ಕ್ರಿಕೆಟ್ ಹಬ್ಬ ಐಪಿಎಲ್-2022 ಹಬ್ಬ ಮುಗಿದಿದೆ.ಕಳೆದ ಒಂದೂವರೆ ತಿಂಗಳಿಗಿಂತಲೂ ಹೆಚ್ಚು ಕಾಲದವರೆಗೆ ಎಲ್ಲರನ್ನು ರಂಜಿಸಿದ ಐಪಿಎಲ್ ಆವೃತ್ತಿಯನ್ನು ಗೆದ್ದ ತಂಡಗಳಿಗೆ-ಸೋತ ತಂಡಗಳಿಗೆ,ಆಟಗಾರರಿಗೆ ಏನೆಲ್ಲಾ ಸಿಗುತ್ತೆನ್ನುವ ಒಂದಷ್ಟು ಇಂಟರೆಸ್ಟಿಂಗ್ ಸಂಗತಿಗಳಿವೆ..ನೋಡಿ..
*ಐಪಿಎಲ್(ಇಂಡಿಯನ್ ಪ್ರೀಮಿಯರ್ ಲೀಗ್) ಪಂದ್ಯಾವಳಿ
*ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಯೋಜಿಸುವ ಪಂದ್ಯಾವಳಿ
*15ನೇ ಆವೃತ್ತಿಯಲ್ಲಿ ಭಾಗವಹಿಸಿದ್ದು 10 ತಂಡಗಳು
*ಮಾರ್ಚ್ 26 ರಿಂದ ಮೇ 29 ರವರೆಗೆ ನಡೆದ ಪಂದ್ಯಾವಳಿ
*ಐಪಿಎಲ್ ಇತಿಹಾಸದಲ್ಲೇ ಮುಂಬೈ ಇಂಡಿಯನ್ಸ್ ಅತ್ಯಂತ ಯಶಸ್ವಿ ತಂಡ
*15 ಆವೃತ್ತಿಗಳ ಪೈಕಿ 5 ಬಾರಿ ವಿಜೇತವಾಗಿದೆ.
*ರಾಜಸ್ಥಾನ ರಾಯಲ್ಸ್ ಐಪಿಎಲ್ ಮೊದಲ ಆವೃತ್ತಿ ವಿಜೇತ ತಂಡ
*ಹೆಚ್ಚು ರನ್ ಗಳಿಸಿದ ಆಟಗಾರನಿಗೆ ನೀಡಲಾಗುವ ಆರೆಂಜ್ ಕಪ್
*ಈ ಬಾರಿ ರಾಜಸ್ಥಾನ ರಾಯಲ್ಸ್ನ ಜಾಸ್ ಬಟ್ಲರ್ ಗೆ ಆರೆಂಜ್ ಕಪ್
*ಒಟ್ಟು ಪಂದ್ಯಗಳಿಂದ ಕಲೆ ಹಾಕಿದ್ದು 824 ರನ್.
*ಇದು ಐಪಿಎಲ್ ಇತಿಹಾಸದಲ್ಲೇ ದಾಖಲೆ ಕೂಡ.
*ವಾನಿಂದು ಹಸರಂಗಗೆ ಪರ್ಪಲ್ ಕ್ಯಾಪ್ ಗೌರವ
*ಪರ್ಪಲ್ ಕ್ಯಾಪ್ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಗೆ ಸಿಗುವ ಗೌರವ
*ಹಸರಂಗೆ,ರಾಯಲ್ ಚಾಲೆಂಜರ್ಸ್ ತಂಡದ ಬೌಲರ್
*16 ಇನ್ಸಿಂಗ್ಸ್ ಗಳಲ್ಲಿ ಪಡೆದ ವಿಕೆಟ್ ಗಳು 26
*ಐಪಿಎಲ್ ಗೆದ್ದ ತಂಡಕ್ಕೆ 20 ಕೋಟಿ
*ರನ್ನರ್ ಅಪ್ ತಂಡಕ್ಕೆ 13 ಕೋಟಿ
*3ನೇ ಸ್ಥಾನ ಪಡೆದ ತಂಡ-ಆರ್ ಸಿಬಿ-7 ಕೋಟಿ
*4ನೇ ಸ್ಥಾನ ಪಡೆದ ಎಲ್ ಎಸ್ ಜಿಗೆ 6.5 ಕೋಟಿ
*ಆರೆಂಜ್ ಕ್ಯಾಪ್ ಪಡೆದ ಆಟಗಾರನಿಗೆ 15 ಲಕ್ಷ
*ಪರ್ಪಲ್ ಕ್ಯಾಪ್ ಪಡೆದ ಆಟಗಾರನಿಗೆ 15 ಲಕ್ಷ
*ಉದಯೋನ್ಮುಖ ಆಟಗಾರನಿಗೆ 20 ಲಕ್ಷ ನಗದು
*ಐಪಿಎಲ್ ಒಟ್ಟು ಪ್ರಶಸ್ತಿ ಮೊತ್ತ 46.5 ಕೋಟಿ.
*ಹೆಚ್ಚು ಸಿಕ್ಸರ್ಸ್ ಸಿಡಿಸಿದ ಆಟಗಾರನಿಗೆ 12 ಲಕ್ಷ.
*ಆಟದ ಗತಿ ಬದಲಿಸಿದ ಆಟಗಾರನ ಪ್ರಶಸ್ತಿಗೆ 12 ಲಕ್ಷ.
*ಸೂಪರ್ ಸ್ಟ್ರೈಕರ್ ಆಟಗಾರನಿಗೆ 15 ಲಕ್ಷ
*ಮ್ಯಾನ್ ಆಫ್ ದಿ ಸೀರಿಸ್ ಆಟಗಾರನಿಗೆ12 ಲಕ್ಷ.
*ಮ್ಯಾನ್ ಆಫ್ ದಿ ಮ್ಯಾಚ್ (ಪ್ರತಿ ಮ್ಯಾಚ್):1 ಲಕ್ಷ.
*ಪ್ರಶಸ್ತಿ ಮೊತ್ತದ ಹಣ ಗೆದ್ದ ತಂಡದ ಪ್ರತಿಯೋರ್ವರಿಗೂ ಸಮನಾಗಿ ಹಂಚಿಕೆಯಾಗಲಿದೆ.