇ ಬಂದಿದ್ದು..ಅಲ್ಲಿನ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಹಿಡಿದು,ಆತ್ಮಹತ್ಯೆ ಮಾಡಿಕೊಂಡ ರೀತಿ,ಆತನ ಮೇಲೆ ಕೇಸರಿ ಶಾಲಿದ್ದುದೆಲ್ಲಾ ಇದೊಂದು ವ್ಯವಸ್ಥಿತ ಕೆಲಸ ಎನ್ನೊ ಅನುಮಾನ ಮೂಡಿಸುತ್ತೆ..

ಒಂದು ಪ್ರಾಮಾಣಿಕ ತನಿಖೆ ಮಾತ್ರ ಸತ್ಯವನ್ನು ಬಹಿರಂಗ ಮಾಡಬಲ್ಲದು..ಆದ್ರೆ ಅದೇನೇ ಆಗಲಿ, ಅಮಾಯಕನ ಸಾವನ್ನು ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ತೆವಲಿಗಾಗಿ ಬಳಸಿಕೊಳ್ಳುತ್ತಿರುವುದು ಮಾತ್ರ ನಾಚಿಕೆಗೇಡು..

Spread the love

Related Articles

Leave a Reply

Your email address will not be published.

Back to top button
Flash News